ಸಂತ್ರಸ್ತರ ರಕ್ಷಣೆಗೆ ಮೆಟ್ಟಿಲಾದ ಮೀನುಗಾರ

Seema.R | news18
Updated:August 19, 2018, 4:56 PM IST
ಸಂತ್ರಸ್ತರ ರಕ್ಷಣೆಗೆ ಮೆಟ್ಟಿಲಾದ ಮೀನುಗಾರ
Seema.R | news18
Updated: August 19, 2018, 4:56 PM IST
ನ್ಯೂಸ್​ 18 

ಕೇರಳದಲ್ಲಿ ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಧಾವಿಸಿರುವ ಸ್ಥಳೀಯ ಮೀನುಗಾರರೊಬ್ಬರು ಈಗ ಸಾಮಾಜಿಕ ಜಾಲತಾಣದಲ್ಲಿ ಹೀರೋ ಆಗಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗಾಗಿ ಈತ ಮಾಡಿರುವ ಕಾರ್ಯ ಜನರ ಮನಸ್ಸು ಗೆದಿದ್ದೆ.

ಜೈಸಲ್​ ಕೆ.ಪಿ ಎಂಬಾತ ನೆರೆ ಸಂತ್ರಸ್ತರನ್ನು ಸ್ಥಳಾಂತರ ಮಾಡಲು ಬೋಟ್​ ಹತ್ತಲು ತಾವೇ ಮೆಟ್ಟಿಲಾಗಿ ನೆರವಾಗಿದ್ದಾರೆ. ಎದೆ ಮಟ್ಟಕ್ಕೆ ಹರಿಯುತ್ತಿರುವ ನೀರಿನಲ್ಲಿ ಬೋಟ್​ ಏರುವುದು ಸಂತ್ರಸ್ತ ಮಹಿಳೆಯರಿಗೆ ಸವಾಲಾಗಿತ್ತು. ಈ ವೇಳೆ ನೀರಿನಲ್ಲಿ ಮುಳುಗಿ  ಬೋಟ್ಗೆ ಮೆಟ್ಟಿಲಾಗಿ ಅವರು​  ಹತ್ತಲು ಈತ ಸಹಾಯ ಮಾಡಿದ್ದಾನೆ.

ನೀರಿನಲ್ಲಿ ಮೆಟ್ಟಿಲಾಗಿದ್ದ 32ವರ್ಷದ ಜೈಸಲ್​ ಬೆನ್ನ ಮೇಲೆ ಮೂವರು ಮಹಿಳೆಯರು ಕಾಲಿಟ್ಟಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಈತನ ಈ ಕಾರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.ಕೇರಳದ ವೆಂಗರ ಗ್ರಾಮದಲ್ಲಿ ಜನರ ರಕ್ಷಣೆ ಮಾಡಲು ಎನ್​ಡಿಆರ್​ಎಫ್​ ಮುಂಗಾಗಿತ್ತು. ಆದರೆ ಆ ಸ್ಥಳಕ್ಕೆ ಬೋಟ್​ ಹೋಗಲು ಸಾಧ್ಯವಾಗದಿದ್ದಾಗ ನಾವೇ ಸ್ವಯಂ ಪ್ರೇರಿತವಾಗಿ ನಮ್ಮ ಬೋಟ್​ ತೆಗೆದುಕೊಂಡು ಹೋಗಿ ನಾವೇ ರಕ್ಷಣೆಗೆ ತೊಡಗಿದೆವು ಎಂದು ಜೈಸಾಲ್​ ನ್ಯೂಸ್​ 18ಗೆ ತಿಳಿಸಿದ್ದಾರೆ.

ಜೈಸಲ್​ ಮಾತ್ರವಲ್ಲದೇ ಇಂತಹ ಅನೇಕ ಹೀರೋಗಳು ಕೇರಳದಲ್ಲಿ ಎನ್​ಡಿಆರ್​ಎಫ್​ ಕೈ ಜೋಡಿಸಿದ್ದಾರೆ. ರಾಜ್ಯದ ಸಾವಿರಾರು ಮೀನುಗಾರರು ಪ್ರವಾಹ ಪೀಡಿತರ ರಕ್ಷಣೆಗೆ ತಮ್ಮ ಎಂಜಿನ್​ ಬೋಟ್​ಗಳನ್ನು ನೆರವು ನೀಡಿದ್ದಾರೆ.
Loading...

"ನಾವು ಸ್ವಯಂ ಪ್ರೇರಿತವಾಗಿ ಈ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.  ಯಾವುದೇ ರಕ್ಷಣಾ ಪರಿಕರಗಳನ್ನು ನಾವು ಹೊಂದಿಲ್ಲ.  ನಮ್ಮ ಬದುಕನ್ನು  ಅಪಾಯಕ್ಕೆ ಒಡ್ಡಿ ಜನರ ರಕ್ಷಣೆ ಮಾಡುತ್ತಿದ್ದೇವೆ. ಶುಕ್ರವಾರ ಕೂಡ ಬೋಟ್​ ಹೋಗಲು ಅಸಾಧ್ಯವಾದ ಸ್ಥಳದಲ್ಲಿ ಈಜಿ ಹೋಗಿ 21 ತಿಂಗಳ ಮಗುವನ್ನು ರಕ್ಷಣೆ ಮಾಡಿದ್ದೇವೆ" ಎಂದು ಜೈಸಲ್​ ತಿಳಿಸಿದ್ದಾರೆ.
First published:August 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ