ರಾಜ್​ ಕುಂದ್ರಾಗೆ ಹೆಚ್ಚಿದ ಸಂಕಷ್ಟ; ಅಕ್ರಮ ಹಣ ವರ್ಗಾವಣೆ ಕೇಸ್​ ದಾಖಲಿಸಲಿದೆಯೇ ಜಾರಿ ನಿರ್ದೇಶನಾಲಯ?

ಬಾಲಿವುಡ್ ಚಲನಚಿತ್ರಗಳಲ್ಲಿ ಪಾತ್ರಗಳನ್ನು ಕೊಡಿಸುವ ಭರವಸೆ ನೀಡಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅವಕಾಶ  ಸಿಗಬೇಕಾದರೆ  ಅಶ್ಲೀಲ ಚಿತ್ರಗಳಲ್ಲಿ ಕಾಣಿಸಿಕೊಳ್ಳ ಬೇಕು ಎಂದು ಒತ್ತಾಯಿಸಲಾಗಿತ್ತು ಎಂದು ಆರೋಪಿಸಿ ಮಹಿಳಾ ನಟಿಯರು ಪೊಲೀಸರಿಗೆ ದೂರು ನೀಡಿದ್ದಾರೆ.

ಶಿಲ್ಪಾ ಶೆಟ್ಟಿ -ರಾಜ್​ ಕುಂದ್ರಾ

ಶಿಲ್ಪಾ ಶೆಟ್ಟಿ -ರಾಜ್​ ಕುಂದ್ರಾ

 • Share this:
  ರಾಜ್ ಕುಂದ್ರಾ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ  ಮತ್ತು ಅಶ್ಲೀಲ ಚಿತ್ರಗಳ ದಂಧೆಯಲ್ಲಿ ಗಳಿಸಿದ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಬಹುದು ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

  ಜುಲೈ 20 ರಂದು ಮುಂಬೈ ಪೊಲೀಸರು ಅಶ್ಲೀಲ ಚಿತ್ರಗಳ ದಂಧೆಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಬಿಲಿಯನೇರ್ ರಾಜ್ ಕುಂದ್ರಾ ಅವರನ್ನು ಬಂಧಿಸಿದ್ದರು. ಕುಂದ್ರಾ ಅವರ ಸಂಬಂಧಿ ಒಡೆತನದಲ್ಲಿ ಇರುವ ಹಾಟ್​ಶಾಟ್ಸ್​  ಕಂಪನಿಯು ಆನ್‌ಲೈನ್ ಮೂಲಕ ಅಶ್ಲೀಲ ಚಿತ್ರಗಳನ್ನು ಬಿತ್ತರಿಸುತ್ತಿತ್ತು, ಹಾಗೂ ಈ ದಂಧೆಯನ್ನು ಲಂಡನ್ ಮೂಲದ ಸಂಸ್ಥೆಯ ಸಹಯೋಗದೊಂದಿಗೆ ಸೇರಿ ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಕುಂದ್ರಾ ಅವರನ್ನು ಜುಲೈ 23 ರವರೆಗೆ ಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿತ್ತು, ಈ ದಿನಾಂಕವನ್ನು ಈಗ ಜುಲೈ 27 ಕ್ಕೆ ವಿಸ್ತರಿಸಲಾಗಿದೆ.

  ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಪ್ರಕರಣದ ಹಲವಾರು ಕುತುಹಲಕಾರಿ ಅಂಶಗಳು ಹೊರಬರುತ್ತಿದ್ದು. ಪೊಲೀಸರ ಪ್ರಕಾರ, ಕುಂದ್ರಾ ಮತ್ತು ಅವರ ಸಹೋದ್ಯೋಗಿಗಳು ಅಶ್ಲೀಲ ಚಲನಚಿತ್ರಗಳನ್ನು ಮೋಸ ಮಾಡಿ ತಯಾರಿಸುತ್ತಿದ್ದರು ಎಂದು ಹೇಳಲಾಗಿದೆ. ಬಾಲಿವುಡ್ ಚಲನಚಿತ್ರಗಳಲ್ಲಿ ಪಾತ್ರಗಳನ್ನು ಕೊಡಿಸುವ ಭರವಸೆ ನೀಡಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅವಕಾಶ  ಸಿಗಬೇಕಾದರೆ  ಅಶ್ಲೀಲ ಚಿತ್ರಗಳಲ್ಲಿ ಕಾಣಿಸಿಕೊಳ್ಳ ಬೇಕು ಎಂದು ಒತ್ತಾಯಿಸಲಾಗಿತ್ತು ಎಂದು ಆರೋಪಿಸಿ ಮಹಿಳಾ ನಟಿಯರು ಪೊಲೀಸರಿಗೆ ದೂರು ನೀಡಿದ್ದಾರೆ.

  ಹಣಕಾಸಿನ ವ್ಯವಹಾರಗಳ ಕುರಿತು ತನಿಖೆ ಮಾಡಲಾಗುತ್ತಿದ್ದು, ಜಾರಿ ನಿರ್ದೇಶನಾಲಯವು ಪ್ರತ್ಯೇಕ ತನಿಖೆಯನ್ನು ಪ್ರಾರಂಭಿಸಬಹುದು ಎಂದು ವರದಿಯಾಗಿದೆ. ಕುಂದ್ರಾ ಅವರ ಬಹುಪಾಲು ವಹಿವಾಟುಗಳು ವಿದೇಶಿ ಕಂಪನಿಗಳೊಂದಿಗೆ ಇದ್ದುದರಿಂದ, ಇ.ಡಿ ಕುಂದ್ರಾ ಅವರ ವಿರುದ್ಧ ಫೆಮಾ ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಬಹುದು ಎಂದು ಹೇಳಲಾಗಿದೆ.

  ಫೆಮಾ ಮತ್ತು ಪಿಎಂಎಲ್‌ಎ ನಡುವಿನ ವ್ಯತ್ಯಾಸವೇನು?

  ಅಂತರರಾಷ್ಟ್ರೀಯ ವ್ಯಾಪಾರ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ,  ಪಾವತಿ ಮತ್ತು ಇತರ ವಿಷಯಗಳು ಈ ಕಾಯ್ದೆಯ ಅಡಿಯಲ್ಲಿ ಬರುತ್ತವೆ. ಗೊತ್ತು ಗುರಿ ಇಲ್ಲದ, ಅಕ್ರಮವಾಗಿ ಸಂಪಾದಿಸುವ ಹಾಗೂ ವಿದೇಶಿ ಮೂಲದಿಂದ ಬರುವ ಹಣ ಸೇರಿದಂತೆ, ವಿನಿಮಯಕ್ಕೆ ಸಂಬಂಧಿಸಿದ ಅಪರಾಧಗಳನ್ನು ಈ ಕಾಯ್ದೆಯಡಿ ಅಕ್ರಮ ಎಂದು ಪರಿಗಣಿಸಲಾಗಿದೆ.

  ಇದನ್ನೂ ಓದಿ: Heavy rain in Karnataka: ತತ್ತರಿಸಿದ ಉತ್ತರ ಕನ್ನಡ; ಕಾಳಿ‌ ನದಿ‌ ಮುನಿಸಿಗೆ ಹತ್ತಾರು ಗ್ರಾಮಗಳು ಜಲಾವೃತ

  ಈ ಕಾಯ್ದೆಯ ಉದ್ದೇಶ, ಹೆಸರೇ ಸೂಚಿಸುವಂತೆ, ಅಕ್ರಮ ಹಣ ವರ್ಗಾವಣೆಯನ್ನು ತಡೆಯುವುದು. ಈ ಕಾಯ್ದೆಯಡಿ ಅಕ್ರಮವಾಗಿ ಗಳಿಸಿದ ಆಸ್ತಿಯನ್ನು ಸರ್ಕಾರ ವಶಪಡಿಸಿಕೊಳ್ಳಬಹುದು.

   ರಾಜ್ ಕುಂದ್ರಾ ವಿರುದ್ಧ ಯಾವ ಆರೋಪಗಳನ್ನು ಹೊರಿಸಲಾಗಿದೆ?

  ರಾಜ್ ಕುಂದ್ರಾ ಅವರು 119 ಕಾಮಪ್ರಚೋದಕ ವೀಡಿಯೊಗಳನ್ನು ವಿದೇಶಿ ವಿತರಕರಿಗೆ 1.2 ಮಿಲಿಯನ್​ ಹಣಕ್ಕೆ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಕ್ರೀಡಾ ಬೆಟ್ಟಿಂಗ್ ಸಂಸ್ಥೆಯೊಂದು ಈ ಹಣವನ್ನು ಕುಂದ್ರಾ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದು. ಈ ಹಣ ಹಾಟ್‌ಶಾಟ್‌ ಆ್ಯಪ್ ಮೂಲಕ ಪಡೆದ ಹಣವಾಗಿರಬಹುದು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: