ಪ್ರಧಾನಿ ಮೋದಿ ಅವರ ಆತ್ಮನಿರ್ಭರದ ದೃಷ್ಟಿಕೋನವೇ ಪಿಡಿಪಿಯು ವಿಶ್ವವಿದ್ಯಾಲಯದ ಆದರ್ಶ; ಮುಖೇಶ್ ಅಂಬಾನಿ

ಈ ವರ್ಷ 2608 ವಿದ್ಯಾರ್ಥಿಗಳು ಈ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿದ್ದಾರೆ. 46 ವಿದ್ಯಾರ್ಥಿಗಳು ಪಿಹೆಚ್​ಡಿ ಪದವಿಯನ್ನು ಪಡೆದಿದ್ದಾರೆ. ಈ ಸಂಸ್ಥೆಯ ಸಂಶೋಧನೆಗಳೂ ಸಾಕಷ್ಟು ಪ್ರಶಸ್ತಿಗಳಿಗೂ ಭಾಜನವಾಗಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.

ಮುಖೇಶ್ ಅಂಬಾನಿ

ಮುಖೇಶ್ ಅಂಬಾನಿ

 • Share this:
  ಗಾಂಧಿನಗರ (ನವೆಂಬರ್​ 21); ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಯೋಜನೆಯಾದ ಆತ್ಮ ನಿರ್ಭರ ಭಾರತ ಮತ್ತು ಸುಸ್ಥಿರ ಅಭಿವೃದ್ಧಿಗಳ ಆಶಯವೇ ಪಂಡಿತ್​ ದೀನ ದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯದ ಕನಸು ಎಂದು ವಿಶ್ವವಿದ್ಯಾಲಯದ ಅಧ್ಯಕ್ಷರಾದ ಮುಖೇಶ್ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ. ಇಂದು ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವವನ್ನು ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಮಾತನಾಡಿರುವ ಮುಖೇಶ್​ ಅಂಬಾನಿ, "ನರೇಂದ್ರ ಮೋದಿ ಪ್ರಸ್ತುತ ವಿಶ್ವ ನಾಯಕರಾಗಿ ಬೆಳೆಯುತ್ತಿದ್ದಾರೆ. ದೇಶವನ್ನು ಸರಿಯಾದ ದಾರಿಯಲ್ಲಿ ಅಭಿವೃದ್ಧಿಯ ಕಡೆಗೆ ಮುನ್ನಡೆಸುತ್ತಿದ್ದಾರೆ. ಇಡೀ ವಿಶ್ವ ಭಾರತದೆಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ. ಅವರ ಬಹು ನಿರೀಕ್ಷಿತ ಆತ್ಮ ನಿರ್ಭರ ಭಾರತದ ಆಶಯವೇ ನಮ್ಮ ಪಂಡಿತ್​ ದೀನ ದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯದ ಕನಸು" ಎಂದು ತಿಳಿಸಿದ್ದಾರೆ.

  ಸಮಾರಂಭದಲ್ಲಿ ಪಂಡಿತ್​ ದೀನ ದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯದ ಕುರಿತು ಮಾತನಾಡಿರುವ ಮುಖೇಶ್​ ಅಂಬಾನಿ ಅವರು, "ಪ್ರಧಾನಿ ಮೋದಿ ಗುಜರಾತ್​ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಇಂಧನ ಮತ್ತು ಇಂಧನಗಳ ಕುರಿತು ಶಿಕ್ಷಣ ಹಾಗೂ ಸಂಶೋಧನೆಯ ಕುರಿತು ಸಾಕಷ್ಟು ಆಸಕ್ತಿ ವಹಿಸಿದ್ದರು. ಭಾರತವನ್ನು ಇಂಧನ ಕ್ಷೇತ್ರದಲ್ಲಿ ಸ್ವಾವಲಂಭಿಯನ್ನಾಗಿ ಮಾಡಬೇಕು ಎಂಬುದು ಅವರ ಮಹತ್ವಾಕಾಂಕ್ಷೆಯಾಗಿತ್ತು. ಅವರ ಈ ಆಶಯಗಳನ್ನು ಹೊತ್ತು ಆರಂಭವಾದದ್ದೇ ಪಂಡಿತ್​ ದೀನ ದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯ.

  ಇದನ್ನೂ ಓದಿ : ಕೇಂದ್ರ ಕೃಷಿ ಮಸೂದೆಗೆ ವಿರೋಧ; ಸರ್ಕಾರಕ್ಕೆ ಗಡುವು ನೀಡಿ ರೈಲ್​ ರೋಕೋ ಚಳುವಳಿ ಹಿಂಪಡೆದ ರೈತ ಸಂಘ

  ಈ ವಿಶ್ವವಿದ್ಯಾಲಯ ಆರಂಭವಾಗಿ ಕೇವಲ 14 ವರ್ಷಗಳಷ್ಟೇ ಆಗಿದೆ. ಆದರೆ, ದೇಶದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ 25 ರ್ಯಾಂಕ್​ ಒಳಗೆ ಸ್ಥಾನ ಪಡೆದಿದೆ. ಇಂಧನ ಕ್ಷೇತ್ರದಲ್ಲಿ ಸಾಕಷ್ಟು ಮಹತ್ವದ ಸಂಶೋಧನೆಗಳನ್ನು ನಡೆಸಲಾಗಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನೂ ಆಕರ್ಷಿಸಬೇಕು ಎಂಬುದು ಈ ವಿಶ್ವವಿದ್ಯಾಲಯದ ಗುರಿ. ಈಗಾಗಲೇ 39 ದೇಶದ 284 ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

  ಈ ವರ್ಷ 2608 ವಿದ್ಯಾರ್ಥಿಗಳು ಈ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿದ್ದಾರೆ. 46 ವಿದ್ಯಾರ್ಥಿಗಳು ಪಿಹೆಚ್​ಡಿ ಪದವಿಯನ್ನು ಪಡೆದಿದ್ದಾರೆ. ಈ ಸಂಸ್ಥೆಯ ಸಂಶೋಧನೆಗಳೂ ಸಾಕಷ್ಟು ಪ್ರಶಸ್ತಿಗಳಿಗೂ ಭಾಜನವಾಗಿದೆ. ಶೀಘ್ರದಲ್ಲೇ ಪಿಡಿಪಿಯು ವಿಶ್ವವಿದ್ಯಾಲಯ ಅಂತಾರಾಷ್ಟ್ರೀಯ ಮಟ್ಟದಲ್ಲೂ ಉತ್ತಮ ವಿಶ್ವವಿದ್ಯಾಲಯ ಎಂಬ ಶ್ರೇಯಕ್ಕೆ ಪಾತ್ರವಾಗಲಿದೆ" ಎಂದು ಸಂಸ್ಥೆಯ ಅಧ್ಯಕ್ಷರಾದ ಮುಖೇಶ್​ ಅಂಬಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
  Published by:MAshok Kumar
  First published: