• Home
  • »
  • News
  • »
  • national-international
  • »
  • Instagram Reels: 24 ಗಂಟೆ ರೀಲ್ಸ್‌ನಲ್ಲೇ ಕಾಲ ಕಳಿತಾಳೆ ಅಂತ ಹೆಂಡ್ತಿಗೆ ಹೊಡೆದ ಗಂಡ! ರೀಲ್ ಅಲ್ಲ ರಿಯಲ್ ಆಗೇ ನಡೀತು ಮರ್ಡರ್!

Instagram Reels: 24 ಗಂಟೆ ರೀಲ್ಸ್‌ನಲ್ಲೇ ಕಾಲ ಕಳಿತಾಳೆ ಅಂತ ಹೆಂಡ್ತಿಗೆ ಹೊಡೆದ ಗಂಡ! ರೀಲ್ ಅಲ್ಲ ರಿಯಲ್ ಆಗೇ ನಡೀತು ಮರ್ಡರ್!

ಕೊಲೆಯಾದ ಮಹಿಳೆ

ಕೊಲೆಯಾದ ಮಹಿಳೆ

ಪತಿಯೊಬ್ಬ ಕತ್ತು ಹಿಸುಕಿ ತನ್ನ ಪತ್ನಿಯನ್ನು ಕೊಂದಿದ್ದಾನೆ. ಅದಕ್ಕೆ ಕಾರಣ ಆಕೆ ಅತೀ ಹೆಚ್ಚಿನ ಸಮಯ ಇನ್ಸ್‌ಸ್ಟಾಗ್ರಾಮ್ ರೀಲ್ಸ್‌ ಮಾಡುವುದರಲ್ಲಿ ಕಾಲ ಕಳೆಯುತ್ತಾ ಇದ್ದಿದ್ದು!

  • News18 Kannada
  • Last Updated :
  • Tamil Nadu, India
  • Share this:

ತಮಿಳುನಾಡು: ಸೋಶಿಯಲ್ ಮೀಡಿಯಾ (Social media) ಮಿತವಾಗಿ ಬಳಸಿದ್ರೆ ಒಳ್ಳೆಯದು. ಅದರ ಬಳಕೆ ಅತಿಯಾದ್ರೆ ಸಂಸಾರದಲ್ಲಿ (family) ಯಾವ ರೀತಿ ವಿರಸ ಮೂಡಿ, ಅದು ಮಹಾ ಅನಾಹುತಕ್ಕೆ ಕಾರಣ ಆಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ (Example). ತಮಿಳುನಾಡಿನಲ್ಲಿ (Tamil Nadu) ಗಂಡನೊಬ್ಬ (Husband) ಹೆಂಡತಿಯನ್ನು (Wife) ಹೊಡೆದು ಕೊಂದಿದ್ದಾನೆ. ಕಾರಣ ಆಕೆಯ ಸೋಶಿಯಲ್ ಮೀಡಿಯಾ ಹುಚ್ಚು. ಅದರಲ್ಲೂ ಇನ್ಸ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ (Instagram reels) ಆಕೆ ಹೆಚ್ಚು ಸಮಯ ಕಳಿತಾ ಇದ್ದಳು ಎನ್ನುವ ಕ್ಷುಲ್ಲಕ ಕಾರಣ. ಇನ್ಸ್‌ಸ್ಟಾಗ್ರಾಮ್‌ನಲ್ಲಿ ಸುಮಾರು 33 ಸಾವಿರ ಫಾಲೋವರ್ಸ್‌ (Followers) ಹೊಂದಿದ್ದ ಆಕೆ, ಗಂಡನಿಂದ ಏಟು ತಿಂದು ಸಾವಿನ ಮನೆ ತಲುಪಿದ್ದಾಳೆ!


ಮಹಿಳೆ ಪ್ರಾಣ ತೆಗೆದ ಇನ್ಸ್‌ಸ್ಟಾಗ್ರಾಮ್ ಹುಚ್ಚು!
ಸಾಮಾಜಿಕ ತಾಣಗಳಾದ ಇನ್ಸ್‌ಸ್ಟಾಗ್ರಾಮ್ ಮತ್ತು ಟಿಕ್‌ಟಾಕ್ ಇತ್ತೀಚಿನ ದಿನಗಳಲ್ಲಿ ಬಹಳ ಪ್ರಸಿದ್ಧವಾಗಿದೆ. ಅವುಗಳಲ್ಲಿ ರೀಲ್‌ಗಳನ್ನು ಪೋಸ್ಟ್ ಮಾಡುವವರ ಸಂಖ್ಯೆ ಸಾಕಷ್ಟು ಹೆಚ್ಚಿದೆ. ಆದರೆ ಇಲ್ಲಿ ಇನ್ಸ್‌ಸ್ಟಾಗ್ರಾಮ್ ರೀಲ್ಸ್ ಮಾಡುವ ಹವ್ಯಾಸವು ಮಹಿಳೆಗೆ ಭಾರಿ ಕಂಟಕವನ್ನೇ ತಂದಿದೆ.

ಕೊಲೆಯಾದ ಚಿತ್ರಾ


ಹೆಂಡತಿಯನ್ನು ಹೊಡೆದು ಕೊಂದ ಗಂಡ


ತಮಿಳುನಾಡಿನ ತಿರುಪುರ್ ಜಿಲ್ಲೆಯ ದಿಂಡುಗಲ್‌ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಅಲ್ಲಿನ ನಿವಾಸಿ 38 ವರ್ಷದ ಅಮೃತಲಿಂಗಂ ಎಂಬಾತ ತನ್ನ ಪತ್ನಿ, ಚಿತ್ರಾ ಎಂಬಾಕೆಯನ್ನು ಹೊಡೆದು ಕೊಂದಿದ್ದಾನೆ. ಅದಕ್ಕೆ ಕಾರಣ ಆಕೆ ಅತೀ ಹೆಚ್ಚಿನ ಸಮಯ ಇನ್ಸ್‌ಸ್ಟಾಗ್ರಾಮ್ ರೀಲ್ಸ್‌ ಮಾಡುವುದರಲ್ಲಿ ಕಾಲ ಕಳೆಯುತ್ತಾ ಇದ್ದಿದ್ದು!


ಕೊಲೆ ಆರೋಪಿ


ಇದನ್ನೂ ಓದಿ: Viral Story: ಪ್ರೇಮಿಗಾಗಿ ಗಡಿ ದಾಟಿ ಬಂದ 83ರ ಅಜ್ಜಿ! ಆಕೆಯನ್ನು ಮದ್ವೆಯಾದ ಹುಡುಗನ ವಯಸ್ಸು 28!


ಇನ್ಸ್‌ಸ್ಟಾದಲ್ಲಿ 33 ಸಾವಿರ ಫಾಲೋವರ್ಸ್


ಆರೋಪಿ ಅಮೃತಲಿಂಗಂ ತೆನ್ನಂಪಾಳ್ಯಂ ತರಕಾರಿ ಮಾರುಕಟ್ಟೆಯಲ್ಲಿ ದಿನಗೂಲಿ ಕಾರ್ಮಿಕನಾಗಿದ್ದು, ಪತ್ನಿ ಚಿತ್ರಾ ಬಟ್ಟೆ ತಯಾರಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಗೆ ಸೋಶಿಯಲ್ ಮೀಡಿಯಾ ಹುಚ್ಚಿತ್ತು. ಇನ್ಸ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತಿದ್ದ ಆಕೆ, 33 ಸಾವಿರ ಫಾಲೋವರ್ಸ್ ಹೊಂದಿದ್ದಳು.


ರೀಲ್ಸ್ ಕಾರಣದಿಂದ ಗಂಡ, ಹೆಂಡತಿ ನಡುವೆ ಜಗಳ


ದಂಪತಿ ಸೇಲಂ ನಗರದಲ್ಲಿ ಬಾಡಿಗೆಗೆ ವಾಸವಾಗಿದ್ದರು. ಈ ಸಂದರ್ಭದಲ್ಲಿ, ಚಿತ್ರಾ ಅವರಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್‌ಗಳನ್ನು ಹಂಚಿಕೊಳ್ಳುವ ಅಭ್ಯಾಸ ಹೆಚ್ಚಾಗಿತ್ತು. ಇದಕ್ಕಾಗಿಯೇ ಅಮೃತಲಿಂಗಂ ಚಿತ್ರಾ ಅವರೊಂದಿಗೆ ಹಲವಾರು ಬಾರಿ ಜಗಳವಾಡಿದ್ದರು. ಚಿತ್ರಾ ಅದರಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಳು. ಇಷ್ಟು ಮಾತ್ರವಲ್ಲದೆ ಚಿತ್ರಾ ಅವರ ಫಾಲೋವರ್ಸ್  ಹೆಚ್ಚಾದಾಗ, ಚಿತ್ರಾ ತಾವು ನಟನಾ ಜಗತ್ತಿನಲ್ಲಿ ವೃತ್ತಿಜೀವನವನ್ನು ಮಾಡಲು ನಿರ್ಧರಿಸಿದರು. ಆ ಬಳಿಕ ಇದಕ್ಕಾಗಿ ಎರಡು ತಿಂಗಳ ಹಿಂದೆ ಚೆನ್ನೈಗೆ ಹೋಗಿದ್ದಳು ಎನ್ನಲಾಗಿದೆ.


ಪತ್ನಿಯ ಕತ್ತು ಹಿಸುಕಿ ಕೊಂದ ಪತಿ


ಚಿತ್ರಾ ಕಳೆದ ವಾರವಷ್ಟೇ ಹತ್ತಿರದವರ ಮದುವೆಗೆಂದು ವಾಪಸ್ಸಾಗಿದ್ದು, ಕಾರ್ಯಕ್ರಮ ಮುಗಿಸಿ ಚೆನ್ನೈಗೆ ತೆರಳಲು ತಯಾರಾಗುತ್ತಿದ್ದರು. ಅಷ್ಟರಲ್ಲಿ ಆಕೆಯನ್ನು ಬಿಟ್ಟು ಹೋಗುವುದು ಬೇಡ ಎಂದು ಪತಿ ಅಮೃತಲಿಂಗಂ ಕೇಳಿಕೊಂಡಿದ್ದಾನೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳ ಆಗಿದೆ. ಇದಾದ ಬಳಿಕ ಮತ್ತೊಮ್ಮೆ ಇಬ್ಬರ ನಡುವೆ ವಾಗ್ವಾದ ನಡೆದು ಅದು ಜಗಳಕ್ಕೆ ತಿರುಗಿದೆ. ನಂತರ ಅಮೃತಲಿಂಗಂ ತನ್ನ ಶಾಲನ್ನು ಬಳಸಿ ಚಿತ್ರಾ ಅವರ ಕತ್ತು ಹಿಸುಕಿದ್ದಾನೆ.


ಇದನ್ನೂ ಓದಿ: Viral News: 21 ದಿನದ ಹೆಣ್ಣು ಶಿಶುವಿನ ಹೊಟ್ಟೆಯಲ್ಲಿದ್ದವು 8 ಭ್ರೂಣಗಳು! ಇದು ನಿಮ್ಮನ್ನು ಬೆಚ್ಚಿ ಬೀಳಿಸುವ ಸುದ್ದಿ


ಪರಾರಿಯಾಗಿದ್ದ ಪತಿ ಅರೆಸ್ಟ್


ಆಕೆ ಪ್ರಜ್ಞಾಹೀನಳಾದ ತಕ್ಷಣ ಗಾಬರಿಗೊಂಡ ಪತಿ ಮನೆಯಿಂದ ಓಡಿ ಹೋಗಿದ್ದು, ಬಳಿಕ ಮಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಕೆ ಮನೆಯವರಿಗೆ ವಿಚಾರ ತಿಳಿಸಿದ್ದು, ಎಲ್ಲರೂ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಚಿತ್ರಾ ಶವವಾಗಿ ಬಿದ್ದಿರುವುದು ಕಂಡು ಬಂದಿದೆ.  ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಪತಿಯನ್ನು ಪೆರುಮನಲ್ಲೂರಿನಿಂದ ಪೊಲೀಸರು ಬಂಧಿಸಿದ್ದಾರೆ.

Published by:Annappa Achari
First published: