Wife's Head Cut: ಹೆಂಡತಿ ತಲೆ ಕಡಿದ ಗಂಡ, ಪೊಲೀಸ್ ಸ್ಟೇಷನ್‌ಗೆ ತೆಗೆದುಕೊಂಡು ಬಂದ!

ವೃದ್ಧ ಪತಿಯೊಬ್ಬ ತನ್ನ ಹೆಂಡತಿಯ ತಲೆ ಕಡಿದು ಹಾಕಿದ್ದಾನೆ. ಸಾಲದ್ದಕ್ಕೆ ಅದನ್ನು ತೆಗೆದುಕೊಂಡು ಹತ್ತಿರದ ಪೊಲೀಸ್ ಠಾಣೆಗೆ ಹೋಗಿ, ತಾನೇ ಪೊಲೀಸರಿಗೆ ಶರಣಾಗಿದ್ದಾನೆ.

ಪತ್ನಿಯನ್ನು ಕೊಂದ ಆರೋಪಿ

ಪತ್ನಿಯನ್ನು ಕೊಂದ ಆರೋಪಿ

  • Share this:
ಒಡಿಶಾ: ಗಂಡ (Husband) ಹೆಂಡತಿ (Wife) ಜಗಳ (quarrel) ಉಂಡು ಮಲಗುವವರೆಗೆ ಅಂತ ಗಾದೆ (Proverb) ಮಾತೇ ಇದೆ. ಪತಿ, ಪತ್ನಿಯರಲ್ಲಿ ಜಗಳ, ಭಿನ್ನಾಭಿಪ್ರಾಯ, ವೈಮನಸ್ಸು ಬರುವುದು ಕಾಮನ್ (Common). ಆದ್ರೆ ಎಲ್ಲವನ್ನೂ ಅಲ್ಲಿಗೇ ಮರೆತು, ಇಬ್ಬರೂ ಕಾಂಪ್ರಮೈಸ್ (Compromise) ಆಗಿ ಸಂಸಾರದ (family) ರಥ ಮುಂದೆ ಎಳೆದುಕೊಂಡು ಹೋಗಬೇಕು. ಇಲ್ಲವಾದರೆ ಎಲ್ಲವೂ ಹಳಿ ತಪ್ಪಿ, ಎಲ್ಲವೂ ಅಲ್ಲೋಲ ಕಲ್ಲೋಲ ಆಗುತ್ತದೆ. ಇದಕ್ಕೆ ಉದಾಹರಣೆ (Example) ಎನ್ನುವಂತೆ ಒಡಿಶಾ (Odisha) ರಾಜ್ಯದಲ್ಲೊಂದು ಭೀಕರ ಘಟನೆ (Terrible incident) ನಡೆದಿದೆ. ಇಲ್ಲಿ ವೃದ್ಧ (Old) ಪತಿಯೊಬ್ಬ ತನ್ನ ಹೆಂಡತಿಯ ತಲೆ (Head) ಕಡಿದು ಹಾಕಿದ್ದಾನೆ. ಸಾಲದ್ದಕ್ಕೆ ಅದನ್ನು ತೆಗೆದುಕೊಂಡು ಹತ್ತಿರದ ಪೊಲೀಸ್ ಠಾಣೆಗೆ (Police Station) ಹೋಗಿ, ತಾನೇ ಪೊಲೀಸರಿಗೆ ಶರಣಾಗಿದ್ದಾನೆ.

 ಹೆಂಡತಿಯ ತಲೆ ಕಡಿದು ಹಾಕಿದ ಗಂಡ

ಗಂಡನೊಬ್ಬ ತಾನೇ ತನ್ನ ಕೈಯಾರೆ ಹೆಂಡತಿಯ ತಲೆಯನ್ನು ಕತ್ತರಿಸಿ ಹಾಕಿರುವ ಘಟನೆ ಒಡಿಶಾ ರಾಜ್ಯದ ಧೆಂಕನಲ್ ಜಿಲ್ಲೆಯ ಗೋನಿಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಇಲ್ಲಿನ ಚಂದ್ರಶೇಖರ್‌ಪುರ ಗ್ರಾಮದ 55 ವರ್ಷದ ಆರೋಪಿ ನಕಾಫೋಡಿ ಮಾಝಿ ಎಂಬಾತ ತನ್ನ ಪತ್ನಿ, 45 ವರ್ಷದ ಸಚಲಾ ಮಾಝಿ ಎಂಬಾಕೆಯ ತಲೆಯನ್ನು ಕತ್ತರಿಸಿ, ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಶೀಲ ಶಂಕಿಸಿ ಕತ್ತ ಕತ್ತರಿಸಿದ ಪಾಪಿ

ನಕಾಫೋಡಿ ಮಾಝಿ ಹಾಗೂ ಸಚಲಾ ಮಾಝಿ ಮದುವೆಯಾಗಿ ಸುಮಾರು 25 ವರ್ಷಗಳು ಕಳೆದಿವೆ. ಇವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಅವರು ತಂದೆ ತಾಯಿಯಿಂದ ದೂರವಾಗಿ, ಗ್ರಾಮದಿಂದ ಹೊರಗೆ ಇದ್ದಾರೆ. ಮದುವೆ ಆದಾಗಿನಿಂದಲೂ ನಕಾಪೋಡಿ ಮಾಝಿಗೆ ತನ್ನ ಪತ್ನಿಯ ಶೀಲದ ಮೇಲೆ ಅನುಮಾನ ಇತ್ತಂತೆ.  ಇದೇ ಕಾರಣಕ್ಕೆ ಪತಿ ಮತ್ತು ಪತ್ನಿ ಮಧ್ಯೆ ಪ್ರತಿ ನಿತ್ಯ ಜಗಳ ನಡೆಯುತ್ತಿತ್ತಂತೆ.

ಇದನ್ನೂ ಓದಿ: Marriage Dhoka: ವಯಸ್ಸು 30 ಅಂತ ಯಾಮಾರಿಸಿ ಯುವಕನನ್ನು ಮದ್ವೆಯಾದ 52ರ ಆಂಟಿ! ಮೇಕಪ್‌ ನೋಡಿ ಮೋಸ ಹೋದ ಹುಡುಗ

ಮನೆಯಲ್ಲಿ ನಿತ್ಯವೂ ಪತಿ, ಪತ್ನಿ ಜಗಳ

ಪತಿ ನಕಾಫೋಡಿ ಮಾಝಿ ತನ್ನ ಪತ್ನಿ ಸಚಲಾ ಮಾಝಿ ಜೊತೆ ನಿತ್ಯ ಜಗಳ ಆಡುತ್ತಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ ಮತ್ತೆ ಪತಿ ಹಾಗೂ ಪತ್ನಿ ಮಧ್ಯೆ ಜಗಳ ನಡೆದಿದೆ. ಕೊನೆಗೆ ವಿಪರೀತಕ್ಕೆ ಹೋಗಿ, ಪರಸ್ಪರ ಕೈಕೈ ಮಿಲಾಯಿಸಿದ್ದರೆ. ಬಳಿಕ ಇಂದು ಬೆಳಗಿನ ಜಾವ 3.30 ರಿಂದ 4 ಗಂಟೆ ಸುಮಾರಿಗೆ ಪತಿ ನಾಕಾಫೋಡಿ ಹರಿತವಾದ ಆಯುಧದಿಂದ ಪತ್ನಿ ಸಚಲಾ ಮಾಝಿ ಕತ್ತು ಸೀಳಿ, ಬರ್ಬರವಾಗಿ ಕೊಂದಿದ್ದಾನೆ.

ತಾನೇ ಬಂದು ಪೊಲೀಸ್ ಠಾಣೆಗೆ ಶರಣಾದ ಆರೋಪಿ

ಮನೆಯಲ್ಲಿ ಪತ್ನಿಯನ್ನು ಹತ್ಯೆ ಮಾಡಿದ ಪತಿ, ನಂತರ ಆಕೆಯ ಶಿರಚ್ಛೇದ ಮಾಡಿ ಶರಣಾಗಲು ಕತ್ತರಿಸಿದ ತಲೆಯೊಂದಿಗೆ ಗೊಂಡಿಯಾ ಪೊಲೀಸ್ ಠಾಣೆ ತಲುಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದಾರಿಯಲ್ಲಿ ಜೋರಾಂಡಾ ಔಟ್ ಪೋಸ್ಟ್ ಬಳಿ ಜಾಂಕಿರ ಗ್ರಾಮದಲ್ಲಿ ಕೆಲವರು ಆತನನ್ನು ಹಿಡಿದು ಜೋರಾಂಡಾ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ: Property: ಗಂಡನ ಶವ ಮನೆಯಲ್ಲೇ ಬಿಟ್ರು, ಆಫೀಸ್‌ಗೆ ಓಡೋಡಿ ಹೋದ್ರು; ಆಸ್ತಿಗಾಗಿ ಇಬ್ಬರು ಹೆಂಡತಿಯರ ರೇಸ್!

ಪೊಲೀಸರಿಂದ ಪತ್ನಿ ಹಂತಕನ ಬಂಧನ

ಇನ್ನು ಮಾಹಿತಿ ಪಡೆದ ಜೋರಾಂಡಾ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆಯುಧ ಮತ್ತು ತಲೆಯನ್ನೂ ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಇದೀಗ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಆರೋಪಿ ಪತಿ ನಕಾಫೋಡಿ ಮಾಝಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Published by:Annappa Achari
First published: