ವಿಶ್ವದ ನಂ.1 ಶ್ರೀಮಂತ ಜೆಫ್​ ದಾಂಪತ್ಯದಲ್ಲಿ ಬಿರುಕು; 9.64 ಲಕ್ಷ ಕೋಟಿ ರೂ. ಆಸ್ತಿಯಲ್ಲಿ ಪತ್ನಿಗೆಷ್ಟು ಸಿಗಲಿಗೆ ಜೀವನಾಂಶ?

ಅಮೆಜಾನ್​ ಸಂಸ್ಥೆ ಆರಂಭಕ್ಕೂ ಮೊದಲೇ ಇಬ್ಬರ ವಿವಾಹ ನೆರವೇರಿತ್ತು. ಹಾಗಾಗಿ 9.64 ಲಕ್ಷ ಕೋಟಿ ರೂ. ಆಸ್ತಿಯಲ್ಲಿ ಸುಮಾರು 4.5 ಲಕ್ಷ ಕೋಟಿ ರೂ. ಜೀವನಾಂಶ ಮ್ಯಾಕೆನ್ಜಿಗೆ ಅವರಿಗೆ ಸಲ್ಲಬೇಕಿದೆ.

Rajesh Duggumane | news18
Updated:January 11, 2019, 3:03 PM IST
ವಿಶ್ವದ ನಂ.1 ಶ್ರೀಮಂತ ಜೆಫ್​ ದಾಂಪತ್ಯದಲ್ಲಿ ಬಿರುಕು; 9.64 ಲಕ್ಷ ಕೋಟಿ ರೂ. ಆಸ್ತಿಯಲ್ಲಿ ಪತ್ನಿಗೆಷ್ಟು ಸಿಗಲಿಗೆ ಜೀವನಾಂಶ?
ಮ್ಯಾಕೆನ್ಜಿ ಹಾಗೂ ಜೆಫ್​
Rajesh Duggumane | news18
Updated: January 11, 2019, 3:03 PM IST
ವಾಷಿಂಗ್ಟನ್​ (ಜ.11): ಅಮೆಜಾನ್​ ಸಂಸ್ಥೆಯ ಸ್ಥಾಪಕ ಹಾಗೂ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ನಂಬರ್​ 1 ಸ್ಥಾನದಲ್ಲಿರುವ ಜೆಫ್​ ಬೆಜೋಸನ್​ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಪತ್ನಿ ಮ್ಯಾಕೆನ್ಜಿಗೆ ಅವರು ವಿಚ್ಛೇದನ ನೀಡಿದ್ದು, ಈ ಮೂಲಕ 25 ವರ್ಷಗಳ ದಾಂಪತ್ಯಕ್ಕೆ ಪೂರ್ಣವಿರಾಮ ಬಿದ್ದಿದೆ.

ಮ್ಯಾಕೆನ್ಜಿ ಜೊತೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ನಾವು ಗೆಳೆಯಾರಿಗುತ್ತೇವೆ ಎಂದು ಜೆಫ್​ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ. ಇವರ ವಿಚ್ಛೇದನ ಜಗತ್ತಿನ ದುಬಾರಿ ಪ್ರಕ್ರಿಯೆ ಎನಿಸಿಕೊಂಡರೂ ಆಶ್ಚರ್ಯವಿಲ್ಲ. ಅದಕ್ಕೆ ಕಾರಣ ಜೆಫ್​ ಅವರ​ ಆಸ್ತಿ.

ಫೋರ್ಬ್ಸ್​​ ನೀಡುವ ವಿಶ್ವದ ಶ್ರೀಮಂತರ ಸಾಲಿನಲ್ಲಿ ಜೆಫ್​ಗೆ ಮೊದಲಿದ್ದಾರೆ. ಅಮೆಜಾನ್​ ಸಂಸ್ಥೆಯ ಸ್ಥಾಪಕರೂ ಆಗಿರುವ ಇವರು, ಸಂಸ್ಥೆಯ ಮುಖ್ಯಸ್ಥರೂ ಹೌದು. ಇದರ ಜೊತೆಗೆ ಜೆಫ್​ ಸಾಕಷ್ಟು ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ಇವರ ಆಸ್ತಿ ಬರೋಬ್ಬರಿ 9.64 ಲಕ್ಷ ಕೋಟಿ ರೂಪಾಯಿ. ಹಾಗಾಗಿ ಮ್ಯಾಕೆನ್ಜಿಗೆ ಎಷ್ಟು ಜೀವನಾಂಶ ಸಿಗಲಿದೆ ಎನ್ನುವ ಪ್ರಶ್ನೆ ಎಲ್ಲರದ್ದು.

ಅಮೆಜಾನ್​ ಸಂಸ್ಥೆ ಆರಂಭಕ್ಕೂ ಮೊದಲೇ ಇಬ್ಬರ ವಿವಾಹ ನೆರವೇರಿತ್ತು. ಹಾಗಾಗಿ 9.64 ಲಕ್ಷ ಕೋಟಿ ರೂ. ಆಸ್ತಿಯಲ್ಲಿ ಸುಮಾರು 4.5 ಲಕ್ಷ ಕೋಟಿ ರೂ. ಜೀವನಾಂಶ ಮ್ಯಾಕೆನ್ಜಿಗೆ ಸಲ್ಲಬೇಕಿದೆ. ಆದ್ದರಿಂದ ಈ ಪ್ರಕ್ರಿಯೆ ಮುಗಿದ ನಂತರದಲ್ಲಿ ಮ್ಯಾಕೆನ್ಜಿ ವಿಶ್ವದ ನಂಬರ್​ ಒನ್​ ಶ್ರೀಮಂತ ಮಹಿಳೆ ಎನಿಸಿಕೊಳ್ಳಲಿದ್ದಾರೆ.


Loading...ಮ್ಯಾಕೆನ್ಜಿ ಕಾಂದಬರಿಗಾರ್ತಿ. 1992ರಲ್ಲಿ ಇವರು ಸಂಸ್ಥೆಯೊಂದಕ್ಕೆ ಸಂದರ್ಶನಕ್ಕೆ ತೆರಳಿದ್ದರು. ಈ ವೇಳೆ ಸಂದರ್ಶಕರಾಗಿದ್ದ ಜೆಫ್​ ಬೆಜೋಸ್​ ಮ್ಯಾಕೆನ್ಜಿ ಅವರನ್ನು ಆಯ್ಕೆ ಮಾಡಿದ್ದರು. ನಂತರ ಇವರ ಮಧ್ಯೆ ಪ್ರೀತಿ ಮೊಳೆಯಿತು. 1993ರಲ್ಲಿ ಇಬ್ಬರೂ ವಿವಾಹವಾದರು. 1994ರಲ್ಲಿ ಮನೆಯ ಗ್ಯಾರೇಜ್​ನಲ್ಲಿಯೇ ಇ-ಕಾಮರ್ಸ್​​ ಸಂಸ್ಥೆ ಸ್ಥಾಪಿಸಿದರು ಜೆಫ್​. ನಂತರ ಅವರು ಮುಟ್ಟಿದ್ದೆಲ್ಲವೂ ಚಿನ್ನವಾಯಿತು.

ಇದನ್ನೂ ಓದಿ: ಇಂದು ಬಿಡುಗಡೆಯಾದ 'ಆ್ಯಕ್ಸಿಡೆಂಟಲ್ ಪ್ರೈಮಿನಿಸ್ಟರ್' ಸಿನಿಮಾ ವಿರುದ್ಧ ಕಾಂಗ್ರೆಸ್​ ನಾಯಕರ ಆಕ್ರೋಶ

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ