Modi Books: ಕವಿಯಾದ ನರೇಂದ್ರ ಮೋದಿ! ಶೀಘ್ರವೇ ಗುಜರಾತಿ ಕವನಗಳ ಇಂಗ್ಲಿಷ್ ಅನುವಾದ ಬಿಡುಗಡೆ

ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತಿ ಕವನ ಪುಸ್ತಕದ ಇಂಗ್ಲಿಷ್ ಅನುವಾದ 'ಲೆಟರ್ಸ್ ಟು ಸೆಲ್ಫ್' ಆಗಸ್ಟ್‌ನಲ್ಲಿ ರಿಲೀಸ್ ಆಗಲಿದೆ. ಹಲವು ವರ್ಷಗಳಿಂದ ಬರೆದ, 2007 ರಲ್ಲಿ ಮೂಲತಃ ಬಿಡುಗಡೆಯಾದ 'ಆಂಖ್ ಆ ಧಾನ್ಯ ಛೆ' ಎಂಬ ಗುಜರಾತಿ ಕವನ ಸಂಕಲನದ ಅನುವಾದ ಇದಾಗಿದೆ.

ನರೇಂದ್ರ ಮೋದಿ ಕವನಗಳ ಇಂಗ್ಲಿಷ್ ಅನುವಾದಿತ ಪುಸ್ತಕ

ನರೇಂದ್ರ ಮೋದಿ ಕವನಗಳ ಇಂಗ್ಲಿಷ್ ಅನುವಾದಿತ ಪುಸ್ತಕ

  • Share this:
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಉತ್ತಮ ಆಡಳಿತಗಾರ (good administrator), ಅನುಭವಿ ರಾಜಕಾರಣಿ (Politician), ಅತ್ಯುತ್ತಮ ವಾಗ್ಮಿ (orator) ಎನ್ನುವುದು ಎಲ್ಲರಿಗೂ ಗೊತ್ತು. ವಿಶ್ವದ ಪ್ರಭಾವಿ ರಾಜಕಾರಣಿಯಾದ ನರೇಂದ್ರ ಮೋದಿ ಒಳ್ಳೆ ಓದುಗ, ಪುಸ್ತಕ ಪ್ರೇಮಿಯೂ (Books Lover) ಹೌದು. ಆದರೆ ಮೋದಿ ಒಳ್ಳೆ ಕವಿಯೂ (poet) ಹೌದು ಎನ್ನುವ ವಿಚಾರ ಬಹುತೇಕರಿಗೆ ಗೊತ್ತಿಲ್ಲ. ಅಂದಹಾಗೆ ನರೇಂದ್ರ ಮೋದಿ ಈ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ (Gujarat CM) ಹಲವು ಲೇಖನಗಳನ್ನು (Articles), ಹಲವು ಕವನಗಳನ್ನು (Poems) ಬರೆದಿದ್ದರು. ಅಲ್ಲದೇ ‘ಆಂಖ್ ಆ ಧ್ಯಾನ್ ಛೆ’ (Aankh Aa Dhanya Chhe) ಎಂಬ ಕವನ ಸಂಕಲವನನ್ನೂ ಮೋದಿ ಪ್ರಕಟಿಸಿದ್ದರು. ಇದೀಗ ಇದೇ ಪುಸ್ತಕ (Books) ಇಂಗ್ಲಿಷ್‌ಗೆ (English) ‘ಲೆಟರ್ಸ್ ಟು ಸೆಲ್ಫ್’ (Letters to Self) ಎಂಬ ಹೆಸರಿನಲ್ಲಿ ಅನುವಾದ ಗೊಂಡಿದೆ. ಆಗಸ್ಟ್ ತಿಂಗಳಲ್ಲಿ ಈ ಪುಸ್ತಕ ಬಿಡುಗಡೆಗೆ ಮುಹೂರ್ತವೂ ನಿಗದಿಯಾಗಿದೆ.

ಲೆಟರ್ಸ್ ಟು ಸೆಲ್ಫ್ ರಿಲೀಸ್‌ಗೆ ಮುಹೂರ್ತ

ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತಿ ಕವನ ಪುಸ್ತಕದ ಇಂಗ್ಲಿಷ್ ಅನುವಾದ 'ಲೆಟರ್ಸ್ ಟು ಸೆಲ್ಫ್' ಆಗಸ್ಟ್‌ನಲ್ಲಿ ರಿಲೀಸ್ ಆಗಲಿದೆ. ಹಲವು ವರ್ಷಗಳಿಂದ ಬರೆದ, 2007 ರಲ್ಲಿ ಮೂಲತಃ ಬಿಡುಗಡೆಯಾದ 'ಆಂಖ್ ಆ ಧಾನ್ಯ ಛೆ' ಎಂಬ ಗುಜರಾತಿ ಕವನ ಸಂಕಲನವನ್ನು ಚಲನಚಿತ್ರ ಪತ್ರಕರ್ತೆ ಮತ್ತು ಇತಿಹಾಸಕಾರ ಭಾವನಾ ಸೋಮಾಯ ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಇದೇ ಆಗಸ್ಟ್‌ನಲ್ಲಿ ಈ ಪುಸ್ತಕ ಬಿಡುಗಡೆಯಾಗಲಿದೆ.

ಮೋದಿಯವರ ಮೂಲ ಹಾಗೂ ಅನುವಾದಿತ ಪುಸ್ತಕ


ಮೋದಿ ಬರೆದ ಕವನಗಳಲ್ಲಿ ಏನಿದೆ?

ಮೋದಿ ಕವನಗಳಲ್ಲಿ ಮುಖ್ಯವಾಗಿ ಪ್ರಾಕೃತಿಕ ಸೌಂದರ್ಯದಿಂದ ಹಿಡಿದು ಬದುಕಿನ ಒತ್ತಡಗಳ ಬಿಂಬಿಸುವ ಆಂಖ್ ಆ ಧನ್ಯ ಮತ್ತಿತರ ಹಲವು ಚಿತ್ತಾಕರ್ಷಕ ಕವನಗಳು ಗಾಢ ವಿಮರ್ಶೆ, ಚಿಂತನೆಯಿಂದ ಸಂಪನ್ನಗೊಂಡಿವೆ. ಛಂದಸ್ಸುಗಳಿಂದ ತುಂಬಿದ್ದು, ಅತ್ಯಂತ ಪ್ರಾಸಬದ್ಧವಾಗಿವೆ. ಪ್ರಕೃತಿ ಬಗ್ಗೆ ಅಥವಾ ಜೀವನದ ಹಲವು ಜಂಜಾಟ ಕುರಿತು ತಮ್ಮ ಚಿಂತನೆ, ಕನಸುಗಳು ಮತ್ತು ಕಳವಳ ಇತ್ಯಾದಿಗಳನ್ನು ಮೋದಿ ಕವನಗಳ ಮುಖೇನ ಜಗತ್ತಿನ ಜತೆ ಹಂಚಿಕೊಂಡಿದ್ದಾರೆ. ಇದನ್ನು ಫಿಂಗರ್ ಪ್ರಿಂಟ್ ಪ್ರಕಾಶನವು ಪ್ರಕಟಿಸುತ್ತಿದೆ.

ಇದನ್ನೂ ಓದಿ: Helicopter Journey: ತಾಯಿಯನ್ನು ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆತಂದ ಮಗ! ಅದ್ಭುತ ಗಿಫ್ಟ್ ನೋಡಿ ಅಮ್ಮನ ಕಣ್ಣಲ್ಲಿ ನೀರು

ಹೇಳಲಾಗದ ಮತ್ತು ಹೇಳಲೇ ಬೇಕಾದ ಮಾತುಗಳು

“ಇವು ಪ್ರಗತಿ, ಹತಾಶೆ, ಅನ್ವೇಷಣೆ, ಧೈರ್ಯ ಮತ್ತು ಸಹಾನುಭೂತಿಯ ಕವಿತೆಗಳಾಗಿವೆ. ಅವರು ಪ್ರಾಪಂಚಿಕ ಮತ್ತು ನಿಗೂಢತೆಯನ್ನು ಪ್ರತಿಬಿಂಬಿಸುತ್ತಾರೆ. ಆದರೆ ಹೇಳಲು ಆಗದ, ಹೇಳಲೇ ಬೇಕಾಗಿದ್ದ ಮಾತುಗಳನ್ನು ಕವನದಲ್ಲಿ ಮೋದಿ ಹೇಳಿದ್ದಾರೆ. ಅಂತ ಲೇಖಕಿ  ಭಾವನಾ ಸೋಮಾಯ  ಹೇಳಿದ್ದಾರೆ.

ಫಿಲ್ಟರ್ ಇಲ್ಲದೇ ಭಾವನೆಗಳ ಅಭಿವ್ಯಕ್ತಿ

ಅವರು ಬಿಚ್ಚಿಡಲು ಬಯಸುವ ಅಸ್ಪಷ್ಟತೆಗಳನ್ನು ಕವನಗಳಲ್ಲಿ ಉಲ್ಲೇಖಿಸುತ್ತಾರೆ. ಅವರ ಬರವಣಿಗೆಯನ್ನು ವಿಭಿನ್ನವಾಗಿಸುವುದು ಅವರ ನಿರಂತರ ಭಾವನಾತ್ಮಕ ಮಂಥನ, ಅವರ ಶಕ್ತಿ ಮತ್ತು ಅವರ ಆಶಾವಾದ ಎಂದು ನಾನು ನಂಬುತ್ತೇನೆ. ಅವರು ಫಿಲ್ಟರ್‌ಗಳಿಲ್ಲದೆ ಭಾವನೆ ವ್ಯಕ್ತಪಡಿಸುತ್ತಾರೆ ಅಂತ ಲೇಖಕಿ ಹೇಳಿದ್ದಾರೆ.

ಇದನ್ನೂ ಓದಿ: First Flight Journey: ಹಾರುತಾ ಹಾರುತಾ, ಆಕಾಶದಲ್ಲಿ ತೇಲುತಾ! ಮೊದಲ ಬಾರಿ ವಿಮಾನ ಪ್ರಯಾಣ ಮಾಡಿದ 27 ಅಜ್ಜಿಯರು!

ಈ ಹಿಂದೆ ಪುಸ್ತಕ ಅನುವಾದಿಸಿದ್ದ ಭಾವನಾ ಸೋಮಯ್ಯ

ಈ ಹಿಂದೆ 2020ರಲ್ಲಿ ಲೇಖಕಿ ಚೇತನಾ ಸೋಮಾಯ ಅವರು ಮೋದಿಯವರ ಗುಜರಾತಿ ಪುಸ್ತಕವನ್ನು "ಲೆಟರ್ಸ್ ಟು ಮದರ್"  ಅಂತ ಇಂಗ್ಲಿಷ್‌ಗೆ ಅನುವಾಸಿದ್ದರು. ಮೋದಿ ಅವರು ಯುವಕನಾಗಿದ್ದಾಗ ತಮ್ಮ ತಾಯಿಗೆ ಬರೆದಿದ್ದ ಪತ್ರಗಳನ್ನು ಹೊಂದಿರುವ ಪುಸ್ತಕವಾಗಿತ್ತು. ಮೋದಿಯವರು ಗುಜರಾತಿ ಭಾಷೆಯಲ್ಲಿ ಹಲವಾರು ಪುಸ್ತಕಗಳಲ್ಲದೆ, ಯುವ ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಒತ್ತಡವನ್ನು ನಿಭಾಯಿಸಲು ಸಹಾಯ ಮಾಡಲು "ಎಕ್ಸಾಮ್ ವಾರಿಯರ್ಸ್" ಅನ್ನು ಸಹ ಬರೆದಿದ್ದಾರೆ.
Published by:Annappa Achari
First published: