• Home
  • »
  • News
  • »
  • national-international
  • »
  • Covid Symptoms: ನೀವು ಎಷ್ಟು ವಾಕ್ಸಿನ್‌ ಪಡೆದಿದ್ದೀರಾ ಎಂಬುದರ ಮೇಲೆ ನಿಂತಿದೆ ಕೋವಿಡ್‌ ಗುಣಲಕ್ಷಣ!

Covid Symptoms: ನೀವು ಎಷ್ಟು ವಾಕ್ಸಿನ್‌ ಪಡೆದಿದ್ದೀರಾ ಎಂಬುದರ ಮೇಲೆ ನಿಂತಿದೆ ಕೋವಿಡ್‌ ಗುಣಲಕ್ಷಣ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನೀವು ಯಾವ ಲಕ್ಷಣಗಳ್ನು ಪಡೆಯುತ್ತೀರಿ ಎಂಬುದು ನೀವು ಎಷ್ಟು ಲಸಿಕೆಗಳನ್ನು ಹೊಂದಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಹೇಳಲಾಗುತ್ತಿದೆ.

  • Share this:

ನೀವು ಎಂದಾದರೂ COVIDಗೆ ಒಳಗಾಗಿದ್ದರೆ, ಕೆಮ್ಮು(Cough) , ಸುಸ್ತು(Tierd) ಮತ್ತು ತಲೆನೋವು (Headache) ಒಳಗೊಂಡಿರುವ ವೈರಸ್‌ನ ಲಕ್ಷಣಗಳ ಬಗ್ಗೆ ನಿಮಗೆ ಗೊತ್ತೇ ಇರುತ್ತದೆ. ಆದರೆ ವೈರಸ್ ವಿಕಸನಗೊಂಡಂತೆ ಮತ್ತು ಡೆಲ್ಟಾ (Delta) , ಓಮಿಕ್ರಾನ್‌ (Omicron) ನಂತಹ ಹೊಸ ರೂಪಗಳಲ್ಲಿ ಕಾಣಿಸಿಕೊಂಡ ಹಾಗೇ ಅದರ ಸಾಮಾನ್ಯ ಲಕ್ಷಣಗಳು ಬದಲಾಗಿವೆ. ಈಗ, ನೀವು ಯಾವ ಲಕ್ಷಣಗಳ್ನು ಪಡೆಯುತ್ತೀರಿ ಎಂಬುದು ನೀವು ಎಷ್ಟು ಲಸಿಕೆಗಳನ್ನು ಹೊಂದಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಹೇಳಲಾಗುತ್ತಿದೆ.


ತೀವ್ರ ಅನಾರೋಗ್ಯ ಸಾಧ್ಯತೆಯನ್ನು ಕಡಿಮೆ ಮಾಡುತ್ತೆ ವಾಕ್ಸಿನ್


ನೀವು ಪಡೆಯುವ ಕೋವಿಡ್ ರೋಗಲಕ್ಷಣಗಳು ನೀವು ಎಷ್ಟು ಲಸಿಕೆಗಳನ್ನು ಪಡೆದಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿದೆ ಎಂಬುದು ಹೊಸದಾಗಿ ನಡೆಸಲಾದ ಅಧ್ಯಯನದಿಂದ ತಿಳಿದುಬಂದಿದೆ. ಕೋವಿಡ್ ವಿರುದ್ಧದ ವ್ಯಾಕ್ಸಿನೇಷನ್ ತೆಗೆದುಕೊಳ್ಳುವುದು ನಿಮ್ಮ ತೀವ್ರ ಅನಾರೋಗ್ಯ, ಆಸ್ಪತ್ರೆಗೆ ದಾಖಲು ಮತ್ತು ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ.


ಆದರೆ ಹೊಸ ಸಂಶೋಧನೆಯ ಪ್ರಕಾರ, ನೀವು ಯಾವ ವೈರಸ್‌ನ ಸೌಮ್ಯವಾದ, ಹೆಚ್ಚು ಸಾಮಾನ್ಯ ರೋಗಲಕ್ಷಣಗಳನ್ನು ಪಡೆಯುತ್ತೀರಿ ಎಂಬುದನ್ನು ಸಹ ಇದು ನಿರ್ದೇಶಿಸುತ್ತದೆ. ಹೆಚ್ಚಿನ ಪ್ರಮಾಣದ ಪ್ರಕರಣಗಳು ಇನ್ನೂ ಲಕ್ಷಣರಹಿತವಾಗಿವೆ ಎಂದು ಭಾವಿಸಲಾಗಿದೆ.


ಗಂಭೀರ ಅನಾರೋಗ್ಯಕ್ಕೆ ಒಳಗಾಗುವುದು ಕಡಿಮೆ!


2020 ರಿಂದ ಸುಮಾರು 5 ಮಿಲಿಯನ್ ಭಾಗವಹಿಸುವವರಿಂದ ಡೇಟಾವನ್ನು ಸಂಗ್ರಹಿಸಿರುವ ಜೋ ಹೆಲ್ತ್ ಸ್ಟಡಿ ಅಪ್‌ಡೇಟ್‌ನಲ್ಲಿ, ಇತ್ತೀಚಿನ ವಾರಗಳಲ್ಲಿ ಹೊರಹೊಮ್ಮಿದ ರೋಗಲಕ್ಷಣಗಳನ್ನು ಗುರುತಿಸಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.


ಇಲ್ಲಿ ವ್ಯಾಕ್ಸಿನೇಷನ್ ಸ್ಥಿತಿಯನ್ನು ಅವಲಂಬಿಸಿ ರೋಗಲಕ್ಷಣಗಳು ಭಿನ್ನವಾಗಿರುವುದನ್ನು ಗಮನಿಸಲಾಗಿದೆ. ಈಗಾಗಲೇ ಲಸಿಕೆ ಹೊಂದಿರುವವರು ಕಡಿಮೆ ಅವಧಿಯಲ್ಲಿ ಕಡಿಮೆ ರೋಗಲಕ್ಷಣಗಳನ್ನು ವರದಿ ಮಾಡಿದ್ದಾರೆ, ಅವರು ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗುವುದು ಕಡಿಮೆಯಾಗಿದೆ. ಜೊತೆಗೆ ಹೆಚ್ಚು ವೇಗವಾಗಿ ಗುಣವಾಗುತ್ತಿದ್ದಾರೆ ಎಂದು ಸಂಶೋಧನಾ ತಂಡವು ಹೇಳಿದೆ.


ಇದನ್ನೂ ಓದಿ: ಪುಲಿಟ್ಜರ್ ಪ್ರಶಸ್ತಿ ಸ್ವೀಕರಿಸಲು ಯುಎಸ್‌ಗೆ ಪ್ರಯಾಣಿಸದಂತೆ ಫೋಟೊ ಜರ್ನಲಿಸ್ಟ್‌ಗೆ ತಡೆ


ಸಂಪೂರ್ಣವಾಗಿ ಲಸಿಕೆಯನ್ನು ಪಡೆದವರಲ್ಲಿ ವರದಿಯಾಗಿರುವ ಅತ್ಯಂತ ಸಾಮಾನ್ಯವಾದ ಪ್ರಸ್ತುತ ರೋಗಲಕ್ಷಣಗಳು ಹೀಗಿವೆ.


· ಗಂಟಲು ಕೆರತ


· ಮೂಗು ಸೋರುವುದು


· ಕಟ್ಟಿದ ಮೂಗು


· ನಿರಂತರ ಕೆಮ್ಮು


· ತಲೆನೋವು


ಸಾಂಕ್ರಾಮಿಕ ರೋಗದ ಆರಂಭಿಕ ತಿಂಗಳುಗಳಿಂದ "ಸಾಂಪ್ರದಾಯಿಕ" ಎನ್ನಲಾಗುವ ರೋಗಲಕ್ಷಣಗಳು ವಾಸನೆ ಇಲ್ಲದಿರುವುದು, ಜ್ವರ ಮತ್ತು ಉಸಿರಾಟದ ತೊಂದರೆ, ಎರಡು ಡೋಸ್ ಲಸಿಕೆಗಳನ್ನು ಸ್ವೀಕರಿಸಿದವರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಲಕ್ಷಣಗಳು.


ಇದರಲ್ಲಿ ಕುತೂಹಲಕಾರಿ ಅಂಶವೆಂದರೆ, ಲಸಿಕೆ ಹಾಕಿದ ಮತ್ತು ನಂತರ COVID-19 ಗೆ ಧನಾತ್ಮಕ ಪರೀಕ್ಷೆ ಮಾಡಿದ ಜನರು ಲಸಿಕೆ ಪಡೆದಿಲ್ಲದವರಿಗೆ ಹೋಲಿಸಿದರೆ ಸೀನುವಿಕೆಯನ್ನು ರೋಗಲಕ್ಷಣವಾಗಿ ವರದಿ ಮಾಡುವ ಸಾಧ್ಯತೆಯಿದೆ ಎಂದು ಸಂಶೋಧನಾ ತಂಡ ಹೇಳಿದೆ.


ಇದನ್ನೂ ಓದಿ: ನಮ್ಮ ರಿಷಿ ಸುನಕ್​; ಬೆಂಗಳೂರು ಮತ್ತು ಬ್ರಿಟನ್​ ಪ್ರಧಾನಿ ನಂಟಿನ ಬಗ್ಗೆ ಮೆಲುಕು


ಅಂದಹಾಗೆ, ಕೇವಲ ಒಂದು ಲಸಿಕೆ ಡೋಸ್ ಅನ್ನು ಹೊಂದಿರುವವರಲ್ಲಿ ಇತ್ತೀಚಿನ ಸಾಮಾನ್ಯ ರೋಗಲಕ್ಷಣಗಳು ಸ್ವಲ್ಪ ವಿಭಿನ್ನವಾಗಿವೆ.


· ತಲೆನೋವು


· ಸೋರುವ ಮೂಗು


· ಗಂಟಲು ಕೆರತ


· ಸೀನುವುದು


· ನಿರಂತರ ಕೆಮ್ಮು


ಲಸಿಕೆ ಹಾಕಿಸಿಕೊಳ್ಳದ ಜನರಲ್ಲಿ, ರೋಗಲಕ್ಷಣಗಳು "ಸಾಂಪ್ರದಾಯಿಕ ಮೂಲ ಶ್ರೇಯಾಂಕಕ್ಕೆ ಹೆಚ್ಚು ಗುರುತಿಸಬಲ್ಲವು" ಎಂದು ಅಧ್ಯಯನವು ಹೇಳಿದೆ, ಆದರೂ COVID ಮೊದಲು ಕಾಣಿಸಿಕೊಂಡಾಗಿನಿಂದ ಕೆಲವು ಬದಲಾವಣೆಗಳಿವೆ ಎಂದು ಅವರು ಒಪ್ಪಿಕೊಂಡಿದ್ದಾರೆ.


ಆರೋಗ್ಯವಂತರಾಗಿದ್ದರೆ ಅದರ ಅಪಾಯ ಕಡಿಮೆ!


ಜೊಯಿ ಅಧ್ಯಯನದ ಪ್ರಕಾರ ನೀವು ಕೋವಿಡ್ ಲಸಿಕೆಯನ್ನು ಹೊಂದಿಲ್ಲದಿದ್ದರೆ, ತಲೆನೋವು, ಗಂಟಲು ಕೆರತ, ಸೋರುವ ಮೂಗು, ಜ್ವರ, ನಿರಂತರ ಕೆಮ್ಮು ಇಂಥ ಗುಣಲಕ್ಷಣಗಳನ್ನು ಪಡೆಯುತ್ತೀರಿ. ಕೋವಿಡ್ ವಿರುದ್ಧ ಸಂಪೂರ್ಣವಾಗಿ ಲಸಿಕೆಯನ್ನು ಪಡೆಯುವುದು ಮತ್ತು ವರ್ಧಿಸುವುದು ವೈರಸ್‌ನಿಂದ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ನೀವು ಯುವಕರು ಮತ್ತು ಆರೋಗ್ಯವಂತರಾಗಿದ್ದರೆ ಅದರ ಅಪಾಯ ಕಡಿಮೆ ಎನ್ನುತ್ತದೆ ಅಧ್ಯಯನ.


ಈ ಮಧ್ಯೆ ಜಾಗತಿಕವಾಗಿ ಕೋವಿಡ್ ಸೋಂಕುಗಳು ಹೆಚ್ಚುತ್ತಿವೆ. ಚಳಿಗಾಲದ ತಿಂಗಳುಗಳಲ್ಲಿ ಸಾವುಗಳಲ್ಲಿ ಏರಿಕೆಯಾಗಲಿದೆ ಎಂದು ತಜ್ಞರು ಊಹಿಸಿರುವುದು ಆತಂಕವನ್ನು ಹೆಚ್ಚಿಸಿದೆ.

Published by:ವಾಸುದೇವ್ ಎಂ
First published: