Tirupati: ಸೇವೆ ಪಡೆಯದ ವೆಂಕಟ, ಟಿಟಿಡಿಗೆ ಈಗ ಸಂಕಟ! ಭಕ್ತನಿಗೆ 45 ಲಕ್ಷ ರೂಪಾಯಿ ನೀಡುವಂತೆ ಕೋರ್ಟ್ ಆದೇಶ

ತಿರುಪತಿ ತಿಮ್ಮಪ್ಪನ ಸೇವೆಯೊಂದನ್ನು ಬುಕ್ ಮಾಡಿದ ಭಕ್ತನಿಗೆ ಟಿಟಿಡಿ (TTD) 16 ವರ್ಷ ಕಾಯಿಸಿದೆ. ಇದರಿಂದ ಸಿಟ್ಟಿಗೆದ್ದ ಅವರು ಗ್ರಾಹಕ ನ್ಯಾಯಾಲಯದ (Consumer Court) ಮೊರೆ ಹೋಗಿದ್ದರು. ಅವರ ದೂರು ಆಲಿಸಿದ ಕೋರ್ಟ್, ಭಕ್ತನಿಗೆ 45 ಲಕ್ಷ ಪರಿಹಾರ ನೀಡುವಂತೆ ಟಿಟಿಡಿಗೆ ಸೂಚಿಸಿದೆ.

ತಿರುಪತಿ ವೆಂಕಟೇಶ್ವರ

ತಿರುಪತಿ ವೆಂಕಟೇಶ್ವರ

  • Share this:
ತಿರುಪತಿ: ಭಾರತದ ಅತ್ಯಂತ ಶ್ರೀಮಂತ ದೇಗುಲ (Richest Temple in India) ತಿರುಪತಿ ತಿಮ್ಮಪ್ಪನ (Tirupati Timmappa) ಭಕ್ತರ ಸಂಖ್ಯೆ ಅಪಾರ. 365 ದಿನವೂ ಬ್ಯುಸಿ ಇರುವ ದೇವರು ಎಂದರೆ ತಿರುಪತಿ ವೆಂಕಟೇಶ್ವರ. ಇಲ್ಲಿ ಭಕ್ತರು (Devotees) ಮಳೆ, ಚಳಿ, ಬಿಸಿಲು ಎನ್ನದೇ ಭೇಟಿ (Visit) ನೀಡುತ್ತಲೇ ಇರುತ್ತಾರೆ. “ನಮ್ಮ ಕಷ್ಟ ಕಳಿಯಪ್ಪಾ ದೇವರೇ” ಅಂತ ಪ್ರಾರ್ಥಿಸಿ (Prayer) ಹರಕೆ ಕಟ್ಟಿಕೊಳ್ಳುತ್ತಾರೆ. ಆ ಪ್ರಾರ್ಥನೆ ಈಡೇರಿದ ಬಳಿಕ ಹರಕೆ ರೂಪದಲ್ಲಿ ಹಣ (Money), ಚಿನ್ನ (Gold), ಬೆಳ್ಳಿ (Silver) ಇತ್ಯಾದಿ ಆಭರಣ (Jewelry) ದೇವರ ಹುಂಡಿಗೆ ಹಾಕಿ, ಪೂಜೆ ಸಲ್ಲಿಸ್ತಾರೆ. ಜೊತೆಗೆ ಕೆಲವರು ಕೂದಲು (Hair) ದಾನ (Donate) ಮಾಡುತ್ತಾರೆ. ಇನ್ನು ಕೆಲವರು ಮನೆಯಿಂದಲೇ ಸೇವೆ ಮಾಡಿಸ್ಬೇಕು ಅಂತ ಆನ್‌ಲೈನ್‌ನಲ್ಲೇ ಬುಕ್ ಮಾಡ್ತಾರೆ. ಹೀಗೆ ಬಾಲಾಜಿಯ ಸೇವೆಯೊಂದನ್ನು ಬುಕ್ ಮಾಡಿದ ಭಕ್ತನಿಗೆ ಟಿಟಿಡಿ (TTD) 16 ವರ್ಷ ಕಾಯಿಸಿದೆ. ಇದರಿಂದ ಸಿಟ್ಟಿಗೆದ್ದ ಅವರು ಗ್ರಾಹಕ ನ್ಯಾಯಾಲಯದ (Consumer Court) ಮೊರೆ ಹೋಗಿದ್ದರು. ಅವರ ದೂರು ಆಲಿಸಿದ ಕೋರ್ಟ್, ಟಿಟಿಡಿಗೆ ಚಾಟಿ ಬೀಸಿದೆ.

2006ರಲ್ಲಿ ವಸ್ತ್ರಾಲಂಕಾರ ಸೇವೆ ಬುಕ್ ಮಾಡಿದ್ದ ಭಕ್ತ

ತಮಿಳುನಾಡು ಮೂಲದ ಭಕ್ತರಾದ ಕೆಆರ್ ಹರಿ ಭಾಸ್ಕರ್ ಎಂಬುವರು 2006ರಲ್ಲಿ ಟಿಟಿಡಿ ಮೂಲಕ ತಿರುಪತಿ ತಿಮ್ಮಪ್ಪನಿಗೆ ವಸ್ತ್ರಾಲಂಕಾರ ಸೇವೆಯನ್ನು ಬುಕ್ ಮಾಡಿದ್ದರು. ಆದರೆ ಟಿಟಿಡಿ ಅದಕ್ಕೆ ಅವಕಾಶವನ್ನೇ ಕೊಡದೇ ಅವರ ವಸ್ತ್ರಾಲಂಕಾರ ಸೇವೆಯನ್ನು ಮುಂದೂಡುತ್ತಲೇ ಬಂದಿತ್ತು.

2020ರ ಮಾರ್ಚ್‌ನಲ್ಲಿ 80 ದಿನ ಸೇವೆ ಸ್ಥಗಿತ

ಬಳಿಕ 2020ರ ಮಾರ್ಚ್‌ನಲ್ಲಿ ಹರಿಭಾಸ್ಕರ್ ಅವರ ವಸ್ತ್ರಾಲಂಕಾರ ಸೇವೆ ಮಾಡಿಸಿಕೊಡುವುದಾಗಿ ಟಿಟಿಡಿ ದಿನಾಂಕವನ್ನೂ ನೀಡಿತ್ತು. ಆದರೆ ಕೋವಿಡ್‌ನಿಂದಾಗಿ 80 ದಿನಗಳ ಕಾಲ ತಿರುಪತಿಯಲ್ಲಿ ಭಕ್ತರ ಪ್ರವೇಶ, ದೇವರ ವಿವಿಧ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ ಹರಿಭಾಸ್ಕರ್ ಅವರ ವಸ್ತ್ರಾಲಂಕಾರ ಸೇವೆ ಮತ್ತೆ ಮುಂದೂಡಲ್ಪಟ್ಟಿತು.

ಇದನ್ನೂ ಓದಿ: Tirupati Laddu: ತಿರುಪತಿ ಲಡ್ಡುಗೆ ಮುನ್ನೂರು ವರ್ಷವಾಯ್ತು, ಇದರ ವಿಶೇಷತೆ ಗೊತ್ತಾ

ಮತ್ತೆ ಒಂದು ವರ್ಷದ ಬಳಿಕ ಸೇವೆ ನಡೆಸಿಕೊಡುವಂತೆ ಭಕ್ತನ ಮನವಿ

ಟಿಟಿಡಿಯು ವಸ್ತ್ರಾಲಂಕಾರ ಸೇವೆ ಬುಕ್ ಮಾಡಿದ್ದ ಭಕ್ತ ಕೆಆರ್ ಹರಿ ಭಾಸ್ಕರ್ ಅವರಿಗೆ ಸಂದೇಶ ಕಳುಹಿಸಿತು. ದೈನಂದಿನ ವಿಐಪಿ ವಿರಾಮದ ದರ್ಶನದ ಸಮಯದಲ್ಲಿ ಯಾವುದೇ ಅಪೇಕ್ಷಿತ ಸ್ಲಾಟ್ ಅನ್ನು ಬುಕ್ ಮಾಡಲು ಅಥವಾ ಮರುಪಾವತಿಯನ್ನು ಪಡೆಯಲು ಕೇಳಿಕೊಂಡಿತು. ಆದರೆ ಹರಿಭಾಸ್ಕರ್ ಅವರು ತಮ್ಮ ವಸ್ತ್ರಾಲಂಕಾರ ಸೇವಾ ದಿನಾಂಕವನ್ನು ಒಂದು ವರ್ಷದ ನಂತರವೂ ತಮಗೆ ಅನುಕೂಲಕರವಾದ ಯಾವುದೇ ದಿನಾಂಕಕ್ಕೆ ಮರು ನಿಗದಿಪಡಿಸುವಂತೆ ದೇವಸ್ಥಾನ ಟ್ರಸ್ಟ್‌ ಅನ್ನು ಕೇಳಿಕೊಂಡರು.

ಟಿಟಿಡಿ ವಿರುದ್ಧ ಗ್ರಾಹಕ ಕೋರ್ಟ್‌ಗೆ ದೂರು

ಹರಿಭಾಸ್ಕರ್ ಮನವಿ ತಿರಸ್ಕಿರಿಸಿದ ಟಿಟಿಡಿ ಆಡಳಿತವು ಸೇವೆಯನ್ನು ಮರುಹೊಂದಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ಇದರಿಂದ ಆಕ್ರೋಶಗೊಂಡ ಹರಿಭಾಸ್ಕರ್, ಸೇಲಂ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ತೆರಳಿ ಟಿಟಿಡಿ ವಿರುದ್ಧ ದೂರು ದಾಖಲಿಸಿದ್ದರು.

ಇದನ್ನೂ ಓದಿ: TTD: ವೆಂಕಟೇಶ್ವರನಿಗೆ ಸುಗಂಧ ಸೂಸುವ ಹೂಗಳಿಂದ ಪುಷ್ಪಯಾಗ! ಫೋಟೋಗಳನ್ನು ನೋಡಿ

ಭಕ್ತನಿಗೆ 45 ಲಕ್ಷ ನೀಡುವಂತೆ ಕೋರ್ಟ್ ಆದೇಶ

ಹರಿಭಾಸ್ಕರ್ ದೂರಿನ ವಿಚಾರಣೆ ನಡೆಸಿದ ಗ್ರಾಹಕರ ಕೋರ್ಟ್‌ ಟಿಟಿಡಿಗೆ ಚಾಟಿ ಬೀಸಿದೆ. ಭಕ್ತಾದಿಗಳಿಗೆ ವಸ್ತ್ರಾಲಂಕಾರ ಸೇವೆಯನ್ನು ಒಂದು ವರ್ಷದೊಳಗೆ ಮಂಜೂರು ಮಾಡುವಂತೆ ಟಿಟಿಡಿಗೆ ಗ್ರಾಹಕ ಆಯೋಗವು ಸೂಚಿಸಿದೆ. ಸೇವೆಯಲ್ಲಿನ ಕೊರತೆ ಮತ್ತು ಭಕ್ತ ಮತ್ತು ಅವರ ಕುಟುಂಬಕ್ಕೆ ಮಾನಸಿಕ ಯಾತನೆ ಉಂಟುಮಾಡಿದ್ದಕ್ಕಾಗಿ ಪರಿಹಾರವಾಗಿ 45 ಲಕ್ಷ ರೂಪಾಯಿಯನ್ನು ನೀಡುವಂತೆ ಆದೇಶಿಸಿದೆ. 2006 ರಿಂದ ಇಲ್ಲಿಯವರೆಗೆ ವಾರ್ಷಿಕ 24% ಬಡ್ಡಿಯೊಂದಿಗೆ ಭಾಸ್ಕರ್‌ಗೆ ಬುಕಿಂಗ್ ಮೊತ್ತದ ರೂ 12,250 ಅನ್ನು ಮರುಪಾವತಿಸಲು ಟಿಟಿಡಿಗೆ ಸೂಚಿಸಿದೆ.
Published by:Annappa Achari
First published: