17 ವರ್ಷದಲ್ಲಿ 6 ಸಾವು; ಆಸ್ತಿಗಾಗಿ ಇಡೀ ಕುಟುಂಬವನ್ನೇ ಬಲಿ ತೆಗೆದುಕೊಂಡ ಗೃಹಿಣಿ

ಕಳೆದ 17 ವರ್ಷಗಳಿಂದ ಒಂದಾದರ ನಂತರ ಒಂದು ಸಾವು ಸಂಭವಿಸುತ್ತಿದ್ದವು. ಈ ಸಾವುಗಳೆಲ್ಲಾ ಒಂದೇ ಮಾದರಿಯಾಗಿದ್ದು, ಇವೆಲ್ಲಾ ಸಹಜ ಸಾವಾಗಿರಲಿಲ್ಲ. ಅದರಲ್ಲಿಯೂ 2 ವರ್ಷದ ಹಸುಗೂಸು ಸಾವನ್ನಪ್ಪಿದ್ದಾಗ ಇದು ಸರಣಿ ಕೊಲೆ ಎಂಬುದು ಖಾತ್ರಿಯಾಯಿತು. ಸವಾಲಾಗಿದ್ದ ಪ್ರಕರಣದ ಬೆನ್ನತ್ತಿದ ಪೊಲೀಸರು ಕೊನೆಗೂ ಕೊಲೆ ಆರೋಪಿ ಪತ್ತೆಹಚ್ಚಿದ್ದಾರೆ. ಕುಟುಂಬದ ಆಸ್ತಿಗಾಗಿ ಮನೆಗೆ ಬಂದ ಸೊಸೆಯೇ ತನ್ನ ಗಂಡ ಸೇರಿದಂತೆ ಐವರ ಸಾವಿಗೆ ಕಾರಣಳಾಗಿದ್ದಳು ಎಂಬ ಸತ್ಯ ಹೊರ ಬಿಚ್ಚಿಟ್ಟಿದ್ದಾರೆ.

Seema.R | news18-kannada
Updated:October 6, 2019, 12:46 PM IST
17 ವರ್ಷದಲ್ಲಿ 6 ಸಾವು; ಆಸ್ತಿಗಾಗಿ ಇಡೀ ಕುಟುಂಬವನ್ನೇ ಬಲಿ ತೆಗೆದುಕೊಂಡ ಗೃಹಿಣಿ
ಸಾಂದರ್ಭಿಕ ಚಿತ್ರ
  • Share this:
ಯಾವುದೇ ಕುತೂಹಲಕಾರಿ ಸಿನಿಮಾಗಿಂತ ಕಡಿಮೆಇಲ್ಲ ಎಂಬಂತೆ ನಡೆದಿರುವ ಈ ಘಟನೆ ಇಡೀ ಕೇರಳವನ್ನು ಬೆಚ್ಚಿಬೀಳಿಸಿದೆ. ಕುಟುಂಬದಲ್ಲಿ ಒಬ್ಬರ ಹಿಂದೆ ಒಬ್ಬರಂತೆ ಬಲಿತೆಗೆದುಕೊಳ್ಳುತ್ತಿದ್ದ ಪ್ರಕರಣವನ್ನು ಭೇಧಿಸುವಲ್ಲಿ ಪೊಲೀಸರು ಕಡೆಗೂ ಯಶಸ್ವಿಯಾಗಿದ್ದು, ಮನೆಗೆ ಬಂದ ಸೊಸೆಯೇ ಈ ಕೃತ್ಯದ ರೂವಾರಿ ಎಂಬುದು ಬಯಲಾಗಿದೆ.

ಕೇರಳದ ಪೊನ್ನಮಟ್ಟಂ ಕುಟುಂಬದಲ್ಲಿ ಕಳೆದ 17 ವರ್ಷಗಳಿಂದ ಒಂದಾದರ ನಂತರ ಒಂದು ಸಾವು ಸಂಭವಿಸುತ್ತಿದ್ದವು. ಈ ಸಾವುಗಳೆಲ್ಲಾ ಒಂದೇ ಮಾದರಿಯಾಗಿದ್ದು, ಇವೆಲ್ಲಾ ಸಹಜ ಸಾವಾಗಿರಲಿಲ್ಲ. ಅದರಲ್ಲಿಯೂ 2 ವರ್ಷದ ಹಸುಗೂಸು ಸಾವನ್ನಪ್ಪಿದ್ದಾಗ ಇದು ಸರಣಿ ಕೊಲೆ ಎಂಬುದು ಖಾತ್ರಿಯಾಯಿತು. ಸವಾಲಾಗಿದ್ದ ಪ್ರಕರಣದ ಬೆನ್ನತ್ತಿದ ಪೊಲೀಸರು ಕೊನೆಗೂ ಕೊಲೆ ಆರೋಪಿ ಪತ್ತೆಹಚ್ಚಿದ್ದಾರೆ. ಕುಟುಂಬದ ಆಸ್ತಿಗಾಗಿ ಮನೆಗೆ ಬಂದ ಸೊಸೆಯೇ ತನ್ನ ಗಂಡ ಸೇರಿದಂತೆ ಐವರ ಸಾವಿಗೆ ಕಾರಣಳಾಗಿದ್ದಳು ಎಂಬ ಸತ್ಯ ಹೊರ ಬಿಚ್ಚಿಟ್ಟಿದ್ದಾರೆ.

ಜೊಲಿ ಕೊಲೆ ಮಾಡಿದ ಆರೋಪಿ. ಕಳೆದ ಹದಿನೇಳು ವರ್ಷದ ಹಿಂದೆ ಕ್ಯಾಥೋಲಿಕ್​ ಕ್ರಿಶ್ಚಿಯನ್​ ಕುಟುಂಬಕ್ಕೆ ಸೊಸೆಯಾಗಿ ಬಂದ ಈಕೆ ಮೊದಲ ಆಕೆಯ ಅತ್ತೆ ಅನ್ನಮ್ಮ ಥಾಮಸ್​ಳನ್ನು ಕೊಲೆ ಮಾಡಿದ್ದಳು. 2002ರಲ್ಲಿ ಸಾವನ್ನಪ್ಪಿದ ಅನ್ನಮ್ಮದು ವಯೋಸಹಜ ಸಾವು ಎಂದು ಕುಟುಂಬಸ್ಥರು ಸುಮ್ಮನಾದರು. ಇದಾದ ಆರು ವರ್ಷದ ಬಳಿಕ ಆಕೆಯ ಗಂಡ ಟಾಮ್​ ಥಾಮಸ್​ ಹೃದಯಾಘಾತದಿಂದ ಸಾವನ್ನಪ್ಪಿದರು.

2011ರಲ್ಲಿ ಈ ದಂಪತಿ ಮಗ ರಾಯ್​ ಥಾಮಸ್​ ಕೂಡ ಇದೇ ಮಾದರಿಯಲ್ಲಿ ಸಾವನ್ನಪ್ಪಿದರು. ಆದರೆ, ಇದು ವಿಷಸೇವನೆಯ ಸಾವು ಎಂದು ವೈದ್ಯಕೀಯ ವರದಿ ತಿಳಿಸಿತು. ಇದಾದ ಬಳಿಕ ಅನ್ನಮ್ಮ ಸಹೋದರ ಮ್ಯಾಥ್ಯೂ ಮಂಜಡಿಯಾ ಸಾವಿಗೂ ಕೂಡ ವಿಷ ಸೇವನೆ ಕಾರಣವಾಗಿತ್ತು.

ಇದಾದ ಕೆಲವರು ವರ್ಷಗಳ ಬಳಿಕ ಕುಟುಂಬದ ಸಂಬಂಧಿಯಾಗಿದ್ದ ಅಲ್ಫೋಸೊ ಎಂಬ 2 ವರ್ಷದ ಹಸುಗೂಸು ಕೂಡ ಹೃದಯಾಘಾತದಿಂದ ಸಾವನ್ನಪ್ಪಿತು. ಇದಾದ ಕೆಲವೇ  ತಿಂಗಳಲ್ಲಿ ಮಗುವಿನ ತಾಯಿ ಕೂಡ ಇದೆ ಮಾದರಿಯಲ್ಲಿ ಸಾವನ್ನಪ್ಪಿದ್ದರು. ಇವರೆಲ್ಲರ ಸಾವು ನಿಗೂಢವಾಗಿದ್ದು, ಪೊಲೀಸರಲ್ಲಿ ಹಲವು ಅನುಮಾನಕ್ಕೆ ಕಾರಣವಾಗಿತ್ತು.

ಈ ವೇಳೆ ಸಾವನ್ನಪ್ಪಿದ ರಾಯ್​ ಥಾಮಸ್​​ ವಿಧವೆ ಪತ್ನಿ ಜೊಲಿ, ಶಾಜು ಎಂಬ ವಿಚ್ಛೇದಿತನ ಮದುವೆಯಾಗಿ ಕುಟುಂಬದ ಆಸ್ತಿಗಾಗಿ ಹಕ್ಕು ಚಲಾಯಿಸಿದಳು.

ಇದನ್ನು ಓದಿ: ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ನೀಡುತ್ತಲೇ ಎದೆಗೆ ಗುಂಡಿಟ್ಟುಕೊಂಡ ನ್ಯಾಯಾಧೀಶಕುಟುಂಬದ ಕೊನೆಯ ವಿಲ್​ ದಾಖಲಿಸಿದ್ದ ಟಾಮ್​ ಮಗ ಮೊಜೊ ಆಸ್ತಿಗಾಗಿ ಹಕ್ಕು ಚಲಾಯಿಸಿದ ಜೊಲಿ ವಿರುದ್ಧ ಅಪರಾಧ ವಿಭಾಗದಲ್ಲಿ ದೂರು ದಾಖಲಿಸಿದ.

ಈ ವೇಳೆ ತನಿಖೆ ನಡೆಸಿದಾಗ ಗೃಹಿಣಿ ಈ ಎಲ್ಲಾ ಸಾವಿನ ಪಾತ್ರಧಾರಿ ಎಂಬ ಸತ್ಯ ಹೊರ ಬಿದ್ದಿದೆ. ತನ್ನ ವಿಚ್ಚೇದಿತ ಪತಿ ಸೇರಿ ಜೊಲಿ ಸೈನೈಡ್​ ನೀಡಿ ಕುಟುಂಬಸ್ಥರನ್ನು ಕೊಲೆ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

First published:October 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading