ಅಯೋಧ್ಯೆ ತೀರ್ಪು: ನ್ಯಾಯಪೀಠದಲ್ಲಿದ್ದ ಮುಸ್ಲಿ ನ್ಯಾಯಮೂರ್ತಿಗೆ ಝಡ್ ಪ್ಲಸ್​​ ಸೆಕ್ಯೂರಿಟಿ

ಎಸ್.ಅಬ್ದುಲ್‌ ನಜೀರ್ ಮೂಲತ ಕಾರ್ಕಳದವರು. ಎರಡು ವರ್ಷಗಳ ಹಿಂದೆ ಸುಪ್ರೀಂಕೋರ್ಟ್​​​ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದರು. ಇವರು ಸುಪ್ರೀಂಕೋರ್ಟ್​ನ ಏಕೈಕ  ಮುಸ್ಲಿಂ ನ್ಯಾಯಮೂರ್ತಿ ಆಗಿದ್ದಾರೆ.

news18-kannada
Updated:November 18, 2019, 12:42 PM IST
ಅಯೋಧ್ಯೆ ತೀರ್ಪು: ನ್ಯಾಯಪೀಠದಲ್ಲಿದ್ದ ಮುಸ್ಲಿ ನ್ಯಾಯಮೂರ್ತಿಗೆ  ಝಡ್ ಪ್ಲಸ್​​ ಸೆಕ್ಯೂರಿಟಿ
ಸುಪ್ರೀಂ ಕೋರ್ಟ್​
  • Share this:
ನವದೆಹಲಿ(ನ.17): ವಿವಾದಿತ ರಾಮಜನ್ಮಭೂಮಿ ಪ್ರಕರಣದ ವಿವಾದ ವಿಚಾರದಲ್ಲಿ ಸುಪ್ರೀಂಕೋರ್ಟ್​ ಈಗಾಗಲೇ ಅಂತಿಮ ತೀರ್ಪು ಪ್ರಕಟ ಮಾಡಿದೆ. ಎಲ್ಲಾ ಧರ್ಮವನ್ನೂ ಗೌರವಿಸುವುದಾಗಿ ಹೇಳಿದ ಸುಪ್ರೀಂ ಕೋರ್ಟ್​ನ ಸಾಂವಿಧಾನಿಕ ಪೀಠ, ಕೇವಲ ನಂಬಿಕೆಗಳಿಂದ ಭೂಮಿಯ ಹಕ್ಕುದಾರಿಕೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಜತೆಗೆ ಹಿಂದೂಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿ ಅಯೋಧ್ಯೆಯಲ್ಲಿ ಜಾಗವನ್ನು ನೀಡಿ ಸುಪ್ರೀಂ ಕೋರ್ಟ್​ ಆದೇಶಿಸಿದೆ. ಇನ್ನು ಮುಸ್ಲಿಂ ಸಮುದಾಯಕ್ಕೆ ಬದಲಿ ಜಾಗವನ್ನು ನೀಡಲು ಸಹ ಸುಪ್ರೀಂ ಕೋರ್ಟ್​ ಆದೇಶಿಸಿದೆ. ಈ ಮೂಲಕ ಅತಿ ಹಳೆಯ ವಿವಾದಕ್ಕೆ ತೆರೆ ಎಳೆದಿದೆ. ಆದರೀಗ ಅಯೋಧ್ಯೆ ತೀರ್ಪು ನೀಡಿದ ನ್ಯಾಯಪೀಠದ ಭಾಗವಾಗಿದ್ದ ನ್ಯಾಯಮೂರ್ತಿಗಳಿಗೆ ಬೆದರಿಕೆ ಕರೆಗಳು ಬರುತ್ತಿವೆ ಎನ್ನಲಾಗಿದೆ.

ಹೌದು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಇತರ ಕೆಲವು ಸಂಘಟನೆಗಳಿಂದ ಮುಸ್ಲಿಂ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್‌ಗೆ ಬೆದರಿಕೆ ಇದೆ ಎನ್ನಲಾಗಿದೆ. ಹಾಗಾಗಿಯೇ ನಜೀರ್​​ ಮತ್ತವರ ಕುಟುಂಬಕ್ಕೆ ಝಡ್' ಶ್ರೇಣಿ ಭದ್ರತೆ ನೀಡಲು ಕೇಂದ್ರ ಸರ್ಕಾರ ನಿರ್ಧಿರಿಸಿದೆ. ಈಗಾಗಲೇ ಗೃಹ ಸಚಿವಾಲಯದ ಅಧಿಕಸೂಚನೆ ಹೊರಡಿಸಿದೆ.

ದೇಶಾದ್ಯಂತ ನಜೀರ್ ಮತ್ತು ಕುಟುಂಬದವರಿಗೆ 'ಝಡ್' ಶ್ರೇಣಿ ಭದ್ರತೆ ಒದಗಿಸುವಂತೆ ಸಿಆರ್‌ಪಿಎಫ್ ಮತ್ತು ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಚಳಿಗಾಲದ ಅಧಿವೇಶನಕ್ಕೆ ಮುನ್ನ ಸರ್ವಪಕ್ಷಗಳ ಸಭೆ; ಎಲ್ಲಾ ವಿಚಾರಗಳ ಚರ್ಚೆಗೆ ಪ್ರಧಾನಿ ಮೋದಿ ಭರವಸೆ

ಎಸ್.ಅಬ್ದುಲ್‌ ನಜೀರ್ ಮೂಲತ ಕಾರ್ಕಳದವರು. ಎರಡು ವರ್ಷಗಳ ಹಿಂದೆ ಸುಪ್ರೀಂಕೋರ್ಟ್​​​ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದರು. ಇವರು ಸುಪ್ರೀಂಕೋರ್ಟ್​ನ ಏಕೈಕ  ಮುಸ್ಲಿಂ ನ್ಯಾಯಮೂರ್ತಿ ಆಗಿದ್ದಾರೆ.
--------
First published:November 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ