Old Vehicles Ban: ದೇಶದಲ್ಲಿ ಹಳೆಯ, ಮಾಲಿನ್ಯಕಾರಕ ವಾಹನ ನಿಷೇಧ! ಮುಂದಿದೆ ನಾನಾ ಸವಾಲು

ತನ್ನ ದೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ಹಳೆಯ ಮಾಲಿನ್ಯಕಾರಕ ವಾಹನಗಳನ್ನು ರಸ್ತೆಗೆ ಇಳಿಯದಂತೆ ಮಾಡುವ ಭಾರತದ ಯೋಜನೆಯು ಬಹುಶಃ ಹಲವಾರು ಸವಾಲುಗಳನ್ನು ಎದುರಿಸಬೇಕಿದೆ ಎಂದು ತೋರುತ್ತಿದೆ. ಏಕೆದಂರೆ, ಇತ್ತೀಚಿನ ಸಮೀಕ್ಷೆಯೊಂದು ತಿಳಿಸಿರುವ ಪ್ರಕಾರ, ಹಳೆಯ ಕಾರುಗಳನ್ನು ಹೊಂದಿರುವ ಬಹುಪಾಲು ಮಂದಿಗೆ, ತಮ್ಮ ಕಾರುಗಳನ್ನು ಮಾರಲು ಯಾವುದೇ ಆಸಕ್ತಿ ಇಲ್ಲ ಎಂದಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ತನ್ನ ದೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ಹಳೆಯ ಮಾಲಿನ್ಯಕಾರಕ ವಾಹನಗಳನ್ನು (Polluting Vehicles) ರಸ್ತೆಗೆ ಇಳಿಯದಂತೆ ಮಾಡುವ ಭಾರತದ ಯೋಜನೆಯು ಬಹುಷಃ ಹಲವಾರು ಸವಾಲುಗಳನ್ನು ಎದುರಿಸಬೇಕಿದೆ ಎಂದು ತೋರುತ್ತಿದೆ. ಏಕೆದಂರೆ, ಇತ್ತೀಚಿನ ಸಮೀಕ್ಷೆಯೊಂದು ತಿಳಿಸಿರುವ ಪ್ರಕಾರ, ಹಳೆಯ ಕಾರುಗಳನ್ನು (Car) ಹೊಂದಿರುವ ಬಹುಪಾಲು ಮಂದಿಗೆ, ತಮ್ಮ ಕಾರುಗಳನ್ನು ಮಾರಲು ಯಾವುದೇ ಆಸಕ್ತಿ ಇಲ್ಲ ಎಂದಿದೆ. ಲೋಕಲ್ ಸರ್ಕಲ್ ನಡೆಸಿದ ಸಮೀಕ್ಷೆಯಲ್ಲಿ, 10,543 ಮಂದಿ ವಾಹನ ಮಾಲೀಕರಲ್ಲಿ (Owner) ಶೇಕಡಾ 57 ರಷ್ಟು ಮಂದಿ ಕಾರುಗಳ ಬಳಕೆಯನ್ನು ನಿಲ್ಲಿಸಬೇಕೇ ಬೇಡವೇ ಎಂಬುವುದರ ಬಗ್ಗೆ ಯೋಚಿಸುತ್ತಿದ್ದರೆ, ಕಾರುಗಳು ಎಷ್ಟು ಹಳೆಯದು ಎಂಬುದಕ್ಕಿಂತಲೂ, ಓಡೋಮೀಟರ್‍ನಲ್ಲಿನ ಮೈಲುಗಳ ಮೇಲೆ ಅವಲಂಬಿತವಾಗಿದೆ ಎನ್ನುತ್ತಾರೆ ಕೆಲವರು.

ಕಳೆದ ವರ್ಷ ಸರಕಾರ 20 ವರ್ಷಕ್ಕಿಂತ ಹಳೆಯ ವೈಯುಕ್ತಿಕ ವಾಹನ ಮತ್ತು 15 ವರ್ಷಕ್ಕಿಂತ ಹಳೆಯ ವಾಣಿಜ್ಯ ವಾಹನಗಳು ಫಿಟ್‍ನೆಟ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಆದೇಶಿಸಿತ್ತು.

ಎಂಟು ಪಟ್ಟು ಹೆಚ್ಚು ಖರ್ಚು
ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಅರ್ಧದಷ್ಟು ವಾಹನ ಮಾಲೀಕರು ತಾವು ಹೊಂದಿರುವ ಕಾರುಗಳ ಸಂಖ್ಯೆಯನ್ನು ಕಡಿಮೆ ಮಾಡುವ ಇರಾದೆ ಹೊಂದಿದ್ದಾರೆ. ಏಕೆಂದರೆ ಅವರ ಪ್ರಕಾರ ಭಾರತದ ಕ್ಯಾಶ್-ಫಾರ್-ಕ್ಲಂಕರ್ಸ್ ನೀತಿಯಿಂದಾಗಿ ಹಳೆಯ ಕಾರುಗಳನ್ನು ಇಟ್ಟುಕೊಳ್ಳುವುದು ದುಬಾರಿ ಬಾಬ್ತು ಆಗಿದೆ. ಏಪ್ರಿಲ್‍ನಿಂದ ಆಟೋ ಫಿಟ್‍ನೆಟ್ ಪರೀಕ್ಷೆಗಳು ಹೆಚ್ಚು ದುಬಾರಿಯಾಗಿವೆ. 15 ವರ್ಷಕ್ಕಿಂತ ಹಳೆಯ ಕಾರುಗಳ ನೋಂದಣಿಯನ್ನು ನವೀಕರಿಸಲು ಅದರ ಮಾಲೀಕರು ಈಗ ಎಂಟು ಪಟ್ಟು ಖರ್ಚು ಮಾಡಬೇಕಾಗುತ್ತಿದೆ.

ನಿವ್ವಳ ಇಂಗಾಲವನ್ನು ಶೂನ್ಯಕ್ಕೆ ತಿರುಗಿಸಬೇಕು ಎಂಬ ಭಾರತದ ಮಹಾತ್ವಾಕಾಂಕ್ಷೆ
2070 ರ ಸಮಯಕ್ಕೆ ನಿವ್ವಳ ಇಂಗಾಲವನ್ನು ಶೂನ್ಯಕ್ಕೆ ತಿರುಗಿಸಬೇಕು ಎಂಬ ಭಾರತದ ಮಹಾತ್ವಾಕಾಂಕ್ಷೆಗೆ ಮಾಲಿನ್ಯಕಾರಕ ವಾಹನಗಳನ್ನು ತ್ಯಜಿಸಲು ಸಾರ್ವಜನಿಕರು ಆಸಕ್ತಿ ತೋರಿಸದೇ ಇರುವುದು ಒಂದು ರೀತಿಯ ಹಿನ್ನಡೆಯನ್ನು ಉಂಟು ಮಾಡುವ ಸಾಧ್ಯತೆ ಇದೆ. ಇನ್ನು ಎಮಿಶನ್ ಕಡಿತಗೊಳಿಸಲು ಎಲೆಕ್ಟ್ರಿಕ್ ಕಾರುಗಳನ್ನು ತೆಗೆದುಕೊಳ್ಳಬೇಕು ಎಂಬ ಕ್ರಮ ನಮ್ಮ ದೇಶದ ಮಟ್ಟಿಗೆ ಅಷ್ಟು ಸುಲಭವಲ್ಲ ಎಂದು ಹೇಳಬಹುದು.

ಇದನ್ನೂ ಓದಿ:  Top 5 safest cars in India: ನಿಮ್ಮ ಪ್ರಯಾಣ ಸುರಕ್ಷಿತವಾಗಿರಬೇಕಾ? ಹಾಗಿದ್ರೆ ಈ ಸೇಫೆಸ್ಟ್ ಕಾರುಗಳನ್ನು ಆಯ್ಕೆ ಮಾಡಬಹುದು

ಕಾರಣ, ಚಾರ್ಜಿಂಗ್ ನೆಟ್‍ವರ್ಕ್‍ನ ಕೊರತೆ ಮತ್ತು ಬ್ಯಾಟರಿ ಚಾಲಿತ ವಾಹನಗಳ ದುಬಾರಿ ಬೆಲೆ. 2025ರ ವೇಳೆಗೆ 20 ಮಿಲಿಯನ್ ಹಳೆಯ ವಾಹನಗಳು ಬಳಕೆಗೆ ಅನರ್ಹವಾಗುವ ಅಂತಿಮ ಹಂತ ತಲುಪಲಿದ್ದು , ಪರಿಸರಕ್ಕೆ ದೊಡ್ಡ ಮಟ್ಟದ ಹಾನಿಯನ್ನು ಉಂಟು ಮಾಡಲಿವೆ ಎಂದು ರಾಷ್ಟ್ರದ ವಿಜ್ಞಾನ ಮತ್ತು ಪರಿಸರ ಕೇಂದ್ರವು ಮುನ್ಸೂಚನೆ ನೀಡಿದೆ.

ಹೊಸ ಹೂಡಿಕೆಯನ್ನು ಆಕರ್ಷಿಸುವ ಹೊಸ ಯೋಜನೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಡಳಿತವು, ಈ ಯೋಜನೆಯು 100 ಶತಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹೊಸ ಹೂಡಿಕೆಯನ್ನು ಆಕರ್ಷಿಸುತ್ತದೆ ಮತ್ತು ಲೋಹಗಳಿಗಾಗಿ ಇತರ ದೇಶಗಳ ಮೇಲೆ ಅವಂಬಿತವಾಗುವುದನ್ನು ತಡೆಯುತ್ತದೆ ಎಂಬ ನಿರೀಕ್ಷೆಯನ್ನು ಹೊಂದಿದೆ. ಆದರೆ ವಾಹನ ತಯಾರಕರು ಮಾತ್ರ ಈ ವಿಷಯದಲ್ಲಿ ಸಾರ್ವಜನಿಕರ ಪರ ನಿಲ್ಲುತ್ತಿರುವಂತೆ ಕಾಣುತ್ತಿದೆ. “ವಾಹನವನ್ನು ಸ್ಕ್ರ್ಯಾಪ್ ಮಾಡಲು ವಯಸ್ಸು ಒಳ್ಳೆಯ ಮಾನದಂಡ ಅಲ್ಲ.

ರಸ್ತೆಯಲ್ಲಿ ಬೇರೆ ವಾಹನಗಳನ್ನು ಅಪಾಯಕ್ಕೆ ಸಿಲುಕಿಸದೆ, ಸುರಕ್ಷಿತವಾಗಿ ಚಲಿಸುವ ಕಾರಿನ ಸಾಮರ್ಥ್ಯ ತರ್ಕವಾಗಿರಬೇಕು. ಫಿಟ್‍ನೆಟ್ ಸರ್ಟಿಫಿಕೇಟ್ ಪಡೆಯಲು ಅದನ್ನು ರಿಪೇರಿ ಮಾಡಲು ಆರ್ಥಿಕವಾಗಿ ದುಬಾರಿ ಎಂದು ಬಳಕೆದಾರನಿಗೆ ಅನಿಸಿದಾಗ ವಾಹನವನ್ನು ಸ್ಕ್ರ್ಯಾಪ್ ಮಾಡಲಾಗುತ್ತದೆ” ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‍ನ ಅಧ್ಯಕ್ಷ ಆರ್. ಸಿ ಭಾರ್ಗವ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಮೂರು ವರ್ಷಗಳಿಗೊಮ್ಮೆ ವಾಹನಕ್ಕೆ ಫಿಟ್ ನೆಸ್ ಟೆಸ್ಟ್ ಕಡ್ಡಾಯ
ವೈಯುಕ್ತಿಕ ವಾಹನಗಳು ಕನಿಷ್ಟ ಮೂರು ವರ್ಷಗಳಿಗೊಮ್ಮೆ ಫಿಟ್ ನೆಸ್ ಟೆಸ್ಟ್ ಗೆ ಒಳಗಾಗಬೇಕು ಎನ್ನುವ ಭಾರ್ಗವ ಅವರ ಪ್ರಕಾರ, ನಿಯತಕಾಲಿಕವಾಗಿ ಫಿಟ್ ನೆಸ್ ಪ್ರಮಾಣಪತ್ರ ಪಡೆಯದ, ದೋಷಪೂರಿತ ವಾಹನಗಳ ಕಾರಣದಿಂದ ಹೆಚ್ಚಿನ ಸಂಖ್ಯೆಯ ಅಪಘಾತಗಳು ನಡೆಯುತ್ತಿವೆಎಂದಿದ್ದಾರೆ.

ಇದನ್ನೂ ಓದಿ: Volkswagen Virtus: ಬೆಲೆಗೆ ತಕ್ಕಂತೆ ಫೀಚರ್ಸ್​! ಸಖತ್ತಾಗಿದೆ ಗುರು ವರ್ಟಸ್​ ಕಾರು

ಪ್ರಸ್ತುತ ನಮ್ಮ ದೇಶದಲ್ಲಿ ಹೆಚ್ಚಿನ ದೊಡ್ಡ ಸ್ಕ್ರ್ಯಾಪಿಂಗ್ ಘಟಕಗಳ ಅಗತ್ಯ ಇದೆ. ಮಾರುತಿ ಸುಜುಕಿ ಮತ್ತು ಟೊಯೊಟಾ ಟ್ಸುಶೋ ಜಂಟಿಯಾಗಿ, ವಾರ್ಷಿಕವಾಗಿ ಸುಮಾರು 24,000 ಬಳಕೆಗೆ ಅನರ್ಹ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮತ್ತು ರೀಸೈಕಲ್ ಮಾಡು, 440 ಮಿಲಿಯನ್ ಹೂಡಿಕೆ ಮಾಡಿ ಸೌಲಭ್ಯವನ್ನು ಸ್ಥಾಪಿಸಿವೆ.
Published by:Ashwini Prabhu
First published: