Divorce: ಹೆಂಡತಿ ದಿನನಿತ್ಯ ಸ್ನಾನ ಮಾಡುವುದಿಲ್ಲ ಎಂದು ಡೈವೋರ್ಸ್ ನೀಡಿದ ಗಂಡ!

ಆ ದಂಪತಿಗೆ ನಾವೇ ಕೌನ್ಸಿಲಿಂಗ್ ಕೊಡಿಸುತ್ತಿದ್ದೇವೆ. ಅವರ ಪೋಷಕರ ಜೊತೆಯೂ ಈ ಬಗ್ಗೆ ಮಾತನಾಡಿದ್ದೇವೆ. ಆ ಮಹಿಳೆಗೆ ತನ್ನ ಗಂಡನ ಜೊತೆ ಬದುಕಬೇಕೆಂಬ ಆಸೆ ಇದೆ. ಹೀಗಾಗಿ ಅವರ ಸಂಬಂಧ ಉಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಆಲಿಘಡ (ಉತ್ತರ ಪ್ರದೇಶ); ಇತ್ತೀಚಿನ ದಿನಗಳಲ್ಲಿ ಗಂಡ- ಹೆಂಡತಿ (Husband And Wife) ನಡುವೆ ಹಲವು ಕ್ಷುಲ್ಲಕ ಕಾರಣಗಳಿಗೆ ಡೈವೋರ್ಸ್​ ಆಗುತ್ತಿದೆ. ಕೆಲವು ತೀರಾ ಸಣ್ಣ ಸಣ್ಣ ವಿಷಯಕ್ಕೂ ವಿಚ್ಛೇದನದ (Divorce) ಮೊರೆ ಹೋದಂತಹ ಪ್ರಕರಣಗಳನ್ನು ನಾವು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಭೂಪ ತನ್ನ ಹೆಂಡತಿ ಪ್ರತಿದಿನ ಸ್ನಾನ ಮಾಡುವುದಿಲ್ಲ ಎಂಬ ಕಾರಣಕ್ಕೆ ವಿಚ್ಛೇದನ ನೀಡಿರುವ ಘಟನೆ ಉತ್ತರಪ್ರದೇಶದಲ್ಲಿ (Uttara Pradesh) ನಡೆದಿದೆ. ಆತ  ಯಾವುದೇ ಕೋರ್ಟ್ ಮೂಲಕ ವಿಚ್ಛೇದನ ಪಡೆದಿಲ್ಲ ಬದಲಾಗಿ ದೇಶದಲ್ಲಿ ರದ್ದಾಗಿರುವ ತ್ರಿವಳಿ ತಲಾಖ್ ಮೂಲಕ ಪತ್ನಿಗೆ ವಿಚ್ಛೇದನ ನೀಡಿದ್ದಾನೆ. ಈ ವಿಚಾರವಾಗಿ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ತನ್ನ ಹೆಂಡತಿ ಪ್ರತಿನಿತ್ಯ ಸ್ನಾನ ಮಾಡುವುದಿಲ್ಲ, ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುವುದಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ವಿಚ್ಛೇದನ ನೀಡಿರುವ ಅಚ್ಚರಿಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆಲಿಘಢದಲ್ಲಿ ಈ ಘಟನೆ ನಡೆದಿದ್ದು, ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬ ತನ್ನ ಹೆಂಡತಿ ದಿನನಿತ್ಯ ಸ್ನಾನ ಮಾಡುವುದಿಲ್ಲ. ಸ್ವಚ್ಛತೆ, ಶುಚಿತ್ವದ ಬಗ್ಗೆ ಜ್ಞಾನವಿಲ್ಲದ ಆಕೆಯೊಂದಿಗೆ ಸಂಸಾರ ನಡೆಸಲು ಸಾಧ್ಯವಿಲ್ಲ ಎಂದು ತ್ರಿವಳಿ ತಲಾಖ್ ನೀಡಿದ್ದಾರೆ.

    ತ್ರಿವಳಿ ತಲಾಖ್​ಗೆ ನಿಷೇಧವಿದ್ದರೂ ನನಗೆ ತಲಾಖೆ ನೀಡಿದ್ದಾರೆ ಎಂದು ಆತನ ಹೆಂಡತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ. ಆ ಗಂಡ- ಹೆಂಡತಿ ಇಬ್ಬರಿಗೂ ಈಗ ಕೌನ್ಸಿಲಿಂಗ್ ನಡೆಸಲಾಗುತ್ತಿದೆ.

    ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ಪ್ರತಿನಿತ್ಯ ಸ್ನಾನ ಮಾಡುವುದಿಲ್ಲ ಎಂಬ ಕಾರಣ ನೀಡಿ ಗಂಡ ತಲಾಖ್ ನೀಡಿರುವುದಾಗಿ ಮಹಿಳೆ ದೂರು ನೀಡಿದ್ದಾಳೆ ಆ ದಂಪತಿಗೆ ನಾವೇ ಕೌನ್ಸಿಲಿಂಗ್ ಕೊಡಿಸುತ್ತಿದ್ದೇವೆ. ಅವರ ಪೋಷಕರ ಜೊತೆಯೂ ಈ ಬಗ್ಗೆ ಮಾತನಾಡಿದ್ದೇವೆ. ಆ ಮಹಿಳೆಗೆ ತನ್ನ ಗಂಡನ ಜೊತೆ ಬದುಕಬೇಕೆಂಬ ಆಸೆ ಇದೆ. ಹೀಗಾಗಿ ಅವರ ಸಂಬಂಧ ಉಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    2 ವರ್ಷಗಳ ಹಿಂದೆ ಕ್ವಾರ್ಸಿ ಗ್ರಾಮದ ಆ ಮಹಿಳೆ ಚಂದೌಸ್ ಗ್ರಾಮದ ಪುರುಷನೊಂದಿಗೆ ಮದುವೆಯಾಗಿದ್ದಳು. ಸಣ್ಣ- ಪುಟ್ಟ ವಿಷಯಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಈ ದಂಪತಿಗೆ ಮಗು ಕೂಡ ಇದ್ದು, ವಿಚ್ಛೇದನವಾದರೆ ಆ ಮಗುವಿನ ಭವಿಷ್ಯ ಹಾಳಾಗಲಿದೆ ಎಂದು ಅವರಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    ಇದನ್ನು ಓದಿ: HDK Vs Siddaramaiah: ಸುಳ್ಳನ್ನು ಪದೇಪದೆ ಹೇಳುತ್ತಾ ಜನರನ್ನು ದಾರಿ ತಪ್ಪಿಸುವ ʼಸಿದ್ದಕಲೆʼ ಅವರಿಗೆ ಚೆನ್ನಾಗಿ ಸಿದ್ಧಿಸಿದೆ; ಸಿದ್ದರಾಮಯ್ಯ ವಿರುದ್ಧ ಎಚ್ಡಿಕೆ ಕಿಡಿ

    ಮಹಿಳಾ ಕಾನ್ಸ್​ಟೇಬಲ್ ಮೇಲೆ ಸಾಮೂಹಿಕ ಅತ್ಯಾಚಾರ

    30 ವರ್ಷದ ಪೊಲೀಸ್​ ಕಾನ್ಸ್​​ಟೇಬಲ್ (Gang Rape on Women police)​ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ನೀಮುಚ್​ ಜಿಲ್ಲೆಯಲ್ಲಿ (Madhya Pradesh) ಈ ಅಮಾನವೀಯ ಘಟನೆ ನಡೆದಿದೆ. ಮಹಿಳಾ ಕಾನ್ಸ್​​ಟೇಬಲ್​ ಮೇಲೆ ಎರಗಿದ ಕಾಮುಕರು ಈ ಘಟನೆಯ ದೃಶ್ಯವನ್ನು ವಿಡಿಯೋ ಚಿತ್ರೀಕರಣ ಮಾಡಿದ್ದು, ಈ ಘಟನೆ ಕುರಿತು ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಒಡ್ಡಿದ್ದರು​. ಸೆಪ್ಟೆಂಬರ್​ ತಿಂಗಳ ಆರಂಭದಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಮಹಿಳಾ ಕಾನ್ಸ್​​ಟೇಬಲ್​ ಸೆ. 13ರಂದು ದೂರು ದಾಖಲಿಸಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಘಟನೆ ಸಂಬಂದ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಫೇಸ್​​ ಬುಕ್​ ಮೂಲಕ ಸಂತ್ರಸ್ತೆ ಸ್ನೇಹ ಬೆಳಸಿದ್ದಾರೆ. ಬಳಿಕ ಮೊಬೈಲ್​ ನಂಬರ್​ಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದು, ವಾಟ್ಸಾಪ್​ನಲ್ಲಿ ಚಾಟಿಂಗ್​ ನಡೆಸುತ್ತಿದ್ದರು. ಇದೇ ಆತ್ಮೀಯತೆ ಹಿನ್ನಲೆ ಸಂತ್ರಸ್ತೆಯನ್ನು ಆರೋಪಿ ತನ್ನ ಸಹೋದರನ ಹುಟ್ಟುಹಬ್ಬದ ಪಾರ್ಟಿಗೆ ಆಹ್ವಾನಿಸಿದ್ದ. ಅಲ್ಲಿಯೇ ಇಬ್ಬರು ಸಹೋದರರು ಮತ್ತೊರ್ವ ವ್ಯಕ್ತಿ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ದಾಖಲಿಸಿದ್ದಾರೆ.
    Published by:HR Ramesh
    First published: