Ashok Gehlot| ರಸ್ತೆ ಅಫಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡಿದರೆ 5,000 ರೂ ಬಹುಮಾನ-ಪ್ರಮಾಣಪತ್ರ; ರಾಜಸ್ತಾನ ಸರ್ಕಾರ

ಈ ಯೋಜನೆಯಡಿ ಗಾಯಗೊಂಡ ವ್ಯಕ್ತಿಯನ್ನು ಸಾಧ್ಯವಾದಷ್ಟು ಬೇಗ ಸಹಾಯಕ್ಕಾಗಿ ಆಸ್ಪತ್ರೆಗೆ ಕರೆದೊಯ್ಯುವ ವ್ಯಕ್ತಿಯು ಬಹುಮಾನದ ಮೊತ್ತವನ್ನು ಶೀಘ್ರವಾಗಿಯೇ ಪಡೆಯುತ್ತಾರೆ ಎಂದು ಹೇಳಲಾಗಿದೆ.

ಅಶೋಕ್ ಗೆಹ್ಲೋಟ್.

ಅಶೋಕ್ ಗೆಹ್ಲೋಟ್.

 • Share this:
  ಜೈಪುರ (ಸೆಪ್ಟೆಂಬರ್ 17): ರಸ್ತೆ ಅಪಘಾತಕ್ಕೀಡಾದವರಿಗೆ ಸಹಾಯ ಹಸ್ತ ಚಾಚಿದರೆ ತಮ್ಮ ಮೇಲೆ ಕೇಸ್ ಬೀಳುತ್ತದೆ ಎಂಬ ಕಾರಣಕ್ಕೆ ಕಂಡೂ ಕಾಣದಂತೆ ನಡೆಯುವ ಜನ ಅನೇಕ. ಅದನ್ನು ಹೋಗಲಾಡಿಸುವ ಸಲುವಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ (Ashok Gehlot) ನೇತೃತ್ವದ ರಾಜಸ್ತಾನ ಸರ್ಕಾರ ರಸ್ತೆ ಅಪಘಾತದಲ್ಲಿ ಗಾಯಗೊಂಡ ವರಿಗೆ ಸಹಾಯ ಮಾಡುವವರಿಗೆ ಈಗ 5,000 ರೂ ಬಹುಮಾನದ ಜೊತೆಗೆ ಪ್ರಮಾಣಪತ್ರವನ್ನು ನೀಡಿ ಪ್ರಶಂಸಿಸುವ ಮಹತ್ವದ ಯೋಜನೆಗೆ ಮುಂದಾಗಿದೆ. ರಾಜಸ್ಥಾನದಲ್ಲಿ ಪ್ರತಿದಿನ ರಸ್ತೆ ಅಪಘಾತಗಳು (Road Accident) ಸಂಭವಿಸುತ್ತವೆ. ಈ ಅಪಘಾತ ಗಳಲ್ಲಿ ಅನೇಕ ಜನರು ಗಾಯಗೊಳ್ಳುತ್ತಿದ್ದಾರೆ. ಹೀಗೆ ಗಾಯಗೊಂಡ ಜನರಿಗೆ ಸಹಾಯ ಮಾಡಲು ಹೆಚ್ಚಿನ ಜನ ಕಾನೂನಿಗೆ ಹೆದರಿ ಮುಂದೆ ಬರುವುದಿಲ್ಲ. ಪರಿಣಾಮ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಅನೇಕ ಜನ ಸಾವನ್ನಪ್ಪುತ್ತಿದ್ದಾರೆ. ಈಗ ಅಂತಹ ಜನರ ಜೀವ ಉಳಿಸಲು ರಾಜಸ್ಥಾನ ಸರ್ಕಾರ ಹೊಸ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ, ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯುವ ಜನರಿಗೆ ಸರ್ಕಾರದಿಂದ 5000 ರೂಪಾಯಿ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಗೆಹ್ಲೋಟ್ ಸರ್ಕಾರ ಘೋಷಿಸಿದೆ.

  ದೈನಿಕ್ ಭಾಸ್ಕರ್ ಸುದ್ದಿ ಪ್ರಕಾರ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡಲು ಚಿರಂಜೀವಿ ಜೀವನ್ ರಕ್ಷಾ ಯೋಜನೆಯನ್ನು ಆರಂಭಿಸಿದ್ದಾರೆ. ಈ ಯೋಜನೆಯಡಿ, ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ಸಹಾಯ ಮಾಡುವವರ ಪೋಲಿಸ್ ವಿಚಾರಣೆ ಇರುವುದಿಲ್ಲ. ಅಲ್ಲದೆ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ತಲುಪಿಸಿದರೆ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಹಣವನ್ನೂ ಪಾವತಿ ಮಾಡುವಂತಿಲ್ಲ ಎಂದು ಯೋಜನೆಯಲ್ಲಿ ತಿಳಿಸಲಾಗಿದೆ.

  ಮೊತ್ತವನ್ನು ಪಡೆಯುವುದು ಹೇಗೆ?;

  ಈ ಯೋಜನೆಯಡಿ ಗಾಯಗೊಂಡ ವ್ಯಕ್ತಿಯನ್ನು ಸಾಧ್ಯವಾದಷ್ಟು ಬೇಗ ಸಹಾಯಕ್ಕಾಗಿ ಆಸ್ಪತ್ರೆಗೆ ಕರೆದೊಯ್ಯುವ ವ್ಯಕ್ತಿಯು ಬಹುಮಾನದ ಮೊತ್ತವನ್ನು ಶೀಘ್ರವಾಗಿಯೇ ಪಡೆಯುತ್ತಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆತಂದ ಮೇಲೆ ಪ್ರಮಾಣಪತ್ರವನ್ನು ಮಾತ್ರ ನೀಡಲಾಗುತ್ತದೆ. ದೈನಿಕ್ ಭಾಸ್ಕರ್ ಅವರ ಸುದ್ದಿಯ ಪ್ರಕಾರ, ಸರ್ಕಾರಿ ಆಂಬ್ಯುಲೆನ್ಸ್, ಖಾಸಗಿ ಆಂಬ್ಯುಲೆನ್ಸ್, ಪಿಸಿಆರ್ ವ್ಯಾನ್ ಮತ್ತು ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿ ಈ ಯೋಜನೆಯ ಲಾಭವನ್ನು ಪಡೆಯುವುದಿಲ್ಲ. ಏಕೆಂದರೆ ಇದು ಅವರ ಕರ್ತವ್ಯ ಎಂದು ಉಲ್ಲೇಖಿಸಲಾಗಿದೆ.

  ಇದನ್ನೂ ಓದಿ: GST Council Meeting: GST ವ್ಯಾಪ್ತಿಗೆ ಪೆಟ್ರೋಲ್ ಮತ್ತು ಡೀಸೆಲ್‌ ತರುವ ಬಗ್ಗೆ ಮಹತ್ವದ ಚರ್ಚೆ ಆರಂಭ

  ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡುವ ವ್ಯಕ್ತಿಯು ಈ ಯೋಜನೆಯಡಿ ಬಹುಮಾನವನ್ನು ಪಡೆಯಲು ಬಯಸಿದರೆ, ನಂತರ ಆತ ಆಸ್ಪತ್ರೆಯಲ್ಲಿರುವ CMO (ಆಸ್ಪತ್ರೆ) ಗೆ ಎಲ್ಲಾ ಸರಿಯಾದ ಮಾಹಿತಿಯನ್ನು ನೀಡಬೇಕಾಗುತ್ತದೆ. ವ್ಯಕ್ತಿಯು ತನ್ನ ಸರಿಯಾದ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ವಿವರಗಳನ್ನು ನೀಡಬೇಕು. ನಂತರ CMO ಈ ಮಾಹಿತಿಯ ಆಧಾರದ ಮೇಲೆ ವರದಿಯನ್ನು ಸಿದ್ಧಪಡಿಸುತ್ತದೆ ಮತ್ತು ಆಸ್ಪತ್ರೆಗೆ ಕರೆತಂದ ವ್ಯಕ್ತಿ ಗಂಭೀರವಾಗಿದ್ದಾನೋ ಇಲ್ಲವೋ ಮತ್ತು ತಕ್ಷಣದ ಚಿಕಿತ್ಸೆ ಪಡೆದಿದ್ದಾನೋ ಇಲ್ಲವೋ ಎಂದು ನಿರ್ಧರಿಸಲಾಗುತ್ತದೆ. ಇದರ ಆಧಾರದ ಮೇಲೆ, ಮೊತ್ತವನ್ನು ಕ್ಲೈಮ್ ಮಾಡಿದ ವ್ಯಕ್ತಿಗೆ ಬಹುಮಾನ ನೀಡಲಾಗುತ್ತದೆ. CMO ಯ ವರದಿಯನ್ನು ನಿರ್ದೇಶಕರಿಗೆ (ಸಾರ್ವಜನಿಕ ಆರೋಗ್ಯ) ಕಳುಹಿಸಲಾಗುತ್ತದೆ. ನಂತರ ಬಹುಮಾನ ಮೊತ್ತವನ್ನು ಅನುಮೋದಿಸಲಾಗುತ್ತದೆ ಎಂದು ತಿಳಿದುಬಂದಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: