Husband and Wife: ತನ್ನ ದುಡ್ಡಲ್ಲಿ ಮಜಾ ಮಾಡ್ತಿದ್ದ ಸೋಮಾರಿ ಪತಿಗೆ ಬುದ್ಧಿ ಕಲಿಸಿದ ಪತ್ನಿ!

ಗಂಡ ಎಂದೆನಿಸಿಕೊಂಡವನು ಒಂದು ರೂಪಾಯಿಯೂ ದುಡಿಯದೇ, ಹೆಂಡತಿಯ ಸಂಪಾದನೆಯಲ್ಲೇ ಮಜಾ ಮಾಡಿಕೊಂಡು ಇದ್ದರೆ ಹೇಗೆ? ಎಷ್ಟು ದಿನ ಅಂತ ಹೆಂಡತಿಯಾದವಳು ಇದನ್ನು ಸಹಿಸಿಕೊಂಡು ಹೋಗಬಲ್ಲಳು ನೀವೇ ಹೇಳಿ? ಒಂದಲ್ಲ ಒಂದು ದಿನ ಸಹನೆಯ ಕಟ್ಟೆ ಒಡೆದೇ ಒಡೆಯಬೇಕಲ್ಲವೆ? ಖಾರವಾಗಿ ತನ್ನ ಗಂಡನಿಗೆ ‘ಕೆಲಸ ಹುಡುಕಿಕೊಂಡು ನಾಲ್ಕು ಕಾಸು ಸಂಪಾದನೆ ಮಾಡಬಾರದಾ’ ಅಂತ ಹೇಳೇ ಹೇಳುತ್ತಾಳೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಗಂಡ (Husband) ಎಂದೆನಿಸಿಕೊಂಡವನು ಒಂದು ರೂಪಾಯಿಯೂ ದುಡಿಯದೇ, ಹೆಂಡತಿಯ ಸಂಪಾದನೆಯಲ್ಲೇ ಮಜಾ (Enjoy) ಮಾಡಿಕೊಂಡು ಇದ್ದರೆ ಹೇಗೆ? ಎಷ್ಟು ದಿನ ಅಂತ ಹೆಂಡತಿಯಾದವಳು ಇದನ್ನು ಸಹಿಸಿಕೊಂಡು ಹೋಗಬಲ್ಲಳು ನೀವೇ ಹೇಳಿ? ಒಂದಲ್ಲ ಒಂದು ದಿನ ಸಹನೆಯ ಕಟ್ಟೆ ಒಡೆದೇ ಒಡೆಯಬೇಕಲ್ಲವೆ? ಖಾರವಾಗಿ ತನ್ನ ಗಂಡನಿಗೆ ‘ಕೆಲಸ ಹುಡುಕಿಕೊಂಡು ನಾಲ್ಕು ಕಾಸು ಸಂಪಾದನೆ ಮಾಡಬಾರದಾ’ ಅಂತ ಹೇಳೇ ಹೇಳುತ್ತಾಳೆ. ಇದೀಗ ಅಂತಹ ಪ್ರಕರಣವೊಂದು ಸಾಮಾಜಿಕ ಮಾಧ್ಯಮದಲ್ಲಿ (Social Media) ಹುಬ್ಬೇರಿಸುವಂತೆ ಮಾಡಿದೆ. ಇಲ್ಲಿಯೂ ಸಹ ಬೇಸರಗೊಂಡ ಪತ್ನಿಯೊಬ್ಬಳು (Wife), ತನ್ನ ಪತಿಯು ತನ್ನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಅಂತ ಸುಳ್ಳು ಹೇಳಿಕೊಂಡು ಮತ್ತು ಹೊಸ ಉದ್ಯೋಗವನ್ನು ಹುಡುಕುವ ಗೋಜಿಗೆ ಹೋಗದೆ ಮನೆಯಲ್ಲಿಯೇ ಮಜಾ ಮಾಡಿಕೊಂಡು ಇದ್ದಾನೆ. 

ಪತಿಯ ಈ ವರ್ತನೆಗೆ ಪತ್ನಿ ಹೇಳಿದ್ದೇನು?
ಹೆಂಡತಿಯು ಈ ಬಗ್ಗೆ ತನ್ನ ಮನದಾಳದಿಂದ ಬೇಸರಿಕೆಯ ಮಾತನ್ನು ಹೀಗೆ ವ್ಯಕ್ತಪಡಿಸುತ್ತಾರೆ, "ನನ್ನ ಗಂಡನಿಗೆ ಈಗ 32 ವರ್ಷ ವಯಸ್ಸು, ನನಗೆ 30 ವರ್ಷ ವಯಸ್ಸು ಮದುವೆಯಾಗಿ ಈಗ ಕೇವಲ ಒಂದು ವರ್ಷವಾಗಿದೆ ಅಷ್ಟೇ ಮತ್ತು ನಮ್ಮ ವೈವಾಹಿಕ ಜೀವನ ಸಂತೋಷಕರವಾಗಿಲ್ಲ" ಎಂದು. ಇದನ್ನು ಹೆಂಡತಿಯು ಸ್ವತಃ ರೆಡ್ಡಿಟ್ ನಲ್ಲಿ ಬರೆದುಕೊಂಡಿದ್ದಾರೆ.

ಅವರ ಪ್ರಕಾರ, ಮದುವೆಯಾಗುವ ಮುಂಚೆ ಅವರ ಪತಿ ತಮ್ಮ ಹೆತ್ತವರೊಂದಿಗೆ ವಾಸಿಸುತ್ತಿದ್ದರು ಹಾಗೂ ಮದುವೆಯಾದ ನಂತರ ಅವರೊಂದಿಗೆ ವಾಸಿಸಲು ಶುರು ಮಾಡಿದರು. ಈ ಸಮಯದಲ್ಲಿ ಹೆಂಡತಿಯು ಏನೂ ಮರುಮಾತನಾಡದೆ ತಮ್ಮಿಬ್ಬರಿಗೂ ಅಗತ್ಯವಿರುವ ಇತರ ವಸ್ತುಗಳನ್ನು ಪತಿಯು ದುಡಿದು ತರುವವರೆಗೂ ಹೆಂಡತಿಯೇ ಸ್ವತಃ ಮನೆ ಬಾಡಿಗೆ ಮತ್ತು ಎಲ್ಲಾ ರೀತಿಯ ಬಿಲ್ ಗಳನ್ನು ಪಾವತಿಸುವುದನ್ನು ಮುಂದುವರಿಸಿದರು.

ಇದನ್ನೂ ಓದಿ: Viral News: ಈ ದೇಶದಲ್ಲಿ ಜಾಸ್ತಿ ಮಕ್ಕಳಿದ್ರೆ ಟ್ಯಾಕ್ಸ್ ಡಿಸ್ಕೌಂಟ್​ ಕೊಡ್ತಾರಂತೆ!

ಈ ಬಗ್ಗೆ ಹೆಂಡತಿಯು "ನಾವು ಮದುವೆಯಾದ ನಂತರ, ನನ್ನ ಗಂಡ ನನಗೆ ಒಂದು ಮಾತು ಸಹ ತಿಳಿಸದೆ ತಮ್ಮ ಕೆಲಸದ ಸಮಯವನ್ನು ತಗ್ಗಿಸಲು ಪ್ರಾರಂಭಿಸಿದರು. ಅಲ್ಲದೆ ನನ್ನ ಬಳಿ ಅವರು "ನಾನು ನಮ್ಮಿಬ್ಬರಿಗಾಗಿ ಸಾಕಷ್ಟು ಹಣವನ್ನು ಸಂಪಾದಿಸಿದ್ದೇನೆ" ಎಂದು ಅದಕ್ಕೆಲ್ಲಾ ವಿವರಣೆ ನೀಡಿದರು, ಆದ್ದರಿಂದ ಅವರು ಅರೆಕಾಲಿಕ ಕೆಲಸ ಮಾಡಲು ಶುರು ಮಾಡಿದರು. ಇತ್ತ ನನ್ನ ಆದಾಯವೂ ಚೆನ್ನಾಗಿಯೇ ಇತ್ತು ಮತ್ತು ಅವರು ಮನೆಯಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಇರುತ್ತಿದ್ದರು. ಈ ಮಧ್ಯೆ ನಾನು ಇನ್ನೂ ಸ್ವಲ್ಪ ದಿನಗಳಲ್ಲಿ ಬೇರೆ ಕೆಲಸ ಹುಡುಕಿಕೊಳ್ಳಬಹುದು ಎಂದೇ ಅಂದುಕೊಂಡಿದ್ದೆ” ಎಂದು ಹೇಳಿದ್ದಾರೆ.

ಇತರ ಚಟುವಟಿಕೆಗಳಲ್ಲೇ ಕಾಲಹರಣ 
ಆರಂಭದಲ್ಲಿ ಮಹಿಳೆಯ ಪತಿ ಮನೆಯಲ್ಲಿ ಎಲ್ಲಾ ಕೆಲಸಗಳಿಗೆ ಸಹಾಯ ಮಾತ್ತಿದ್ದರು, ತದನಂತರ ಪತಿರಾಯ ತನ್ನ ಹೆಚ್ಚಿನ ಸಮಯವನ್ನು ಬಾರ್ ಗೆ ಹೋಗುವುದು, ವಿಡಿಯೋ ಗೇಮ್ ಗಳನ್ನು ಆಡುವುದು ಇತ್ಯಾದಿಗಳಲ್ಲೆ ಕಳೆಯಲು ಶುರು ಮಾಡಿದರು ಎಂದು ಹೆಂಡತಿ ಹೇಳಿದ್ದಾರೆ.

"ತನ್ನ ಸ್ವಯಂ ತಪ್ಪಿನಿಂದಾಗಿ ಎರಡು ತಿಂಗಳ ಹಿಂದೆ ಅವರನ್ನು ಕೆಲಸದಿಂದ ತೆಗೆದು ಹಾಕಲಾಯಿತು" ಎಂದು ಅವಳ ಪತಿ ಅವಳಿಗೆ ಹೇಳಿದಾಗ ಪರಿಸ್ಥಿತಿ ಇನ್ನೂ ಹದಗೆಡಲು ಪ್ರಾರಂಭಿಸಿತು ಎನ್ನುತ್ತಾರೆ ಮಹಿಳೆ. ಆದಾಗ್ಯೂ ತನ್ನ ಪತಿ ಬೇರೆ ಉದ್ಯೋಗವನ್ನು ಹುಡುಕಲು ಪ್ರಾರಂಭಿಸುತ್ತಾನೆ ಎಂದು ಮಹಿಳೆ ಭಾವಿಸಿದ್ದರು ಮತ್ತು ಎಲ್ಲಾ ಬಿಲ್ ಗಳನ್ನು ಅವರೇ ಪಾವತಿಸಲು ಪ್ರಾರಂಭಿಸಿದರು.

ಮನೆಯ ಎಲ್ಲಾ ಖರ್ಚು ನಿಭಾಯಿಸುತ್ತಿದ್ದ ಮಹಿಳೆ 
ಪರಿಸ್ಥಿತಿ ಅಂದುಕೊಂಡಂತೆ ಸರಿ ಹೋಗಲಿಲ್ಲ ಎನ್ನುವ ಅವರು, "ನನ್ನ ಸಂಬಳ ಚೆನ್ನಾಗಿದ್ದರೂ ಸಹ ಮನೆಯ ಬಾಡಿಗೆ, ಎಲ್ಲಾ ಬಿಲ್ ಗಳು, ಮನೆಗೆ ಬೇಕಾಗಿರುವಂತಹ ದಿನಸಿ ಸಾಮಾನು, ವಿಮೆ, ತುರ್ತು ಉಳಿತಾಯಕ್ಕೆ ಕೊಡುಗೆ ನೀಡಲು ಮತ್ತು ನನ್ನ ಪತಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದ ಹೊಸ ಹೊಸ ಚಟಗಳಿಗೂ ಸಹ ನಾನು ದುಡ್ಡು ಕೊಡಬೇಕಾಯಿತು. ಆಗ ನನಗೆ ನನ್ನ ಸಂಬಳದಲ್ಲಿ ಇದನ್ನೆಲ್ಲಾ ಮಾಡುವುದು ತುಂಬಾನೇ ಕಷ್ಟಕರವಾಯಿತು” ಎಂದು ಹೆಂಡತಿ ಅಲವತ್ತುಕೊಂಡಿದ್ದಾರೆ.

ಬೇಸತ್ತ ಮಹಿಳೆ ಪತಿಗೆ ಹೇಳಿದ್ದೇನು ನೋಡಿ
ತದನಂತರ ಕೆಲಸದ ವಿಚಾರವಾಗಿ ಪತಿ-ಪತ್ನಿ ಮಧ್ಯೆ ವಾದ-ವಿವಾದಗಳು ಏರ್ಪಟ್ಟು ಆ ವಿಷಯವು ತುಂಬಾನೇ ದೊಡ್ಡದಾಗಿ ಬೆಳೆಯಲು ಪ್ರಾರಂಭಿಸಿತು ಎಂದು ಹೇಳಿದರೆ ತಪ್ಪಾಗುವುದಿಲ್ಲ. ತಾನು ದುಡಿಯುತ್ತಿಲ್ಲ ಎಂದು ಗೊತ್ತಿದ್ದರೂ ಆ ಬಗ್ಗೆ ಕ್ಯಾರೆ ಅನ್ನದ ಆ ಮಹಿಳೆಯ ಪತಿ “ಬೇರೆ ಕೆಲಸ ಹುಡುಕುವುದು ಯೋಗ್ಯ ಅಂತ ಅನ್ನಿಸುತ್ತಿಲ್ಲ, ನಾವು ಇಷ್ಟು ದುಡ್ಡಲ್ಲಿ ಆರಾಮಾಗಿದ್ದೇವೆ" ಎಂದು ಹೇಳುತ್ತಿದ್ದರಂತೆ. ಇದರಿಂದ ಯಾರಿಗೆ ತಾನೆ ಬೇಸರ ಹಾಗೂ ಕೋಪ ಬರುವುದಿಲ್ಲ ಹೇಳಿ. ಸಹಜವಾಗಿಯೇ ಆ ಮಹಿಳೆಯೂ ಸಹ ತನ್ನ ಪತಿಯ ಮೇಲೆ ಕೋಪ ಬಂದು, ತನ್ನ ಗಂಡ ಇಷ್ಟು ದಿನ ಸುಳ್ಳು ಹೇಳಿದ್ದಾನೆ ಮತ್ತು ತನ್ನ ದುಡ್ಡಿನಲ್ಲಿ ಇಷ್ಟು ದಿನ ಮಜಾ ಮಾಡಿದ್ದರಿಂದ ಇನ್ನು ತನ್ನ ಮನೆಯಲ್ಲಿ ಇರುವ ಅವಶ್ಯಕತೆ ಪತಿಗಿಲ್ಲ, ಹೆತ್ತವರ ಜೊತೆಯೇ ಹೋಗುವಂತೆ ಹೇಳಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಆಕೆ "ನಾನು ಇನ್ನು ಮುಂದೆ ಎಲ್ಲದಕ್ಕೂ ಹಣ ನೀಡುವುದಿಲ್ಲ ಮತ್ತು ನನ್ನ ಬಗ್ಗೆ ಅವರ ಮನೋಭಾವವು ನಮ್ಮ ಇಡೀ ಸಂಬಂಧವನ್ನು ಪ್ರಶ್ನಿಸುವಂತೆ ಮಾಡುತ್ತಿದೆ" ಎಂದು ಮನದಾಳದಿಂದ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:  Viral Video: ದಶಕಗಳ ಹಿಂದೆ ಕಳೆದುಹೋದವರು ಮತ್ತೆ ಸಿಕ್ಕ ಅದ್ಭುತ ಕ್ಷಣ, ವಿಡಿಯೋ ನೋಡಿ

"ನಿನ್ನ ಗಂಡ ನಿನ್ನಿಂದ ಸಂಪೂರ್ಣವಾಗಿ ಪ್ರಯೋಜನ ಪಡೆಯುತ್ತಿದ್ದಾನೆ. ಅವನಿಗೆ ವಿಚ್ಚೇದನ ನೀಡು. ಅವನಿಲ್ಲದೆಯೂ ಸಹ ಉತ್ತಮವಾದ ಜೀವನ ನಡೆಸಬಹುದು" ಎಂದು ಪೋಸ್ಟ್ ನೋಡಿದವರು ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: