ಉತ್ತರ ಪ್ರದೇಶದಲ್ಲಿ ನಮ್ಮ ಬಿಎಸ್‌ಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ರಾಮ ಮಂದಿರ ನಿರ್ಮಾಣವನ್ನು ತ್ವರಿತಗೊಳಿಸುವುದಾಗಿ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ಶುಕ್ರವಾರ ಭರವಸೆ ನೀಡಿದೆ. 2022ರಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಎಸ್‌ಪಿ ಅಧಿಕಾರ ಹಿಡಿಯಲೇ ಬೇಕು ಎಂದು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಇದೇ ವೇಳೆ ದೇವಾಲಯ ನಿರ್ಮಾಣಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸುವುದು ಮಾತ್ರ ಬಿಜೆಪಿಯ ಕೆಲಸವಾಗಿದೆ ಎಂದು ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದೆ.
ಕಳೆದ ವಾರ 17 ವರ್ಷದ ವಿಧವೆ, ಪೊಲೀಸ್ ಎನ್ಕೌಂಟರ್ನಲ್ಲಿ ಮರಣ ಹೊಂದಿದ ಗ್ಯಾಂಗ್ಸ್ಟರ್ ವಿಕಾಸ್ ದುಭೆ ಸಂಬಂಧಿಯ ಪತ್ನಿಗೆ ಬ್ರಾಹ್ಮಣಳು ಎನ್ನುವ ಕಾರಣಕ್ಕೆ ಜಾಮೀನು ಕೊಡಿಸಲು ಬಿಎಸ್‌ಪಿ ಹೋರಾಡುವುದಾಗಿ ಹೇಳಿಕೆ ನೀಡಿತ್ತು.
ಉತ್ತರ ಪ್ರದೇಶ ಜನಸಂಖ್ಯೆಯ ಅಂದಾಜು ಶೇಕಡಾ 11 ರಷ್ಟು ಬ್ರಾಹ್ಮಣರು ಇದ್ದು, ಈ ರಾಜ್ಯದಲ್ಲಿ ರಾಜಕೀಯ ಮತ್ತು ಅಧಿಕಾರ ಸಮೀಕರಣಗಳಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೇ ಮೊದಲ ಬಾರಿಗೆ ಅಧಿಕಾರ ಹಿಡಿದಿದ್ದ ಬಿಎಸ್‌ಪಿ ಹೆಚ್ಚಿನ ಬ್ರಾಹ್ಮಣ ಮುಖಗಳಿಗೆ ಟಿಕೆಟ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಉತ್ತರ ಪ್ರದೇಶದ ದಲಿತ ಮತಗಳ ಮೇಲೆಯೇ ಕೇಂದ್ರೀತವಾಗಿರುವ ರಾಜಕೀಯ ಪಕ್ಷ ಬಹುಜನ ಸಮಾಜ ಪಕ್ಷದ ಈ ಹೇಳಿಕೆ ಚುನಾವಣಾ ತಂತ್ರವಾಗಿ ನೋಡಲಾಗುತ್ತಿದೆ. ಬ್ರಾಹ್ಮಣರ ಒಲೈಕೆಗಾಗಿ ಇಂತಹ ಹೇಳಿಕೆಗಳು ಬ್ರಾಹ್ಮಣ ಸಮ್ಮೇಳನಗಳನ್ನು ಬಿಎಸ್‌ಪಿ ನಡೆಸುತ್ತಿದೆ.
“ಬಿಜೆಪಿಗರು ರಾಮ ಮಂದಿರದ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ. ಆದರೆ, ಭವ್ಯವಾದ ರಾಮನ ದೇವಾಲಯವನ್ನು ನಿರ್ಮಿಸಲು ಅದನ್ನು ಬಳಸುತ್ತಿಲ್ಲ. ಬಿಜೆಪಿಗರು ದೇವಾಲಯವನ್ನು ನಿರ್ಮಿಸಲು ಬಯಸುವುದಿಲ್ಲ. ನಾವು ಅವರಿಂದ ಈ ಕೆಲಸ ಆಗುವಂತೆ ಮಾಡುತ್ತೇವೆ. ದೇವಾಲಯ ನಿರ್ಮಾಣ ಚುರುಕುಗೊಳಿಸುತ್ತೇವೆ” ಎಂದು ಮಾಜಿ ಮುಖ್ಯಮಂತ್ರಿ ಮಾಯಾವತಿಯವರ ಆಪ್ತ ಸತೀಶ್ ಚಂದ್ರ ಮಿಶ್ರಾ ಅಯೋಧ್ಯೆಯಲ್ಲಿ ನಡೆದ ಬ್ರಾಹ್ಮಣ ಸಮುದಾಯದ ಸಭೆಯಲ್ಲಿ ಹೇಳಿದ್ದಾರೆ.
ಉತ್ತರ ಪ್ರದೇಶ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಬಿಎಸ್‌ಪಿ ರಾಜ್ಯದಲ್ಲಿ ಬ್ರಾಹ್ಮಣ ಸಮ್ಮೇಳನಗಳನ್ನು ಆಯೋಜಿಸುತ್ತಿದ್ದು, ಇದು ಮೊದಲನೆಯ ಬ್ರಾಹ್ಮಣ ಸಮ್ಮೇಳನವಾಗಿದೆ. ಆದರೆ, ಅಯೋಧ್ಯೆಯಲ್ಲಿ ನಡೆದ ಮೊದಲ ಸಭೆಯಲ್ಲಿ ಮಾಯಾವತಿ ಭಾಗವಹಿಸಸಿರಲಿಲ್ಲ. ಪಕ್ಷದ ಪ್ರಧಾನ ಕಾರ್ಯದರ್ಶಿ ಮಿಶ್ರಾ ಉಸ್ತುವಾರಿ ವಹಿಸಿದ್ದರು.
ಇದೇ ರೀತಿ ಇಡೀ ರಾಜ್ಯದಾದ್ಯಂತ ಅನೇಕ ಭಾಗಗಳಲ್ಲಿ ಬ್ರಾಹ್ಮಣ ಸಮುದಾಯದ ಸಮ್ಮೇಳನದ ರ್ಯಾಲಿ ಮಾಡಲಿದೆ ಎಂದು ಹೇಳಲಾಗಿದೆ.
ಬ್ರಾಹ್ಮಣರು ಮತ್ತು ಪರಿಶಿಷ್ಟ ಜಾತಿಗಳ ಮತಗಳಿಂದ 2007 ರಲ್ಲಿ ಮಾಯಾವತಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಬಹುಮತ ಪಡೆದಿದ್ದ ಮಾಯಾವತಿ ಪಕ್ಷ ಐದು ವರ್ಷಗಳ ಕಾಲ ಆಳಿದ್ದರು. ಬಿಎಸ್‌ಪಿಯಿಂದ ಇಲ್ಲಿಯವರೆಗೆ 40 ಕ್ಕೂ ಹೆಚ್ಚು ಬ್ರಾಹ್ಮಣ ಶಾಸಕರು ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: Reliance: ಮೊದಲ ತ್ರೈಮಾಸಿಕ ಲಾಭಾಂಶ: ರಿಲಯನ್ಸ್ ಇಂಡಸ್ಟ್ರೀಸ್ಗೆ 13,806 ಕೋಟಿ ರೂ. ನಿವ್ವಳ ಲಾಭ
ಜಾತಿಯ ಆಧಾರದಲ್ಲಿ ಠಾಕೂರ್ ಆಗಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಾಯಕತ್ವದಲ್ಲಿ ಬ್ರಾಹ್ಮಣ ಸಮುದಾಯವು ಅಸಮಾಧಾನ ಹೊಂದಿದೆ. ಆದರೆ, ಈ ವಿಚಾರವನ್ನು ಬಿಜೆಪಿ ತಳ್ಳಿಹಾಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ