Resignation: ವಿಶ್ವದೆಲ್ಲೆಡೆ ತಮ್ಮ ಉದ್ಯೋಗಗಳಿಗೆ ರಾಜೀನಾಮೆ ನೀಡುತ್ತಿರುವ ಜನರು: ಏಕೆ ಗೊತ್ತಾ..?

ವಿಶೇಷವಾಗಿ ವರ್ಕ್ ಫ್ರಮ್ ಹೋಂ ಕೆಲಸದಲ್ಲಿ, ಹೆಚ್ಚಿನ ಉದ್ಯೋಗಾಕಾಂಕ್ಷಿಗಳು ಮಾಡುವ ಕೆಲಸದಲ್ಲಿ ಬದಲಾವಣೆಯ ಲೋಪದಿಂದಾಗಿ ಆಯಾಸಗೊಂಡು ಹೊಸ ಸವಾಲುಗಳನ್ನು ಹುಡುಕುವಂತಾಗಿದೆ. ಹೆಚ್ಚು ಸ್ಥಿರವಾದ ಉದ್ಯೋಗದ ಬಯಕೆಯಿಂದಾಗಿ ಸಹ ಜನರು ರಾಜೀನಾಮೆ ನೀಡುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
2021ರಿಂದ ಜಾಗತಿಕಮಟ್ಟದಲ್ಲಿ ಬಹು ರಾಷ್ಟ್ರೀಯ (Multinational Corporations) ಸಂಸ್ಥೆಗಳು, ಐಟಿ ಕಂಪನಿಗಳು(IT companies), ಹಣಕಾಸು ಸಂಸ್ಥೆಗಳು ಮಾತ್ರವಲ್ಲದೆ ಅನೇಕ ಸಣ್ಣ ಸ್ಥಳೀಯ ಸಂಸ್ಥೆಗಳ ಮೇಲೂ ಸಾಂಕ್ರಾಮಿಕ (Epidemics) ರೋಗ ಪ್ರಭಾವ ಬೀರಿ ರಾಜೀನಾಮೆಗಳು ಜಾಸ್ತಿಯಾಗುತ್ತಿವೆ. ಕಳೆದ ವರ್ಷ ಸಾಂಕ್ರಾಮಿಕ ರೋಗದಿಂದಾಗಿ ಸಂಸ್ಥೆಗಳು ಪರಿಚಯಿಸಿದ ತೀವ್ರ ಬದಲಾವಣೆಗಳಿಂದಾಗಿ ಅದಕ್ಕೆ ಒಗ್ಗಿಕೊಳ್ಳಲಾಗದೆ ಲಕ್ಷಾಂತರ ಕಾರ್ಮಿಕರು ಸ್ವಯಂಪ್ರೇರಣೆಯಿಂದ ತಮ್ಮ ಕೆಲಸವನ್ನು ತೊರೆದರು. 2020ರಲ್ಲಿ ಕೋವಿಡ್ -19 ಕಾರಣದಿಂದಾಗಿ ಅನಿಶ್ಚಿತತೆ ಉಂಟಾಗಿ ರಾಜೀನಾಮೆಗಳು ಕುಸಿದಿದ್ದವು. ಆದರೆ ಈಗ ಅದಕ್ಕೆ ವ್ಯತಿರಿಕ್ತವಾಗಿ ರಾಜೀನಾಮೆಗಳು (Resignations) ಹೆಚ್ಚಿವೆ.

ಗ್ರೇಟ್ ರಾಜೀನಾಮೆಗಳು
ವಿಶೇಷವಾಗಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಕಳೆದ ವರ್ಷದಿಂದ ರಾಜೀನಾಮೆಗಳು ಜಾಸ್ತಿಯಾಗಿದ್ದು, ಇದನ್ನು 'ಗ್ರೇಟ್ ರಾಜೀನಾಮೆಗಳು' (Great Resignation) ಎಂದು ಹೆಸರಿಸಲಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೂ ಸಹ ಉದ್ಯೋಗಿಗಳು ಕಂಪನಿಯನ್ನು ತೊರೆಯುವ ದರಕ್ಕೆ ಸಾಂಕ್ರಾಮಿಕ ರೋಗ ಕಾರಣವಾಗಿದೆ ಎಂದು ಅನೇಕ ಅಧ್ಯಯನಗಳಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ.

ಪ್ರಪಂಚದಾದ್ಯಂತದ ಕಂಪನಿಗಳು ತಾವು ಕಾರ್ಯ ನಿರ್ವಹಿಸುವ ವಿಧಾನವನ್ನು ಬದಲಾಯಿಸುವ ಅನಿವಾರ್ಯತೆ ಬಂದೊದಗಿತು. ಹೆಚ್ಚಿನ ಉದ್ಯೋಗಿಗಳು ದೀರ್ಘಕಾಲದ ಭಾವನಾತ್ಮಕ ಮತ್ತು ಮಾನಸಿಕ ಒತ್ತಡದಿಂದ ತೀವ್ರ ಬಳಲಿಕೆ ಅನುಭವಿಸಿ ಕಂಪನಿಯನ್ನು ತೊರೆಯಲು ಆರಂಭಿಸಿದರು.

ಇದನ್ನೂ ಓದಿ: Jobs Alert: ಟಿಸಿಎಸ್, ವಿಪ್ರೋ, ಇನ್ಫೋಸಿಸ್‌ನಿಂದ 1 ಲಕ್ಷಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳ ನೇಮಕಾತಿ; ವಿವರ ಇಲ್ಲಿದೆ

ಹೊಸ ಅವಕಾಶಕ್ಕೆ ಹುಡುಕಾಟ
MIT ಸ್ಲೋನ್ ಅಧ್ಯಯನದ ಅಂಕಿ ಅಂಶದ ಪ್ರಕಾರ, ಏಪ್ರಿಲ್ 2021 ಮತ್ತು ಸೆಪ್ಟೆಂಬರ್ 2021ರ ನಡುವೆ, USನಲ್ಲಿ 24 ಮಿಲಿಯನ್‌ಗೂ ಹೆಚ್ಚು ಜನರು ತಮ್ಮ ಕೆಲಸವನ್ನು ತೊರೆದಿದ್ದಾರೆ. ದೇಶದ 20 ಪ್ರತಿಶತದಷ್ಟು ಉದ್ಯೋಗಿಗಳು, ಉತ್ತಮ ವೇತನ, ಹೊಸ ಸವಾಲುಗಳ ಭರವಸೆಯೊಂದಿಗೆ ಹೊಸ ಅವಕಾಶಗಳನ್ನು ಹುಡುಕುತ್ತಿದ್ದಾರೆ ಎಂದು ಅಂದಾಜು ಮಾಡಲಾಗಿದೆ . ಹೆಚ್ಚಿನ ಸಂಬಳದ ಕೆಲಸಗಾರರಿಗಿಂತ ಕಡಿಮೆ ವೇತನದ ಕೆಲಸಗಾರರು ಹೆಚ್ಚಿನ ದರದಲ್ಲಿ ರಾಜೀನಾಮೆ ನೀಡುತ್ತಿದ್ದಾರೆ. ಆತಿಥ್ಯ, ಆರೋಗ್ಯ, ಸಾರಿಗೆ, ಗೋದಾಮು, ಶಿಕ್ಷಣ ಮತ್ತು ಚಿಲ್ಲರೆ ವ್ಯಾಪಾರವು ಹೆಚ್ಚು ಪರಿಣಾಮಕ್ಕೆ ಒಳಪಟ್ಟ ಕ್ಷೇತ್ರಗಳಾಗಿವೆ.

ನೇಮಕಾತಿಯ ದರ ಹೆಚ್ಚಳ
ಈ ವಲಯಗಳು ಬಹಳಷ್ಟು ಉದ್ಯೋಗಿಗಳನ್ನು ಕಳೆದುಕೊಂಡಿವೆ. ಆದರೆ ಬಹುತೇಕ ಎಲ್ಲಾ ಕ್ಷೇತ್ರಗಳು ಕಳೆದ ವರ್ಷ ಹೆಚ್ಚು ರಾಜೀನಾಮೆಗಳನ್ನು ಕಂಡಿವೆ. 2022ರಲ್ಲಿ ಕೂಡ ಇದೇ ಪ್ರವೃತ್ತಿ ಮುಂದುವರಿಯುತ್ತಿದೆ . ಭಾರತದಲ್ಲಿನ ಐಟಿ ಉದ್ಯಮವು 2021ರಲ್ಲಿ ದಾಖಲೆಯ ತಿಕ್ಕಾಟ ದರವನ್ನು ಅನುಭವಿಸಿತು. ಏಕೆಂದರೆ ಹೆಚ್ಚಿನ ಉದ್ಯೋಗಿಗಳು ಉತ್ತಮ ಅವಕಾಶಗಳ ಹುಡುಕಾಟದಲ್ಲಿ ತಮ್ಮ ಕೆಲಸವನ್ನು ತೊರೆದರು. ಇದರ ಪರಿಣಾಮವಾಗಿ 2022ರಲ್ಲಿ, ಭಾರತೀಯ ಐಟಿ ಸಂಸ್ಥೆಗಳಲ್ಲಿ ನೇಮಕಾತಿಯ ದರ ಹೆಚ್ಚಾಗಿದೆ.

ಯುಎಸ್‌ನಷ್ಟು ಕೆಟ್ಟದ್ದಲ್ಲದಿದ್ದರೂ ಭಾರತದಲ್ಲಿ ಪರಿಸ್ಥಿತಿ ಕ್ರಮೇಣ ಆತಂಕಕಾರಿಯಾಗಿ ಮಾರ್ಪಡುತ್ತಿದೆ ಎಂದು ಸಮೀಕ್ಷೆಗಳು ಸೂಚಿಸಿವೆ. ಹೆಚ್ಚಿನ ಉದ್ಯೋಗಿಗಳು ಆರ್ಥಿಕವಾಗಿ ಮತ್ತು ವೃತ್ತಿಪರವಾಗಿ ತಮ್ಮ ಪ್ರಸ್ತುತ ಉದ್ಯೋಗಗಳನ್ನು ತೊರೆದು ಇನ್ನೂ ಉತ್ತಮ ಅವಕಾಶಗಳತ್ತ ಒಲವು ತೋರಿಸುತ್ತಿದ್ದಾರೆ. ಸೆಪ್ಟೆಂಬರ್ 2021ರಲ್ಲಿ ಅಮೆಜಾನ್ ಇಂಡಿಯಾ ನಡೆಸಿದ ಸಮೀಕ್ಷೆಯ ಪ್ರಕಾರ, ಅರ್ಧದಷ್ಟು ಉದ್ಯೋಗ ಆಕಾಂಕ್ಷಿಗಳು ತಮಗೆ ಕಡಿಮೆ ಅಥವಾ ಯಾವುದೇ ಅನುಭವವಿಲ್ಲದ ವಲಯಗಳು ಅಥವಾ ಉದ್ಯಮಗಳಲ್ಲಿ ಉದ್ಯೋಗಾವಕಾಶಗಳನ್ನು ಹುಡುಕುತ್ತಿದ್ದಾರೆ.

ಇದನ್ನೂ ಓದಿ: Bluetooth ಗೊತ್ತಲ್ವಾ? ಈ ಹೆಸರಿನ ಹಿಂದೆ ರಾಜನೊಬ್ಬನ ಕಥೆಯಿದೆ!

ಕೆಲಸದ ಸಂಸ್ಕೃತಿ
ವಿಶೇಷವಾಗಿ ವರ್ಕ್ ಫ್ರಮ್ ಹೋಂ ಕೆಲಸದಲ್ಲಿ, ಹೆಚ್ಚಿನ ಉದ್ಯೋಗಾಕಾಂಕ್ಷಿಗಳು ಮಾಡುವ ಕೆಲಸದಲ್ಲಿ ಬದಲಾವಣೆಯ ಲೋಪದಿಂದಾಗಿ ಆಯಾಸಗೊಂಡು ಹೊಸ ಸವಾಲುಗಳನ್ನು ಹುಡುಕುವಂತಾಗಿದೆ. ಹೆಚ್ಚು ಸ್ಥಿರವಾದ ಉದ್ಯೋಗದ ಬಯಕೆಯಿಂದಾಗಿ ಸಹ ಜನರು ರಾಜೀನಾಮೆ ನೀಡುತ್ತಿದ್ದಾರೆ. 2021ರಲ್ಲಿ, MIT ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಒಂದು ಅಧ್ಯಯನವನ್ನು ನಡೆಸಿತು, ಇದರ ಪ್ರಕಾರ ವಿಷಕಾರಿ ಕೆಲಸದ ಸಂಸ್ಕೃತಿಗಳು, ಉದ್ಯೋಗಿಗಳು ಕೆಲಸ ತೊರೆಯಲು ನಿರ್ಧರಿಸುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಬಹಿರಂಗಪಡಿಸಿತು. ಸಂಶೋಧನೆಯ ಪ್ರಕಾರ 40 ಪ್ರತಿಶತದಷ್ಟು ಉದ್ಯೋಗಿಗಳು 2021ರ ಆರಂಭದಲ್ಲಿ ತಮ್ಮ ಉದ್ಯೋಗವನ್ನು ತೊರೆಯುವ ಬಗ್ಗೆ ಯೋಚಿಸಿದ್ದರು.
Published by:vanithasanjevani vanithasanjevani
First published: