Viral News: ನಗರ ಜೀವನದ ಕಿರಿಕಿರಿಯಿಂದ ಬೇಸತ್ತು ದ್ವೀಪಕ್ಕೆ ವಲಸೆ ಹೋದ ಕುಟುಂಬ

ನಗರದ ಒತ್ತಡದ ಜೀವನದಿಂದ ಬೇಸತ್ತು ಬೆರಳೆಣಿಕೆ ಜನರಿರುವ ದ್ವೀಪಕ್ಕೆ ಹೋಗಿ ನೆಲೆಸಿದೆ ಒಂದು ಕುಟುಂಬ. ಆದರೆ, ಆ ದ್ವೀಪದಲ್ಲಿ ಅವರಿಗೆ ಇರುವ ದೊಡ್ಡ ಸಮಸ್ಯೆ ಎಂದರೆ, ಅಲ್ಲಿನ ಪ್ರೀ ಸ್ಕೂಲಿನಲ್ಲಿರುವ ಏಕೈಕ ವಿದ್ಯಾರ್ಥಿ ಇವರ ಮೂರು ವರ್ಷದ ಮಗ.

ಸಾಂದರ್ಭಿಕ ಚಿತ್ರ (PC: Duncan May- Instagram)

ಸಾಂದರ್ಭಿಕ ಚಿತ್ರ (PC: Duncan May- Instagram)

  • Share this:
ದೊಡ್ಡ ನಗರಗಳಲ್ಲಿನ ಜೀವನವು ಮೂಲ ಸೌಕರ್ಯ, ಸಾರಿಗೆ ಮತ್ತು ವೈದ್ಯಕೀಯ ಸೌಲಭ್ಯಗಳ ಜೊತೆಗೆ ಅದರದ್ದೇ ಆದ ಪ್ರಯೋಜನಗಳನ್ನು ಹೊಂದಿದೆ. ಆದರೆ, ಜೊತೆ ಜೊತೆಗೆ ಮಾಲಿನ್ಯ, ಒತ್ತಡ, ಕಾರುಗಳು, ಜನರು ಮತ್ತು ನಿತ್ಯವೂ ವ್ಯವಹರಿಸಬೇಕಾದ ಅನೇಕ ಸಮಸ್ಯೆಗಳನ್ನು ಕೂಡ ಅದು ಒಳಗೊಂಡಿರುತ್ತದೆ. ಕೆಲವರಿಗೆ ನಗರದ ಅನುಕೂಲಗಳ ಮುಂದೆ ಅನಾನುಕೂಲಗಳು ಲೆಕ್ಕಕ್ಕಿಲ್ಲದಂತಿದ್ದರೆ, ಇನ್ನು ಕೆಲವರು ಕಿಕ್ಕಿರಿದ ನಗರಗಳ ಶಬ್ಧ ಮತ್ತು ಕೋಲಾಹಲದಿಂದ ದೂರ ಇರುವ ಶಾಂತ ಪಟ್ಟಣದಲ್ಲಿ ನೆಲೆಸಲು ಬಯಸುತ್ತಾರೆ. ಕುಟುಂಬ ಸಂತೋಷವನ್ನು ಅರಸಿಕೊಂಡು ದೊಡ್ಡ ನಗರಗಳಿಂದ ಚಿಕ್ಕ ಪಟ್ಟಣಗಳಿಗೆ ಸ್ಥಳಾಂತರಗೊಳ್ಳುವುದು ಹೊಸ ಟ್ರೆಂಡ್ ಏನಲ್ಲ, ಇದು ದಶಕಗಳಿಂದಲೂ ನಡೆಯುತ್ತಿದೆ.

ಒಂದು ಹೊಸ ಸ್ಥಳಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ಸಂಸ್ಕೃತಿ, ಹವಮಾನ, ಆಚರಣೆಗಳು ಮತ್ತು ಆಹಾರದಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಇದ್ದರಂತೂ ಇನ್ನೂ ಕಷ್ಟ. ಕೆಲವೊಮ್ಮೆ ಈ ಬದಲಾವಣೆಗಳು ಜನರು ನಿರೀಕ್ಷಿಸಿದ್ದಕ್ಕಿಂತ ದೊಡ್ಡ ಮಟ್ಟದ್ದಾಗಿರುತ್ತದೆ.

Family leaves city, Remote island, kid only student in pre school, Shapinsay, Orkney islands, Abdullah Khalid and his wife Mahwish left city family left city with their two young sons in Yardley
ಸಾಂದರ್ಭಿಕ ಚಿತ್ರ


ಬರ್ಮಿಂಗ್‍ಹ್ಯಾಮ್‍ನ ಗಡಿಬಿಡಿಯ ಜೀವನವನ್ನು ತೊರೆದು, ಕೇವಲ 320 ನಿವಾಸಿಗಳಿರುವ ದ್ವೀಪಕ್ಕೆ ಹೋಗಿ ನೆಲೆಸಿದ ಯುಕೆಯ ಯುವ ಮುಸ್ಲಿಂ ಕುಟುಂಬದ ಪ್ರಕರಣವನ್ನೇ ತೆಗೆದುಕೊಳ್ಳಿ. ಅಲ್ಲಿನ ಜನಸಂಖ್ಯೆ 11 ಲಕ್ಷಕ್ಕೂ ಹೆಚ್ಚು ಕುಸಿತವಾಗಿದೆ.

ಅಬ್ದುಲ್ಲಾ ಖಾಲಿದ್, ಅವರ ಪತ್ನಿ ಮಾಹ್ವಿಶ್ ಮತ್ತು ಇಬ್ಬರು ಚಿಕ್ಕ ಮಕ್ಕಳು, ಪೂರ್ವ ಬರ್ಮಿಂಗ್‍ಹ್ಯಾಮನ ಯಾರ್ಡ್ಲಿ ಪ್ರದೇಶವನ್ನು ಬಿಟ್ಟು, ಇಂಗ್ಲೆಂಡ್‍ನಿಂದ 900 ಕಿ.ಮೀ ಗೂ ಹೆಚ್ಚು ದೂರದಲ್ಲಿರುವ ಸ್ಕಾಟ್‍ಲ್ಯಾಂಡ್‍ನ ಉತ್ತರ ತುದಿಯಲ್ಲಿರುವ ಶಾಪಿನ್ಸೆ ದ್ವೀಪಕ್ಕೆ ವಲಸೆ ಹೋದರು.

ಇದನ್ನೂ ಓದಿ: Strange Rules: ಇಂಗ್ಲೆಂಡ್‌ನಲ್ಲಿ ನಾಯಿಗಳಿಗೆ ಸಸ್ಯಾಹಾರಿ ಆಹಾರವೊಂದನ್ನೇ ನೀಡುವಂತಿಲ್ಲ: ಹಾಗೇನಾದರು ಮಾಡಿದರೆ ಮಾಲೀಕರಿಗೆ ಜೈಲು ಶಿಕ್ಷೆ!

ಈ ಸ್ಥಳಾಂತರ ಅಷ್ಟು ಸುಲಭವಾಗಿರಲಿಲ್ಲ, ಆ ಕುಟುಂಬ ಮತ್ತೆ ಮೊದಲಿನಿಂದ ಎಲ್ಲವನ್ನು ಆರಂಭಿಸಬೇಕಿತ್ತು. ಮೊದಲು ಅವರು 1, 25,00 ಪೌಂಡ್‍ಗಳ ಬೆಲೆಗೆ ಖಾಸಗಿ ಬೀಚ್ ಉಳ್ಳ 42 ಎಕರೆ ಭೂಮಿಯನ್ನು ಖರೀದಿಸಿತು. ಬಳಿಕ ಮೂರು ಬೆಡ್‍ರೂಮ್‍ಗಳ ಕಾಟೇಜ್ ನಿರ್ಮಿಸಿತು. ಇಷ್ಟೆಲ್ಲಾ ಮಾಡಿರುವ ಅಬ್ದುಲ್ಲಾ ಅವರ ವಯಸ್ಸೆಷ್ಟು ಗೊತ್ತೇ? ಕೇವಲ 22 ವರ್ಷ!

ಯಾರ್ಡ್ಲಿಯಲ್ಲಿ ಜನಿಸಿದ ಅವರು , ತಮ್ಮ ಕುಟುಂಬದ ಕಾರು ಮಾರಾಟ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈಗ ಅವರು ಆ ಕೆಲಸ ತ್ಯಜಿಸಿ, ತಮ್ಮ ಪತ್ನಿಯೊಂದಿಗೆ ಆಹಾರ ವಿತರಣಾ ಕೆಲಸ ಮಾಡುತ್ತಿದ್ದಾರೆ. ಅಬ್ದುಲ್ಲಾ ಅವರ ಈ ಕ್ರಮಕ್ಕೆ ಆತನ ತಂದೆಯ ಬೆಂಬಲವೂ ಇತ್ತು. ಆದರೆ, ಅವರಿಗೆ ಇರುವ ಏಕೈಕ ಸಮಸ್ಯೆ ಎಂದರೆ ತಮ್ಮ 3 ವರ್ಷದ ಮಗನದ್ದು. ಆ ಮಗು ಅಲ್ಲಿನ ಪ್ರೀ ಸ್ಕೂಲಿನಲ್ಲಿರುವ ಏಕೈಕ ವಿದ್ಯಾರ್ಥಿ! ಅವನಿಗೆ ಕಲಿಸಲು ಇಬ್ಬರು ಶಿಕ್ಷಕರಿದ್ದಾರೆ.

“ಈ ದ್ವೀಪದಲ್ಲಿರುವ ಎಲ್ಲರೂ ಒಳ್ಳೆಯವರು, ಮತ್ತು ನಾನು ಹಾಗೂ ನನ್ನ ಹೆಂಡತಿ ಶಾಪಿನ್ಸೆ ಸ್ಪೈಸ್ ಎಂಬ ಆಹಾರ ವಿತರಣಾ ಸೇವೆಯನ್ನು ತೆರೆದಿದ್ದೇವೆ. ಸದ್ಯದಲ್ಲಿಯೇ ಈ ದ್ವೀಪದಲ್ಲಿ ಒಂದು ಗ್ಲಾಂಪಿಂಗ್ ಉದ್ಯಮ ಆರಂಭಿಸುವ ನಿರೀಕ್ಷೆಯಲ್ಲಿದ್ದೇವೆ” ಎಂದು ಅಬ್ದುಲ್ಲಾ ಬರ್ಮಿಂಗ್‍ಹ್ಯಾಮ್ ಲೈವ್‍ಗೆ ತಿಳಿಸಿದ್ದಾರೆ.

ಇದನ್ನೂ ಓದಿ: Dating Website:ಡೇಟಿಂಗ್ ಮಾಡೋಕೆ ಹುಡುಗಿಯರೇ ಇಲ್ಲ, ಎಲ್ಲರೂ ಮೋಸ ಮಾಡ್ತಿದ್ದಾರೆ ಎಂದು ಕೋರ್ಟ್ ಮೆಟ್ಟಿಲೇರಿದ ಯುವಕ!

ಶಾಪಿನ್ಸೆ ಒರ್ಕ್‍ನಿ ದ್ವೀಪಗಳ ಭಾಗವಾಗಿದ್ದು, ಇದು ಗ್ರೇಟ್ ಬ್ರಿಟನ್ ದ್ವೀಪದ ಉತ್ತರ ಕರಾವಳಿಯಲ್ಲಿರುವ ಸ್ಕಾಟ್‍ಲ್ಯಾಂಡ್‍ನ ಉತ್ತರ ದ್ವೀಪಗಳಲ್ಲಿನ ದ್ವೀಪ ಸಮೂಹವಾಗಿದೆ. ಒರ್ಕ್‍ನಿಯು ಸ್ಕಾಟ್‍ಲ್ಯಾಂಡ್‍ನ 32 ಕೌನ್ಸಿಲ್ ಪ್ರದೇಶಗಳಲ್ಲಿ ಒಂದಾಗಿದ್ದು, ಜೊತೆಗೆ ಸ್ಕಾಟಿಶ್ ಸಂಸತ್ ಕ್ಷೇತ್ರ, ಲೆಫ್ಟಿನೆನ್ಸಿ ಪ್ರದೇಶ ಮತ್ತು ಐತಿಹಾಸಿಕ ಕೌಂಟಿಯಾಗಿದೆ.
First published: