• Home
  • »
  • News
  • »
  • national-international
  • »
  • King Charles: ಮುಂದಿನ ವರ್ಷ ಬ್ರಿಟನ್ ರಾಜ ಚಾರ್ಲ್ಸ್ ಪಟ್ಟಾಭಿಷೇಕ, ಹೇಗಿರಲಿದೆ ಸಮಾರಂಭ?

King Charles: ಮುಂದಿನ ವರ್ಷ ಬ್ರಿಟನ್ ರಾಜ ಚಾರ್ಲ್ಸ್ ಪಟ್ಟಾಭಿಷೇಕ, ಹೇಗಿರಲಿದೆ ಸಮಾರಂಭ?

ಬ್ರಿಟನ್‌ ದೇಶವನ್ನು ಸುದಿರ್ಘವಾಗಿ ಆಳಿದ ಎಲಿಜಬೆತ್‌ ರಾಣಿಯ ಮರಣದ ನಂತರ ಮುಂದಿನ ರಾಜನೆಂದು ಎಲಿಜಬೆತ್‌ ರಾಣಿಯ ಮಗ ಚಾರ್ಲ್ಸ್‌ ಹೆಸರು ಘೋಷಣೆಯಾಗಿದೆ. ಪಟ್ಟಾಭಿಷೇಕ ಸಮಾರಂಭವು ಮುಂದಿನ ವರ್ಷ ನಡೆಯಲಿದ್ದು, ರಾಜನಾಗಿ ಪಟ್ಟಾಭಿಷೇಕ ಏರಿದ ನಂತರ ಅವರ ಆಳ್ವಿಕೆಯು ಜೂನ್‌ನಲ್ಲಿ ಅಧಿಕೃತವಾಗಿ ಪ್ರಾರಂಭವಾಗಲಿದೆ.

ಬ್ರಿಟನ್‌ ದೇಶವನ್ನು ಸುದಿರ್ಘವಾಗಿ ಆಳಿದ ಎಲಿಜಬೆತ್‌ ರಾಣಿಯ ಮರಣದ ನಂತರ ಮುಂದಿನ ರಾಜನೆಂದು ಎಲಿಜಬೆತ್‌ ರಾಣಿಯ ಮಗ ಚಾರ್ಲ್ಸ್‌ ಹೆಸರು ಘೋಷಣೆಯಾಗಿದೆ. ಪಟ್ಟಾಭಿಷೇಕ ಸಮಾರಂಭವು ಮುಂದಿನ ವರ್ಷ ನಡೆಯಲಿದ್ದು, ರಾಜನಾಗಿ ಪಟ್ಟಾಭಿಷೇಕ ಏರಿದ ನಂತರ ಅವರ ಆಳ್ವಿಕೆಯು ಜೂನ್‌ನಲ್ಲಿ ಅಧಿಕೃತವಾಗಿ ಪ್ರಾರಂಭವಾಗಲಿದೆ.

ಬ್ರಿಟನ್‌ ದೇಶವನ್ನು ಸುದಿರ್ಘವಾಗಿ ಆಳಿದ ಎಲಿಜಬೆತ್‌ ರಾಣಿಯ ಮರಣದ ನಂತರ ಮುಂದಿನ ರಾಜನೆಂದು ಎಲಿಜಬೆತ್‌ ರಾಣಿಯ ಮಗ ಚಾರ್ಲ್ಸ್‌ ಹೆಸರು ಘೋಷಣೆಯಾಗಿದೆ. ಪಟ್ಟಾಭಿಷೇಕ ಸಮಾರಂಭವು ಮುಂದಿನ ವರ್ಷ ನಡೆಯಲಿದ್ದು, ರಾಜನಾಗಿ ಪಟ್ಟಾಭಿಷೇಕ ಏರಿದ ನಂತರ ಅವರ ಆಳ್ವಿಕೆಯು ಜೂನ್‌ನಲ್ಲಿ ಅಧಿಕೃತವಾಗಿ ಪ್ರಾರಂಭವಾಗಲಿದೆ.

ಮುಂದೆ ಓದಿ ...
  • Share this:

ಬ್ರಿಟನ್‌ ನೂತನ ದೊರೆ ಕಿಂಗ್‌ ಚಾರ್ಲ್ಸ್ IIIರ (King Charles III) ಪಟ್ಟಾಭಿಷೇಕ ಸಮಾರಂಭವು ಜೂನ್ 3, 2023 ರಂದು ನಡೆಯಲಿದೆ ಎಂದು ಪೇಜ್ ಸಿಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬ್ರಿಟನ್‌ (Britain) ದೇಶವನ್ನು ಸುದಿರ್ಘವಾಗಿ ಆಳಿದ ಎಲಿಜಬೆತ್‌ ರಾಣಿಯ ಮರಣದ ನಂತರ ಮುಂದಿನ ರಾಜನೆಂದು ಎಲಿಜಬೆತ್‌ ರಾಣಿಯ ಮಗ ಚಾರ್ಲ್ಸ್‌ ಹೆಸರು ಘೋಷಣೆಯಾಗಿದೆ. ರಾಣಿ ಎಲಿಜಬೆತ್ II ಸೆಪ್ಟೆಂಬರ್‌ನಲ್ಲಿ ವೃದ್ಧಾಪ್ಯದಲ್ಲಿ ನಿಧನರಾದ ಎರಡು ದಿನಗಳ ನಂತರ ಸೇಂಟ್ ಜೇಮ್ಸ್ ಅರಮನೆಯಲ್ಲಿ (St. James's Palace) ನಡೆದ ಐತಿಹಾಸಿಕ ಸಮಾರಂಭದಲ್ಲಿ ಚಾರ್ಲ್ಸ್ ರಾಜನಾಗಿ ಘೋಷಣೆಯಾದರು. ಆದರೆ ಪಟ್ಟಾಭಿಷೇಕ ಸಮಾರಂಭವು (Coronation ceremony) ಮುಂದಿನ ವರ್ಷ ನಡೆಯಲಿದ್ದು, ರಾಜನಾಗಿ (King) ಪಟ್ಟಾಭಿಷೇಕ ಏರಿದ ನಂತರ ಅವರ ಆಳ್ವಿಕೆಯು ಜೂನ್‌ನಲ್ಲಿ ಅಧಿಕೃತವಾಗಿ ಪ್ರಾರಂಭವಾಗುತ್ತದೆ.


ಹೇಗಿರಲಿದೆ ಸಮಾರಂಭ?
ಇನ್ನೂ ನೂತನ ರಾಜನ ಪಟ್ಟಾಭಿಷೇಕ ಸಮಾರಂಭವು ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ನಡೆಯಲಿದೆ ಎಂದು ಯುಕೆ ಮೂಲದ ಪ್ರಕಟಣೆ ತಿಳಿಸಿದೆ. ಆದರೆ ಅವರ ತಾಯಿಯ ಪಟ್ಟಾಭಿಷೇಕ ಕಾರ್ಯಕ್ರಮಕ್ಕಿಂತಾ ಸ್ವಲ್ಪ ಸರಳವಾಗಿ ಹಾಗೂ ಆಧುನಿಕತೆಯೊಂದಿಗೆ ಮಹಾರಾಜ ಚಾರ್ಲ್ಸ್‌ - III ಅವರ ಪಟ್ಟಾಭಿಷೇಕ ನೆರವೇರಲಿದೆ. ಚಾರ್ಲ್ಸ್ ಅವರ ಜೊತೆಯಲ್ಲಿ ಪತ್ನಿ ಕ್ಯಾಮಿಲ್ಲಾ ಪಾರ್ಕರ್-ಬೌಲ್ಸ್ ಕ್ವೀನ್ ಕಾನ್ಸಾರ್ಟ್ ಆಗಿ ಕಿರೀಟವನ್ನು ಅಲಂಕರಿಸುತ್ತಾರೆ. ಪಟ್ಟಾಭಿಷೇಕದ ವೇಳೆಗೆ ಚಾರ್ಲ್ಸ್ 74 ನೇ ವರ್ಷಕ್ಕೆ ಕಾಲಿಡಲಿದ್ದು, ಬ್ರಿಟಿಷ್ ಇತಿಹಾಸದಲ್ಲಿ ಸಿಂಹಾಸನವೇರಿದ ಅತ್ಯಂತ ಹಳೆಯ ರಾಜ ಎಂದೆನಿಸಿಕೊಳ್ಳುತ್ತಾರೆ.


ರಾಜಮನೆತನದ ಸಂಪ್ರದಾಯದ ಪ್ರಕಾರ, ರಾಜನು ಎಡ್ವರ್ಡ್ಸ್ ಚೇರ್ ಎಂದು ಕರೆಯಲ್ಪಡುವ ಸಿಂಹಾಸನ ಏರುವ ಮೂಲಕ ಪಟ್ಟಾಭಿಷೇಕ ನಡೆಯಲಿದೆ. ಬ್ರಿಟನ್ ರಾಜರ ಈ ಆಸನಕ್ಕೆ ಎಡ್ವರ್ಡ್ಸ್ ಚೇರ್ ಎಂದು 1661ರಲ್ಲಿ ನಾಮಕರಣ ಮಾಡಲಾಯ್ತು. ಆಗ ರಾಜ ಚಾರ್ಲ್ಸ್ - II ಅವರ ಪಟ್ಟಾಭಿಷೇಕದ ವೇಳೆ ಆಸನಕ್ಕೆ ಈ ರೀತಿ ಹೆಸರಿಡಲಾಗಿತ್ತು. ಮತ್ತು ಕ್ರಿಶ್ಚಿಯನ್ ಜಗತ್ತನ್ನು ಸಂಕೇತಿಸುವ ಸಾರ್ವಭೌಮ ರಾಜದಂಡ, ರಾಡ್ ಮತ್ತು ಮಂಡಲವನ್ನು ಹಿಡಿಯಲಿದ್ದಾರೆ. ನಂತರ ಸೇಂಟ್ ಎಡ್ವರ್ಡ್ನ ಕಿರೀಟವನ್ನು ಸ್ವೀಕರಿ ಹಿರಿಯ ಪಾದ್ರಿಗಳಿಂದ ಆಶೀರ್ವಾದ ಪಡೆದು ರಾಜನಾಗಿ ಪಟ್ಟಕ್ಕೆ ಅಧಿಕೃತವಾಗಿ ಏರುತ್ತಾನೆ.


ಇದನ್ನೂ ಓದಿ: Prince George: ಫ್ರೆಂಡ್ಸ್‌ ಜೊತೆ ಜಗಳ ಮಾಡಿಕೊಂಡ ನಂತರ ಪ್ರಿನ್ಸ್ ಜಾರ್ಜ್ ಏನು ಹೇಳಿದ್ರು ಗೊತ್ತಾ? 


ಸಾಂಪ್ರದಾಯಿಕವಾಗಿ ಪಟ್ಟಾಭಿಷೇಕ ವಿಧಿ ವಿಧಾನಗಳು ನಡೆದ ಬಳಿಕ ರಾಣಿ ಕಾನ್ಸರ್ಟ್ ಹಾಗೂ ರಾಜ ಚಾರ್ಲ್ಸ್ ಇಬ್ಬರೂ ಕೂಡಾ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬಕಿಂಗ್‌ಹ್ಯಾಮ್ ಪ್ಯಾಲೇಸ್‌ನ ಬಾಲ್ಕನಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.


ಸೆಪ್ಟೆಂಬರ್ 10 ರಂದು ಭಾಷಣ ಮಾಡಿದ್ದ ದೊರೆ
ಕಳೆದ ಸೆಪ್ಟೆಂಬರ್ 10 ರಂದು ರಾಜ ಚಾರ್ಲ್ಸ್ ಅವರು ಬ್ರಿಟನ್ ಹಾಗೂ ಕಾಮನ್‌ವೆಲ್ತ್‌ನ ಉತ್ತರಾಧಿಕಾರಿ ರಾಜನಾಗಿ ಅಧಿಕಾರ ಸ್ವೀಕರಿಸಿ ಭಾಷಣ ಮಾಡಿದ್ದರು. ಈ ವೇಳೆ ಅವರು ತಮ್ಮ ತಾಯಿಯ ಸೇವೆ ಹಾಗೂ ಸಾಧನೆಯನ್ನು ಸ್ಮರಿಸಿದ್ದರು.


ಭಾಷಣದಲ್ಲಿ ಚಾರ್ಲ್ಸ್ "ನನ್ನ ತಾಯಿಯ ಆಳ್ವಿಕೆಯು ಅದರ ಅವಧಿ, ಅದರ ಸಮರ್ಪಣೆ ಮತ್ತು ಅದರ ಭಕ್ತಿಯಲ್ಲಿ ಅಸಮಾನವಾಗಿತ್ತು. ನಾವು ದುಃಖಿಸಿದರೂ ಸಹ ಈ ಅತ್ಯಂತ ನಿಷ್ಠಾವಂತ ಜೀವನಕ್ಕಾಗಿ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಈ ಮಹಾನ್ ಪರಂಪರೆ ಮತ್ತು ಕರ್ತವ್ಯಗಳ ಬಗ್ಗೆ ನನಗೆ ಆಳವಾಗಿ ತಿಳಿದಿದೆ. ಮತ್ತು ಸಾರ್ವಭೌಮತ್ವದ ಗುರುತರ ಜವಾಬ್ದಾರಿಗಳು ಈಗ ನನಗೆ ಬಂದಿವೆ. ಸಾಂವಿಧಾನಿಕ ಸರ್ಕಾರವನ್ನು ಎತ್ತಿಹಿಡಿಯುವಲ್ಲಿ ಮತ್ತು ಜನರ ಶಾಂತಿ, ಸೌಹಾರ್ದತೆ ಮತ್ತು ಸಮೃದ್ಧಿಯನ್ನು ಕಾಪಾಡುವಲ್ಲಿ ನನ್ನ ತಾಯಿ ಅನುಸರಿಸಿದ ಕ್ರಮಗಳನ್ನು ಅನುಸರಿಸಲು ಪ್ರಯತ್ನಿಸುತ್ತೇನೆ.


ಇದನ್ನೂ ಓದಿ: King Charles III: ಕಿಂಗ್ ಚಾರ್ಲ್ಸ್ ಹಿರಿ ಮುತ್ತಜ್ಜ ಮತ್ತು ಕ್ಯಾಮಿಲ್ಲಾ ಪಾರ್ಕರ್ ಮುತ್ತಜ್ಜಿ ನಡುವೆ ಇತ್ತು ಪ್ರೇಮ ಸಂಬಂಧ!


ತಾಯಿ ದಿವಂಗತ ಎಲಿಜಬೆತ್‌ II ನಿಸ್ವಾರ್ಥ ಸೇವೆಯನ್ನು ಮುಂದುವರೆಸಿಕೊಂಡು ಹೋಗುವುದಾಗಿ ಹೇಳಿದರು. ಸುದೀರ್ಘ ವರ್ಷಗಳವರೆಗೆ ಬ್ರಿಟನ್‌ ರಾಣಿಯಾಗಿ ಕರ್ತವ್ಯ ನಿರ್ವಹಿಸಿದ ತಾಯಿ ಎಲಿಜಬೆತ್‌ ಅವರ ಆದರ್ಶಗಳನ್ನು ಮುಂದುವರೆಸಿಕೊಂಡು ಹೋಗುವುದಾಗಿ ಹೇಳಿದ ಕಿಂಗ್‌ ಚಾರ್ಲ್ಸ್‌, ನಮ್ಮ ಹೊಸ ಕರ್ತವ್ಯ ನಿರ್ವಹಣೆಯಲ್ಲಿ ನಾನು ದೇಶದ ಜನರ ಸಹಕಾರ ಕೋರಿದ್ದರು.

Published by:Ashwini Prabhu
First published: