Double Murder: ದಂಪತಿಯನ್ನು ಕೊಂದು 5 ಕೋಟಿ ದೋಚಿದ ಹಂತಕರು! ಮನೆಯ ಅನ್ನತಿಂದವರೇ ಗಂಡ-ಹೆಂಡತಿಯ ರಕ್ತ ಹೀರಿದ್ದರು

ದಂಪತಿಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. 60 ವರ್ಷದ ಶ್ರೀಕಾಂತ್ ಮತ್ತು ಅವರ 55 ವರ್ಷದ ಪತ್ನಿ ಅನುರಾಧ ಎಂಬುವರೇ ಹತ್ಯೆಯಾಗಿದ್ದಾರೆ. ಆರೋಪಿಗಳು ದಂಪತಿಯನ್ನು ಅವರ ಮನೆಯಲ್ಲಿಯೇ ಭೀಕರ ರೀತಿಯಲ್ಲಿ ಕೊಂದು, ಚೆನ್ನೈನ ಹೊರಗಿರುವ ಅವರ ಫಾರ್ಮ್‌ಹೌಸ್‌ನಲ್ಲಿ ಶವಗಳನ್ನು ಹೂತಿಟ್ಟಿದ್ದಾರೆ.

ಕೊಲೆಯಾದ ದಂಪತಿ

ಕೊಲೆಯಾದ ದಂಪತಿ

  • Share this:
ತಮಿಳುನಾಡು: ಅವರಿಬ್ಬರು ತುಂಬಾ ಅನ್ಯೋನ್ಯವಾಗಿದ್ದ ದಂಪತಿ (Couple). ತುಂಬಾ ಸಮಯದಿಂದ ಅಮೆರಿಕಾದಲ್ಲೇ (America) ನೆಲೆಸಿದ್ದರು. ತಮಿಳುನಾಡಿನ (Tamil Nadu) ಚೆನ್ನೈ ಮೂಲದವರಾದ ಅವರು, ಅಮೆರಿಕದಿಂದ ಮೊನ್ನೆಯಷ್ಟೇ ಊರಿಗೆ ವಾಪಸ್ಸಾಗಿದ್ದರು. ಸ್ವಲ್ಪಕಾಲ ಇಲ್ಲಿ ಸುಖವಾಗಿ ಇರಬೇಕು ಅಂತ ಆಸೆ ಹೊತ್ತುಕೊಂಡಿದ್ದರು. ಆದರೆ ಒಂದೇ ದಿನಕ್ಕೆ ಅವರ ಆಸೆಯೆಲ್ಲ ಮಣ್ಣು ಪಾಲಾಗಿದೆ. ಯಾಕೆಂದರೆ ಅಮೆರಿಕಾದಿಂದ ಚೆನ್ನೈಗೆ (Chennai) ವಾಪಸ್ಸಾದ ಮರುದಿನವೇ ಆ ಗಂಡ (Husband), ಹೆಂಡತಿ (Wife) ಬರ್ಬರವಾಗಿ ಹತ್ಯೆಯಾಗಿದ್ದಾರೆ (Murder). ಹಂತಕರು ಅವರಿಬ್ಬರನ್ನು ಕೊಂದು, ಚಿನ್ನಾಭರಣ (Jewellery) ಸೇರಿದಂತೆ ಬರೋಬ್ಬರಿ 5 ಕೋಟಿ ಮೌಲ್ಯದ ಸ್ವತ್ತನ್ನು ಅಪಹರಿಸಿದ್ದಾರೆ.

ಚೆನ್ನೈನಲ್ಲಿ ದಂಪತಿ ಬರ್ಬರ ಹತ್ಯೆ

ತಮಿಳುನಾಡಿನ ಚೆನ್ನೈನಲ್ಲಿ ದಂಪತಿಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. 60 ವರ್ಷದ ಶ್ರೀಕಾಂತ್ ಮತ್ತು ಅವರ 55 ವರ್ಷದ ಪತ್ನಿ ಅನುರಾಧ ಎಂಬುವರೇ ಹತ್ಯೆಯಾಗಿದ್ದಾರೆ. ಆರೋಪಿಗಳು ದಂಪತಿಯನ್ನು ಅವರ ಮನೆಯಲ್ಲಿಯೇ ಭೀಕರ ರೀತಿಯಲ್ಲಿ ಕೊಂದು, ಚೆನ್ನೈನ ಹೊರಗಿರುವ ಅವರ ಫಾರ್ಮ್‌ಹೌಸ್‌ನಲ್ಲಿ ಶವಗಳನ್ನು ಹೂತಿಟ್ಟಿದ್ದಾರೆ.

ಸಾಯುವ ಮುನ್ನಾ ದಿನ ಅಮೆರಿಕದಿಂದ ವಾಪಸ್

ಶ್ರೀಕಾಂತ್ ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದರು. ತುಂಬಾ ಸಮಯದಿಂದ ಇಬ್ಬರೂ ಅಮೆರಿಕಾದಲ್ಲೇ ನೆಲೆಸಿದ್ದರು. ಇದೀಗ ಸ್ವಲ್ಪ ದಿನ ಇಲ್ಲೇ ಇರೋಣ ಅಂತ ನಿರ್ಧಾರ ಮಾಡಿ, ಮೊನ್ನೆಯಷ್ಟೇ ಚೆನ್ನೈಗೆ ವಾಪಸ್ಸಾಗಿದ್ದರು. ಆದರೆ ಒಂದೇ ದಿನ ಕಳೆಯುವಷ್ಟರಲ್ಲಿ ಅಂದರೆ, ನಿನ್ನೆ ದಂಪತಿ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ.

ಇದನ್ನೂ ಓದಿ: Shivamogga: ಪ್ರೀತಿಸು ಅಂತ ಪಕ್ಕದ್ಮನೆ ಪುಂಡನ ಕಿರುಕುಳ: ಆತ್ಮಹತ್ಯೆಗೆ ಶರಣಾದ ಯುವತಿ

ದಂಪತಿ ಕೊಂದು 5 ಕೋಟಿ ದರೋಡೆ ಮಾಡಿದ ಹಂತಕರು

ದಂಪತಿಯನ್ನು ಬರ್ಬರವಾಗಿ ಕೊಂದಿರುವ ಹಂತಕರು ಬಳಿಕ ಅವರ ಶವವನ್ನು ಚೆನ್ನೈನ ಹೊರಗಿರುವ ಅವರ ಫಾರ್ಮ್‌ಹೌಸ್‌ನಲ್ಲಿ ಶವಗಳನ್ನು ಹೂತಿಟ್ಟಿದ್ದಾರೆ. ನಂತರ ಮನೆಗೆ ವಾಪಸ್ಸಾದವರೇ ಅವರ ಮನೆಯಲ್ಲಿದ್ದ ನಗದು, ಒಂಬತ್ತು ಕೆಜಿ ಚಿನ್ನಾಭರಣ ಸೇರಿದಂತೆ ಬರೋಬ್ಬರಿ 5 ಕೋಟಿ ಮೌಲ್ಯದ ವಸ್ತು ದೋಚಿ ಎಸ್ಕೇಪ್ ಆಗಿದ್ದರು.

ಮನೆಯಲ್ಲಿ ಕೆಲಸಕ್ಕೆ ಇದ್ದವರಿಂದಲೇ ಹತ್ಯೆ

ಅಷ್ಟಕ್ಕೂ ಹೊರಗಿನಿಂದ ಬಂದ ಯಾರೋ ಆ ಕೃತ್ಯ ಮಾಡಿಲ್ಲ. ಅನ್ನಹಾಕಿದ್ದ ಮನೆಗೇ ವಿಷ ಹಾಕಿದವರು ಆ ಮನೆಯ ಕೆಲಸದವರು. ಹೌದು, ಮನೆಗೆಲಸದ ಸಹಾಯಕ ಕೃಷ್ಣನ್ ಮತ್ತು ಅವರ ಸ್ನೇಹಿತ ರವಿ ಎಂಬುವರೇ ಈ ಕೃತ್ಯ ಎಸಗಿ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಇತ್ತೀಚಿನ ರಿಯಲ್ ಎಸ್ಟೇಟ್ ವ್ಯವಹಾರದಿಂದ ದಂಪತಿಗಳು ತಮ್ಮ ಮನೆಯಲ್ಲಿ 40 ಕೋಟಿ ಹಣವನ್ನು ಹೊಂದಿದ್ದಾರೆ ಎಂದು ಕೃಷ್ಣನ್ ನಂಬಿದ್ದರು ಮತ್ತು ಅದನ್ನು ದರೋಡೆ ಮಾಡಲು ಯೋಜಿಸಿದ್ದರು ಎಂದು ತಿಳಿದು ಬಂದಿದೆ.

ಸಂಬಂಧಿಕರು ಮನೆಗೆ ಬಂದಾಗ ಘಟನೆ ಬೆಳಕಿಗೆ

ಅಮೆರಿಕದಲ್ಲಿ ನೆಲೆಸಿರುವ ದಂಪತಿಯ ಮಗಳು ತಂದೆ, ತಾಯಿಗೆ ಫೋನ್ ಮಾಡಿದ್ದಳು, ಆದರೆ ಅವರ ಮೊಬೈಲ್ ಸ್ವಿಚ್ಚ್ ಆಫ್ ಆಗಿತ್ತು. ಪೋಷಕರಿಗೆ ತಲುಪದ ಹಿನ್ನೆಲೆಯಲ್ಲಿ ಸ್ಥಳೀಯ ಸಂಬಂಧಿಕರಿಗೆ ತಿಳಿಸಿದಾಗ ಅವರ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ನೇಪಾಳಕ್ಕೆ ಪರಾರಿಯಾಗಲು ಯತ್ನ

ಆರೋಪಿಗಳು ಚೆನ್ನೈನಿಂದ ಆಂಧ್ರಪ್ರದೇಶಕ್ಕೆ ಹೋಗಿದ್ದರು. ಅಲ್ಲಿನ  ಒಂಗೋಲ್‌ನಿಂದ ನೇಪಾಳಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದರು. ದೇಶ ಬಿಡುವ ಮುನ್ನ ಅವರನ್ನು ಹಿಡಿಯಲು ಪೊಲೀಸರು ಅತ್ಯಾಧುನಿಕ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಬಳಸಿದ್ದರು. ಸಿಸಿಟಿವಿ ರೆಕಾರ್ಡರ್ ಸೇರಿದಂತೆ ಪ್ರಮುಖ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Vaccine Golmaal: ಸತ್ತವರಿಗೂ ಕೊಟ್ಟಿದ್ದಾರಂತೆ ಬೂಸ್ಟರ್ ಡೋಸ್! ಮೃತಳ ಮೊಬೈಲ್‌ಗೆ ಬಂತು ವ್ಯಾಕ್ಸಿನ್ ಸರ್ಟಿಫಿಕೇಟ್

ಸದ್ಯ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ದಂಪತಿ ಶವ ತೆಗೆದು ಪರೀಕ್ಷೆ ನಡೆಸಿದ್ದಾರೆ. ಅವರ ರಿಪೋರ್ಟ್ ಪೊಲೀಸರ ಕೈ ಸೇರಿದೆ. ಇದೀಗ ಇಬ್ಬರನ್ನೂ ಬಂಧಿಸಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.
Published by:Annappa Achari
First published: