Digital Media ಗಳಿಗೂ ಬೀಳುತ್ತೆ ಇನ್ಮುಂದೆ ಮೂಗುದಾರ, ಹೊಸ ಕಾನೂನು ತರಲು ಸಜ್ಜಾದ ಕೇಂದ್ರ ಸರ್ಕಾರ!

ಈಗಂತೂ ಇತರೇ ಮಾಧ್ಯಮಗಳಿಗಿಂತ ಡಿಜಿಟಲ್ ಮಾಧ್ಯಮಗಳದ್ದೇ ಪಾರುಪತ್ಯ ಇದೆ. ಯೂಟ್ಯೂಬ್ ಚಾನೆಲ್ ಇತ್ಯಾದಿಗಳನ್ನು ಮಾಡಿಕೊಳ್ಳುವ ಕೆಲ ಜನರು ತಮ್ಮ ವ್ಯೂವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು ಬಾಯಿಗೆ ಬಂದಂತೆ ಸುದ್ದಿ ಮಾಡುತ್ತಾರೆ. ಇದೀಗ ಇವು ಎಲ್ಲದಕ್ಕೂ ಕಡಿವಾಣ ಬೀಳುವ ಕಾಲ ಹತ್ತಿರ ಬಂದಂತೆ ಕಾಣುತ್ತಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಮೊದಲಿಗೆ ಡಿಜಿಟಲ್ ಇಂಡಿಯಾ (Digital India) ಪರಿಕಲ್ಪನೆ (Concept) ಹುಟ್ಟುಹಾಕಿದರು. ಅದಾದ ಬಳಿಕ ಭಾರತದಲ್ಲಿ ಡಿಜಿಟಲ್ ಮಾಧ್ಯಮ (Digital Media) ಅತೀ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಈಗಂತೂ ಇತರೇ ಮಾಧ್ಯಮಗಳಿಗಿಂತ ಡಿಜಿಟಲ್ ಮಾಧ್ಯಮಗಳದ್ದೇ ಪಾರುಪತ್ಯ ಇದೆ. ಯೂಟ್ಯೂಬ್ ಚಾನೆಲ್‌ (YouTube Channel) ಇತ್ಯಾದಿಗಳನ್ನು ಮಾಡಿಕೊಳ್ಳುವ ಕೆಲ ಜನರು ತಮ್ಮ ವ್ಯೂವರ್ಸ್ (Viewers) ಸಂಖ್ಯೆ ಹೆಚ್ಚಿಸಿಕೊಳ್ಳಲು ಬಾಯಿಗೆ ಬಂದಂತೆ ಸುದ್ದಿ (News) ಮಾಡುತ್ತಾರೆ. ಆಧಾರವಿಲ್ಲದೇ ಮತ್ತೊಬ್ಬರ ತೇಜೋವಧೆ ಮಾಡುತ್ತಾರೆ. ಇದೀಗ ಇವು ಎಲ್ಲದಕ್ಕೂ ಕಡಿವಾಣ (Control) ಬೀಳುವ ಕಾಲ ಹತ್ತಿರ ಬಂದಂತೆ ಕಾಣುತ್ತಿದೆ. ಡಿಜಿಟಲ್ ಮೀಡಿಯಾಗಳಿಗೆ ಕಾನೂನಿನ (Law) ಮೂಲಕ ಮೂಗುದಾರ ಹಾಕಲು ಕೇಂದ್ರ ಸರ್ಕಾರ (Central Government) ಚಿಂತನೆ ನಡೆಸಿದೆ.

 ಡಿಜಿಟಲ್ ಮೀಡಿಯಾಗಳಿಗೆ ಕಾನೂನು

 ಡಿಜಿಟಲ್ ಮಾಧ್ಯಮಗಳ ನೋಂದಣಿಗೆ ಸರ್ಕಾರ ಹೊಸ ಕಾನೂನು ಜಾರಿಗೆ ತರಲು ಮುಂದಾಗಿದೆ. ಈವರೆಗೂ ಯಾವುದೇ ಸರ್ಕಾರಿ ನಿಯಂತ್ರಣಕ್ಕೆ ಒಳಪಡದ ಡಿಜಿಟಲ್ ಮಾಧ್ಯಮಗಳು ಕೂಡ ಇದೇ ಮೊದಲ ಬಾರಿಗೆ ಈ ಕಾನೂನಿನ ಪರಿಮಿತಿಗೆ ಒಳಪಡಲಿವೆ. ಈ ಮಸೂದೆಗೆ ಅಂಗೀಕಾರ ದೊರೆತರೆ ನಿಯಮದ 'ಉಲ್ಲಂಘನೆ'ಗಳಿಗೆ ಡಿಜಿಟಲ್ ಮೀಡಿಯಾಗಳು ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಇದು ನೋಂದಣಿ ರದ್ದತಿ ಅಥವಾ ದಂಡದ ಶಿಕ್ಷೆಗೆ ಎಡೆಮಾಡಿಕೊಡಲಿದೆ.

1867ರ ಕಾಯ್ದೆಯ ಬದಲಾವಣೆ

ಮಸೂದೆಯು ಅಂಗೀಕಾರವಾದರೆ, ಭಾರತದಲ್ಲಿ ಪತ್ರಿಕೆಗಳು ಮತ್ತು ಮುದ್ರಣಾಲಯಗಳನ್ನು ನಿಯಂತ್ರಿಸುವ ಪುಸ್ತಕಗಳ ಮುದ್ರಣ ಮತ್ತು ನೋಂದಣಿ ಕಾಯಿದೆ, 1867 ಅನ್ನು ಬದಲಿಸುತ್ತದೆ.

ಇದನ್ನೂ ಓದಿ: Monkeypox: ಭಾರತದಲ್ಲಿ ಮಂಕಿಪಾಕ್ಸ್ ಟೆನ್ಶನ್, ಮಹಾಮಾರಿ ಕಂಟ್ರೋಲ್‌ಗೆ ಕೇಂದ್ರದಿಂದ ಗೈಡ್‌ಲೈನ್

2019ರಲ್ಲಿ ಕರಡು ಪ್ರತಿ ರೆಡಿ

2019 ರಲ್ಲಿ, ಕೇಂದ್ರವು ಪ್ರೆಸ್ ಮತ್ತು ನಿಯತಕಾಲಿಕೆಗಳ ಕರಡು ನೋಂದಣಿ ಮಸೂದೆಯನ್ನು ಬಿಡುಗಡೆ ಮಾಡಿತು. ಅದು ಡಿಜಿಟಲ್ ಮಾಧ್ಯಮದಲ್ಲಿ ಸುದ್ದಿಗಳನ್ನು "ಅಂತರ್ಜಾಲ, ಕಂಪ್ಯೂಟರ್ ಅಥವಾ ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ಪ್ರಸಾರ ಮಾಡಬಹುದಾದ ಮತ್ತು ಪಠ್ಯ, ಆಡಿಯೋ, ವಿಡಿಯೋ ಮತ್ತು ಗ್ರಾಫಿಕ್ಸ್ ಅನ್ನು ಒಳಗೊಂಡಿರುವ ಡಿಜಿಟೈಸ್ಡ್ ರೂಪದಲ್ಲಿ ಸುದ್ದಿ" ಎಂದು ವ್ಯಾಖ್ಯಾನಿಸಿದೆ.

 ಡಿಟಿಟಲ್‌ ಮೀಡಿಯಾಗಳಿಗೂ ನೋಂದಣಿ

ಪತ್ರಿಕೆಗಳಿಗೆ ಸಮಾನವಾಗಿ ಡಿಜಿಟಲ್ ಮಾಧ್ಯಮವನ್ನು ತರಲು ಪ್ರಸ್ತಾಪಿಸುವ ಪತ್ರಿಕಾ ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆಯ ಅಡಿಯಲ್ಲಿ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ನೋಂದಣಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಕ್ಯಾಬಿನೆಟ್ ಇನ್ನೂ ಕೈಗೆತ್ತಿಕೊಳ್ಳದ ಮಸೂದೆಯು "ಯಾವುದೇ ಎಲೆಕ್ಟ್ರಾನಿಕ್ ಸಾಧನದ ಮೂಲಕ ಡಿಜಿಟಲ್ ಮಾಧ್ಯಮದಲ್ಲಿ ಸುದ್ದಿ" ಅನ್ನು ಸೇರಿಸಲು ಪ್ರಸ್ತಾಪಿಸುತ್ತದೆ.

 ಸರ್ಕಾರದಿಂದಲೇ ನಿಯಂತ್ರಣ

 ಪ್ರಸ್ತುತ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಶಾಸನಬದ್ಧ ಸಂಸ್ಥೆಯಾದ ಪತ್ರಿಕೆಗಳ ರಿಜಿಸ್ಟ್ರಾರ್ ದೇಶದಲ್ಲಿ ಪತ್ರಿಕೆಗಳ ಮುದ್ರಣ ಮತ್ತು ಪ್ರಕಟಣೆಯನ್ನು ನಿಯಂತ್ರಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ. ಈ ಕಾನೂನು ಜಾರಿಯಾದರೆ ಡಿಜಿಟಲ್ ಪ್ರಕಾಶಕರು ಪ್ರೆಸ್ ರಿಜಿಸ್ಟ್ರಾರ್ ಜನರಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ, ಡಿಜಿಟಲ್ ಮಾಧ್ಯಮವನ್ನು ಸರ್ಕಾರದ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ತರುತ್ತದೆ. 90 ದಿನಗಳ ಒಳಗೆ ಹಾಲಿ ಡಿಜಿಟಲ್ ಸುದ್ದಿ ತಾಣಗಳು ನೋಂದಣಿಗೆ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Kerala Own Internet: ಸ್ವಂತ ಇಂಟರ್​ನೆಟ್ ಹೊಂದಿದ ಕೇರಳ! ದೇಶದ ಮೊದಲ ಮತ್ತು ಏಕೈಕ ರಾಜ್ಯ

ನಿಯಮ ಮೀರಿದರೆ ಕಾನೂನು ಕ್ರಮ

90 ದಿನಗಳ ಒಳಗೆ ಹಾಲಿ ಡಿಜಿಟಲ್ ಸುದ್ದಿ ತಾಣಗಳು ನೋಂದಣಿಗೆ ಅರ್ಜಿ ಸಲ್ಲಿಸಬೇಕು. ಈ ಮೂಲಕ ಡಿಜಿಟಲ್ ಪ್ರಕಾಶಕರು ಪ್ರೆಸ್ ರಿಜಿಸ್ಟ್ರಾರ್ ಜನರಲ್ ಬಳಿ ತಮ್ಮ ತಾಣವನ್ನು ನೋಂದಾಯಿಸಿಕೊಳ್ಳಬೇಕು. ನಿಯಮ ಉಲ್ಲಂಘನೆಗಾಗಿ ವಿವಿಧ ಸುದ್ದಿ ವೆಬ್‌ಸೈಟ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ, ಅವರನ್ನು ಅಮಾನತು ಮಾಡುವ ಅಥವಾ ನೋಂದಣಿ ರದ್ದುಗೊಳಿಸುವ ಮತ್ತು ದಂಡಗಳನ್ನು ವಿಧಿಸುವ ಅಧಿಕಾರ ಅವರಿಗೆ ಇರಲಿದೆ. ಭಾರತೀಯ ಪತ್ರಿಕಾ ಮಂಡಳಿ ನಿರ್ದೇಶಕರನ್ನು ಮುಖ್ಯಸ್ಥರನ್ನಾಗಿ ನೇಮಿಸಿ ಮೇಲ್ಮನವಿ ಮಂಡಳಿ ಸ್ಥಾಪಿಸುವ ಆಲೋಚನೆ ಇದೆ ಎನ್ನಲಾಗಿದೆ.
Published by:Annappa Achari
First published: