ಬಿಜೆಪಿ ಶಾಸಕರಿಂದ ಹೆಣ್ಮಕ್ಕಳನ್ನು ರಕ್ಷಿಸಬೇಕು: ಮಹಿಳಾ ಅಧಿಕಾರ ಸಮ್ಮೇಳನದಲ್ಲಿ ರಾಹುಲ್​ ಮಾತು!


Updated:August 7, 2018, 6:40 PM IST
ಬಿಜೆಪಿ ಶಾಸಕರಿಂದ ಹೆಣ್ಮಕ್ಕಳನ್ನು ರಕ್ಷಿಸಬೇಕು: ಮಹಿಳಾ ಅಧಿಕಾರ ಸಮ್ಮೇಳನದಲ್ಲಿ ರಾಹುಲ್​ ಮಾತು!

Updated: August 7, 2018, 6:40 PM IST
ನ್ಯೂಸ್​ 18 ಕನ್ನಡ

ನವದೆಹಲಿ(ಆ.07): ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರದಂದು ನಡೆದ ಮಹಿಳಾ ಕಾಂಗ್ರೆಸ್​ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ, ಮಹಿಳಾ ಸುರಕ್ಷತೆಯಂತಹ ವಿಚಾರಗಳನ್ನು ಮುಂದಿಟ್ಟುಕೊಂಡು ಕೇಂದ್ರದ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯ ತಾಲ್​ಕಟೋರಾ ಇಂಡೋರ್​ ಸ್ಟೇಡಿಯಂನಲ್ಲಿ ಮಹಿಳಾ ಕಾಂಗ್ರೆಸ್​ನ ಕಾರ್ಯಕ್ರಮ 'ಮಹಿಳಾ ಅಧಿಕಾರ ಸಮ್ಮೆಳನವನ್ನುದ್ದೇಶಿಸಿ ಮಾತನಾಡುತ್ತಾ "ಬಿಜೆಪಿಯು ಉದ್ದುದ್ದ ಭಾಷಣಗಳನ್ನು ಮಾಡುತ್ತಾ ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಕಾಕಾರ್ಯಕ್ರಮವನ್ನು ಆರಂಭಿಸಿತು. ಹೆಣ್ಮಕ್ಕಳ ರಕ್ಷಣೆಗಾಗಿ ಪ್ರತಿಯೊಂದು ಜಿಲ್ಲೆಗೂ 40 ಲಕ್ಷ ರೂಪಾಯಿ ನೀಡಲಾಯಿತು. ಆದರೆ ಆಗಿದ್ದೇನು? ಮುಜಫ್ಫರ್​ಪುರ್​ ಶೆಲ್ಟರ್​ ಹೋಂ ಪ್ರಕರಣವನ್ನು ಗಮನಿಸಿದರೆ ವಾಸ್ತವತೆ ತಿಳಿಯುತ್ತದೆ. ಸದ್ಯ ಹೆಣ್ಮಕ್ಕಳನ್ನು ಬಿಜೆಪಿ ಶಾಸಕರಿಂದ ಕಾಪಾಡಬೇಕಾದ ಪರಿಸ್ಥಿತಿ ಬಂದೊದಗಿದೆ" ಎಂದಿದ್ದಾರೆ.

ಪ್ರಧಾನಿ ಮೋದಿ ಹಾಗೂ ಆರ್​ಎಸ್​ಎಸ್​ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್​ ಗಾಂಧಿ 'ಆರ್​ಎಸ್​ಎಸ್​ನಲ್ಲಿ ಒಬ್ಬ ಮಹಿಳೆಯೂ ಸದಸ್ಯೆಯಾಗಿಲ್ಲ. ಯಾಕೆಂದರೆ ಆ ಸಂಘಟನೆಯಲ್ಲಿ ಮಹಿಳೆಯರಿಗೆ ಬಾಗಿಲು ಮುಚ್ಚಿದೆ' ಎಂದಿದ್ದಾರೆ. ಅಲ್ಲದೇ 'ಪ್ರಧಾನಿ ನರೇಂದ್ರ ಮೋದಿ ಹಲವಾರು ವಿಚಾರಗಳ ಕುರಿತಾಗಿ ಮಾತನಾಡುತ್ತಾರೆ. ಆದರೆ ಅತ್ಯಾಚಾರ ಪ್ರಕರಣಗಳು ನಡೆದಾಗ ಮೌನ ವಹಿಸುತ್ತಾರೆ' ಎಂದೂ ದೂರಿದ್ದಾರೆ."ಮೋದಿ ಸರ್ಕಾರ ಕಳೆದ 4 ವರ್ಷಗಳಲ್ಲಿ ಮಹಿಳೆಯರ ವಿರುದ್ಧ ಏನೆಲ್ಲಾ ಮಾಡಿದೆಯೋ, ಅದೆಲ್ಲವೂ ಕಳೆದ 70 ವರ್ಷವಲ್ಲ.. 3000 ವರ್ಷಗಳಲ್ಲೂ ನಡೆದಿಲ್ಲ. ಅವರು ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರಷ್ಟೇ... ಆದರೆ ಕಾಂಗ್ರೆಸ್​ ಪಕ್ಷವು ಸಂಸತ್ತಿನಲ್ಲಿ ಮಹಿಳಾ ಮೀಸಲಾತಿಯನ್ನು ಮುಕ್ತವಾಗಿ ಸಮರ್ಥಿಸಿಕೊಂಡಿದೆ" ಎಂದು ರಾಹುಲ್​ ಗಾಂಧಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಕೆಲ ಆಶ್ವಾಸನೆಗಳನ್ನು ನೀಡಿದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಮುಂಬರುವ ದಿನಗಳಲ್ಲಿ ಕಾಂಗ್ರೆಸ್​ನಲ್ಲಿ ಮಹಿಳಾ ಪಾಲುದಾರಿಕೆ ಹೆಚ್ಚಾಗಲಿದೆ. ಅವರಿಗೆ ಮಹತ್ವಪೂರ್ಣ ಜವಾಬ್ದಾರಿಗಳನ್ನು ನೀಡಲಾಗುತ್ತದೆ ಎಂದಿದ್ದಾರೆ. ಇನ್ನು ಮಹಿಳಾ ಮೀಸಲಾತಿ ವಿಚಾರದ ಕುರಿತಾಗಿ ಮಾತನಾಡಿದ ರಾಹುಲ್​ ಗಾಂಧಿ "ಒಂದು ವೇಳೆ ಬಿಜೆಪಿಯು ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದರೆ ಕಾಂಗ್ರೆಸ್​ ಅದನ್ನು ಸಮರ್ಥಿಸುತ್ತದೆ. ಒಂದು ವೇಳೆ ಬಿಜೆಪಿ ಇದನ್ನು ಮಾಡದಿದ್ದಲ್ಲಿ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್​ ಅಧಿಕಾರ ಪಡೆದುಕೊಂಡರೆ ಮಹಿಳಾ ಮೀಸಲಾತಿ ಮಸೂದೆಯನ್ನು ಪಾಸ್​ ಮಾಡುತ್ತೇವೆಂದೂ" ಈ ಸಂದರ್ಭದಲ್ಲಿ ಹೇಳಿದ್ದಾರೆ.
ಈ ಸಮ್ಮೇಳನದಲ್ಲಿ ರಾಹುಲ್​ ಗಾಂಧಿ ಮಹಿಳಾ ಕಾಂಗ್ರೆಸ್​ನ ನೂತನ ಧ್ವಜವನ್ನು ಅನಾವರಣಗೊಳಿಸಿದ್ದಾರೆ. ಕಾಂಗ್ರೆಸ್​ನ ಇತರ ಪ್ರಮುಖ ಸಂಘಟನೆಗ:ಳಿಗೆ ತಮ್ಮದೇ ಆದ ಲಾಂಛನ ಹಾಗೂ ಧ್ವಜವಿದೆ ಆದರೆ ಮಹಿಳಾ ಕಾಂಗ್ರೆಸ್​ಗೆ ಧ್ವಜವಿರಲಿಲ್ಲ.

 
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ