ಪಂಜಾಬ್‌ ಕಾಂಗ್ರೆಸ್‌ ಶಾಸಕನ ವಿರುದ್ಧ ಇಡಿ ತನಿಖೆ: ಮನೀಶ್‌ ಮಲ್ಹೋತ್ರಾ ಸೇರಿ ಮೂವರು ಖ್ಯಾತ ವಸ್ತ್ರ ವಿನ್ಯಾಸಕರಿಗೂ ಸಮನ್ಸ್‌..!

ಕೆಲವು ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಬಾಲಿವುಡ್​ನ ಖ್ಯಾತ ಮೂವರು ವಿನ್ಯಾಸಕರನ್ನು ಈ ವಾರ ಇಡಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಖ್ಯಾತ ವಸ್ತ್ರ ವಿನ್ಯಾಸಕರಾದ ಮನೀಷ್​ ಮಲ್ಹೋತ್ರ, ರೀತು ಕುಮಾರ್​ ಹಾಗೂ ಸವ್ಯಸಾಚಿ

ಖ್ಯಾತ ವಸ್ತ್ರ ವಿನ್ಯಾಸಕರಾದ ಮನೀಷ್​ ಮಲ್ಹೋತ್ರ, ರೀತು ಕುಮಾರ್​ ಹಾಗೂ ಸವ್ಯಸಾಚಿ

  • Share this:
ಪಂಜಾಬ್ ಕಾಂಗ್ರೆಸ್ ಶಾಸಕ ಸುಖ್​ಪಾಲ್​ ಸಿಂಗ್ ಖೈರಾ ವಿರುದ್ಧದ ಹಣ ವರ್ಗಾವಣೆ ಆರೋಪದ ತನಿಖೆಗೆ ಸಂಬಂಧಿಸಿದಂತೆ ಖ್ಯಾತ ಫ್ಯಾಷನ್ ವಿನ್ಯಾಸಕರಾದ ಸವ್ಯಸಾಚಿ, ಮನೀಶ್ ಮಲ್ಹೋತ್ರ ಮತ್ತು ರಿತು ಕುಮಾರ್‌ ಅವರಿಗೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿದೆ. ಈ ಹಿಂದೆ ಎಎಪಿ ಜೊತೆಗಿದ್ದ ಮತ್ತು ಇತ್ತೀಚೆಗೆ ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆಯಾದ ಶಾಸಕ ಖೈರಾ ವಿರುದ್ಧ ಮಾದಕವಸ್ತು ಕಳ್ಳಸಾಗಣೆ ಮತ್ತು ನಕಲಿ ಪಾಸ್‌ಪೋರ್ಟ್‌ ದಂಧೆಯ ಆರೋಪವೂ ಇದ್ದು, ಅವರ ವಿರುದ್ಧ ತನಿಖೆ ನಡೆಯುತ್ತಿದೆ.

ಕೆಲವು ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಮೂವರು ವಿನ್ಯಾಸಕರನ್ನು ಈ ವಾರ ಇಡಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಖೈರಾ ಅವರು 2018-19ರಲ್ಲಿ ಸಬ್ಯಾಸಾಚಿ, ಮನೀಶ್ ಮಲ್ಹೋತ್ರಾ ಮತ್ತು ರಿತು ಕುಮಾರ್‌ ಎಂಬ ಮೂವರು ಖ್ಯಾತ ವಿನ್ಯಾಸಕರಿಗೆ ಹಲವಾರು ಲಕ್ಷ ಹಣವನ್ನು ನಗದು ರೂಪದಲ್ಲಿ ಪಾವತಿಸಿದ್ದಾರೆ ಎಂಬ ಮಾಹಿತಿ ನಮ್ಮಲ್ಲಿದೆ ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Manish Malhotra, Money Laundering, Ritu Kumar, Sabyasachi, Sukhpal Singh Khaira, ಮನೀಶ್‌ ಮಲ್ಹೋತ್ರಾ, ಅಕ್ರಮ ಹಣ ವರ್ಗಾವಣೆ, ರಿತು ಕುಮಾರ್‌, ಸಬ್ಯಾಸಾಚಿ, ಸುಖ್ಪಾಲ್‌ ಸಿಂಗ್ ಖೈರಾ, The fashion designers have been summoned for questioning in a money laundering probe involving Punjab politician Sukhpal Singh Khaira stg ae
ಮನೀಷ್​ ಮಲ್ಹೋತ್ರ


ಇನ್ನು, ಖ್ಯಾತ ಫ್ಯಾಷನ್‌ ಡಿಸೈನರ್‌ಗಳಿಗೆ ನೋಟಿಸ್‌ ನೀಡಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಪಂಜಾಬ್ ವಿಧಾನಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಖೈರಾ, ಇದನ್ನು ನೀವು ಇಡಿ ಅಥವಾ ವಸ್ತ್ರ ವಿನ್ಯಾಸಕರನ್ನೇ ಕೇಳಿ. ನಾನು 3-4 ಲಕ್ಷ ರೂಪಾಯಿ ಮೌಲ್ಯದ ಲೆಹಂಗಾಗಳಂತಹ 2 - 3 ಮದುವೆಯ ಧರಿಸುಗಳನ್ನು ಖರೀದಿಸಿದ್ದೇನೆ. ಇದು ಎಷ್ಟು ದೊಡ್ಡ ಹಣ ವರ್ಗಾವಣೆಯಾಗಿದೆ? ನನ್ನ ಮಗಳ ಮದುವೆಗೆ ಬಹಳ ಕಡಿಮೆ ಖರೀದಿಯಾಗಿದೆ ಎಂದು ಆರೋಪಿ ಶಾಸಕ ಪ್ರತಿಕ್ರಿಯೆ ನೀಡಿರುವ ವರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಬೆದರಿಕೆ ಹಾಕಿದ್ದ ಬಿಗ್​ ಬಾಸ್​ ಖ್ಯಾತಿಯ ನಟಿಯನ್ನು ಬಂಧಿಸಿದ್ದ ಪೊಲೀಸರು..!

2016 ರಲ್ಲಿ, ಖೈರಾ ಅವರ ಮಗಳು ಸಿಮರ್ ಅವರು ಪಂಜಾಬ್‌ ಮಾಜಿ ಸಿಎಂ ದಿವಂಗತ ದರ್ಬರಾ ಸಿಂಗ್ ಅವರ ಮೊಮ್ಮಗ ಇಂದರ್‌ವೀರ್‌ ಸಿಂಗ್ ಜೋಹಾಲ್‌ ಅವರನ್ನು ವಿವಾಹವಾದರು.

ಇನ್ನು, ಮಾರ್ಚ್‌ ತಿಂಗಳಲ್ಲಿ ಇಡಿ ಪಂಜಾಬ್, ಚಂಡೀಗಢ ಮತ್ತು ದೆಹಲಿಯಾದ್ಯಂತ 12 ಸ್ಥಳಗಳ ಮೇಲೆ ದಾಳಿ ನಡೆಸಿತ್ತು, ಇದರಲ್ಲಿ ಇಂದರ್‌ವೀರ್‌ ಜೋಹಾಲ್ ಅವರ ಜಾಗವೂ ಸೇರಿದೆ. 2015 ರ ಫಾಝಿಲ್ಕಾ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಅಪರಾಧಿಗಳಿಗೆ ಸಂಬಂಧ ಹೊಂದಿದ್ದ ಜಾಗಗಳಲ್ಲೂ ಇಡಿ ರೇಡ್‌ ನಡೆದಿತ್ತು. ಈ ಅಪರಾಧಿಗಳೊಂದಿಗೆ ಸಂಬಂಧ ಹೊಂದಿರುವ ಆರೋಪ ಹೊಂದಿರುವ ಖೈರಾ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದಾರೆ. ಖೈರಾ ವಿರುದ್ಧ ನಕಲಿ ಪಾಸ್‌ಪೋರ್ಟ್‌ ದಂಧೆ ತನಿಖೆಯೂ ನಡೆಯುತ್ತಿದ್ದು, ದೆಹಲಿ ಪೊಲೀಸರು ಇವರ ವಿರುದ್ಧ ಎಫ್‌ಐಆರ್‌ ಎದುರಿಸುತ್ತಿದ್ದಾರೆ. ಈ ಆರೋಪಗಳ ಕುರಿತೂ ಸಹ ಇಡಿ ದಾಳಿ ನಡೆದಿತ್ತು.

ಇಂಡೋ-ಪಾಕ್ ಗಡಿಯುದ್ದಕ್ಕೂ ಮಾದಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಗ್ಯಾಂಗ್‌ನ ಭಾಗವಾಗಿದ್ದ ಆರೋಪದ ಮೇಲೆ 2015 ರಲ್ಲಿ ಪಂಜಾಬ್ ಪೊಲೀಸರು 9 ಜನರನ್ನು ಬಂಧಿಸಿದ್ದರು. ಆ ವೇಳೆ 1.8 ಕೆಜಿ ಹೆರಾಯಿನ್, 24 ಚಿನ್ನದ ಬಿಸ್ಕತ್ತು, ಎರಡು ಶಸ್ತ್ರಾಸ್ತ್ರಗಳು, 26 ಲೈವ್ ಕಾರ್ಟಿಜ್‌ಗಳು ಮತ್ತು 2 ಪಾಕಿಸ್ತಾನಿ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಅಲ್ಲದೆ, ಈ ಮಾದಕ ವಸ್ತುವಿನ ಗ್ಯಾಂಗ್‌ನ ಕಿಂಗ್‌ಪಿನ್‌ಗಳಲ್ಲಿ ಒಬ್ಬರು ಯುಕೆಯಲ್ಲಿದ್ದಾರೆ ಮತ್ತು ಖೈರಾ ಆ ಕಿಂಗ್ಪಿನ್‌ ಜತೆ ಸಂಬಂಧ ಹೊಂದಿದ್ದಾರೆ ಎಂದೂ ಹಿರಿಯ ಇಡಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ತನಿಖೆಯ ಸಮಯದಲ್ಲಿ ಖೈರಾ ಅವರ ಹೆಸರು ಬಂದಿದೆ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ ಮತ್ತು ಬಂಧಿತ 9 ಮಂದಿಯನ್ನು ಶಿಕ್ಷೆಗೊಳಪಡಿಸಿದ ಫಾಝಿಲ್ಕಾ ನ್ಯಾಯಾಲಯವು ಅವರನ್ನು 2017 ರ ನವೆಂಬರ್‌ನಲ್ಲಿ ಕರೆಸಿಕೊಂಡಿದೆ. ಆ ಸಮಯದಲ್ಲಿ, ಖೈರಾ ಪಂಜಾಬ್ ಪಿಸಿಸಿಯ ವಕ್ತಾರರಾಗಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮಗುವಾದ ನಂತರದ ಕೂದಲುದುರುವಿಕೆಗೆ ಪರಿಹಾರ ಕಂಡುಕೊಂಡ ಅನುಷ್ಕಾ ಶರ್ಮಾ: ಸಲಹೆ ಕೊಟ್ಟಿದ್ದು ಸೋನಮ್ ಕಪೂರ್

ಖೈರಾ ತನ್ನ ಪಿಎಸ್ಒ ಜೋಗಾ ಸಿಂಗ್ ಅವರ ಮೊಬೈಲ್ ಫೋನ್ ಮೂಲಕ ಶಿಕ್ಷೆಗೊಳಗಾದವರಲ್ಲಿ ಒಬ್ಬರಾದ ಗುರುದೇವ್ ಸಿಂಗ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಮತ್ತು 2015 ರ ಫೆಬ್ರವರಿ 27 ಮತ್ತು ಮಾರ್ಚ್ 8 ರ ನಡುವೆ ಇಬ್ಬರೂ 65 ಬಾರಿ ಮಾತನಾಡಿದ್ದಾರೆ ಎಂದು ಪೊಲೀಸರು ಗುರುದೇವ್ ಬಂಧನಕ್ಕೆ ಒಂದು ದಿನ ಮೊದಲು ಆರೋಪಿಸಿದ್ದರು. ಆ ವೇಳೆ, ಕೆಳ ಹಂತದ ನ್ಯಾಯಾಲಯ ಖೈರಾಗೆ ಸಮನ್ಸ್ ನೀಡಿತ್ತು. ಆದರೆ, ಸುಪ್ರೀಂಕೋರ್ಟ್ ಅವರಿಗೆ ರಿಲೀಫ್‌ ನೀಡಿತ್ತು.

ಇನ್ನೊಂದೆಡೆ, ನಕಲಿ ಪಾಸ್‌ಪೋರ್ಟ್‌ ದಂಧೆಯಲ್ಲಿ ಜನವರಿಯಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಯಿತು. ಈ ದಂಧೆಯ ಭಾಗವಾಗಿರುವ ಜನರೊಂದಿಗೆ ಖೈರಾ ಸಂಪರ್ಕದಲ್ಲಿದ್ದಾರೆ ಎಂದು ಇಡಿ ಅಧಿಕಾರಿ ತಿಳಿಸಿದ್ದಾರೆ ಎನ್ನಲಾಗಿದೆ.
Published by:Anitha E
First published: