ಗುಜರಾತ್​ನಲ್ಲಿ ನಿಲ್ಲದ ಹಿಂಸಾಚಾರ; ಉತ್ತರ ಭಾರತೀಯರ ರಕ್ಷಣೆಗೆ ಮುಂದಾಗದ ಕೇಂದ್ರ ಸರ್ಕಾರ

ರಕ್ಷಣೆ ನೀಡುವಂತೆ ಉತ್ತರ ಭಾರತೀಯರು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ವ್ಯಾಪಕ  ಹಿಂಸಾಚಾರ ನಡೆಸುವವರ ಮೇಲೆ ದೂರು ದಾಖಲಿಸುವ, ಹಿಂಸಾಚಾರವನ್ನು ತಹಬದಿಗೆ ತಂದು ಸೂಕ್ತ ಕ್ರಮ ಕೈಗೊಳ್ಳುವ, ಇಲ್ಲವೇ ಗುಜರಾತ್​ ಸರ್ಕಾರದ ಜೊತೆ ಮಾತುಕತೆ ನಡೆಸಿ ಸಲಹೆ-ಸೂಚನೆಗಳನ್ನು ನೀಡುವ ಯಾವುದೇ ಕ್ರಮಕ್ಕೆ ಕೇಂದ್ರ ಮುಂದಾಗಿಲ್ಲ ಎನ್ನಲಾಗಿದೆ.

Latha CG | news18
Updated:October 8, 2018, 4:16 PM IST
ಗುಜರಾತ್​ನಲ್ಲಿ ನಿಲ್ಲದ ಹಿಂಸಾಚಾರ; ಉತ್ತರ ಭಾರತೀಯರ ರಕ್ಷಣೆಗೆ ಮುಂದಾಗದ ಕೇಂದ್ರ ಸರ್ಕಾರ
ಪ್ರಾತಿನಿಧಿಕ ಚಿತ್ರ
  • Advertorial
  • Last Updated: October 8, 2018, 4:16 PM IST
  • Share this:
-ನ್ಯೂಸ್​ 18 ಕನ್ನಡ

ಗುಜರಾತ್​,(ಅ.08): ಗುಜರಾತ್​ನಲ್ಲಿ ಉತ್ತರ ಭಾರತೀಯ ವಿರುದ್ಧ ವ್ಯಾಪಕ ದಾಳಿಯಾಗುತ್ತಿದ್ದು, ಈವರೆಗೆ ಸುಮಾರು 50 ಸಾವಿರಕ್ಕೂ ಹೆಚ್ಚು ವಲಸಿಗರು ತಮ್ಮ ಸ್ವಗ್ರಾಮಗಳಿಗೆ ತೆರಳಿದ್ದಾರೆ. ಆದರೆ ಕೇಂದ್ರ ಸರ್ಕಾರ ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ದಿವ್ಯ ಮೌನ ವಹಿಸಿದೆ.

ರಕ್ಷಣೆ ನೀಡುವಂತೆ ಉತ್ತರ ಭಾರತೀಯರು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೂ ಸಹ ಇದುವರೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ವ್ಯಾಪಕ  ಹಿಂಸಾಚಾರ ನಡೆಸುವವರ ಮೇಲೆ ದೂರು ದಾಖಲಿಸುವ, ಹಿಂಸಾಚಾರವನ್ನು ತಹಬದಿಗೆ ತಂದು ಸೂಕ್ತ ಕ್ರಮ ಕೈಗೊಳ್ಳುವ, ಇಲ್ಲವೇ ಗುಜರಾತ್​ ಸರ್ಕಾರದ ಜೊತೆ ಮಾತುಕತೆ ನಡೆಸಿ ಸಲಹೆ-ಸೂಚನೆಗಳನ್ನು ನೀಡುವ ಯಾವುದೇ ಕ್ರಮಕ್ಕೆ ಕೇಂದ್ರ ಮುಂದಾಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಜೀವ ಉಳಿಸಿಕೊಳ್ಳಲು ಗುಜರಾತ್​ನಿಂದ ಕಾಲ್ಕಿತ್ತ 50,000ಕ್ಕೂ ಹೆಚ್ಚು ಉತ್ತರ ಭಾರತೀಯರು

ಬಿಹಾರ ಮೂಲದ ವ್ಯಕ್ತಿಯೋರ್ವ ಬಾಲಕಿ ಮೇಲೆ ಅತ್ಯಾಚಾರ ಎಸಗಿದ  ಪ್ರಕರಣ ಬಹಿರಂಗಗೊಳ್ಳುತ್ತಿದ್ದಂತೆ ಉತ್ತರ ಭಾರತೀಯರ ಮೇಲೆ ದಾಳಿ ಶುರುವಾಗಿತ್ತು. ಹೊಟ್ಟೆಪಾಡಿಗಾಗಿ ಗುಜರಾತ್​ಗೆ ಬಂದಿದ್ದ ವಲಸೆ ಕಾರ್ಮಿಕರು ಈಗ ಭಯಭೀತಗೊಂಡು ರೈಲು ಹತ್ತಿ ತಮ್ಮ  ಹಳ್ಳಿಗಳಿಗೆ ಹೊರಟು ನಿಂತಿದ್ದಾರೆ . ಈವರೆಗೆ ಸುಮಾರು 50 ಸಾವಿರಕ್ಕೂ ಅಧಿಕ ಕಾರ್ಮಿಕರು ಗುಜರಾತ್​ನ್ನು ತೊರೆದಿದ್ದಾರೆ ಎಂದು ತಿಳಿದುಬಂದಿದೆ.

ಬಿಹಾರ, ಜಾರ್ಖಂಡ್​, ಮಧ್ಯಪ್ರದೇಶ, ಉತ್ತರ ಪ್ರದೇಶದಿಂದ ಕೂಲಿ ಕೆಲಸ ಮಾಡಲು ಬಂದಿದ್ದವರು ಈಗ ಜೀವ ಉಳಿಸಿಕೊಳ್ಳಲು ಮನೆಯತ್ತ ಮುಖಮಾಡಿದ್ದಾರೆ. ಕಾರ್ಮಿಕರು ವಲಸೆ ಹೋಗುತ್ತಿರುವ ಕಾರಣ ಗುಜರಾತ್​ನಲ್ಲಿ ಕೆಲವು ಕಾರ್ಖಾನೆಗಳನ್ನು ಮುಚ್ಚಲಾಗುತ್ತಿದೆ.

First published:October 8, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ