• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Fungal Infection: ಸಸ್ಯಗಳಿಂದ ಫಂಗಲ್​​ ಸೋಂಕು ಬರಿಸಿಕೊಂಡ ಜಗತ್ತಿನ ಪ್ರಥಮ ವ್ಯಕ್ತಿ! ಇದಕ್ಕೆ ಕಾರಣಗಳೇನು ಗೊತ್ತಾ?

Fungal Infection: ಸಸ್ಯಗಳಿಂದ ಫಂಗಲ್​​ ಸೋಂಕು ಬರಿಸಿಕೊಂಡ ಜಗತ್ತಿನ ಪ್ರಥಮ ವ್ಯಕ್ತಿ! ಇದಕ್ಕೆ ಕಾರಣಗಳೇನು ಗೊತ್ತಾ?

ಅವರ ಸಿಟಿ ಸ್ಕ್ಯಾನ್​​ನಲ್ಲಿ ಬಂದ ರಿಪೋರ್ಟ್​ ಫೋಟೋ

ಅವರ ಸಿಟಿ ಸ್ಕ್ಯಾನ್​​ನಲ್ಲಿ ಬಂದ ರಿಪೋರ್ಟ್​ ಫೋಟೋ

ಸಾಮಾನ್ಯವಾಗಿ ವೈದ್ಯಕೀಯ ಹಾಗೂ ಸಂಶೋಧನಾ ಅಧ್ಯಯನಗಳಲ್ಲಿ ತೊಡಗಿಸಿಕೊಳ್ಳುವ ಸಂಶೋಧಕರು ಹಲವು ವಸ್ತುಗಳಿಗೆ ಒಡ್ಡಿಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಬ್ಬರು ಮೈಕಲಾಜಿಸ್ಟ್​ ತನ್ನ ಸಂಶೋಧನೆಯಿಂದ ಸಸ್ಯಗಳಿಂದಲೇ ತನ್ನ ಮೈಮೇಲೆ ಫಂಗಲ್​ ಸೋಂಕನ್ನು ಬರಿಸಿಕೊಂಡಿದ್ದಾರೆ. ಇವರೇ ನೋಡಿ ಜಗತ್ತಿನಲ್ಲೇ ಮೊದಲ ಬಾರಿಗೆ ಸಸ್ಯಗಳಿಂದ ಫಂಗಲ್ ಸೋಕನ್ನು ಬರಿಸಿಕೊಂಡದ್ದು.

ಮುಂದೆ ಓದಿ ...
  • Share this:

ಕೆಲವೊಮ್ಮೆ ಜೀವನದಲ್ಲಿ (Life) ಏನಾಗುತ್ತದೆ ಎಂದು ಊಹಿಸಲು ಸಹ ಸಾಧ್ಯವಿಲ್ಲ. ನಾವು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುತ್ತವೆಯೋ (Work) ಆ ಕ್ಷೇತ್ರದ ಹಲವು ಅಂಶಗಳು ನಮ್ಮ ಮೇಲೆ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಪ್ರಭಾವ ಬೀರುತ್ತಿರುತ್ತದೆ ಎನ್ನಬಹುದು. ಆದರೆ, ಪ್ರತಿ ಬಾರಿ ನಮಗೆ ನಾವು ತೊಡಗಿಸಿಕೊಂಡ ಕ್ಷೇತ್ರದಿಂದ ಉತ್ತಮವಾದ ಅಥವಾ ಪ್ರಯೋಜನಕಾರಿಯಾದ ಪರಿಣಾಮಗಳೇ ಉಂಟಾಗಬೇಕೆಂದೇನಿಲ್ಲ. ಕೆಲವೊಮ್ಮೆ ಅದಕ್ಕೆ ತದ್ವಿರುದ್ಧವಾಗಿಯೂ ವಿಪರೀತ ಪರಿಣಾಮಗಳು ಉಂಟಾಗಬಹುದು.


ಸಾಮಾನ್ಯವಾಗಿ ವೈದ್ಯಕೀಯ ಹಾಗೂ ಸಂಶೋಧನಾ ಅಧ್ಯಯನಗಳಲ್ಲಿ ತೊಡಗಿಸಿಕೊಳ್ಳುವ ಸಂಶೋಧಕರು ಹಲವು ವಸ್ತುಗಳಿಗೆ ಒಡ್ಡಿಕೊಳ್ಳುತ್ತಾರೆ. ಹಾಗೂ ಅವರು ಈ ಸಂದರ್ಭದಲ್ಲಿ ಅವುಗಳಿಂದ ಪ್ರಭಾವಿತರೂ ಆಗಬಹುದು. ಸದ್ಯ ಇಂಥದ್ದೆ ಒಂದು ವಿಚಿತ್ರ ಘಟನೆಯೊಂದು ಭಾರತದಲ್ಲಿ ವರದಿಯಾಗಿದೆ.


ಇದೀಗ ಜಗತ್ತಿನ ಒಂದು ವಿಶೇಷ ರೀತಿಯ ಕಾಯಿಲೆ ಹೊಂದಿದ ವ್ಯಕ್ತಿಯಾಗಿ ಭಾರತದ ಒಬ್ಬ ಮೈಕಾಲಾಜಿಸ್ಟ್ (Mycologist) ಗುರುತಿಸಿಕೊಂಡಿದ್ದಾನೆ ಎಂದರೆ ನಂಬದೆ ಬೇರೆ ವಿಧಿಯಿಲ್ಲ.


ಮೈಕಲಾಜಿಸ್ಟ್​ ಎಂದರೇನು?


ಮೋಲ್ಡ್, ಯೀಸ್ಟ್, ಅಣಬೆ ಇತ್ಯಾದಿ ಫಂಗಲ್ ಸಸ್ಯಗಳನ್ನು ಅಭ್ಯಸಿಸುವ ವ್ಯಕಿತ್ಗಳನ್ನು ಮೈಕಾಲಾಜಿಸ್ಟ್ ಎಂದು ಕರೆಯಲಾಗುತ್ತದೆ. ಕೊಲ್ಕತ್ತದ 61ರ ಪ್ರಾಯದ ಮೈಕಾಲಾಜಿಸ್ಟ್ ಅವರು ಪ್ಲ್ಯಾಂಟ್ ಫಂಗಲ್ ಕಾಯಿಲೆ ಹೊಂದಿರುವ ಜಗತ್ತಿನ ಏಕೈಕ ವ್ಯಕ್ತಿಯಾಗಿದ್ದಾರೆ.


ಇದನ್ನೂ ಓದಿ: ಜನರ ಹೃದಯ ಗೆದ್ದ ವಂದೇ ಭಾರತ್‌ ರೈಲು; ಸಾರ್ವಜನಿಕ ಸ್ವತ್ತುಗಳ ರಕ್ಷಣೆಯೂ ಪ್ರಯಾಣಿಕರ ಜವಾಬ್ದಾರಿ ಅಲ್ವೇ?


ಕೊಂಡ್ರೋಸ್ಟಿರಿಯಮ್ ಪರ್ಪುರಿಯಂ ಎಂಬ ಫಂಗಸ್


ಈ ವ್ಯಕ್ತಿಯು ಪ್ರಸ್ತುತ ಕೊಂಡ್ರೋಸ್ಟಿರಿಯಮ್ ಪರ್ಪುರಿಯಂ ಎಂಬ ಫಂಗಸ್ ನಿಂದ ಬಾಧಿತರಾಗಿದ್ದು ಈ ಫಂಗಸ್ ಸಾಮಾನ್ಯವಾಗಿ ಸಸ್ಯಗಳಲ್ಲಿ ಸಿಲ್ವರ್ ಲೀಫ್ ಕಾಯಿಲೆ ಬರಲು ಕಾರಣವಾಗಿದೆ. ಇದೊಂದು ವಿಶಿಷ್ಟ ಪ್ರಕರಣವಾಗಿದ್ದು ಫಂಗಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದಾಗ ಸಸ್ಯ ಸೋಂಕುಗಳು ಯಾವ ರೀತಿ ಮನುಷ್ಯನಿಗೆ ಹರಡಬಲ್ಲವು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.


ಲಕ್ಷಣಗಳೇನು?


ಮೆಡಿಕಲ್ ಮೈಕಾಲಜಿ ಕೇಸ್ ಜರ್ನಲ್‌ನ ವರದಿಯ ಪ್ರಕಾರ, ವ್ಯಕ್ತಿಯು ಸತತ ಮೂರು ತಿಂಗಳುಗಳ ಕಾಲ ಕರ್ಕಶ ಧ್ವನಿ, ಕೆಮ್ಮು, ಆಯಾಸ, ಹಾಗೂ ನುಂಗುವಾಗ ಸಮಸ್ಯೆಗಳಂತಹ ಲಕ್ಷಣಗಳಿಂದ ಮುಕ್ತಿ ಹೊಂದದೆ ಇದ್ದಾಗ ವೈದ್ಯರ ಬಳಿ ತಪಾಸಣೆಗಾಗಿ ತೆರಳಿರುವುದಾಗಿ ತಿಳಿಸಲಾಗಿದೆ. ಇವುಗಳಲ್ಲದೆ ವ್ಯಕ್ತಿಯು ತನ್ನ ಕತ್ತಿನಲ್ಲಿ ಪ್ಯಾರಾಟಾಶಿಯಲ್ ಅಂಶವನ್ನು ಹೊಂದಿದ್ದರು. ಈ ರೀತಿಯ ಸಮಸ್ಯೆ ಸಾಮಾನ್ಯವಾಗಿ ಗಂಟಲು ಕೆರೆತ, ಜ್ವರ, ಮುಂತಾದವುಗಳನ್ನು ಉಂಟು ಮಾಡುತ್ತದೆ.


ಅವರ ಸಿಟಿ ಸ್ಕ್ಯಾನ್​​ನಲ್ಲಿ ಬಂದ ರಿಪೋರ್ಟ್​ ಫೋಟೋ


ಇನ್ನು ಈ ಸಮಸ್ಯೆಯನ್ನು ಪರೀಕ್ಷಿಸಿದಾಗ ವ್ಯಕ್ತಿಯು ಫಂಗಲ್ ಅಂದರೆ ಶಿಲೀಂಧ್ರ ಸೋಂಕಿನಿಂದ ಬಳಲುತ್ತಿರುವ ವಿಚಾರ ಕಂಡುಬಂದಿದೆ. ಎದೆ ಭಾಗದಲ್ಲಿ ಎಕ್ಸ್ ರೇ ಪರೀಕ್ಷೆ ಮಾಡಿದಾಗ ಯಾವುದೇ ಸೋಂಕು ಕಂಡುಬರಲಿಲ್ಲವಾದರೂ ಸಿಟಿ ಸ್ಕ್ಯಾನ್ ಬಲ ಭಾಗದ ಪ್ಯಾರಾಟ್ರಿಶಿಯಲ್ ಅಂಶ ಇರುವುದನ್ನು ಖಚಿತಪಡಿಸಿತು.


ಆಂಟಿ ಫಂಗಲ್​ ಔಷಧಿಯಿಂದ ಗುಣಮುಖ


ಶಿಲೀಂಧ್ರ ವಿರೋಧಿ ಅಥವಾ ಆಂಟಿ ಫಂಗಲ್ ಔಷಧಿಯನ್ನು ಎರಡು ತಿಂಗಳುಗಳ ಕಾಲ ಆ ವ್ಯಕ್ತಿಗೆ ನೀಡಲಾದ ನಂತರ ಆ ವ್ಯಕ್ತಿ ನಿಧಾನವಾಗಿ ಈಗ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ.


ಅವರು ಹೆಚ್ಐವಿ, ಸಕ್ಕರೆಕಾಯಿಲೆ ಅಥವಾ ಇನ್ನಿತರೆ ಯಾವುದೇ ಕಾಯಿಲೆಯ ಯಾವ ಇತಿಹಾಸವನ್ನೂ ಹೊಂದಿರಲಿಲ್ಲ. ಮೈಕಾಲಾಜಿಸ್ಟ್ ವೃತ್ತಿಪರರಾಗಿ ಕೆಲಸ ಮಾಡುತ್ತಿದ್ದ ಅವರು ಸಾಕಷ್ಟು ಸಂದರ್ಭಗಳಲ್ಲಿ ಕೊಳೆಯುವ ವಸ್ತುಗಳಿಗೆ ಒಡ್ಡಿಕೊಂಡು ಕೆಲಸ ಮಾಡುತ್ತಿದ್ದರು ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಇದರಿಂದ ಈ ಸಮಸ್ಯೆ ಬಂದಿದೆ ಎಂದು ಹೇಳಲಾಗಿದೆ.
ಕೊಲ್ಕತ್ತಾದ ಅಪೊಲೊ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಸಲಹೆಗಾರರಾಗಿರುವ ಡಾ. ಸೋಮಾ ದತ್ತಾ ಹಾಗೂ ಡಾ. ಉಜ್ವಯಿನಿ ರೇ ಅವರು ತಮ್ಮ ವರದಿಯಲ್ಲಿ ವಿಷಯ ತಿಳಿಸುತ್ತ ವ್ಯಕ್ತಿಯು ಕೊಂಡ್ರೋಸ್ಟಿರಿಯಮ್ ಪರ್ಪುರಿಯಂ ಎಂಬ ಫಂಗಸ್ ನಿಂದ ಬಾಧಿತರಾಗಿದ್ದು ಈ ಫಂಗಸ್ ಸಾಮಾನ್ಯವಾಗಿ ಸಸ್ಯಗಳಲ್ಲಿ ಸಿಲ್ವರ್ ಲೀಫ್ ಕಾಯಿಲೆ ಬರಲು ಕಾರಣವಾಗಿದೆ ಎಂದು ಹೇಳಿದ್ದಾರೆ.


ಸಸ್ಯ ಫಂಗಸ್​​ ಒಂದು ಮನುಷ್ಯನಲ್ಲಿ ಸೋಂಕು ಹರಡಿಸಿದ ಪ್ರಥಮ ಪ್ರಕರಣ


ಸಸ್ಯ ಫಂಗಸ್​​ ಒಂದು ಮನುಷ್ಯನಲ್ಲಿ ಸೋಂಕು ಹರಡಿಸಿದ ಪ್ರಥಮ ಪ್ರಕರಣ ಇದಾಗಿದೆ ಎಂದು ಅಧ್ಯಯನಕಾರರು ಗಮನಸೆಳೆದಿದ್ದಾರೆ. ಅವರ ಪ್ರಕಾರ, ವ್ಯಕ್ತಿಯು ದೀರ್ಘ ಕಾಲದವರೆಗೆ ಕೊಳೆವ ವಸ್ತುಗಳೊಂದಿಗೆ ಅವರ ಒಡ್ಡಿಕೊಳ್ಳುವಿಕೆಯೇ ಅವರಲ್ಲಿ ಈ ಕಾಯಿಲೆ ಬರಲು ಕಾರಣವಾಗಿರಬಹುದು ಎಂಬ ಅಭಿಪ್ರಾಯಪಟ್ಟಿದ್ದಾರೆ.

top videos
    First published: