• Home
  • »
  • News
  • »
  • national-international
  • »
  • Dog's Loyalty: ಶೂಟ್‌ ಔಟ್‌ ವೇಳೆ ಹೀರೋ ಆದ ನಾಯಿ, ತಾನು ಸತ್ತು ಮಾಲೀಕನನ್ನು ಬದುಕಿಸಿದ ಶ್ವಾನ!

Dog's Loyalty: ಶೂಟ್‌ ಔಟ್‌ ವೇಳೆ ಹೀರೋ ಆದ ನಾಯಿ, ತಾನು ಸತ್ತು ಮಾಲೀಕನನ್ನು ಬದುಕಿಸಿದ ಶ್ವಾನ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

' 777 ಚಾರ್ಲಿ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದು ರೀಲ್ ನಾಯಿಯ ಕಥೆಯಾಯ್ತು, ಆದ್ರೆ ರಿಯಲ್ ಲೈಫ್‌ನಲ್ಲೂ ನಾಯಿ ತಾನೆಷ್ಟು ಪ್ರೇಮಮಯಿ, ತನ್ನನ್ನು ಸಾಕಿದ ಒಡೆಯನಿಗೆ ತಾನೆಷ್ಟು ನಿಷ್ಠನಾಗಿ ಇರುತ್ತೀನಿ ಎನ್ನುವುದನ್ನು ತೋರಿಸಿದೆ.

  • Share this:

ಉತ್ತರ ಪ್ರದೇಶ: ನಾಯಿ (Dog) ಹಾಗೂ ಮನುಷ್ಯನ (Human) ನಡುವಿನ ಬಾಂಧವ್ಯವನ್ನು (Relationship) ಸಾರುವಂತ ಸಿನಿಮಾ 777 ಚಾರ್ಲಿ (777 Charlie) ರಿಲೀಸ್‌ಗೆ ರೆಡಿಯಾಗಿದೆ. ಇದು ರೀಲ್ (Reel) ನಾಯಿಯ ಕಥೆಯಾಯ್ತು, ಆದ್ರೆ ರಿಯಲ್ ಲೈಫ್‌ನಲ್ಲೂ (Real Life) ನಾಯಿ ತಾನೆಷ್ಟು ಪ್ರೇಮಮಯಿ, ತನ್ನನ್ನು ಸಾಕಿದ ಒಡೆಯನಿಗೆ (Owner) ತಾನೆಷ್ಟು ನಿಷ್ಠನಾಗಿ (Loyal) ಇರುತ್ತೀನಿ ಎನ್ನುವುದನ್ನು ತೋರಿಸಿದೆ. ಉತ್ತರ ಪ್ರದೇಶದಲ್ಲಿ (Uttar Pradesh) ನಾಯಿ ಹೀರೋ (Hero) ಆಗಿ, ತನ್ನ ಮಾಲೀಕನಿಗಾಗಿ ತನ್ನ ಪ್ರಾಣವನ್ನೇ (Life) ಅರ್ಪಿಸಿದ ರಿಯಲ್ ಘಟನೆ (Real Incident) ನಡೆದಿದೆ. ಜಗಳವೊಂದರಲ್ಲಿ ಪಕ್ಕದ ಮನೆಯವನೊಬ್ಬ ನಾಯಿ ಮಾಲೀಕನ ಮೇಲೆ ಗುಂಡು ಹಾರಿಸಿದ್ದಾನೆ. ಆತ ಹಾರಿಸಿದ ಗುಂಡು (Bullet) ಇನ್ನೇನು ಮಾಲೀಕನ ದೇಹ ಹೊಕ್ಕಬೇಕು ಎನ್ನುವಷ್ಟರಲ್ಲಿ ಇನ್ನೇನೋ ನಡೆದು ಹೋಗಿದೆ. ಈ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ…


ನಾಯಿ ಮಾಲೀಕನ ಜೊತೆ ಪಕ್ಕದ ಮನೆಯವನ ಜಗಳ


ಉತ್ತರ ಪ್ರದೇಶದ ಸುಲ್ತಾನ್‌ಪುರದ ವಿಕಾಸ್‌ಪುರದಲ್ಲಿ ಅಕ್ಕ ಪಕ್ಕದ ಮನೆಯವರ ನಡುವೆ ಜಗಳ ನಡೆದು, ಒಬ್ಬಾತ ಮತ್ತೊಬ್ಬನ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ವಿಶಾಲ್ ಶ್ರೀವಾಸ್ತವ ಅಕಾ ಶನಿ ಎಂಬುವರು ಉತ್ತರ ಪ್ರದೇಶದ ಸುಲ್ತಾನ್‌ಪುರದ ವಿಕಾಸ್‌ಪುರದಲ್ಲಿ ಕೆಲವು ವರ್ಷಗಳಿಂದ ಗೋಶಾಲೆ ನಡೆಸುತ್ತಿದ್ದರು. ಇವರ ಮನೆಯಲ್ಲೇ ಶೂಟೌಟ್ ನಡೆದಿದ್ದು, ಅವರ ಮನೆಯ ನಾಯಿ ಹೀರೋ ಆಗಿದೆ.


ಮಾತಿಗೆ ಮಾತು ಬೆಳೆದು ಜಗಳ


ವಿಶಾಲ್ ಶ್ರೀವಾಸ್ತವ ಅಕಾ ಶನಿ ಎಂಬುವರು ಉತ್ತರ ಪ್ರದೇಶದ ಸುಲ್ತಾನ್‌ಪುರದ ವಿಕಾಸ್‌ಪುರದಲ್ಲಿ ಕೆಲವು ವರ್ಷಗಳಿಂದ ಗೋಶಾಲೆ ನಡೆಸುತ್ತಿದ್ದರು. ಇವರ ಮನೆಯ ಪಕ್ಕದಲ್ಲಿ ರಾಂಬರಣ್ ಪಿಜಿ ಕಾಲೇಜಿನ ಮ್ಯಾನೇಜರ್ ಅನಿಲ್ ವರ್ಮಾ ಎಂಬುವರು ವಾಸಿಸುತ್ತಿದ್ದರು. ಗೋಶಾಲೆಯ ಹುಲ್ಲಿನ ವಿಚಾರಕ್ಕೆ ವಿಶಾಲ್ ಶ್ರೀವಾಸ್ತವ ಹಾಗೂ ಅನಿಲ್ ವರ್ಮಾ ನಡುವೆ ಮಾತಿಗೆ ಮಾತು ಬೆಳೆದಿದೆ. ಕೊನೆಗೆ ಅದು ವಿಪರೀತಕ್ಕೆ ಹೋಗಿದೆ.


ಇದನ್ನೂ ಓದಿ: OMG: ಈ ನಾಯಿಗೆ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಕೆಲಸ, ಭರ್ಜರಿ ಸಂಬಳ! ಹ್ಯಾಪಿನೆಸ್ ಆಫೀಸರ್ ಅಂತೆ ಈ ಡಾಗ್


ನಾಯಿ ಮಾಲೀಕನ ಮೇಲೆ ಗುಂಡು ಹಾರಿಸಿದ ವ್ಯಕ್ತಿ


ಜಗಳ ವಿಪರೀತಕ್ಕೆ ಹೋಗುತ್ತಿದ್ದಂತೆ ಅನಿಲ್ ವರ್ಮಾ ತಮ್ಮ ಮನೆಯಲ್ಲಿದ್ದ ಗನ್ ತೆಗೆದುಕೊಂಡ ಅಂಗಳಕ್ಕೆ ಬಂದಿದ್ದಾರೆ. ನೋಡ ನೋಡುತ್ತಿದ್ದಂತೆಯೇ ವಿಶಾಲ್ ಶ್ರೀವಾಸ್ತವ ಮೇಲೆ ಅನಿಲ್ ವರ್ಮಾ ಗುಂಡು ಹಾರಿಸಿದ್ದಾರೆ. ಆ ಸಮಯದಲ್ಲಿ ವಿಶಾಲ್ ಅವರ ಸಾಕು ನಾಯಿ “ಮ್ಯಾಕ್ಸ್” ಅಲ್ಲಿತ್ತು. ಗುಂಡುಗಳು ಮಾಲಿಕನತ್ತ ಹರಿದಿರುವುದನ್ನು ಗಮನಿಸಿದ ಮ್ಯಾಕ್ಸ್ ಮುಂದೆ ಜಿಗಿದಿದೆ. ಈ ವೇಳೆ ವಿಶಾಲ್ ಬದಲಿಗೆ ಮ್ಯಾಕ್ಸ್‌ಗೆ ಗುಂಡು ತಗುಲಿದೆ. ಇದಾದ ಬಳಿಕ ಕಂಗಾಲಾದ ಅನಿಲ್ ವರ್ಮಾ ಓಡಿ ಹೋಗಿದ್ದಾರೆ.


ಚಿಕಿತ್ಸೆ ನೀಡಿದರೂ ಬದುಕಲಿಲ್ಲ ನಾಯಿ


ಬುಲೆಟ್‌ ಮ್ಯಾಕ್ಸ್‌ನ ದೇಹದೊಳಕ್ಕೆ ಹೊಕ್ಕಿದೆ. ತೀವ್ರ ರಕ್ತಸ್ರಾವದಿಂದ ಮ್ಯಾಕ್ಸ್ ಒದ್ದಾಡಿದೆ. ಕೂಡಲೇ ಮನೆಯವರು  ನಾಯಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯದ್ದಿದ್ದಾರೆ. ಆದರೆ  ಕೆಲವೇ ಗಂಟೆಗಳ ನಂತರ ಚಿಕಿತ್ಸೆ ಫಲಕಾರಿಯಾಗದೇ ಮ್ಯಾಕ್ಸ್ ಕೊನೆಯುಸಿರೆಳೆದಿದೆ.


ಇದನ್ನೂ ಓದಿ: World Pest Day 2022: ವಿಶ್ವ ಕೀಟ ದಿನದ ಇತಿಹಾಸ, ಮಹತ್ವ, ಆಚರಣೆ ಮತ್ತು ಈ ಬಾರಿಯ ಥೀಮ್ ಬಗ್ಗೆ ತಿಳಿಯಿರಿ


ನಾಯಿ ಹತ್ಯೆ ಮಾಡಿದವನ ವಿರುದ್ಧ ಶ್ವಾನದ ಮಾಲೀಕನಿಂದ ದೂರು


ಇನ್ನು ಶೂಟೌಟ್‌ ಹಾಗೂ ನಾಯಿ ಹತ್ಯೆಗೆ ಸಂಬಂಧಿಸಿದಂತೆ ಅನಿಲ್ ವರ್ಮಾ ವಿರುದ್ಧ ವಿಶಾಲ್ ಶ್ರೀವಾಸ್ತವ್ ಸ್ಠಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಶಾಲ್ ಶ್ರೀವಾಸ್ತವ್ ದೂರಿನ ಮೇರೆಗೆ ಅನಿಲ್ ವರ್ಮಾ ವಿರುದ್ಧ ಪ್ರಕರಣ ದಾಖಲಾಗಿದೆ. ಪೋರ್ಟ್‌ಮಾರ್ಟಂ ವರದಿಯ ನಂತರ ಆರೋಪಿ ಅನಿವ್ ವರ್ಮಾನನ್ನು ವಿಚಾರಣೆ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.

Published by:Annappa Achari
First published: