Unmarried Woman: ಅವಿವಾಹಿತ ಮಹಿಳೆಯ ಮಕ್ಕಳಿಗೆ ತಂದೆ ಹೆಸರು ಅಗತ್ಯವಿಲ್ಲ! ಕರ್ಣನ ಪಾತ್ರ ಪ್ರಸ್ತಾಪಿಸಿ ಕೋರ್ಟ್ ತೀರ್ಪು

“ಇದು ತಾಯಿ ಮತ್ತು ಮಗನ ದುಃಖದ ಕಥೆ” ಅಂತ ಉಲ್ಲೇಖಿಸಿದ ನ್ಯಾಯಲಯ, ಮಹಾಭಾರತದ ಕರ್ಣನ ಪಾತ್ರದ ಬಗ್ಗೆ ಪ್ರಸ್ತಾಪ ಮಾಡಿದೆ. ಅವಿವಾಹಿತ ಸ್ತ್ರೀಯ ಮಕ್ಕಳು ತಮ್ಮ ಹೆಸರಿನ ಮುಂದೆ ತಂದೆ ಹೆಸರು ಬದಲಾಗಿ, ತಾಯಿ ಹೆಸರನ್ನೂ ಬಳಸಬಹುದು ಅಂತ ಮಹತ್ವದ ಆದೇಶ ನೀಡಿದೆ.   

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:


ಕೇರಳ: ಶಾಲೆಯಾಗಲಿ (School), ಸರ್ಕಾರಿ ಕಚೇರಿಗಳೇ (Government Office) ಆಗಲಿ ಅಥವಾ ಯಾವುದೇ ರೀತಿಯ ಸರ್ಕಾರಿ ದಾಖಲೆಗಳೇ (Documents) ಆಗಲಿ ಅಲ್ಲಿ ಮಗುವಿನ ಹೆಸರಿನ (Children’s Name) ಮುಂದೆ ತಂದೆಯ ಹೆಸರು (Fathers name) ಕಡ್ಡಾಯವಾಗಿ ನಮೂದಿಸಲೇ ಬೇಕು. ತಂದೆ ಹೆಸರು ಹಾಕಿಲ್ಲ ಅಂದರೆ ಅದೆಷ್ಟೋ ದಾಖಲೆಗಳನ್ನು ಅಮಾನ್ಯ ಮಾಡಿರುವ ಸಂದರ್ಭವೂ ಇದೆ. ಆದರೆ ಅವಿವಾಹಿತ ಮಹಿಳೆ (Unmarried Women) ಆಗಿದ್ದರೆ ಆಕೆಯ ಮಕ್ಕಳು ಏನು ಮಾಡಬೇಕು? ಅದೆಷ್ಟೋ ಸಂದರ್ಭಗಳಲ್ಲಿ ಅಂತಹ ಮಕ್ಕಳು ತಂದೆ ಹೆಸರು ಗೊತ್ತಿಲ್ಲದೇ, ಗೊತ್ತಿದ್ದರೂ ದಾಖಲೆಗಳಲ್ಲಿ ಹಾಕಲು ಆಗದೇ ಸಂಕಷ್ಟಪಡುತ್ತಾರೆ. ಮಹಿಳೆಯರಂತೂ ಸಮಾಜದ ನಿಂದನೆಗೂ ಒಳಗಾಗಬೇಕಾಗುತ್ತದೆ. ಆದರೆ ಇದಕ್ಕೆ ಕೇರಳ ಹೈಕೋರ್ಟ್ (Kerala High Court) ಪರಿಹಾರ ನೀಡಿದೆ. ಅವಿವಾಹಿತ ಸ್ತ್ರೀಯ ಮಕ್ಕಳು ತಮ್ಮ ಹೆಸರಿನ ಮುಂದೆ ತಂದೆ ಹೆಸರು ಬದಲಾಗಿ, ತಾಯಿ ಹೆಸರನ್ನೂ ಬಳಸಬಹುದು ಅಂತ ಮಹತ್ವದ ಆದೇಶ ನೀಡಿದೆ.   

 ಹೈಕೋರ್ಟ್ ಮೆಟ್ಟಿಲೇರಿದ್ದ ತಾಯಿ-ಮಗ

ಕೇರಳದಲ್ಲಿ ಈ ಬಗ್ಗೆ ಮಗ ಮತ್ತು ತಾಯಿ ಇಬ್ಬರೂ ಅರ್ಜಿ ಸಲ್ಲಿಸಿದ್ದರು. ಅವರ ತಂದೆಯ ಹೆಸರು ಅವರ ಮೂರು ಹೆಸರುಗಳಲ್ಲಿ ವಿಭಿನ್ನವಾಗಿರುವ ಕಾರಣ ಜನನ ನೋಂದಣಿಯಿಂದ ತಂದೆಯ ಹೆಸರನ್ನು ತೆಗೆದುಹಾಕಲು ಮತ್ತು ತಾಯಿಯ ಹೆಸರನ್ನು ಒಬ್ಬನೇ ಪೋಷಕ ಎಂದು ತೋರಿಸುವ ಪ್ರಮಾಣಪತ್ರವನ್ನು ನೀಡಲು  ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಅಂತ ಹೈಕೋರ್ಟ್ ಮೆಟ್ಟಿಲು ಏರಿದ್ದರು.

“ತಂದೆಯ ಹೆಸರು ತೆಗೆದು, ತಾಯಿ ಹೆಸರು ಸೇರಿಸಲು ಅವಕಾಶ ನೀಡಿ”

ಅರ್ಜಿದಾರರು ತಂದೆಯ ಹೆಸರು ತೆಗೆದು, ತಾಯಿ ಹೆಸರು ಸೇರಿಸಲು ಅವಕಾಶ ನೀಡಿ ಅಂತ ಕೋರ್ಟ್‌ಗೆ ಮನವಿ ಮಾಡಿದ್ದರು. ಸಾಮಾನ್ಯ ಶಿಕ್ಷಣ ಇಲಾಖೆ, ಹೈಯರ್ ಸೆಕೆಂಡರಿ ಪರೀಕ್ಷಾ ಮಂಡಳಿ, ಯುಐಡಿಎಐ, ಐಟಿ ಇಲಾಖೆ, ಪಾಸ್‌ಪೋರ್ಟ್ ಕಚೇರಿ, ಭಾರತೀಯ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ತಮ್ಮ ಅಧಿಕೃತ ದಾಖಲೆಗಳು ಮತ್ತು ಡೇಟಾಬೇಸ್‌ಗಳಿಂದ ತಂದೆಯ ಹೆಸರನ್ನು ತೆಗೆದುಹಾಕುವಂತೆ ಮನವಿ ಮಾಡಿದ್ದರು.

ಇದನ್ನೂ ಓದಿ: President of India: 15ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ದ್ರೌಪದಿ ಮುರ್ಮು

ದಾಖಲೆಗಳಲ್ಲಿ ತಾಯಿ ಹೆಸರು ಸೇರಿಸಲು ಅನುಮತಿ

ಈ ಪ್ರಕರಣದ ತೀರ್ಪಿನಲ್ಲಿ ಮಹಾಭಾರತದ ಕರ್ಣನ ಪ್ರಸಂಗವನ್ನು ಉಲ್ಲೇಖಿಸಿದ ಕೇರಳ ಹೈಕೋರ್ಟ್, ಒಬ್ಬ ವ್ಯಕ್ತಿಗೆ ತನ್ನ ಜನನ ಪ್ರಮಾಣಪತ್ರ, ಗುರುತಿನ ಪ್ರಮಾಣಪತ್ರಗಳು ಮತ್ತು ಇತರ ದಾಖಲೆಗಳಲ್ಲಿ ತನ್ನ ತಾಯಿಯ ಹೆಸರನ್ನು ಮಾತ್ರ ಸೇರಿಸಲು ಅನುಮತಿ ನೀಡಿದೆ.

ಮಹಾಭಾರತದ ಕರ್ಣನ ಉದಾಹರಣೆ ಪ್ರಸ್ತಾಪಿಸಿದ ಕೋರ್ಟ್

ತಂದೆ-ತಾಯಿಯರ ಇರುವಿಕೆಯನ್ನೇ ತಿಳಿಯದೇ ಎದುರಿಸಿದ ಅವಮಾನದಿಂದ ತನ್ನ ಬದುಕನ್ನೇ ಶಪಿಸುತ್ತಿರುವ ಕರ್ಣನಂಥ ಪಾತ್ರಗಳಿಲ್ಲದ ಸಮಾಜ ನಮಗೆ ಬೇಕು. ‘ಮಹಾಭಾರತ’ದಲ್ಲಿ ನಿಜವಾದ ನಾಯಕ ಮತ್ತು ಹೋರಾಟಗಾರನಾಗಿದ್ದ ನಿಜವಾದ ವೀರ ಕರ್ಣ ನಮಗೆ ಬೇಕು. ನಮ್ಮ ಸಂವಿಧಾನ ಮತ್ತು ಸಾಂವಿಧಾನಿಕ ನ್ಯಾಯಾಲಯಗಳು ಎಲ್ಲರನ್ನೂ ರಕ್ಷಿಸುತ್ತವೆ ಮತ್ತು ಹೊಸ ಯುಗದ 'ಕರ್ಣರು' ಇತರ ಯಾವುದೇ ನಾಗರಿಕರಂತೆ ಘನತೆ ಮತ್ತು ಹೆಮ್ಮೆಯಿಂದ ಬದುಕಬಹುದು ಅಂತ ತಮ್ಮ ಆದೇಶದಲ್ಲಿ ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಹೇಳಿದ್ದಾರೆ.

ಇದನ್ನೂ ಓದಿ: Smriti Irani: ಮಗಳ ವಿರುದ್ಧದ ಆರೋಪಕ್ಕೆ ಕೇಂದ್ರ ಸಚಿವೆ ಗರಂ, ಕಾಂಗ್ರೆಸ್‌ಗೆ ಲೀಗಸ್ ನೋಟಿಸ್ ಕೊಟ್ಟ ಸ್ಮೃತಿ ಇರಾನಿ

 ಇದು ತಾಯಿ ಮತ್ತು ಮಗನ ದುಃಖದ ಕಥೆ

“ಇದು ತಾಯಿ ಮತ್ತು ಮಗನ ದುಃಖದ ಕಥೆ” ಅಂತ ಉಲ್ಲೇಖಿಸಿದ ನ್ಯಾಯಲಯ, ವಿವಾಹಿತ ತಾಯಂದಿರ ಮಕ್ಕಳು ಮತ್ತು ಅತ್ಯಾಚಾರ ಸಂತ್ರಸ್ತರ ಮಕ್ಕಳು ಸಹ ಈ ದೇಶದಲ್ಲಿ ಖಾಸಗಿತನ, ಸ್ವಾತಂತ್ರ್ಯ ಮತ್ತು ಘನತೆಯ ಮೂಲಭೂತ ಹಕ್ಕುಗಳೊಂದಿಗೆ ಬದುಕಬಹುದು. ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ಯಾರಿಗೂ ಹಕ್ಕಿಲ್ಲ. ಈ ದೇಶದ ಸಾಂವಿಧಾನಿಕ ನ್ಯಾಯಾಲಯವು ಅವರ ಮೂಲಭೂತ ಹಕ್ಕುಗಳನ್ನು ರಕ್ಷಿಸುತ್ತದೆ ”ಎಂದು ನ್ಯಾಯಮೂರ್ತಿ ಕುಂಞಿಕೃಷ್ಣನ್  ತಮ್ಮ ಆದೇಶದಲ್ಲಿ ಹೇಳಿದ್ದಾರೆ.

Published by:Annappa Achari
First published: