India Nepal Train: ಭಾರತದಿಂದ ನೇಪಾಳಕ್ಕೆ ರೈಲಲ್ಲೇ ಪ್ರಯಾಣಿಸಿ!

ಭಾರತೀಯ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಧಾರ್ಮಿಕ ಸ್ಥಳಗಳ ಯಾತ್ರೆಯ ಪ್ಯಾಕೇಜ್ ಅನ್ನು ಸಹ ತಮ್ಮ ಪ್ರಯಾಣಿಕರಿಗೆ ಒದಗಿಸುತ್ತಿದೆ. ಈಗ ಮತ್ತೊಂದು ಹೆಜ್ಜೆ ಮುಂದಿಟ್ಟು ಭಾರತವನ್ನು ಬೇರೆ ನೆರೆಹೊರೆಯ ದೇಶದೊಂದಿಗೆ ಸಂಪರ್ಕ ಒದಗಿಸುವ ಪ್ರವಾಸಿ ರೈಲೊಂದನ್ನು ಶುರು ಮಾಡಿದೆ.

ಶ್ರೀ ರಾಮಾಯಣ ಯಾತ್ರಾ

ಶ್ರೀ ರಾಮಾಯಣ ಯಾತ್ರಾ

  • Share this:
ಮೊದಲೆಲ್ಲಾ ರೈಲುಗಳು ಕೇವಲ ನಮ್ಮ ಭಾರತ (India) ದೇಶದಲ್ಲಿಯೇ ಇರುವಂತಹ ಬೇರೆ ಬೇರೆ ರಾಜ್ಯಗಳ ಮಧ್ಯೆ ಓಡಾಡುತ್ತಿದ್ದವು. ಆದರೆ ಈಗ ಭಾರತೀಯ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಅವರು ಪ್ರಯಾಣಿಕರಿಗಾಗಿ ಅನೇಕ ರೀತಿಯ ಪ್ರವಾಸದ ಪ್ಯಾಕೇಜ್​ಗಳನ್ನು (Tourist Package)  ಸಹ ನೀಡುತ್ತಿದ್ದು, ಅಲ್ಲದೆ ಧಾರ್ಮಿಕ ಸ್ಥಳಗಳ (Religious Place) ಯಾತ್ರೆಯ ಪ್ಯಾಕೇಜ್ ಅನ್ನು ಸಹ ತಮ್ಮ ಪ್ರಯಾಣಿಕರಿಗೆ ಒದಗಿಸುತ್ತಿದೆ. ಈಗ ಮತ್ತೊಂದು ಹೆಜ್ಜೆ ಮುಂದಿಟ್ಟು ಭಾರತವನ್ನು ಬೇರೆ ನೆರೆಹೊರೆಯ ದೇಶದೊಂದಿಗೆ ಸಂಪರ್ಕ ಒದಗಿಸುವ ಪ್ರವಾಸಿ ರೈಲೊಂದನ್ನು ಶುರು ಮಾಡಿದ್ದಾರೆ. ಅದು ಸಾಮಾನ್ಯವಾದ ರೈಲಲ್ಲ ಬಿಡಿ, ಅದು ಪ್ರವಾಸಿ ರೈಲು. ಹೌದು.. ಭಾರತ್ ಗೌರವ್ ಯೋಜನೆಯಡಿ, ಐಆರ್‌ಸಿಟಿಸಿ ಅವರು ಭಾರತ ಮತ್ತು ನೇಪಾಳವನ್ನು ಸಂಪರ್ಕಿಸುವ ಪ್ರವಾಸಿ ರೈಲನ್ನು ಪರಿಚಯಿಸಿದೆ.

ಶ್ರೀ ರಾಮಾಯಣ ಯಾತ್ರಾ
ವಾಸ್ತವವಾಗಿ ಭಾರತೀಯ ರೈಲ್ವೆಯ ಭಾರತ್ ಗೌರವ್ ಯೋಜನೆಯಡಿ ಸಂಚರಿಸುವ ಪ್ರವಾಸಿ ರೈಲು ಜೂನ್ 21 ರಂದು ನವದೆಹಲಿಯಿಂದ ಶ್ರೀ ರಾಮಾಯಣ ಯಾತ್ರಾ ಸರ್ಕ್ಯೂಟ್ ನಲ್ಲಿ ಹೊರಡುವುದರಿಂದ ಈ ಮೈಲಿಗಲ್ಲನ್ನು ಸಾಧಿಸಿದ ಮೊದಲ ಸಂಸ್ಥೆ ಎಂಬ ಬಿರುದನ್ನು ಐಆರ್‌ಸಿಟಿಸಿ ಪಡೆದುಕೊಂಡಿದೆ ಎಂದು ಭಾರತೀಯ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಶ್ರೀ ರಾಮಾಯಣ ಯಾತ್ರಾ ಸರ್ಕ್ಯೂಟ್ ನಲ್ಲಿ ಭಾರತ ಮತ್ತು ನೇಪಾಳವನ್ನು ಸಂಪರ್ಕಿಸಲು ಸುಮಾರು 8,000 ಕಿಲೋ ಮೀಟರ್ ದೂರವನ್ನು ಕ್ರಮಿಸಲು ಈ ಪ್ರವಾಸಿ ರೈಲು ದೆಹಲಿಯ ಸಫ್ದರ್ಜಂಗ್ ರೈಲ್ವೆ ನಿಲ್ದಾಣದಿಂದ ಹೊರಡಲಿದೆ. ಈ ರೈಲು "ಸ್ವದೇಶ್ ದರ್ಶನ್" ಯೋಜನೆಯಡಿ ಗುರುತಿಸಲಾದ ರಾಮಾಯಣ ಸರ್ಕ್ಯೂಟ್ ನಲ್ಲಿ ಭಗವಾನ್ ಶ್ರೀ ರಾಮನ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳಗಳನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತಿದೆ.

ರಾಮ್ ಜಾನಕಿ ದೇವಾಲಯಕ್ಕೆ ರೈಲಿನಲ್ಲಿ ಭೇಟಿ ನೀಡಬಹುದು
ನೇಪಾಳದ ಜನಕಪುರದಲ್ಲಿರುವ ರಾಮ್ ಜಾನಕಿ ದೇವಾಲಯಕ್ಕೆ ರೈಲಿನಲ್ಲಿ ಭೇಟಿ ನೀಡುವುದು ಈ ಪ್ರವಾಸದ ಇನ್ನೊಂದು ವಿಶೇಷತೆಯಾಗಿದೆ ಎಂದು ಹೇಳಲಾಗುತ್ತಿದೆ. ಇದು ಅದರ ಇತಿಹಾಸದಲ್ಲಿ ಇದೇ ಮೊದಲು.

ಇದನ್ನೂ ಓದಿ: Pakistan Hindus: ಪಾಕಿಸ್ತಾನದಲ್ಲಿರುವ ಹಿಂದೂಗಳ ಸಂಖ್ಯೆಯೆಷ್ಟು? ಹಿಂದೂ ದೇಗುಲಗಳೆಷ್ಟು?

600 ಜನರ ಸಾಮರ್ಥ್ಯದ ಈ ರೈಲು ಅಯೋಧ್ಯೆ, ಬಕ್ಸಾರ್, ಜನಕಪುರ, ಸೀತಾಮರ್ಹಿ, ಕಾಶಿ, ಪ್ರಯಾಗ, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರಂ, ಕಾಂಚೀಪುರಂ ಮತ್ತು ಭದ್ರಾಚಲಂ ಸೇರಿದಂತೆ ಪ್ರಮುಖ ನಗರಗಳನ್ನು ಒಳಗೊಂಡಿದೆ ಎಂದು ಭಾರತೀಯ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ತಿಳಿಸಿದೆ.

ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೇಂದ್ರ ಸರ್ಕಾರದ ಪ್ಲ್ಯಾನ್
ಭಾರತ್ ಗೌರವ್ ಟೂರಿಸ್ಟ್ ರೈಲು ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೇಂದ್ರ ಸರ್ಕಾರದ ಉಪಕ್ರಮ "ದೇಖೋ ಅಪ್ನಾ ದೇಶ್" ಎಂದರೆ ನೋಡಿ ನಮ್ಮ ದೇಶ ಅಂತ ಅರ್ಥ ಬರುತ್ತದೆ. ಉದ್ದೇಶಿತ ಭಾರತ್ ಗೌರವ್ ಟೂರಿಸ್ಟ್ ರೈಲು ತನ್ನ ಮೊದಲ ನಿಲುಗಡೆಯನ್ನು ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಹೊಂದಿದೆ, ಅಲ್ಲಿ ಪ್ರವಾಸಿಗರು ಶ್ರೀ ರಾಮ ಜನ್ಮಭೂಮಿ ದೇವಾಲಯ ಮತ್ತು ಹನುಮಾನ್ ದೇವಾಲಯ ಮತ್ತು ಹೆಚ್ಚುವರಿಯಾಗಿ ನಂದಿಗ್ರಾಮದ ಭಾರತ್ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ರೈಲು ಪ್ರಯಾಣಕ್ಕೆ ಬೇಕಾಗುವ ಹಣ
ಇದಲ್ಲದೆ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಮುಂಜಾಗ್ರತೆ ಕ್ರಮಗಳಾಗಿ ಐಆರ್‌ಸಿಟಿಸಿ ಎಲ್ಲಾ ಪ್ರವಾಸಿಗರಿಗೆ ಮುಖಗವಸು, ಕೈಗವಸುಗಳು ಮತ್ತು ಹ್ಯಾಂಡ್ ಸ್ಯಾನಿಟೈಸರ್ ಹೊಂದಿರುವ ಸುರಕ್ಷತಾ ಕಿಟ್ ಅನ್ನು ಸಹ ಈ ರೈಲು ಪ್ರಯಾಣದಲ್ಲಿ ಒದಗಿಸುತ್ತದೆ. ಈ ರೈಲು ಪ್ರಯಾಣಕ್ಕೆ ಪ್ರತಿ ವ್ಯಕ್ತಿಗೆ ಸುಮಾರು 65,000 ರೂಪಾಯಿ ಎಂದು ನಿಗದಿ ಪಡಿಸಲಾಗಿದೆ ಎಂದು ಐಆರ್‌ಸಿಟಿಸಿ ಹೇಳಿದೆ.

ಇದನ್ನೂ ಓದಿ: Bhagavad Gita: ಕಾಲೇಜುಗಳಲ್ಲಿ ಭಗವದ್ಗೀತೆ; ಐಚ್ಛಿಕ ವಿಷಯವಾಗಿ ಓದಲು ಅವಕಾಶ

ಇದು ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಅನೇಕ ಬೇರೆ ಬೇರೆ ರಾಜ್ಯಗಳನ್ನು ಸಹ ಒಳಗೊಂಡಿದೆ ಎಂದು ಹೇಳಲಾಗುತ್ತಿದೆ.
Published by:Ashwini Prabhu
First published: