Himalaya: ಅಪಾಯದಲ್ಲಿದೆ ಹಿಮಾಲಯ ಪರ್ವತ.. ಹಿಮನದಿಗಳು ಕರಗಿದರೆ ಏನಾಗುತ್ತೆ?

Himalaya mountain: ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹಿಮಾಲಯದ ಹಿಮನದಿಗಳು ಅಧಿಕ ಪ್ರಮಾಣದಲ್ಲಿ ಕರಗುತ್ತಿದೆ. ಅಲ್ಲದೆ ಜಗತ್ತಿನ 140 ಕೋಟಿ ಜನರು ಹಿಮಾಲಯದಲ್ಲಿ ಹುಟ್ಟುವ ನದಿಗಳ ನೀರಿನ ಮೇಲೆ ಅವಲಂಬಿತವಾಗಿದ್ದಾರೆ. ದುರಂತವೆಂದರೆ ಹಿಮ ಬೀಳುವುದು ತೀವ್ರಗತಿಯಲ್ಲಿ ಕಡಿಮೆಯಾಗುತ್ತಿದ್ದು ಮುಂದಿನ ಕೆಲವೇ ದಶಕಗಳಲ್ಲಿ ಅದು ನಿಂತುಹೋಗಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹಿಮಾಲಯ(Himalaya) ಇದು ಕೆಲ ಭಾರತೀಯರ(India) ಪಾಲಿನ ಭಕ್ತಿ ಕೇಂದ್ರ. ವಿಜ್ಞಾನಿಗಳ(Scientist) ಪಾಲಿಗೆ ಕೌತುಕದ ಆಗರ, ಇನ್ನು ಪರ್ವತಾರೋಹಿಗಳಿಗಂತು(Mountaineer) ಇದು ಸಾಹಸದ ಬೀಡು, ಹೀಗೆ ನಾನಾ ಪ್ರಾಕೃತಿಕ ಕಾರಣಗಳಿಂದ ಹಿಮಾಲಯ ಜಗತ್ತಿನ(World) ಗಮನವನ್ನ ತನ್ನತ್ತ ಸೆಳೆದಿದೆ. ಅದು ಹಿಮಾಲಯ ಪರ್ವತ ಶ್ರೇಣಿಗಳಿಗಿರುವ ತಾಕತ್ತು. ಇದೇ ಹಿಮಾಲಯ ಪರ್ವತ ಇವತ್ತು ಭಾರತೀಯರನ್ನ ನೈಸರ್ಗಿಕ ದಾಳಿಯಿಂದ(Natural disasters) ನಮ್ಮನ್ನ ಕಾಪಾಡ್ತಾ ಇದೆ. ಹಿಮಾಲಯ ಪರ್ವತ ಇವತ್ತು ಭಾರತೀಯರನ್ನ ನೈಸರ್ಗಿಕ ದಾಳಿಯಿಂದ ನಮ್ಮನ್ನ ಕಾಪಾಡ್ತಾ ಇದೆ. ಇದಕ್ಕೊಂದು ಉತ್ತಮ ಉದಾಹರಣೆ ಅಂದರೆ ಉತ್ತರ ಭಾರತದಲ್ಲಿ ಬಂದೊದಗಿರುವ ಶೀತಮಾರುತ, ಹೌದು ಈ ಶೀತ ಮಾರುತ ಮೆಡಟರೇನಿಯನ್​ ಸಮುದ್ರದಿಂದ ಆರಂಭವಾಗಿ ಹಲವು ದೇಶಗಳನ್ನ ದಾಟಿಕೊಂಡು ವೇಗವಾಗಿ ಭಾರತಕ್ಕೆ ಬರುತ್ತೆ. ಆದರೆ ಈ ಮಾರುತದ ವೇಗಕ್ಕೆ ಕಡಿವಾಣ ಹಾಕುವ ಈ ಪರ್ವತ, ಮಾರುತದ ವೇಗವನ್ನ ತಗ್ಗಿಸುತ್ತದೆ. ಆ ಮೂಲಕ ಭಾರತಕ್ಕೆ ಬರಬಹುದಾದ ಮಹಾ ಆಪತ್ತನ್ನ ಕಡಿಮೆ ಮಾಡಿದೆ. ಶತ್ರು ಸೈನ್ಯಕ್ಕೆ ಕೂಡ ಈ ಪರ್ವತ ಅಡ್ಡಿಯಾಗಿ ನಿಂತಿದ್ದು ಶತ್ರು ದೇಶಗಳ ಅದೆಷ್ಟೋ ದಾಳಿ ಪ್ರಯತ್ನಗಳನ್ನ ವಿಫಲಗೊಳಿಸಿದೆ.

  140 ಕೋಟಿ ಜನರ ನೀರಿನ ಆಧಾರ ಹಿಮಾಲಯ..

  ಭಾರತದ ಪಾಲಿಗೆ ಸದಾ ರಕ್ಷಕನಂತೆ ನಿಂತಿರುವ ಹಿಮಾಲಯ ಪರ್ವತ, ಈಗ ಭಾರತಕ್ಕೆ ಆಪತ್ತು ತರಲಿದ್ಯಾ ಅನ್ನೋ ಅನುಮಾನ ಕಾಡೋದಕ್ಕೆ ಶುರುವಾಗಿದೆ. ಇದಕ್ಕೆ ಕಾರಣ ಜಾಗತಿಕ ತಾಪಮಾನ. ಹೌದು ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹಿಮಾಲಯದ ಹಿಮನದಿಗಳು ಅಧಿಕ ಪ್ರಮಾಣದಲ್ಲಿ ಕರಗುತ್ತಿದೆ. ಅಲ್ಲದೆ ಜಗತ್ತಿನ 140 ಕೋಟಿ ಜನರು ಹಿಮಾಲಯದಲ್ಲಿ ಹುಟ್ಟುವ ನದಿಗಳ ನೀರಿನ ಮೇಲೆ ಅವಲಂಬಿತವಾಗಿದ್ದಾರೆ. ದುರಂತವೆಂದರೆ ಹಿಮ ಬೀಳುವುದು ತೀವ್ರಗತಿಯಲ್ಲಿ ಕಡಿಮೆಯಾಗುತ್ತಿದ್ದು ಮುಂದಿನ ಕೆಲವೇ ದಶಕಗಳಲ್ಲಿ ಅದು ನಿಂತುಹೋಗಲಿದೆ.ಸುಮಾರು 140 ಕೋಟಿಯಷ್ಟು ಜನರು ನೀರಾವರಿ, ಜಲ ವಿದ್ಯುತ್ ಮತ್ತು ಕುಡಿಯುವ ನೀರಿಗಾಗಿ ಹಿಮಾಲಯದಿಂದ ಹರಿಯುವ ಹಿಮನದಿಗಳನ್ನು ಆಶ್ರಯಿಸಿದ್ದಾರೆ. ಬೇಸಿಗೆ ಕಾಲದಲ್ಲಿ ಹಿಮಕರಗುವಿಕೆ ಸಾಮಾನ್ಯವಾಗಿದ್ದರೂ, ಹಿಮನದಿಗಳಲ್ಲಿನ ನೀರ್ಗಲ್ಲುಗಳ ಕರಗುವಿಕೆ ಕಳೆದ 10 ವರ್ಷಗಳಲ್ಲಿ ಜಾಸ್ತಿಯಾಗಿದೆ. ಈ ರೀತಿ ಹೆಚ್ಚಿನ ಪ್ರಮಾಣದಲ್ಲಿ ಹಿಮಕರಗಿದರೆ ನೀರಿನ ಕೊರತೆಯುಂಟಾಗಬಹುದು ಎಂದು ಅಧ್ಯಯನಕಾರರು ಹೇಳಿದ್ದಾರೆ.

  ಇದನ್ನೂ ಓದಿ:  ಬೋಟಿಂಗ್ ಮಾಡುತ್ತಿದ್ದವರ ಮೇಲೆ ಬಂಡೆ ಕುಸಿದು 10 ಜನರ ಸಾವು; ವಿಡಿಯೋ ನೋಡಿ

  ಹಿಮಾಲಯದಲ್ಲಿ ಕರಗುತ್ತಿರುವ ಹಿಮನದಿಗಳು

  ಹಿಮಾಲಯದ ಹಿಮನದಿಗಳು ಅನಿರೀಕ್ಷಿತ ಮಟ್ಟದಲ್ಲಿ ಕರಗುತ್ತಿವೆ. ಕಳೆದ ಕೆಲವು ದಶಕಗಳಲ್ಲಿ ಈ ಹಿಮನದಿಗಳು ಸುಮಾರು 10 ಪಟ್ಟು ಕರಗಿವೆ. 400–700 ವರ್ಷಗಳ ಹಿಂದಿನ ‘ಲಿಟಲ್ ಐಸ್ ಏಜ್‌’ ನಂತರ ಇದೇ ಮೊದಲ ಬಾರಿಗೆ ಈ ಮಟ್ಟದಲ್ಲಿ ಹಿಮನದಿಗಳು ಕರಗುತ್ತಿವೆ ಎಂದು ಇಂಗ್ಲೆಂಡ್‌ನ ಲೀಡ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ನೇತೃತ್ವದ ತಂಡದ ಅಧ್ಯಯನ ವರದಿ ತಿಳಿಸಿದೆ.

  1975ರಿಂದ 2000ರವರೆಗೆ ಹೋಲಿಸಿದರೆ 2000ನೇ ಇಸವಿ ನಂತರ ಹಿಮಪರ್ವತಗಳ ಕರಗುವಿಕೆ ಪ್ರಮಾಣ ಹೆಚ್ಚಿದೆ ಎಂದು 2019ರಲ್ಲಿ ಸೈನ್ಸ್ ಅಡ್ವಾನ್ಸಸ್ ನಲ್ಲಿನ ಅಧ್ಯಯನವೊಂದು ತಿಳಿಸಿದೆ. ಇದರಿಂದ ಗಂಗಾ ನದಿ ತಟದಲ್ಲಿ ವಾಸಿಸುತ್ತಿರುವ, ಉತ್ತರಾಖಂಡದಿಂದ ಬಾಂಗ್ಲಾದೇಶದವರೆಗಿನ ಸುಮಾರು 600 ಮಿಲಿಯನ್ ಮಂದಿಯ ಜೀವನಕ್ಕೆ ಸಂಕಷ್ಟ ಬರಲಿದೆ ಎಂದು ಎಚ್ಚರಿಕೆಯನ್ನೂ ಅಧ್ಯಯನದಲ್ಲಿ ನೀಡಲಾಗಿದೆ..

  ಇದನ್ನೂ ಓದಿ: ಪಕ್ಷಿಗಳ ಮೇಲಿನ ಪ್ರೀತಿಗೆ ಲಕ್ಷಾಂತರ ರೂ ವೆಚ್ಚದಲ್ಲಿ ಬಂಗ್ಲೆಯನ್ನೇ ನಿರ್ಮಿಸಿದ ಗುಜರಾತಿನ ವ್ಯಕ್ತಿ!

  ಕುತಂತ್ರಿ ಚೀನಾದಿಂದಲೇ ಹಿಮಾಲಯಕ್ಕೆ ಮಹಾ ಆಪತ್ತು

  ಗುಡಾರ-ಬಿಡಾರ ಮಿಲಿಟರಿ ಪೋಸ್ಟ್, ಕ್ಯಾಂಪ್‌ಗಳು ಮತ್ತು ಮಿಲಿಟರಿ ವಸತಿಗಳನ್ನು ಕಟ್ಟಿಕೊಂಡು ಲಕ್ಷಾಂತರ ವಾಹನಗಳನ್ನು ಚಲಿಸುತ್ತ ವಿಷ ಅನಿಲ ಸುರಿಸುತ್ತಾ ಹಿಮ ಸಾಮ್ರಾಜ್ಯಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಚೀನಾ ವಿಮಾನ ನಿಲ್ದಾಣಗಳನ್ನೇ ನಿರ್ಮಿಸುತ್ತಿದೆ. ಹಿಮಪಾತ, ಹಿಮಗಲ್ಲು-ಹಿಮಸರೋವರಗಳು ಕುಸಿದು, ಹಿಮಾಲಯ ಪರ್ವತ ಶ್ರೇಣಿಗಳು ಬೋಳುಬೆಟ್ಟಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಭೂಮಿ-ಆಕಾಶದ ಮಧ್ಯೆ ಏರ್ಪಟ್ಟಿದ್ದ ಲಕ್ಷಾಂತರ ವರ್ಷಗಳ ತಾಳಮೇಳದ ಪರಿಸರ ಕೊಂಡಿಗಳು ಛಿದ್ರಗೊಳ್ಳುತ್ತಿವೆ. ಹಿಮಾಲಯ ತಪ್ಪಲುಗಳಲ್ಲಿ ಲಕ್ಷಾಂತರ ವರ್ಷಗಳಿಂದ ತಾಯಿಯನ್ನು ತಬ್ಬಿಕೊಂಡಂತೆ ಬದುಕು ನಡೆಸುತ್ತಿದ್ದ ನೀರ್ಗಲ್ಲು-ಹಿಮನದಿಗಳು ಮಾನವಜನ್ಯ ಚಟುವಟಿಕೆಗಳಿಂದ ಛಿದ್ರಗೊಂಡು ಮಾಯವಾಗುತ್ತಿವೆ.  ಚೀನಾ ಹಿಮಾಲಯದಲ್ಲಿ ಹುಟ್ಟಿ ಹರಿಯುವ ಎಲ್ಲಾ ನದಿಗಳ ಮೇಲೆ ನೂರಾರು ಅಣೆಕಟ್ಟು/ವಿದ್ಯುತ್ ಯೋಜನೆಗಳನ್ನು ಕಟ್ಟುತ್ತಾ ಹರಿಯುವ ನೀರಿಗೆ ಅಡ್ಡಗಾಲು ಹಾಕಿ ಹಿಮಾಲಯವನ್ನು ಹೈರಾಣ ಮಾಡುಬಿಟ್ಟಿದೆ.
  Published by:ranjumbkgowda1 ranjumbkgowda1
  First published: