ದೆಹಲಿ ಗಲಭೆಯ ತನಿಖೆ ಪಕ್ಷಪಾತಿಯಾಗಿದೆ, ನ್ಯಾಯಯುತ ತನಿಖೆ ನಡೆಸಿ; ಮಾಜಿ IPS ಅಧಿಕಾರಿಗಳಿಂದ ಕೇಂದ್ರಕ್ಕೆ ಪತ್ರ

ದೆಹಲಿ ಗಲಭೆಯ ಕುರಿತು ನ್ಯಾಯಯುತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ದೆಹಲಿಯ ಪೊಲೀಸ್ ಕಮಿಷನರ್‌ ಎಸ್‌.ಎನ್. ಶ್ರೀವಾಸ್ತವ ಅವರಿಗೆ ದೇಶದಾದ್ಯಂತ ಇರುವ 9 ಜನ ಮಾಜಿ ಐಪಿಎಸ್ ಅಧಿಕಾರಿಗಳು ಪತ್ರ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.

ದೆಹಲಿ ಹಿಂಸಾಚಾರದ ದೃಶ್ಯ.

ದೆಹಲಿ ಹಿಂಸಾಚಾರದ ದೃಶ್ಯ.

  • Share this:
ನವ ದೆಹಲಿ (ಸೆಪ್ಟೆಂಬರ್‌ 15); ಕಳೆದ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಸಿಎಎ ಪರ-ವಿರೋಧ ಹೋರಾಟ ಕೊನೆಗೆ ಹಿಂಸಾಚಾರಕ್ಕೆ ಕಾರಣವಾಗಿತ್ತು. ಈಶಾನ್ಯ ದೆಹಲಿಯಲ್ಲಿ ಕಾಣಿಸಿಕೊಂಡ ಈ ಹಿಂಸಾಚಾರಕ್ಕೆ ನೂರಾರು ಜನ ಬಲಿಯಾಗಿದ್ದರು. ಸಾಕಷ್ಟು ಆಸ್ತಿ-ಪಾಸ್ತಿ ನಷ್ಟವಾಗಿತ್ತು. ಒಂದು ವಾರಕ್ಕೂ ಹೆಚ್ಚು ಕಾಲ ಹಿಡಿತಕ್ಕೆ ಸಿಗದಂತೆ ನಡೆದ ಈ ಹಿಂಸಾಚಾರದಲ್ಲಿ ಸಂಕಷ್ಟಕ್ಕೆ ಒಳಗಾದ ಜನರ ಬದುಕು ಈವರೆಗೆ ಹಳಿಗೆ ಮರಳಿಲ್ಲ. ಇನ್ನೂ ಕೊಲೆಗೀಡಾದವರ ಮನೆಯ ಕಥೆಯನ್ನು ಹೇಳದೇ ಇರುವುದು ಸೂಕ್ತ. ಇಡೀ ರಾಷ್ಟ್ರ ರಾಜಧಾನಿಯನ್ನೇ ನಡುಗಿಸಿದ್ದ ಈ ಹಿಂಸಾಚಾರದ ಕುರಿತು ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಅನುಮಾನಗಳಿವೆ, ಪ್ರಶ್ನೆಗಳಿವೆ. ಹೀಗಾಗಿ ಈ ದೆಹಲಿ ಗಲಭೆಯ ಕುರಿತು ನ್ಯಾಯಯುತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ದೆಹಲಿಯ ಪೊಲೀಸ್ ಕಮಿಷನರ್‌ ಎಸ್‌.ಎನ್. ಶ್ರೀವಾಸ್ತವ ಅವರಿಗೆ ದೇಶದಾದ್ಯಂತ ಇರುವ 9 ಜನ ಮಾಜಿ ಐಪಿಎಸ್ ಅಧಿಕಾರಿಗಳು ಪತ್ರ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.

ದೆಹಲಿ ಗಲಭೆಗಳಿಗೆ ಸಂಬಂಧಿಸಿದಂತೆ ನಿಸ್ಪಕ್ಷಪಾತ ಮತ್ತು ನ್ಯಾಯಯುತವಾದ ತನಿಖೆಗೆ ಆಗ್ರಹಿಸಿ ಬರೆಯಲಾಗಿರುವ ಪತ್ರದಲ್ಲಿ, "ಈ ಗಲಭೆಗಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನ್ಯಾಯಾಲಯದಲ್ಲಿ ಸಲ್ಲಿಸಿರುವ ಚಾರ್ಜ್‌‌ಶೀಟ್‌ ಮತ್ತು ಪ್ರಕರಣದ ಮಾಹಿತಿಗಳು ಪಕ್ಷಪಾತಿ ಮತ್ತು ರಾಜಕೀಯ ಪ್ರೇರಿತ ಎಂಬುದು ಭಾರತೀಯ ಪೊಲೀಸರ ಇತಿಹಾಸದಲ್ಲಿ ನಿಜಕ್ಕೂ ದುಃಖದ ದಿನ ಎಂದು ನಾವು ಹೇಳಲು ಬಯಸುತ್ತೇವೆ. ಕಾನೂನಿನ ನಿಯಮ ಮತ್ತು ನಮ್ಮ ಸಂವಿಧಾನವನ್ನು ಎತ್ತಿಹಿಡಿಯುವಲ್ಲಿ ನಂಬಿಕೆ ಇಟ್ಟಿರುವ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ, ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತರಾಗಿರುವವರಿಗೆ ಇದು ನೋವುಂಟು ಮಾಡಿದೆ” ಎಂದು ಪತ್ರದಲ್ಲಿ ಬರೆಯಲಾಗಿದೆ.

“ನಿಮ್ಮಲ್ಲಿರುವ ವಿಶೇಷ ಆಯುಕ್ತರೊಬ್ಬರು, ತಮ್ಮ ಸಮುದಾಯಕ್ಕೆ ಸೇರಿದ ಕೆಲವು ಗಲಭೆಕೋರರ ಬಂಧನದಿಂದ ಹಿಂದೂಗಳಿಗೆ ಅಸಮಾಧಾನ ಉಂಟಾಗುತ್ತದೆ ಎಂಬ ಕಾರಣಕ್ಕೆ, ತನಿಖೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿರುವುದರ ಬಗ್ಗೆ ನಮಗೆ ವಿಷಾದವಿದೆ. ಪೊಲೀಸ್ ನಾಯಕತ್ವದಲ್ಲಿನ ಬಹುಸಂಖ್ಯಾತರ ಪರವಾದ ಮನೋಭಾವವು, ಹಿಂಸಾಚಾರಕ್ಕೆ ಒಳಗಾದವರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ, ಅಲ್ಪಸಂಖ್ಯಾತ ಸಮುದಾಯಗಳಿಗೆ ನ್ಯಾಯ ನೀಡುವಲ್ಲಿ ಪಕ್ಷಪಾತ ಮಾಡುತ್ತದೆ. ಹಾಗಾಗಿ ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ ಮತ್ತು ಹಿಂಸಾಚಾರದಲ್ಲಿ ಭಾಗಿಯಾದ ನಿಜವಾದ ಅಪರಾಧಿಗಳು ವಿನಾಯಿತಿ ಪಡೆಯುವ ಸಾಧ್ಯತೆಯಿದೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆಗಳಲ್ಲಿ ಮಾತನಾಡಿದ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲರನ್ನೂ ನಾವು ಹೆಚ್ಚು ನೋಯಿಸುತ್ತಿದ್ದೇವೆ. ಸಂವಿಧಾನದ ಪ್ರಕಾರ, ಅವರು ತಮ್ಮ ವಾಕ್ ಸ್ವಾತಂತ್ರ್ಯ ಮತ್ತು ಶಾಂತಿಯುತ ಪ್ರತಿಭಟನೆಯ ಮೂಲಭೂತ ಹಕ್ಕುಗಳನ್ನು ಚಲಾಯಿಸುತ್ತಿದ್ದರು. ದೃಢವಾದ ಸಾಕ್ಷ್ಯಾಧಾರಗಳನ್ನು ಅವಲಂಬಿಸದೇ ನಡೆಯುವ ತನಿಖೆಗಳು ನ್ಯಾಯಯುತ ತನಿಖೆಯ ತತ್ವಗಳನ್ನು ಉಲ್ಲಂಘಿಸುತ್ತದೆ. ಸಿಎಎ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ನಾಯಕರು ಮತ್ತು ಕಾರ್ಯಕರ್ತರನ್ನು ಒಳಗೊಳ್ಳುವಾಗ, ಹಿಂಸಾಚಾರವನ್ನು ಪ್ರಚೋದಿಸಿದ ಮತ್ತು ಆಡಳಿತ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಎಲ್ಲರನ್ನು ಗಾಳವಾಗಿ ಮಾಡಿಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ : PAF Aircraft Crash: ಪಾಕಿಸ್ತಾನ ವಾಯುಪಡೆಯ ತರಬೇತಿ ವಿಮಾನ ಪತನ; ಜಿಗಿದು ಜೀವ ಉಳಿಸಿಕೊಂಡ ಪೈಲಟ್

"ಇಂತಹ ತನಿಖೆಯು, ಪ್ರಜಾಪ್ರಭುತ್ವ, ನ್ಯಾಯ ಮತ್ತು ಸಂವಿಧಾನದ ಮೇಲೆ ಜನರು ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಇದು ಒಂದು ಕ್ರಮಬದ್ಧ ಸಮಾಜದ ಅಡಿಪಾಯವನ್ನು ಅಲ್ಲಾಡಿಸಿ, ಕಾನೂನು ಸುವ್ಯವಸ್ಥೆಯ ವಿಘಟನೆಗೆ ಕಾರಣವಾಗುವ ಅಪಾಯಕಾರಿ ಚಿಂತನೆಯಾಗಿದೆ. ಆದ್ದರಿಂದ, ಎಲ್ಲಾ ಗಲಭೆ ಪ್ರಕರಣಗಳನ್ನು ನ್ಯಾಯಯುತವಾಗಿ ಮತ್ತು ಅಪರಾಧ ತನಿಖೆಯ ಉತ್ತಮ ತತ್ವಗಳ ಆಧಾರದ ಮೇಲೆ, ಯಾವುದೇ ಪಕ್ಷಪಾತವಿಲ್ಲದೆ, ಬಲಿಪಶುಗಳಿಗೆ ಮತ್ತು ಅವರ ಕುಟುಂಬಗಳಿಗೆ ನ್ಯಾಯ ಒದಗಿಸಲು ಹಾಗೂ ಕಾನೂನಿನ ನಿಯಮವನ್ನು ಎತ್ತಿಹಿಡಿಯಲು ನಾವು ಮನಃಪೂರ್ವಕವಾಗಿ ವಿನಂತಿಸುತ್ತೇವೆ" ಎಂದು ಪತ್ರದಲ್ಲಿ ಕೋರಲಾಗಿದೆ.

ಶಫಿ ಆಲಂ (ಮಾಜಿ ಮಹಾನಿರ್ದೇಶಕರು, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ), ಕೆ.ಸಲೀಮ್ ಅಲಿ (ಸಿಬಿಐ ಮಾಜಿ ವಿಶೇಷ ನಿರ್ದೇಶಕರು), ಮೊಹಿಂದರ್‌ಪಾಲ್ ಆಲಾಕ್ (ಮಾಜಿ ಪೊಲೀಸ್ ಮಹಾನಿರ್ದೇಶಕರು, ಪಂಜಾಬ್), ಎ.ಎಸ್. ದುಲಾತ್ (ಕಾಶ್ಮೀರದ ಮಾಜಿ ಒಎಸ್‌ಡಿ, ಪ್ರಧಾನ ಮಂತ್ರಿ ಕಚೇರಿ), ಅಲೋಕ್ ಬಿ. ಜನರಲ್ ಆಫ್ ಪೊಲೀಸ್, ಸಿಕ್ಕಿಂ), ಅಮಿತಾಬ್ ಮಾಥುರ್ (ವಿಮಾನಯಾನ ಸಂಶೋಧನಾ ಕೇಂದ್ರದ ಮಾಜಿ ನಿರ್ದೇಶಕ ಮತ್ತು ಕ್ಯಾಬಿನೆಟ್ ಸಚಿವಾಲಯದ ಮಾಜಿ ವಿಶೇಷ ಕಾರ್ಯದರ್ಶಿ), ಅವಿನಾಶ್ ಮೋಹನನೆ (ಮಾಜಿ ಪೊಲೀಸ್ ಮಹಾನಿರ್ದೇಶಕ, ಸಿಕ್ಕಿಂ), ಪಿಜಿಜೆ ನಂಬೂತಿರಿ (ಮಾಜಿ ಪೊಲೀಸ್ ಮಹಾನಿರ್ದೇಶಕರು, ಗುಜರಾತ್) ಮತ್ತು ಎ.ಕೆ. ಸಮಂತಾ (ಮಾಜಿ ಪೊಲೀಸ್ ಮಹಾನಿರ್ದೇಶಕರು ಪಶ್ಚಿಮ ಬಂಗಾಳ) ಈ ಪತ್ರಕ್ಕೆ ಸಹಿ ಮಾಡಿದ್ದಾರೆ.
Published by:MAshok Kumar
First published: