ಕೆಟ್ಟ ಹವಾಮಾನದಲ್ಲೂ ನಿಖರವಾಗಿ ವೈಮಾನಿಕ ದಾಳಿ ನಡೆಸುವ Akash Prime ಕ್ಷಿಪಣಿ ಪ್ರಯೋಗ ಯಶಸ್ವಿ!

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು DRDO, ಭಾರತೀಯ ವಾಯುಪಡೆಯನ್ನು ಮೂರು ದಿನಗಳ ಅವಧಿಯಲ್ಲಿ ಆಕಾಶ್-NG ಯ ಎರಡನೇ ಯಶಸ್ವಿ ಹಾರಾಟ ಪರೀಕ್ಷೆ ನಡೆಸಿದ್ದಕ್ಕಾಗಿ ಅಭಿನಂದಿಸಿದರು. ಈ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಯ ಅಭಿವೃದ್ಧಿಯು ಭಾರತೀಯ ವಾಯುಪಡೆಯ ವಾಯು ರಕ್ಷಣಾ ಸಾಮರ್ಥ್ಯದ ಬಲವನ್ನು ಸಾಬೀತುಪಡಿಸುತ್ತದೆ ಎಂದು ಅವರು ಹೇಳಿದರು.

ಆಕಾಶ್ ಪ್ರೈಮ್ ಹೊಸ ಅವತಾರದ ಕ್ಷಿಪಣಿ ಪರೀಕ್ಷಾರ್ಥಕ ಪ್ರಯೋಗ.

ಆಕಾಶ್ ಪ್ರೈಮ್ ಹೊಸ ಅವತಾರದ ಕ್ಷಿಪಣಿ ಪರೀಕ್ಷಾರ್ಥಕ ಪ್ರಯೋಗ.

 • Share this:
  ಡಿಆರ್‌ಡಿಒ (DRDO) ಆಕಾಶ್ ಕ್ಷಿಪಣಿಯ (Akash Prime Missile) ಹೊಸ ಆವೃತ್ತಿಯನ್ನು ಪರೀಕ್ಷಿಸಿದೆ. ‘ಆಕಾಶ್ ಪ್ರೈಮ್’ ಹೊಸ ಅವತಾರದ ಕ್ಷಿಪಣಿಯನ್ನು ಸೋಮವಾರ ಸಂಜೆ 4: 30 ರ ಸುಮಾರಿಗೆ ಒಡಿಶಾದ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಯಿತು. ಕ್ಷಿಪಣಿಯಿಂದ ಯಶಸ್ವಿಯಾಗಿ ಅತಿ ವೇಗದ ಮಾನವರಹಿತ ವೈಮಾನಿಕ ಗುರಿಯ ಪರೀಕ್ಷೆಯನ್ನು ನಡೆಸಲಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

  ದೇಶೀಯವಾಗಿ ಅಭಿವೃದ್ಧಿಪಡಿಸಿದ ಆರ್‌ಎಫ್ ಸೀಕರ್, ಲಾಂಚರ್, ಮಲ್ಟಿ-ಫಂಕ್ಷನ್ ರಾಡಾರ್ ಮತ್ತು ಕಮಾಂಡ್, ಕಂಟ್ರೋಲ್ ಮತ್ತು ಕಮ್ಯುನಿಕೇಶನ್ ಸಿಸ್ಟಮ್‌ನೊಂದಿಗೆ ಸಂಪೂರ್ಣ ಶಸ್ತ್ರಾಸ್ತ್ರ ವ್ಯವಸ್ಥೆಯ ಕ್ಷಿಪಣಿಯ ಕಾರ್ಯನಿರ್ವಹಣೆಯ ಪರೀಕ್ಷೆಯು ದೃಢೀಕರಿಸಿದೆ. ಸಂಪೂರ್ಣ ಶಸ್ತ್ರಾಸ್ತ್ರ ವ್ಯವಸ್ಥೆಯ ಕ್ಷಿಪಣಿಯೂ ಎಲ್ಲಾ ಕೆಟ್ಟ ಹವಾಮಾನ ಸಾಮರ್ಥ್ಯದಲ್ಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ಡಿಆರ್​ಡಿಒ ಹೇಳಿದೆ.

  ಐಡಿಆರ್, ಚಂಡಿಪುರದಿಂದ ನಿಯೋಜಿಸಲಾಗಿರುವ ಹಲವಾರು ರಾಡಾರ್, ಟೆಲಿಮೆಟ್ರಿ ಮತ್ತು ಎಲೆಕ್ಟ್ರೋ ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್‌ಗಳಿಂದ ಸೆರೆಹಿಡಿಯಲಾದ ದತ್ತಾಂಶದ ಮೂಲಕ ಸಿಸ್ಟಮ್ ಕಾರ್ಯಕ್ಷಮತೆಯನ್ನು ಮೌಲ್ಯೀಕರಿಸಲಾಗಿದೆ ಎಂದು ಡಿಆರ್‌ಡಿಒ ಹೇಳಿದೆ. ಭಾರತೀಯ ವಾಯುಪಡೆಯ ಅಧಿಕಾರಿಗಳ ತಂಡವು ಈ ಪರೀಕ್ಷೆಗೆ ಸಾಕ್ಷಿಯಾಯಿತು.  ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು DRDO, ಭಾರತೀಯ ವಾಯುಪಡೆಯನ್ನು ಮೂರು ದಿನಗಳ ಅವಧಿಯಲ್ಲಿ ಆಕಾಶ್-NG ಯ ಎರಡನೇ ಯಶಸ್ವಿ ಹಾರಾಟ ಪರೀಕ್ಷೆ ನಡೆಸಿದ್ದಕ್ಕಾಗಿ ಅಭಿನಂದಿಸಿದರು. ಈ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಯ ಅಭಿವೃದ್ಧಿಯು ಭಾರತೀಯ ವಾಯುಪಡೆಯ ವಾಯು ರಕ್ಷಣಾ ಸಾಮರ್ಥ್ಯದ ಬಲವನ್ನು ಸಾಬೀತುಪಡಿಸುತ್ತದೆ ಎಂದು ಅವರು ಹೇಳಿದರು.

  ರಕ್ಷಣಾ ಆರ್ & ಡಿ ಇಲಾಖೆಯ ಕಾರ್ಯದರ್ಶಿ ಮತ್ತು ಡಿಆರ್‌ಡಿಒ ಅಧ್ಯಕ್ಷ ಡಾ.ಜಿ.ಸತೀಶ್ ರೆಡ್ಡಿ ಅವರು ಹೆಚ್ಚಿನ ವೇಗ ಮತ್ತು ಚುರುಕಾದ ವೈಮಾನಿಕ ದಾಳಿಗಳನ್ನು ತಡೆಯುವ ಸಾಮರ್ಥ್ಯವಿರುವ ಆಕಾಶ್ ಎನ್‌ಜಿಯ ಯಶಸ್ವಿ ಪ್ರಯೋಗಕ್ಕಾಗಿ ತಂಡಗಳನ್ನು ಅಭಿನಂದಿಸಿದರು.

  ವಾಯುಪಡೆಗೆ ಸೇರ್ಪಡೆಯಾಗಿರುವ ಏರ್​ ಬಸ್

  ಭಾರತೀಯ ವಾಯುಪಡೆಗೆ (Indian Air force) 56 C295 MW ಸಾರಿಗೆ ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳಲು ರಕ್ಷಣಾ ಸಚಿವಾಲಯವು ಇತ್ತೀಚೆಗೆ ಏರ್‌ಬಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಸಾರಿಗೆ ವಿಮಾನವು 5-10 ಟನ್ ಸಾಮರ್ಥ್ಯದ ಬಹುಮುಖ ಮಧ್ಯಮ ತೂಕದ ವಿಮಾನವಾಗಿದ್ದು, ಸಮಕಾಲೀನ ತಂತ್ರಜ್ಞಾನದೊಂದಿಗೆ ಐಎಎಫ್‌ನ ಹಳೆಯ ವಿಮಾನಗಳಿಗೆ ಪರ್ಯಾಯವಾಗಲಿವೆ.  MoD ಪ್ರಕಾರ, C-295MW ನ ಸೇರ್ಪಡೆಯು ಭಾರತೀಯ ವಾಯುಪಡೆಯ (IAF) ಆಧುನೀಕರಣದ ಮಹತ್ವದ ಹೆಜ್ಜೆಯಾಗಿದೆ. ಈ ವಿಮಾನಗಳ ಸೇರ್ಪಡೆಯೊಂದಿಗೆ ಭಾರತೀಯ ವಾಯುಪಡೆ ಮತ್ತಷ್ಟು ಶಕ್ತಿಶಾಲಿಯಾಗಿದೆ.

  ಏರ್‌ಬಸ್ C295 (Air bus C295) ಬೆಳಕು ಮತ್ತು ಮಧ್ಯಮ ವಿಭಾಗದಲ್ಲಿ ಹೊಸ-ಪೀಳಿಗೆಯ ಯುದ್ಧತಂತ್ರದ ಏರ್‌ಲಿಫ್ಟರ್ (Airlifter) ಆಗಿದೆ ಮತ್ತು ಇದು ನಿರ್ವಹಿಸಬಹುದಾದ ವಿವಿಧ ಕಾರ್ಯಗಳ ಸಂಖ್ಯೆಯಲ್ಲಿ ಹೆಚ್ಚು ಬಹುಮುಖವಾಗಿದೆ. ಈ ವಿಮಾನವನ್ನು ಈ ಹಿಂದೆ ಕನ್ಸ್ಟ್ರಕ್ಸಿಯನ್ಸ್ ಏರೋನೊಟಿಕಾಸ್ ಎಸ್ಎ (CASA, ಸ್ಪ್ಯಾನಿಷ್ ವಿಮಾನ ತಯಾರಕ ಸಂಸ್ಥೆಯಾಗಿದೆ, ಇದು ಈಗ ಏರ್ ಬಸ್ ಡಿಫೆನ್ಸ್ ಮತ್ತು ಸ್ಪೇಸ್ ನ ಭಾಗವಾಗಿದೆ). C295 ನ ಉತ್ಪಾದನೆಯು ಈಗ ಸ್ಪೇನ್‌ನ ಏರ್‌ಬಸ್ ಸೌಲಭ್ಯದಲ್ಲಿ ನಡೆಯುತ್ತದೆ.

  ಇದನ್ನು ಓದಿ: Janata Parva 1.0: ನಮ್ಮ ಪಕ್ಷದ ಸೋತ ಅಭ್ಯರ್ಥಿಗಳಿಗೆ ಅನ್ಯ ಪಕ್ಷಗಳಿಂದ ಗಾಳ: ಎಚ್.ಡಿ. ಕುಮಾರಸ್ವಾಮಿ ಆರೋಪ

  ಈ ವಿಮಾನವು ಸೆಮಿ ಪ್ರಿಪೇರ್ಡ್ ಸ್ಟ್ರೀಪ್ಸ್​ ಗಳಲ್ಲೂ ಕಾರ್ಯನಿರ್ವಹಿಸಬಲ್ಲದು. ಮತ್ತು ತ್ವರಿತ ಪ್ರತಿಕ್ರಿಯೆ ಮತ್ತು ಪ್ಯಾರಾ ಡ್ರಾಪ್ಸಿಂಗ್ ಫಾರ್ ಆರ್ಪ್ಸ್ & ಕಾರ್ಗೋವನ್ನು ಹಿಂಬದಿ ರಾಂಪ್ ಡೋರ್ ಹೊಂದಿದೆ. C295 ವಿಶ್ವದಾದ್ಯಂತ ರಕ್ಷಣಾ ಪಡೆಗಳಲ್ಲಿ ಬಳಕೆಯಲ್ಲಿರುವ ದಾಖಲೆಯನ್ನು ಹೊಂದಿದೆ ಮತ್ತು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಬಹು-ಪಾತ್ರದ ಕಾರ್ಯಾಚರಣೆಗಳನ್ನು ನಡೆಸುತ್ತದೆ.
  Published by:HR Ramesh
  First published: