Noida Twin Towers: ಸೂಪರ್‌ಟೆಕ್ ಅವಳಿ ಗೋಪುರ ಉರುಳಿಸಲು ಬೇಕು ಕೋಟಿ ಕೋಟಿ ಹಣ!

ಇನ್ನು ಕಟ್ಟಡದ ನಿರ್ಮಾಣದಂತೆ ಅದರ ಕೆಡವುವಿಕೆ ಕೂಡ ಅಷ್ಟೇ ದುಬಾರಿಯದ್ದಾಗಿದೆ. ಹಾಗಿದ್ರೆ ಈ ಕಟ್ಟಡ ಕೆಡವಲು ಎಷ್ಟು ವೆಚ್ಚವಾಗುತ್ತೆ ನೋಡಿ.

ನೋಯ್ಡಾ ಸೂಪರ್‌ಟೆಕ್ ಅವಳಿ ಗೋಪುರ

ನೋಯ್ಡಾ ಸೂಪರ್‌ಟೆಕ್ ಅವಳಿ ಗೋಪುರ

  • Share this:
ನೆಲಸಮಗೊಳ್ಳಲಿರುವ ನೋಯ್ಡಾ (Noida) ಸೂಪರ್‌ಟೆಕ್ ಅವಳಿ ಗೋಪುರಗಳ ನಿರ್ಮಾಣ ವೆಚ್ಚವು ಪ್ರತಿ ಚದರ ಅಡಿಗೆ (ಚದರ ಅಡಿ) 933 ರೂಪಾಯಿಗಳಂತೆ ಒಟ್ಟು 70 ಕೋಟಿ ರೂ ಆಗಿದ್ದು ಒಟ್ಟು 7.5 ಲಕ್ಷ ಚದರ ಅಡಿಗಳಷ್ಟು ವಿಸ್ತಾರ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ಇನ್ನು ಕಟ್ಟಡದ ನಿರ್ಮಾಣದಂತೆ ಅದರ ಕೆಡವುವಿಕೆ (Demolition) ಕೂಡ ಅಷ್ಟೇ ದುಬಾರಿಯದ್ದಾಗಿದೆ, ಏಕೆಂದರೆ ಇದಕ್ಕೆ ಸಾಕಷ್ಟು ಸ್ಫೋಟಕಗಳು, ಮಾನವ ಶಕ್ತಿ ಮತ್ತು ಉಪಕರಣಗಳು ಬೇಕಾಗುತ್ತವೆ. ಅವಳಿ ಗೋಪುರಗಳಲ್ಲಿ (Twin Towers) ಒಂದು ಕಟ್ಟಡವು 103 ಮೀಟರ್ ಎತ್ತರವನ್ನು ಹೊಂದಿದೆ, ಇನ್ನೊಂದು ಕಟ್ಟಡವು (Building) ಸುಮಾರು 97 ಮೀಟರ್ ಎತ್ತರವಿದೆ. ನೊಯ್ಡಾದ ಸೆಕ್ಟರ್ 93-A ನಲ್ಲಿರುವ ಅವಳಿ ಗೋಪುರಗಳ ಕೆಡವುವಿಕೆಯ ವೆಚ್ಚವು ಪ್ರತಿ ಚದರ ಅಡಿಗೆ ಸುಮಾರು 267 ರೂ. ಎಂದು ಅಂದಾಜಿಸಲಾಗಿದೆ.

ಕಟ್ಟಡ ಕೆಡವುವಿಕೆಗೆ ತಗಲುವ ವೆಚ್ಚ
ಸುಮಾರು 7.5 ಲಕ್ಷ ಚದರ ಅಡಿಗಳ ಒಟ್ಟು ನಿರ್ಮಾಣ ಪ್ರದೇಶವನ್ನು ಪರಿಗಣಿಸಿದರೆ, ಸ್ಫೋಟಕಗಳು ಸೇರಿದಂತೆ ಒಟ್ಟು ಕೆಡವುವಿಕೆಗೆ ತಗಲುವ ವೆಚ್ಚ ಸುಮಾರು 20 ಕೋಟಿ ರೂ. ಆಗಿದೆ. ಒಟ್ಟು ವೆಚ್ಚದಲ್ಲಿ, ಸೂಪರ್‌ಟೆಕ್ ಸುಮಾರು 5 ಕೋಟಿ ರೂಪಾಯಿಗಳನ್ನು ಪಾವತಿಸುತ್ತಿದೆ. ಉಳಿದ ಸುಮಾರು 15 ಕೋಟಿ ಮೊತ್ತವನ್ನು 4,000 ಟನ್ ಸ್ಟೀಲ್ ಸೇರಿದಂತೆ ಸುಮಾರು 55,000 ಟನ್‌ಗಳಾಗಿರುವ ಡೆಬ್ರಿಸ್ ಅನ್ನು ಮಾರಾಟ ಮಾಡುವ ಮೂಲಕ ಹೊಂದಿಸಲಾಗುತ್ತದೆ.

ಇದಲ್ಲದೇ, ಕಟ್ಟಡಗಳನ್ನು ಉರುಳಿಸುವ ಜವಾಬ್ದಾರಿ ಹೊತ್ತಿರುವ ಎಡಿಫೈಸ್ (Edifice) ಇಂಜಿನಿಯರಿಂಗ್ ಕಂಪನಿಯು ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಹಾನಿ ಸಂಭವಿಸಿದಲ್ಲಿ 100 ಕೋಟಿ ರೂಪಾಯಿಗಳ ವಿಮಾ ರಕ್ಷಣೆಯನ್ನು ಪಡೆದುಕೊಂಡಿದೆ.

ಕಟ್ಟಡ ಕೆಡವಲು 3,700 ಕೆಜಿ ಸ್ಫೋಟಕ ಬಳಕೆ 
ಕಟ್ಟಡಗಳನ್ನು ಕೆಡವಲು ಪಲ್ವಾಲ್ (ಹರಿಯಾಣ) ನಿಂದ ತರಲಾದ ಸುಮಾರು 3,700 ಕೆಜಿ ಸ್ಫೋಟಕಗಳನ್ನು ಬಳಸಲಾಗುವುದು ಇದು ಡೈನಮೈಟ್, ಎಮಲ್ಷನ್ ಮತ್ತು ಪ್ಲಾಸ್ಟಿಕ್ ಸ್ಫೋಟಕಗಳ ಮಿಶ್ರಣವಾಗಿರುತ್ತದೆ. ಸುಮಾರು 100 ಕಾರ್ಮಿಕರು ಕಟ್ಟಡ ಕೆಡವುವಿಕೆಯ ತಂಡದ ಭಾಗವಾಗಿ ಕಾರ್ಯನಿರ್ವಹಿಸಲಿದ್ದಾರೆ. ಭಾರತದ ಬ್ಲಾಸ್ಟರ್ ಚೇತನ್ ದತ್ತಾ ಆಗಸ್ಟ್ 28 ರ ಮಧ್ಯಾಹ್ನ 2.30 ಕ್ಕೆ ಬ್ಲಾಸ್ಟ್‌ಗಾಗಿ ಅಂತಿಮ ಬಟನ್ ಒತ್ತಲಿದ್ದಾರೆ. ಕೆಡುವುವಿಕೆಯು 9 ಸೆಕೆಂಡ್‌ಗಳನ್ನು ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ:  Ayodhya: ಅಯೋಧ್ಯೆ ರಾಮಮಂದಿರದ ಗರ್ಭಗುಡಿ ನಿರ್ಮಾಣದ ಲೇಟೆಸ್ಟ್​ ಫೊಟೋಸ್​ ವೈರಲ್!

ಸೂಪರ್‌ಟೆಕ್‌ಗೆ ಆದ ನಷ್ಟವೆಷ್ಟು?
ಸೂಪರ್‌ಟೆಕ್ ಎಮರಾಲ್ಡ್ ಕೋರ್ಟ್ ಪ್ರಾಜೆಕ್ಟ್‌ನಲ್ಲಿ ಒಂದು 3BHK ಅಪಾರ್ಟ್‌ಮೆಂಟ್‌ನ ವೆಚ್ಚ ಸುಮಾರು 1.13 ಕೋಟಿ ರೂ ಆಗಿದ್ದು ಎರಡು ಕಟ್ಟಡಗಳಲ್ಲಿ ಸುಮಾರು 915 ಫ್ಲ್ಯಾಟ್‌ಗಳಿದ್ದು ಕಂಪೆನಿಗೆ ಸುಮಾರು 1,200 ಕೋಟಿ ರೂ ಆದಾಯವಿರುತ್ತಿತ್ತು.

ಒಟ್ಟು 915 ಫ್ಲ್ಯಾಟ್‌ಗಳಲ್ಲಿ 633 ಫ್ಲ್ಯಾಟ್‌ಗಳನ್ನು ಈಗಾಗಲೇ ಬುಕ್ ಮಾಡಲಾಗಿದ್ದು ಕಂಪೆನಿಯು ಮನೆ ಖರೀದಿಸುವವರಿಂದ ಸುಮಾರು ರೂ 180 ಕೋಟಿ ರೂ ಸಂಪಾದಿಸಿದೆ. ಇದೀಗ ಮನೆಖರೀದಿದಾರರ ಹಣವನ್ನು 12% ಬಡ್ಡಿಯೊಂದಿಗೆ ಮರುಪಾವತಿಸುವಂತೆ ಸೂಪರ್‌ಟೆಕ್ ಕಂಪೆನಿಗೆ ಕೇಳಲಾಗಿದೆ.

ಕೆಡವುವಿಕೆಗೆ ಕೈಗೊಂಡಿರುವ ಸುರಕ್ಷತಾ ಕ್ರಮಗಳು
ಎಲ್ಲಾ ರೀತಿಯ ಸುರಕ್ಷತಾ ಮಾನದಂಡಗಳನ್ನು ಕೈಗೊಳ್ಳಲಾಗಿದೆ. ಕಟ್ಟಡ ಕೆಡವುವ ದಿನದಂದು ಸುತ್ತಮುತ್ತಲಿನ ನಿವಾಸಿಗಳನ್ನು (ಆಗಸ್ಟ್ 28) ಹಿಂದಿನ ದಿನ ಸಂಜೆ ಅಥವಾ ಮರುದಿನ ಬೆಳಗ್ಗೆ 7 ಗಂಟೆಗೆ ಇತರ ದೂರದ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತದೆ.

ಕೆಡವುವ ಸಮಯದಲ್ಲಿ ಟ್ರಾಫಿಕ್ ಅನ್ನು ಬೇರೆಡೆಗೆ ತಿರುಗಿಸಲು ನಾವು ಯೋಜಿಸಿದ್ದೇವೆ. ಸ್ಥಳದ ಸಮೀಪ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಯಾವುದೇ ಅಹಿತಕರ ಪರಿಸ್ಥಿತಿಯನ್ನು ನಿಭಾಯಿಸಲು ತುರ್ತು ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ನೋಯ್ಡಾ ಡಿಸಿಪಿ ಟ್ರಾಫಿಕ್ ಗಣೇಶ್ ಶಾ ತಿಳಿಸಿದ್ದಾರೆ.

ಇದನ್ನೂ ಓದಿ:  Twin Tower Demolition: ಅವಳಿ ಗೋಪುರ ಧ್ವಂಸಕ್ಕೆ ಕೌಂಟ್‌ ಡೌನ್:‌ 3,700 ಕೆಜಿ ಸ್ಫೋಟಕ ಬಳಸಿ ಕೆಡವಲು ಸಿದ್ಧತೆ

ಸೂಪರ್‌ಟೆಕ್ ಕಂಪೆನಿಯು ಕಟ್ಟಡಗಳ ನಿರ್ಮಾಣದ ಕನಿಷ್ಟ ಅಂತರದ ಅಗತ್ಯವನ್ನು ಉಲ್ಲಂಘಿಸಿರುವುದರಿಂದ ಕಟ್ಟಡಗಳನ್ನು ಕೆಡವಲು ಆಗಸ್ಟ್ 2021 ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತು. ಸುಪ್ರೀಂ ಕೋರ್ಟ್ ಪ್ರಕಾರ, ಯುಪಿ ಅಪಾರ್ಟ್‌ಮೆಂಟ್ ಕಾಯ್ದೆಯಡಿ ಅಗತ್ಯವಿರುವಂತೆ ವೈಯಕ್ತಿಕ ಫ್ಲ್ಯಾಟ್ ಮಾಲೀಕರ ಒಪ್ಪಿಗೆಯನ್ನು ತೆಗೆದುಕೊಳ್ಳದೆ ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ.
Published by:Ashwini Prabhu
First published: