Noida Twin Towers Demolition: ನೋಯ್ಡಾದ ಬೃಹತ್ ಅವಳಿ ಕಟ್ಟಡ ನೆಲಸಮ! 9 ಸೆಕೆಂಡ್‌ಗಳಲ್ಲಿ ಡೆಮಾಲಿಷನ್

ನೋಯ್ಡಾದ ಬೃಹತ್ ಅವಳಿ ಕಟ್ಟಡ ನೆಲಸಮವಾಗಿದೆ. 337 ಅಡಿ ಎತ್ತರದ ನೋಯ್ಡಾದ (Noida) ಸೂಪರ್​ಟೆಕ್ (Super tech) ಅವಳಿ ಕಟ್ಟಡಗಳ ನೆಲಸಮ (Demolition) ಆಗಿದೆ. ಇದು ಜಾಗತಿಕ ಇತಿಹಾಸದಲ್ಲಿಯೇ ಅಪರೂಪದ ಕಾರ್ಯಾಚರಣೆ ಆಗಿದೆ. ಈ ಗಗನಚುಂಬಿ ಕಟ್ಟಡ ಕೇವಲ ಒಂಬತ್ತೇ ಸೆಕೆಂಡ್‌ಗಳಲ್ಲಿ ನಾಮಾವಶೇಷವಾಗಿದೆ!

ಧರೆಗುರುಳಿದ ಬೃಹತ್ ಕಟ್ಟಡ

ಧರೆಗುರುಳಿದ ಬೃಹತ್ ಕಟ್ಟಡ

  • Share this:
ನೋಯ್ಡಾ: ಇಡೀ ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ನೋಯ್ಡಾದ (Noida) ಬೃಹತ್ ಅವಳಿ ಕಟ್ಟಡ (Big Twins Tower) ನೆಲಸಮವಾಗಿದೆ. 337 ಅಡಿ ಎತ್ತರದ ನೋಯ್ಡಾದ (Noida) ಸೂಪರ್​ಟೆಕ್ (Super tech) ಅವಳಿ ಕಟ್ಟಡಗಳ ನೆಲಸಮ (Demolition) ಆಗಿದೆ. ಇದು ಜಾಗತಿಕ ಇತಿಹಾಸದಲ್ಲಿಯೇ ಅಪರೂಪದ ಕಾರ್ಯಾಚರಣೆ ಆಗಿದೆ. ನೋಯ್ಡಾದ ಸೆಕ್ಟರ್ 93ಎ ( Noida Sector 93A) ಪ್ರದೇಶದಲ್ಲಿರುವ ಎರಡು ದೊಡ್ಡ ಕಟ್ಟಡಗಳನ್ನು ಕಾನೂನಿನ ನಿಯಮದ ವಿರುದ್ಧವಾಗಿ ನಿರ್ಮಿಸಲಾಗಿತ್ತು. ಹಲವು ವರ್ಷಗಳ ಕಾನೂನು ಹೋರಾಟದ (Legal fight)  ನಂತರ ಈ ಕಟ್ಟಡಗಳು ಧರೆಗುರುಳಿವೆ.

9 ಸೆಕೆಂಡ್‌ಗಳಲ್ಲೇ ಟವರ್ ನೆಲಸಮ

ಬರೋಬ್ಬರಿ 70 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೋಯ್ಡಾದ ಅವಳಿ ಗೋಪುರ ಇಂದು ಧರೆಗೆ ಉರುಳಿದೆ. 3,700 ಕೆಜಿ ಸ್ಫೋಟಕ ಬಳಸಿ ಕಟ್ಟಡಗಳನ್ನು ನೆಲಕ್ಕೆ ಉರುಳಿಸಲಾಗಿದೆ. ಇಂದು ಬೆಳಗ್ಗೆ 6 ಗಂಟೆಯಿಂದಲೇ ಅವಳಿ ಕಟ್ಟಡ ಉರುಳಿಸುವ ಕಾರ್ಯಾಚರಣೆ ಆರಂಭಗೊಂಡಿದ್ದು, ಮಧ್ಯಾಹ್ನ 2.30ಕ್ಕೆ ಸರಿಯಾಗಿ ಅವಳಿ ಕಟ್ಟಡಗಳನ್ನು ನೆಲಕ್ಕೆ ಉರುಳಿಸಲಾಗಿದೆ.


ಸ್ಫೋಟಕ್ಕೆ 20 ಕೋಟಿ ರೂಪಾಯಿ ಖರ್ಚು!

ಇಂದು ಮಧ್ಯಾಹ್ನ 2:30ಕ್ಕೆ ಕೇವಲ 9 ಸೆಂಕೆಡ್​​​ಗಳಲ್ಲಿ ಅವಳಿ ಗೋಪುರ ಸ್ಫೋಟಗೊಂಡು ಧರೆಗೆ ಉರುಳಿದೆ. ಈ ವೇಳೆ ಎನ್​​ಡಿಆರ್​​ಎಫ್​, ಸಿಬಿಆರ್​​ಐ ಸೇರಿದಂತೆ ಇತರೆ ಅಧಿಕಾರಿಗಳ ಉಪಸ್ಥಿತರಿದ್ದರು. ಇನ್ನು ಈ ಬಹಳ ಅಪಾಯಕಾರಿ ಹಾಗೂ ಸಾಹಸಮಯ ಕಾರ್ಯಾಚರಣೆಗಾಗಿ ಬರೋಬ್ಬರಿ 20 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.

ಇದನ್ನೂ ಓದಿ: Supertech Twin Towers ಉರುಳಿಸಲಿರುವ ಆ ಬ್ಲಾಸ್ಟರ್‌ ಯಾರು? ಇದು ಅವರ ಬದುಕಿನ ಮಹತ್ವದ ಘಳಿಗೆಯಂತೆ!

ಕಾರ್ಯಾಚರಣೆಗೆ 3700 ಕೆಜಿ ಸ್ಫೋಟಕ ಬಳಕೆ 

ಸುಮಾರು 100 ಮೀಟರ್ ಎತ್ತರದ ಕಟ್ಟಡಗಳನ್ನು  ಮಧ್ಯಾಹ್ನ 2:30 ಕ್ಕೆ ನೆಲಸಮ ಮಾಡಲಾಗಿದೆ. ಎರಡು ಟವರ್‌ಗಳಲ್ಲಿ 3,700 ಕೆಜಿ ಸ್ಫೋಟಕಗಳನ್ನು ಸಜ್ಜುಗೊಳಿಸಲಾಗಿತ್ತು. ಕಂಬಗಳಲ್ಲಿನ ಸುಮಾರು 7,000 ರಂಧ್ರಗಳಲ್ಲಿ ಸ್ಫೋಟಕಗಳನ್ನು ಅಳವಡಿಸಲಾಗಿತ್ತು. ಜೊತೆಗೆ 20,000 ಸರ್ಕ್ಯೂಟ್‌ಗಳನ್ನು ಹೊಂದಿಸಲಾಗಿತ್ತು.

ಅಕ್ಕಪಕ್ಕದ ನಿವಾಸಿಗಳ ಸ್ಥಳಾಂತರ

ಈ ಕಟ್ಟಡಗಳು ನೇರವಾಗಿ ಕುಸಿದು ಬಿದ್ದಿವೆ. ಸಮೀಪದ ಸೊಸೈಟಿಗಳು, ಎಮರಾಲ್ಡ್ ಕೋರ್ಟ್ ಮತ್ತು ಸೆಕ್ಟರ್ 93A ನಲ್ಲಿನ ಪಕ್ಕದ ಎಟಿಎಸ್ ಗ್ರಾಮದ ಸುಮಾರು 5,000 ನಿವಾಸಿಗಳನ್ನು ಅವರ ಆವರಣದಿಂದ ಸ್ಥಳಾಂತರಿಸಲಾತ್ತು.  3,000 ವಾಹನಗಳು, ಬೆಕ್ಕುಗಳು ಮತ್ತು ನಾಯಿಗಳು ಸೇರಿದಂತೆ 150-200 ಸಾಕುಪ್ರಾಣಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು.

ಸೂಪರ್‌ ಟೆಕ್‌ ಕಂಪನಿಗೆ ಸೇರಿದ್ದ ಕಟ್ಟಡ

ಸೂಪರ್‌ಟೆಕ್ ಕಂಪೆನಿಯ ಎಮರಾಲ್ಡ್ ಕೋರ್ಟ್ ಪ್ರಾಜೆಕ್ಟ್‌ನ ಭಾಗವಾಗಿ, ನೋಯ್ಡಾ- ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇ ಸಮೀಪ 40 ಅಂತಸ್ತಿನ ಎರಡು ಬೃಹತ್ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಸುಮಾರು 7.5 ಲಕ್ಷ ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ 900ಕ್ಕೂ ಹೆಚ್ಚು ಫ್ಲ್ಯಾಟ್‌ಗಳು ಈ ಕಟ್ಟಡದಲ್ಲಿತ್ತು.



ಅವಳಿ ಕಟ್ಟಡದಲ್ಲಿ ಎಷ್ಟು ಮಹಡಿಗಳಿದ್ದವು?

2 ಕಟ್ಟಡಗಳಲ್ಲಿ 40 ಮಹಡಿಗಳನ್ನು ಕಟ್ಟಲು ಯೋಜನೆ ರೂಪಿಸಲಾಗಿತ್ತಂತೆ. ಆದ್ರೆ ನ್ಯಾಯಾಲಯವು ತಡೆಯಾಜ್ಞೆ ಕೊಟ್ಟ ಕಾರಣ ಒಂದಿಷ್ಟು ಮಹಡಿಗಳನ್ನು ಕಟ್ಟಿಲ್ಲ. ಈ ಅವಳಿ ಕಟ್ಟಡಗಳ ಪೈಕಿ ಒಂದಾಗಿರುವ ಅಪೆಕ್ಸ್ ಟವರ್ 32 ಹಾಗೂ ಸಯಾನಿ 29 ಮಹಡಿಗಳನ್ನು ಹೊಂದಿತ್ತು. ಎರಡೂ ಕಟ್ಟಡಗಳಿಂದ 900 ಕ್ಕೂ ಹೆಚ್ಚು ಫ್ಲಾಟ್‍ಗಳನ್ನು ಮಾರಲು ಬಿಲ್ಡರ್​ಗಳು ಚಿಂತನೆ ನಡೆಸಿದ್ದರು. ಆ ಸಮಯದಲ್ಲಿ  ಮೂರನೇ ಎರಡರಷ್ಟು ಫ್ಲಾಟ್‍ಗಳನ್ನು ಬುಕ್ ಆಗಿದ್ದವು. ಕೆಲವು ಫ್ಲಾಟ್‍ಗಳನ್ನು ಮಾರಾಟ ಮಾಡಲಾಗಿತ್ತು. ಕೋರ್ಟ್ ಗ್ರಾಹಕರಿಗೆ ಬಡ್ಡಿ ಸಹಿತ ಹಣ ಹಿಂದಿರುಗಿಸುವಂತೆ ಆದೇಶಿಸಿತ್ತು.

ಇದನ್ನೂ ಓದಿ: Building Demolition: 9 ಸೆಕೆಂಡ್​ಗಳಲ್ಲಿ ಕೊನೆಯಾಗಲಿದೆ 9 ವರ್ಷಗಳ ಹೋರಾಟ, ಇದು ಅವಳಿ ಕಟ್ಟಡದ ಕತೆ!

ಕಟ್ಟಡ ನೆಲಸಮಕ್ಕೆ ಆದೇಶಿಸಿದ್ದ ಸುಪ್ರೀಂ ಕೋರ್ಟ್

 ಕಟ್ಟಡ ಸಂಹಿತೆಗಳನ್ನು ಉಲ್ಲಂಘನೆ ಮಾಡಿರುವ ಕಾರಣದಿಂದ ಅವಳಿ ಟವರ್‌ಗಳನ್ನು ಉರುಳಿಸಲಾಗಿದೆ. ನೋಯ್ಡಾ ಅಧಿಕಾರಿಗಳು ಮತ್ತು ಸೂಪರ್‌ಟೆಕ್ ಕಂಪೆನಿಯು 'ಮಹಾಪಾತಕದ ಕೃತ್ಯ'ದಲ್ಲಿ ಭಾಗಿಯಾಗಿದ್ದಾರೆ ಎಂದು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ನೋಯ್ಡಾ ಪ್ರಾಧಿಕಾರದ ಮಾರ್ಗದರ್ಶನದೊಂದಿಗೆ ಸೂಪರ್‌ಟೆಕ್ ಸಂಸ್ಥೆಯು ತನ್ನದೇ ಖರ್ಚಿನಲ್ಲಿ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಬೃಹತ್ ಕಟ್ಟಡವನ್ನು ಒಂಬತ್ತೇ ಸೆಕೆಂಡ್‌ಗಳಲ್ಲಿ ನೆಲಸಮ ಮಾಡಲಾಗಿದೆ.
Published by:Annappa Achari
First published: