Property Dispute: ಹಾಸಿಗೆ ಹಿಡಿದ ತಂದೆಗೆ ಆಕ್ಸಿಜನ್ ಕೊಡೋದಕ್ಕೆ ಒಪ್ಪದ ಮಗಳು! ಜೀವಕ್ಕಿಂತ ಆಸ್ತಿನೇ ಹೆಚ್ಚಾಯ್ತಾ ಇವಳಿಗೆ?

ಆಕ್ಸಿಜನ್ ಸಿಲಿಂಡರ್ (Oxygen Cylinder) ತಂದ ಮಗಳು, ಅದನ್ನು ತಂದೆಗೆ ನೀಡಲು ನಿರಾಕರಿಸಿದ್ದಾಳೆ. ಅದಕ್ಕೆ ಕಾರಣ ಆಸ್ತಿ ವಿವಾದ (Property Dispute) ಅಂತ ತಿಳಿದರೆ ನಿಮಗೆ ಆಘಾತವಾಗೋದ್ರಲ್ಲಿ ಡೌಟೇ ಇಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೇರಳ: ಹಣ (Money) ಅಂದ್ರೆ ಹೆಣ (Dead Body) ಕೂಡ ಬಾಯಿ ಬಿಡುತ್ತೆ ಎನ್ನುವುದು ಹಳೆ ಗಾದೆ. ಈಗ ಆಸ್ತಿ (Property) ಅಂದ್ರೆ ಹೆಣದ ಮುಂದೂ ಮನುಷ್ಯರು ಕಿತ್ತಾಡ್ತಾರೆ ಎನ್ನುವುದು ಹೊಸ ಗಾದೆ! ಇಲ್ಲಿ ಆಸ್ತಿಗಾಗಿ ಹೊತ್ತು ಬೆಳೆಸಿದ, ಕೈತುತ್ತು ತಿನ್ನಿಸಿ ಮುದ್ದು ಮಾಡಿದ, ಬದುಕನ್ನೇ ಕಟ್ಟಿಕೊಟ್ಟ ತಂದೆ (Father) ಮುಂದೆ ಆತ ಹೆತ್ತ ಮಗಳೇ (Daughter) ರಾಕ್ಷಸಿಯಂತೆ ವರ್ತಿಸಿದ್ದಾಳೆ. 85 ವರ್ಷದ ತಂದೆ ಅನಾರೋಗ್ಯದಿಂದ (illness) ಆಸ್ಪತ್ರೆ (Hospital) ಸೇರಿದ್ದರು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಅವರಿಗೆ ಶೀಘ್ರವೇ ಆಕ್ಸಿಜನ್ (Oxygen) ಬೇಕು ಅಂತ ವೈದ್ಯರು (Doctor) ಹೇಳಿದ್ದರು. ಆದರೆ ಆಕ್ಸಿಜನ್ ಸಿಲಿಂಡರ್ (Oxygen Cylinder) ತಂದ ಮಗಳು, ಅದನ್ನು ತಂದೆಗೆ ನೀಡಲು ನಿರಾಕರಿಸಿದ್ದಾಳೆ. ಅದಕ್ಕೆ ಕಾರಣ ಆಸ್ತಿ ವಿವಾದ (Property Dispute) ಅಂತ ತಿಳಿದರೆ ನಿಮಗೆ ಆಘಾತವಾಗೋದ್ರಲ್ಲಿ ಡೌಟೇ ಇಲ್ಲ.

ತಂದೆಗೆ ಆಕ್ಸಿಜನ್ ಸಿಲಿಂಡರ್ ನೀಡದ ಮಗಳು

ಕೇರಳದ ನೆಡುಂಕಂಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂಥದ್ದೊಂದು ಅಮಾನವೀಯ ಘಟನೆ ನಡೆದಿದೆ. 85 ವರ್ಷದ ವ್ಯಕ್ತಿಯೊಬ್ಬರು ಹಲವು ವರ್ಷಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಉಸಿರಾಟ ಸಮಸ್ಯೆ ಪರಿಹರಿಸಲು ಸರ್ಕಾರಿ ಆಸ್ಪತ್ರೆಯಿಂದ ಮಾಸಿಕ 500 ರೂಪಾಯಿ ಬಾಡಿಗೆಗೆ ಆಕ್ಸಿಜನ್ ಸಿಲಿಂಡರ್ ವಿತರಿಸಲಾಯಿತು. ಆಸ್ತಿ ಹಂಚಿಕೆಯಾದ ನಂತರ, ತಂದೆಯನ್ನು ಮಗಳು ವಹಿಸಿಕೊಂಡರು. ಆದರೆ ಆಕ್ಸಿಜನ್ ಸಿಲಿಂಡರ್ ಕಳೆದ ಕೆಲ ದಿನಗಳ ಹಿಂದೆ ಮಗಳ ಮನೆಯಲ್ಲಿತ್ತು. ಸಿಲಿಂಡರ್ ಕೊಡುವಂತೆ ಕೇಳಿದಾಗ ಮಗಳು ನಿರಾಕರಿಸಿದ್ದಾಳೆ.

ವೈದ್ಯರ ಮಾತನ್ನೂ ಕೇಳದ ಮಗಳು

1 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಆಕ್ಸಿಜನ್ ಸಿಲಿಂಡರ್‌ಗೆ ನಾನೇ ಗ್ಯಾರಂಟಿ, ಸಿಲಿಂಡರ್ ಹಾಳಾಗಿದ್ದರೆ ಅದರ ಹೊಣೆ ತನ್ನ ಮೇಲಿದೆ ಎನ್ನುತ್ತಾರೆ ಸಿಲಿಂಡರ್ ಇಟ್ಟುಕೊಂಡಿರುವ ಮಗಳು. ಆದರೆ ಆಕ್ಸಿಜನ್ ಸಿಲಿಂಡರ್ ನ ಸಂಪೂರ್ಣ ಜವಾಬ್ದಾರಿ ಹೊರಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮುಂದಾಗಿದ್ದರೂ ಹಸ್ತಾಂತರಿಸಲು ಮುಂದಾಗಿಲ್ಲ.

ಇದನ್ನೂ ಓದಿ: Wife Escape: ನನ್ ಹೆಂಡ್ತಿ ಯಾರೊಟ್ಟಿಗೋ ಓಡಿ ಹೋಗಿದ್ದಾಳೆ, ಹುಡ್ಕಿ ಕೊಡಿ ಪ್ಲೀಸ್! ಪೊಲೀಸರಿಗೆ ನೊಂದ ಗಂಡನ ಮನವಿ

 ಆಸ್ತಿ ವಿವಾದದಿಂದ ಕೆಂಡವಾಗಿದ್ದ ಮಗಳು

ಪೊಲೀಸರು ಹಾಗೂ ಆರೋಗ್ಯ ಇಲಾಖೆ ವೈದ್ಯರು ಮಧ್ಯ ಪ್ರವೇಶಿಸಿ ಸಿಲಿಂಡರ್ ಬಿಡುಗಡೆ ಮಾಡುವಂತೆ ಒತ್ತಾಯಿಸಿದರೂ ಪರಿಹಾರ ಸಿಕ್ಕಿಲ್ಲ. ಇದಕ್ಕೆ ಕಾರಣ ಆಸ್ತಿ ವಿವಾದ ಎನ್ನಲಾಗಿದೆ. ಆಸ್ತಿ ಹಂಚಿಕೆ ಸಂಬಂಧ ನೆಡುಂಕಂಡಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದೇ ದ್ವೇಷಕ್ಕೆ ಕಾರಣ ಎನ್ನಲಾಗಿದೆ. ವೃದ್ಧ ತಂದೆಗೆ 4 ಮಕ್ಕಳಿದ್ದು, ಈ ಪೈಕಿ ಒಬ್ಬ ಮಗಳಿಗೆ ತಮಿಳುನಾಡಿನಲ್ಲಿ ಮದುವೆಯಾಗಿದೆ. ಇನ್ನೊಬ್ಬ ಮಗ ತನ್ನ ತಂದೆಯನ್ನು ನೋಡಿಕೊಳ್ಳಲು ಸಿದ್ಧನಿಲ್ಲ. ಇತ್ತೀಚಿನವರೆಗೂ ಇಬ್ಬರು ಹೆಣ್ಣುಮಕ್ಕಳು ತಮ್ಮ ತಂದೆಯನ್ನು ನೋಡಿಕೊಳ್ಳುತ್ತಿದ್ದರು.

ಕಠಿಣ ಕ್ರಮ ಕೈಗೊಳ್ಳಲು ಪೊಲೀಸರ ನಿರ್ಧಾರ

ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಪೊಲೀಸರು, ಜನಪ್ರತಿನಿಧಿಗಳು ಚರ್ಚೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪರಿಹಾರ ಸಿಗದಿದ್ದರೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.

ಇದನ್ನೂ ಓದಿ: Smriti Irani: ಮಗಳ ವಿರುದ್ಧದ ಆರೋಪಕ್ಕೆ ಕೇಂದ್ರ ಸಚಿವೆ ಗರಂ, ಕಾಂಗ್ರೆಸ್‌ಗೆ ಲೀಗಸ್ ನೋಟಿಸ್ ಕೊಟ್ಟ ಸ್ಮೃತಿ ಇರಾನಿ

 ಆಸ್ತಿಗಾಗಿ ಇಬ್ಬರು ಹೆಂಡತಿಯರ ರೇಸ್!

ಅತ್ತ ತೆಲಂಗಾಣದಲ್ಲಿ ಗಂಡನ ಆಸ್ತಿಗಾಗಿ ಇಬ್ಬರು ಹೆಂಡತಿಯರು ಗಂಡನ ಶವ ಬಿಟ್ಟು, ತಹಶೀಲ್ದಾರ್ ಕಚೇರಿಗೆ ಓಡಿ ಹೋದ ಘಟನೆ ನಡೆದಿತ್ತು.  ಈ ಕಥೆಯ ದುರಂತ ನಾಯಕನ ಹೆಸರು ನರಸಿಂಹಲು. ಇವರು ತೆಲಂಗಾಣ ರಾಜ್ಯದ ಜಗಿತ್ಯಾಲ ಜಿಲ್ಲೆಯ ಕೋರುಟ್ಲ ತಾಲೂಕಿನ ಐಲಾಪೂರ್​ ಗ್ರಾಮದ ನಿವಾಸಿ. ಇಬ್ಬರಿಗೆ ಇಬ್ಬರು ಹೆಂಡತಿಯರಿದ್ದು, ಮೊದಲ ಹೆಂಡತಿ ಬದುಕಿದ್ದಾಗಲೇ ಭಾರತೀ ಎಂಬಾಕೆಯನ್ನು ಎರಡನೇ ವಿವಾಹವಾಗಿದ್ದರು. ನರಸಿಂಹಲು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಮೊದಲನೇ ಪತ್ನಿ ಹಾಗೂ ಮನೆಯವರು ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು. ಈ ವೇಳೆ ವಿಚಾರ ತಿಳಿದ ಅವರ ಎರಡನೇ ಹೆಂಡತಿ ದೌಡಾಯಿಸಿ ಬಂದಿದ್ದಾಳೆ. ಯಾವುದೇ ಕಾರಣಕ್ಕೂ ನನ್ನ ಗಂಡನ ಅಂತ್ಯಕ್ರಿಯೆಗೆ ಅವಕಾಶ ಕೊಡುವುದಿಲ್ಲ ಅಂತ ಪಟ್ಟು ಹಿಡಿದಿದ್ದಳು.
Published by:Annappa Achari
First published: