HOME » NEWS » National-international » THE CENTRAL GOVERNMENTS COMPLETE FAILURE TO CONTROL CORONAS SECOND WAVE SONIA GANDHI SPARKED MAK

CoronaVirus: ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲ; ಸೋನಿಯಾ ಗಾಂಧಿ ಕಿಡಿ

ಕೊರೋನಾ ವಿಚಾರದಲ್ಲಿ ಪ್ರತಿಪಕ್ಷಗಳ ರಚನಾತ್ಮಕ ಸಲಹೆಗಳನ್ನು ಕೇಳುವ ಬದಲು, ಸಲಹೆಗಳನ್ನು ನೀಡಿದ್ದಕ್ಕಾಗಿ ಪ್ರತಿಪಕ್ಷದ ನಾಯಕರ ಮೇಲೆ ಕೇಂದ್ರ ಸಚಿವರು ದಾಳಿ ನಡೆಸುತ್ತಿದ್ದಾರೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

news18-kannada
Updated:April 17, 2021, 7:27 PM IST
CoronaVirus: ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲ; ಸೋನಿಯಾ ಗಾಂಧಿ ಕಿಡಿ
ಸೋನಿಯಾ ಗಾಂಧಿ.
  • Share this:
ನವ ದೆಹಲಿ (ಏಪ್ರಿಲ್ 17); ಭಾರತದಲ್ಲಿ ಕೊರೋನಾ ಎರಡನೇ ಅಲೆ ದಿನದಿಂದ ಅಧಿಕವಾಗುತ್ತಲೇ ಇದೆ. ಪ್ರತಿ ದಿನ ದೇಶದಾದ್ಯಂತ 1.5 ಲಕ್ಷಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಕೇಂದ್ರ ಸರ್ಕಾರ ಕೊರೋನಾ ಲಸಿಕೆ ಅಭಿಯಾನವನ್ನು ನಡೆಸುತ್ತಿದೆಯಾದರೂ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಗುಜರಾತ್​-ಮುಂಬೈ ಸೇರಿದಂತೆ ಅನೇಕ ರಾಜ್ಯಗಳು ಈಗಾಗಲೇ ಕೊರೋನಾದಿಂದ ತತ್ತರಿಸಿದ್ದು, ಸೋಂಕು ತಡೆಗೆ ನೈಟ್​ ಕರ್ಫ್ಯೂ ಮೊರೆ ಹೋಗಿವೆ. ಮತ್ತೊಮ್ಮೆ ಲಾಕ್​ಡೌನ್ ಕೂಗು ಕೇಳಿಬರುತ್ತಿದೆಯಾದರೂ, ಕೇಂದ್ರ ಸರ್ಕಾರ ಮಾತ್ರ ಯಾವುದೇ ನಿರ್ಧಾರಕ್ಕೆ ಮುಂದಾಗಿಲ್ಲ. ಕೊರೋನಾ ತಡೆಗೂ ಸೂಕ್ತ ಕ್ರಮ ಜರುಗಿಸಿಲ್ಲ. ಪರಿಣಾಮ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್​ ಪಕ್ಷದ ಹಂಗಾಮಿ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ, "ದೇಶದಲ್ಲಿ ಕೊರೋನಾ ಎರಡನೇ ಅಲೆ ವಿಪರಿತವಾಗಿ ಹಬ್ಬುತ್ತಿದ್ದು, ಕೇಂದ್ರ ಸರ್ಕಾರ ಪರಿಸ್ಥಿತಿ ನಿಭಾಯಿಸುತ್ತಿರುವಲ್ಲಿ ವಿಫಲಾಗಿದೆ. ದೇಶದಲ್ಲಿ ಒಂದು ವರ್ಷದ ತಯಾರಿಯ ಹೊರತಾಗಿಯೂ ನಮ್ಮ ಈಗಿನ ಪರಿಸ್ಥಿತಿಯು ನಿರಾಶಾದಾಯಕವಾಗಿದೆ" ಎಂದು ಆಕ್ರೋಶ ಹೊರಹಾಕಿದ್ದಾರೆ.

ನವ ದೆಹಲಿಯಲ್ಲಿ ಇಂದು ನಡೆದ ಕಾಂಗ್ರೆಸ್ ಪಕ್ಷದ ಸಿಡಬ್ಲ್ಯೂಸಿ ಸಭೆಯಲ್ಲಿ ಕೊರೋನಾ ನಿಯಂತ್ರಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಸೋನಿಯಾ ಗಾಂಧಿ, "ದೇಶಕ್ಕೆ ಕೊರೋನಾ ಮಹಾಮಾರಿ ವಕ್ಕರಿಸಿ ಒಂದು ವರ್ಷವಾಗಿದೆ. ಆದರೂ ಕೇಂದ್ರ ಈ ವರೆಗೆ ಅದನ್ನು ಸಮರ್ಥವಾಗಿ ಎದುರಿಸಲು ಸರಿಯಾದ ಸಿದ್ಧತೆಗಳನ್ನು ನಡೆಸಿಲ್ಲ. ಕೊರೋನಾ ಸೋಂಕಿತರಿಗೆ ಆಮ್ಲಜನಕ, ಆಸ್ಪತ್ರೆಯಲ್ಲಿ ಹಾಸಿಗೆಗಳು ಮತ್ತು ಲಸಿಕೆಗಳ ಕೊರತೆ ಬಗ್ಗೆ ಪದೇ ಪದೇ ರಾಜ್ಯಗಳು ಮನವಿ ಸಲ್ಲಿಸುತ್ತಿದ್ದರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೌನ ವಹಿಸಿದ್ದಾರೆ.

ಹೀಗಾಗಿ ಕೇಂದ್ರ ಸರ್ಕಾರ ಇನ್ನಾದರೂ ಕೊರೋನಾವನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲಾ ರಾಜ್ಯಗಳಿಗೂ ಸಹಾಯ ಹಸ್ತ ಚಾಚಬೇಕು. ಕೊರೋನಾ ಲಸಿಕೆಯನ್ನು ಎಲ್ಲರಿಗೂ ಕಡ್ಡಾಯಗೊಳಿಸಬೇಕು. ಲಸಿಕೆ ನೀಡಿಕೆ ಮಾನದಂಡದ ವಯಸ್ಸನ್ನು 45 ರಿಂದ 25 ವರ್ಷದವರೆಗೂ ವಿಸ್ತರಿಸಬೇಕು" ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದು ರಾಜಕೀಯಕ್ಕಿಂತ ದೊಡ್ಡ ರಾಷ್ಟ್ರೀಯ ಸವಾಲು ಎಂದು ಸೋನಿಯಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ 2ನೇ ಅಲೆ ದೇಶಕ್ಕೆ ಅಘಾತಕಾರಿಯಾಗಿ ಅಪ್ಪಳಿಸಿದೆ. ಆದರೆ, ನಮಗೆ ಒಂದು ವರ್ಷ ತಯಾರಿ ನಡೆಸಲು ಅವಕಾಶವಿದ್ದರೂ ದೇಶ ಈ ಪರಿಸ್ಥಿತಿ ತಲುಪಿರುವುದು ವಿಷಾದನೀಯ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಔಷಧಿಗಳ ಕೊರತೆ, ಲಸಿಕೆಗಳ ಕೊರತೆ, ವೈದ್ಯಕೀಯ ಆಮ್ಲಜನಕದ ಕೊರತೆ ಸಮಸ್ಯೆಯ ಕುರಿತು ಸುದ್ದಿಗಳು ಓದುವಾಗ ನನಗೆ ತುಂಬಾ ಕಳವಳವಾಗಿದೆ. ದೇಶಾದ್ಯಂತ ಕೊರೊನಾ ಲಸಿಕೆಯ ಕೊರತೆ, ರೆಮ್‌ಡೆಸಿವಿರ್‌ನಂತಹ ಜೀವ ಉಳಿಸುವ ಔಷಧಿಗಳ ಕೊರತೆಯ ಬಗ್ಗೆಯೂ ವರದಿಯಾಗುತ್ತಿದೆ ಇವುಗಳು ನನ್ನನ್ನು ಹೆಚ್ಚು ಕಳವಳಕ್ಕೆ ದೂಡಿವೆ ಎಂದಿದ್ದಾರೆ.

"ಕೊರೋನಾ ವಿಚಾರದಲ್ಲಿ ಪ್ರತಿಪಕ್ಷಗಳ ರಚನಾತ್ಮಕ ಸಲಹೆಗಳನ್ನು ಕೇಳುವ ಬದಲು, ಸಲಹೆಗಳನ್ನು ನೀಡಿದ್ದಕ್ಕಾಗಿ ಪ್ರತಿಪಕ್ಷದ ನಾಯಕರ ಮೇಲೆ ಕೇಂದ್ರ ಸಚಿವರು ದಾಳಿ ನಡೆಸುತ್ತಿದ್ದಾರೆ" ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

ದೆಹಲಿಯಲ್ಲಿ ಕೈಮೀರಿದ ಪರಿಸ್ಥಿತಿ:ಈ ನಡುವೆ ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕೋವಿಡ್​ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನಲೆ ವಿಕೇಂಡ್​ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ದೇಶದಲ್ಲಿ ಪ್ರತಿನಿತ್ಯ 2.3 ಲಕ್ಷ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಸೋಂಕಿನ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಆಸ್ಪತ್ರೆಗಳಲ್ಲಿ ಬೆಡ್​ ಸೇರಿದಂತೆ ಔಷಧಿಗಳಿಗಾಗಿ ಸೋಂಕಿತರು ಸಮಸ್ಯೆ ಎದುರಿಸುವಂತೆ ಆಗಿದೆ. ಇಂದು ದೇಶದಲ್ಲಿ 2.34 ಲಕ್ಷ ಪ್ರಕರಣ ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ 1.45 ಕೋಟಿ ದಾಟಿದೆ. ಇಂದು 1,341 ಸೋಂಕಿತರು ಸಾವನ್ನಪ್ಪಿದ್ದು, ಒಟ್ಟಾರೆ 1,75,649ಜನ ಕೋವಿಡ್​ನಿಂದ ಮೃತಪಟ್ಟಿದ್ದಾರೆ.

ದೆಹಲಿಯಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಆಕ್ಸಿಜನ್​ ಮತ್ತು ರೆಮ್​ಡಿಸಿವಿರ್​ ಮತ್ತು ಪ್ಯಾಬಿಫ್ಲೂನಂತರ ಔಷಧ ಕೊರತೆ ಉಂಟಾಗಿದ್ದು, ಇದು ಕಳ್ಳ ಸಂತೆಯಲ್ಲಿ ಮಾರಾಟವಾಗುವಂತೆ ಪ್ರೇರೇಪಿಸಿದೆ.

ಇದನ್ನೂ ಓದಿ: Red Fort Violence: ಗಣರಾಜ್ಯೋತ್ಸವ ದಿನ, ಕೆಂಪು ಕೋಟೆ ಧಾಂದಲೆ ಪ್ರಕರಣ; ಪ್ರಮುಖ ಆರೋಪಿ ದೀಪ್ ಸಿಧುಗೆ ಜಾಮೀನು!

ದೇಶದಲ್ಲಿ ಕೊರೋನಾ ಏರಿಕೆ ಪ್ರಕರಣದ ಬಗ್ಗೆ ರೆಡ್​ಕ್ರಾಸ್​ ಸಂಸ್ಥೆ ಕೂಡ ಆತಂಕ ವ್ಯಕ್ತಪಡಿಸಿದ್ದೇನೆ.ದೆಹಲಿಯಲ್ಲಿ ವೀಕೆಂಡ್​ ಕರ್ಫ್ಯೂ ಸ್ಪಾಗಳು, ಸಭಾಂಗಣಗಳು, ಮಾಲ್​ಗಳು ಹಾಗೂ ಜಿಮ್​ಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.ಈ ವೀಕೆಂಡ್​ ಕರ್ಫ್ಯೂ ವೇಳೆ ಮದುವೆ ಸಮಾರಂಭಗಳಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಪಾಸ್​ ಹೊಂದಿರಲೇಬೇಕು. ಆ ಪಾಸ್​ಗಳನ್ನು ಸರ್ಕಾರದ ವತಿಯಿಂದ ನೀಡಲಾಗುತ್ತದೆ.

ಇದರ ಜೊತೆಗೆ ರೆಸ್ಟೋರೆಂಟ್​​ಗಳಲ್ಲಿ ಕೂತು ತಿನ್ನಲು ಅವಕಾಶವಿರುವುದಿಲ್ಲ. ಪಾರ್ಸಲ್​​ಗೆ ಮಾತ್ರ ಅವಕಾಶವಿರುತ್ತದೆ. ಮದುವೆ ಸಮಾರಂಭಗಳಿಗೆ ಕೇವಲ 50 ಮಂದಿಗಷ್ಟೇ ಅವಕಾಶವಿರುತ್ತದೆ. ಜೊತೆಗ ಅಂತ್ಯಕ್ರಿಯೆಯಲ್ಲಿ ಕೇವಲ 20 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕಡ್ಡಾಯವಾಗಿ ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಕಾಪಾಡಬೇಕು ಎಂದು ಸಿಎಂ ಅರವಿಂದ್ ಕೇಜ್ರಿವಾಲ್​ ಹೇಳಿದ್ದಾರೆ.
Published by: MAshok Kumar
First published: April 17, 2021, 7:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories