ಕಷ್ಟದಲ್ಲಿರುವ ಸಮುದ್ರದ ಆಮೆಗೆ ನೆರವಾದ ಶ್ರೀಲಂಕಾದ ಯುವಕ ಚಿಕಾ ಬಾಯ್..!

ಆಮೆಯ ಚಿಪ್ಪಿನ ಮೇಲೆ ತೂಕ ಹೆಚ್ಚಿರುವುದರಿಂದ ಆಮೆ ಸಾಮಾನ್ಯವಾಗಿ ಬೇರೆ ಪ್ರಾಣಿಗಳಿಗೆ ಹೋಲಿಸಿದರೆ ತುಂಬಾ ನಿಧಾನವಾಗಿ ಚಲಿಸುವಂತಹ ಪ್ರಾಣಿ. ಆಹಾರವನ್ನು ಹುಡುಕಿಕೊಂಡು ಹೋಗಲೂ ಇದಕ್ಕೆ ಕಷ್ಟವಾಗುತ್ತದೆಯಂತೆ.

ಆಮೆಗೆ ಸಹಾಯ ಮಾಡುತ್ತಿರುವ ಯುವಕ ಚಿಕಾ ಬಾಯ್​

ಆಮೆಗೆ ಸಹಾಯ ಮಾಡುತ್ತಿರುವ ಯುವಕ ಚಿಕಾ ಬಾಯ್​

  • Share this:
ನೀರಿನಲ್ಲಿ ಬೆಳೆಯುವಂತಹ ಬರ್ನಾಕಲ್​​ಗಳು ತುಂಬಾ ಜಿಗುಟಾಗಿದ್ದು ಕಠಿಣ ಚರ್ಮದ್ದಾಗಿರುತ್ತದೆ. ಸಮುದ್ರದ ನೀರಿನಲ್ಲಿ ಇರುವಂತಹ ಬಂಡೆಗಳಿಗೆ ಮತ್ತು ಸಮುದ್ರದಲ್ಲಿರುವ ಜೀವಿಗಳ ಚರ್ಮಕ್ಕೆ ಇವು ಅಂಟಿಕೊಳ್ಳುತ್ತವೆ. ಇವುಗಳಿಂದ ತುಂಬಾ ಹಾನಿಗೊಳಗಾಗುವುದು ಸಮುದ್ರದಲ್ಲಿರುವ ಆಮೆಗಳು ಎಂದು ಹೇಳಬಹುದಾಗಿದೆ.ಇವು ಆಮೆಗಳ ಚಿಪ್ಪಿಗೆ ಅಂಟಿಕೊಂಡರೆ ಹೋಗುವುದೇ ಇಲ್ಲ.ಬರ್ನಾಕಲ್‌ ಆಮೆಗೆ ಏನೂ ಹಾನಿ ಮಾಡುವುದಿಲ್ಲ ಮತ್ತು ಸಾಮಾನ್ಯವಾಗಿ ಅದು ಗಮನಕ್ಕೂ ಬರುವುದಿಲ್ಲ. ಆದರೆ ಈ ಬರ್ನಾಕಲ್‌ ಆಮೆಯ ಚಿಪ್ಪಿನೊಂದಿಗೆ ಅಂಟಿಕೊಂಡರೆ ಆಮೆಗಳಿಗೆ ಗಂಭೀರ ಸಮಸ್ಯೆಗಳಿಗೆ ಉಂಟು ಮಾಡುತ್ತದೆ. ಇಲ್ಲಿ ಒಂದು ಸಮುದ್ರದ ಆಮೆಯ ಚಿಪ್ಪಿಗೆ ಅನೇಕ ಬರ್ನಾಕಲ್‌ಗಳು ಅಂಟಿಕೊಂಡಿದ್ದು, ಅದೃಷ್ಟವಶಾತ್ ಶ್ರೀಲಂಕಾದ ಚಿಕಾ ಬಾಯ್ ಎಂಬ ವ್ಯಕ್ತಿಯು ತನ್ನ ಸ್ಥಳೀಯ ಸಮುದ್ರ ಆಮೆಗಳ ಮೇಲಿನ ಬರ್ನಾಕಲ್‌ಗಳನ್ನು ತೆಗೆದುಹಾಕಿ ಆಮೆಗಳ ಬದುಕಿಗೆ ಸಹಾಯ ಮಾಡುತ್ತಿದ್ದಾರೆ ಎಂದರೆ ಸುಳ್ಳಲ್ಲ.

ಯೂಟ್ಯೂಬ್‌ನಲ್ಲಿ ಇತ್ತೀಚೆಗೆ ಹಂಚಿಕೊಳ್ಳಲಾದ ವಿಡಿಯೋವೊಂದರಲ್ಲಿ, ಅಸಂಖ್ಯಾತ ಬರ್ನಾಕಲ್‌ಗಳು ಅಂಟಿಕೊಂಡಿರುವಂತಹ ಒಂದು ಸಮುದ್ರ ಆಮೆಗೆ ತಾನು ಹೇಗೆ ಸಹಾಯ ಮಾಡುತ್ತೇನೆ ಎಂದು ಚಿಕಾ ಬಾಯ್ ಹೇಳುತ್ತಾರೆ. ಆಮೆ ಬಳಲುತ್ತಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಇವುಗಳನ್ನು ಹೀಗೆ ದೀರ್ಘಕಾಲದವರೆಗೆ ಬಿಟ್ಟರೆ ಕೆಲವೊಮ್ಮೆ ಸೋಂಕಿಗೆ ಕಾರಣವಾಗಬಹುದು. ಆಮೆಗಳಿಗೆ ಆಹಾರವನ್ನು ಸೇವಿಸಲು ಕಷ್ಟಕರವಾಗಿಸಬಹುದು ಮತ್ತು ಅವುಗಳು ಆಮೆಯ ದೃಷ್ಟಿಹೀನತೆಗೂ ಸಹ ಕಾರಣವಾಗಬಹುದು.ಬರ್ನಾಕಲ್‌ಗಳು ಮಿತಿಮೀರಿದರೆ ಆಮೆಗೆ ಸರಾಗವಾಗಿ ಚಲಿಸಲು ಮತ್ತು ಈಜುವುದಕ್ಕೆ ಬರುವುದಿಲ್ಲ ಎಂದು ಚಿಕಾ ಬಾಯ್ ವಿವರಿಸುತ್ತಾರೆ. "ಆಮೆಯ ಚಿಪ್ಪಿನ ಮೇಲೆ ತೂಕ ಹೆಚ್ಚಿರುವುದರಿಂದ ಆಮೆ ಸಾಮಾನ್ಯವಾಗಿ ಬೇರೆ ಪ್ರಾಣಿಗಳಿಗೆ ಹೋಲಿಸಿದರೆ ತುಂಬಾ ನಿಧಾನವಾಗಿ ಚಲಿಸುವಂತಹ ಪ್ರಾಣಿ. ಆಹಾರವನ್ನು ಹುಡುಕಿಕೊಂಡು ಹೋಗಲೂ ಇದಕ್ಕೆ ಕಷ್ಟವಾಗುತ್ತದೆ" ಎಂದು ಚಿಕಾ ಬಾಯ್ ಹೇಳುತ್ತಾರೆ.

ಇದನ್ನೂ ಓದಿ: 133 ವರ್ಷ ಹಳೆಯ ಸರ್ಕಾರಿ ಶಾಲೆ ದತ್ತು ಪಡೆದ ಕಿಚ್ಚ ಸುದೀಪ್..!

“ಅಲ್ಲದೆ, ಆಮೆಯ ಕಣ್ಣುಗಳ ಬಳಿ ಬರ್ನಾಕಲ್‌ಗಳು ಅಂಟಿಕೊಂಡರೆ ಅದರ ದೃಷ್ಟಿಗೂ ಸಹ ಪರಿಣಾಮ ಬೀರಬಹುದು. ಆಮೆಯ ಬಾಯಿಯ ಬಳಿ ಬರ್ನಾಕಲ್‌ಗಳು ಅಂಟಿಕೊಂಡರೂ ಅದಕ್ಕೆ ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ” ಎಂದು ಚಿಕಾ ಬಾಯ್ ವಿವರಿಸುತ್ತಾರೆ.

ಪ್ರತಿ ಬರ್ನಾಕಲ್‌ ಅನ್ನು ಎಚ್ಚರಿಕೆಯಿಂದ ತೆಗೆದು ಹಾಕಲು ಚಿಕಾ ಬಾಯ್ ಹರಿತವಾದ ಚಾಕುವನ್ನು ಬಳಸುತ್ತಾನೆ. ಚಾಕುವಿನಿಂದ ಆ ಬರ್ನಾಕಲ್‌ಗಳ ಬುಡಕ್ಕೆ ಹಾಕಿ ಅದನ್ನು ತೆಗೆಯುತ್ತಾರೆ ಮತ್ತು ಕೆಲವು ಬರ್ನಾಕಲ್‌ಗಳನ್ನು ತೆಗೆದು ಹಾಕುವುದು ಸುಲಭವಾಗಿರುತ್ತದೆ. ಆದರೆ ಕೆಲವು ತುಂಬಾ ಗಟ್ಟಿಯಾಗಿ ಅಂಟಿಕೊಂಡಿರುತ್ತವೆ.

ಚಿಕಾ ಬಾಯ್ ಆಮೆಯ ಚಿಪ್ಪಿಗೆ ಅಂಟಿದ್ದ ಬರ್ನಾಕಲ್‌ಗಳನ್ನು ತೆಗೆದುಹಾಕಿ ಮತ್ತೆ ಅವುಗಳನ್ನು ಸಮುದ್ರಕ್ಕೆ ಬಿಡುವುದರ ಮೂಲಕ ಈ ಮೂಕ ಪ್ರಾಣಿಗಳ ಬದುಕಿಗೆ ಅಂಟಿದ್ದ ಮತ್ತು ಮಾರಕವಾಗುವಂತಹದನ್ನು ತೆಗೆದುಹಾಕಿ ಅವುಗಳ ಬದುಕಿಗೆ ನೆರವಾಗುತ್ತಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿಯಾಗಿದೆ.

ಇದನ್ನೂ ಓದಿ: Bigg Boss Kannada Season 8: ಅರ್ವಿಯಾ ಲವ್ ಸ್ಟೋರಿ: ಈ ಪ್ರೇಮ್ ಕಹಾನಿ ಸ್ಕ್ರಿಪ್ಟೆಡಾ-ನಿಜನಾ..?

ಇದೇ ರೀತಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಮತ್ತೊಂದು ವಿಡಿಯೋದಲ್ಲಿ, ಚಿಕಾ ಬಾಯ್ ಮೀನುಗಾರರ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿರುವ ವಿಭಿನ್ನ ಸಮುದ್ರ ಆಮೆಗಳನ್ನು ಬಲೆಯನ್ನು ತನ್ನ ಚಾಕುವಿನಿಂದ ಕತ್ತರಿಸಿ ಅವುಗಳನ್ನು ರಕ್ಷಿಸುತ್ತಾನೆ ಮತ್ತು ಅದಕ್ಕೆ ಅಂಟಿಕೊಂಡಿರುವಂತಹ ಎಲ್ಲಾ ಬರ್ನಾಕಲ್‌ಗಳನ್ನು ತೆಗೆದುಹಾಕಿ ಅವುಗಳನ್ನು ಮತ್ತೆ ಸಮುದ್ರಕ್ಕೆ ಬಿಡುತ್ತಾನೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Anitha E
First published: