ವಧು ಸೃಜನಾ ಇದ್ದಕ್ಕಿದ್ದಂತೆ ಮದುವೆ ಮಂಟಪದಲ್ಲೇ ಕುಸಿದು ಬಿದ್ದಿದ್ದಾರೆ. ಆಗ ಅಲ್ಲೇ ಇದ್ದ ಕುಟುಂಬ ಸದಸ್ಯರು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಸೃಜನಾ ಅಷ್ಟೊತ್ತಿಗಾಗಲೇ ಇಹಲೋಕ ತ್ಯಜಿಸಿದ್ದರು. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸೃಜನಾ ಸಾವಿಗೆ ನಿಜ ಕಾರಣ ಏನು ಎನ್ನುವುದು ಬಯಲಾಗಿದೆ.
ಆಂಧ್ರಪ್ರದೇಶ: ಆಕೆ ಮದುವೆಯಾಗಿ (Marriage) ಇನ್ನೇನು ಹೊಸ ಜೀವನ (New Life) ಪ್ರವೇಶಿಸಬೇಕಿದ್ದ ಹುಡುಗಿ (Girl). ತನ್ನ ಗಂಡನ (Husband) ಬಗ್ಗೆ, ಮದುವೆ ಬಗ್ಗೆ, ಹೊಸ ಜೀವನದ ಬಗ್ಗೆ ಸಾವಿರಾರು ಕನಸು (Dreams) ಕಂಡಿದ್ದಳು. ಆತನೂ ಅಷ್ಟೇ ತನ್ನ ಮದುವೆ ಬಗ್ಗೆ, ಹೆಂಡತಿ ಬಗ್ಗೆ, ದಾಂಪತ್ಯ ಜೀವನದ ಬಗ್ಗೆ ಬೆಟ್ಟದಷ್ಟು ಆಸೆ, ಕನಸು ಕಟ್ಟುಕೊಂಡಿದ್ದ. ಇನ್ನೇನು ಕೆಲವೇ ಕ್ಷಣಗಳಾಗಿದ್ದರೆ ಅವರಿಬ್ಬರು ಗಂಡ, ಹೆಂಡತಿಯರಾಗಿ (Wife) ಹೊಸ ಬಾಳು ಪ್ರವೇಶ ಮಾಡಬೇಕಿತ್ತು. ಆದರೆ ವಿಧಿ ಅವರ ಬಾಳಲ್ಲಿ ಬೇರೆಯದ್ದೇ ಆಟ (Game) ಆಡಿತ್ತು. ಹೊಸ ಬದುಕು ಪ್ರಾರಂಭಿಸಬೇಕಾಗಿದ್ದ ವಧುವಿನ (Bride) ಬದುಕೇ ಮುಗಿದು ಹೋಗಿತ್ತು. ಹೌದು, ಮದುವೆ ವೇದಿಕೆ ಮೇಲೆಯೇ ಕುಸಿದು ಬಿದ್ದ ವಧು, ಅಲ್ಲೇ ಪ್ರಾಣ ಬಿಟ್ಟಿದ್ದಳು. ಏನಾಯಿತು ಎಂದು ನೋಡುವಷ್ಟರಲ್ಲಿ ಎಲ್ಲವೂ ಮುಗಿದೇ ಹೋಗಿತ್ತು. ಇದೀಗ ಆಕೆ ಸಾವಿಗೆ ಕಾರಣ ಏನು ಎನ್ನುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ವೇದಿಕೆ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ್ದ ವಧು
ಆಂಧ್ರಪ್ರದೇಶದ ವಿಶಾಖಪಟ್ಟಣದ ಮಧುರವಾಡ ಎಂಬಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿತ್ತು. ತಾಳಿ ಕಟ್ಟಲು ಇನ್ನೇನು ಕೆಲವೇ ನಿಮಿಷಗಳು ಬಾಕಿ ಇದ್ದವು.. ಈ ವೇಳೆ ವೀಳ್ಯದೆಲೆ ಶಾಸ್ತ್ರದಲ್ಲಿ ಭಾಗಿಯಾಗಿದ್ದ ವಧು ದಿಢೀರನೇ ಕುಸಿದುಬಿದ್ದು ಮದುವೆ ಮಂಟಪದಲ್ಲೇ ಸಾವನ್ನಪ್ಪಿದ್ದಳು. ಮೃತ ವಧುವನ್ನು ಸೃಜನಾ ಎಂದು ಗುರುತಿಸಲಾಗಿದೆ. ಆಕೆಯನ್ನು ಕೈ ಹಿಡಿಯಬೇಕಿದ್ದ ವರನ ಹೆಸರು ನಾಗೋಟಿ ಶಿವಾಜಿ ಎನ್ನಲಾಗಿದೆ.
ಆಸ್ಪತ್ರೆಗೆ ಸೇರಿಸಿದರೂ ಆಗಲ ಪ್ರಯೋಜನ
ವಧು ಸೃಜನಾ ಇದ್ದಕ್ಕಿದ್ದಂತೆ ಮದುವೆ ಮಂಟಪದಲ್ಲೇ ಕುಸಿದು ಬಿದ್ದಿದ್ದಾರೆ. ಆಗ ಅಲ್ಲೇ ಇದ್ದ ಕುಟುಂಬ ಸದಸ್ಯರು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಸೃಜನಾ ಅಷ್ಟೊತ್ತಿಗಾಗಲೇ ಇಹಲೋಕ ತ್ಯಜಿಸಿದ್ದರು. ಸಂಭ್ರಮದಲ್ಲಿದ್ದ ಮನೆಯಲ್ಲಿ ವಧುವಿನ ಸಾವಿನಿಂದ ಸೂತಕದ ಛಾಯೆ ಆವರಿಸಿತ್ತು.
ಇನ್ನು ಸೃಜನಾ ಸಾವಿನಿಂದ ಎರಡೂ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಮನೆ ಕೆಲವೇ ಕ್ಷಣಗಳಲ್ಲಿ ಸ್ಮಶಾನದಂತೆ ತೋರಿದೆ. ಇನ್ನು ವಧುವಿನ ಸಾವಿನ ಕುರಿತು ಎರಡೂ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಂಡರು.
ಇಂದು ಬಂದು ಸೃಜನಾ ಮರಣೋತ್ತರ ಪರೀಕ್ಷಾ ವರದಿ
ಸ್ಥಳೀಯ ಕೆಜಿಎಚ್ ಆಸ್ಪತ್ರೆಯಲ್ಲಿ ವಧು ಸೃಜನಾ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಯಿತು. ಇಂದು ವೈದ್ಯರು ಅದರ ರಿಪೋರ್ಟ್ ನೀಡಿದ್ದಾರೆ. ಈ ವರದಿಯಲ್ಲಿ ಸೃಜನಾ ಸಾವಿಗೆ ನಿಜ ಕಾರಣ ಏನು ಎನ್ನುವುದು ಬಯಲಾಗಿದೆ.
ವಿಷದಿಂದ ಸತ್ತಳಾ ಸೃಜನಾ?
ಹೌದು, ಹೀಗಂತ ಪಿಎಚ್ಪಿ ವೈದ್ಯರು ನೀಡಿದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ದಾಖಲಾಗಿದೆ. ಹಠಾತ್ ಕುಸಿದು ಬಿದ್ದು, ಕ್ಷಣ ಮಾತ್ರದಲ್ಲೇ ಸಾವನ್ನಪ್ಪಿದ ವಧು ಸೃಜನಾ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿದೆ. ವಿಷದಿಂದಲೇ ಸೃಜನಾ ಸತ್ತಿದ್ದಾಳೆ ಅಂತ ವರದಿ ಹೇಳುತ್ತಿದೆ.
ಇನ್ನು ಸೃಜನಾ ದೇಹದ ಒಳಕ್ಕೆ ವಿಷ ಹೇಗೆ ಸೇರಿತು ಎನ್ನುವುದು ನಿಗೂಢವಾಗಿದೆ. ಆಕೆಯೇ ವಿಷ ಸೇವಿಸಿದಳೋ ಅಥವಾ ಬೇರೆ ಯಾರಾದರೂ ಆಕೆಗೆ ವಿಷ ನೀಡಿದ್ದರೋ ಎನ್ನುವುದು ನಿಗೂಢವಾಗಿದೆ. ಸದ್ಯ ಮರಣೋತ್ತರ ಪರೀಕ್ಷೆಯ ವರದಿಯನ್ನು ಸ್ವೀಕರಿಸಿದ ಪಿಎಂ ಪಾಲಂ ಸಿಐ ರವಿಕುಮಾರ್ ಅವರು ವಿಷ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದೀಗ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ