ದೇಶದಲ್ಲಿ ಪೆಟ್ರೋಲ್​, ಡೀಸೆಲ್​ ವಾಹನಗಳನ್ನು ನಿಷೇಧಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ; ಗಡ್ಕರಿ ಸ್ಪಷ್ಟನೆ

ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟದ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಗಡ್ಕರಿ, ಭಾರತದ ಆಟೋಮೊಬೈಲ್​ ಉದ್ಯಮ ದೇಶದ ರಫ್ತು ಮತ್ತು ಉದ್ಯೋಗಕ್ಕೆ ನೀಡಿರುವ ಕೊಡುಗೆ ಬಗ್ಗೆ ಸರ್ಕಾರಕ್ಕೆ ಅರಿವಿದೆ ಎಂದರು.

HR Ramesh | news18-kannada
Updated:September 6, 2019, 9:42 AM IST
ದೇಶದಲ್ಲಿ ಪೆಟ್ರೋಲ್​, ಡೀಸೆಲ್​ ವಾಹನಗಳನ್ನು ನಿಷೇಧಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ; ಗಡ್ಕರಿ ಸ್ಪಷ್ಟನೆ
ಕೇಂದ್ರ ಸಚಿವ ನಿತಿನ್ ಗಡ್ಕರಿ
  • Share this:
ನವದೆಹಲಿ: ಪೆಟ್ರೋಲ್​ ಮತ್ತು ಡೀಸೆಲ್​ ಕಾರುಗಳನ್ನು ದೇಶದಲ್ಲಿ ನಿಷೇಧಿಸುವ ಉದ್ದೇಶ ಅಥವಾ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದರು.

ಆಟೋಮೊಬೈಲ್​ ಕ್ಷೇತ್ರ ಆರ್ಥಿಕ ಹಿಂಜರಿತದಲ್ಲಿ ಇರುವುದರಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್​ ಕಾರುಗಳನ್ನು ನಿಷೇಧಿಸಲು ಸರ್ಕಾರ ಚಿಂತನೆ ನಡೆಸಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿರುವುದರಿಂದ ಕೇಂದ್ರ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ.

ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟದ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಗಡ್ಕರಿ, ಭಾರತದ ಆಟೋಮೊಬೈಲ್​ ಉದ್ಯಮ ದೇಶದ ರಫ್ತು ಮತ್ತು ಉದ್ಯೋಗಕ್ಕೆ ನೀಡಿರುವ ಕೊಡುಗೆ ಬಗ್ಗೆ ಸರ್ಕಾರಕ್ಕೆ ಅರಿವಿದೆ. ದೇಶದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ಕಾರುಗಳನ್ನು ನಿಷೇಧಿಸುವ ಯಾವ ಪ್ರಸ್ತಾವನೆಯೂ ಸರ್ಕಾರದ ಮುಂದಿಲ್ಲ. 4.50 ಲಕ್ಷ ಕೋಟಿ ವಹಿವಾಟಿನ ಆಟೋಮೊಬೈಲ್​ ಕ್ಷೇತ್ರ ಸಹಸ್ರಾರು ಉದ್ಯೋಗಗಳನ್ನು ಒದಗಿಸಿದೆ. ರಫ್ತು ವಹಿವಾಟು ಹೆಚ್ಚಾಗಿದೆ. ಆದರೆ, ಸರ್ಕಾರ ಕೆಲವು ಸಮಸ್ಯೆ ಎದುರಿಸುತ್ತಿದೆ. ಮೊದಲನೆಯದು ಕಚ್ಚಾ ತೈಲ ಆಮದು ವೆಚ್ಚ ಮತ್ತು ಎರಡನೆಯದು ಮಾಲಿನ್ಯ ಮತ್ತು ಮೂರನೆಯದು ರಸ್ತೆ ಸುರಕ್ಷತೆ ಎಂದು ಹೇಳಿದರು.

ಇದನ್ನು ಓದಿ: ರಷ್ಯಾದ ದೂರ ಪೂರ್ವ ಅಭಿವೃದ್ಧಿಗೆ ಭಾರತ 1 ಬಿಲಿಯನ್ ಡಾಲರ್​ ಸಾಲ ನೀಡುವುದಾಗಿ ಘೋಷಿಸಿದ ಪ್ರಧಾನಿ ಮೋದಿ

ದೇಶದಲ್ಲಿ ಆಟೋಮೊಬೈಲ್ಸ್​ ಕ್ಷೇತ್ರ 4.50 ಲಕ್ಷ ಕೋಟಿ ಮೌಲ್ಯ ಹೊಂದಿದೆ. ದೇಶದಲ್ಲಿ ಮಾಲಿನ್ಯವೂ ಪ್ರಮುಖ ವಿಷಯವಾಗಿರುವುದರಿಂದ ತೈಲ ಅದಕ್ಕೆ ಪ್ರಮುಖ ಸಂಪನ್ಮೂಲವಾಗಿದೆ. ಆದಾಗ್ಯೂ, ಕೇವಲ ವಾಹನಗಳಿಂದಲೇ ಮಾತ್ರವೇ ಮಾಲಿನ್ಯಕ್ಕೆ ಕಾರಣ ಎಂದು ಹೇಳಲಾಗುವುದಿಲ್ಲ. ಎಲ್ಲರೂ ಆ ಜವಾಬ್ದಾರಿ ಹೊತ್ತುಕೊಳ್ಳಬೇಕಾಗುತ್ತದೆ. ದೆಹಲಿ ಜಗತ್ತಿನ ಅತೀ ಹೆಚ್ಚಿನ ಮಾಲಿನ್ಯ ನಗರಗಳಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು.

 

First published: September 5, 2019, 5:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading