• Home
  • »
  • News
  • »
  • national-international
  • »
  • Bombay High Court: ಹೆಂಡತಿಗೆ ಮನೆ ಕೆಲಸ ಮಾಡು ಎನ್ನುವುದು ದೌರ್ಜನ್ಯವಲ್ಲ! ಬಾಂಬೆ ಹೈಕೋರ್ಟ್‌ ಮಹತ್ವದ ತೀರ್ಪು

Bombay High Court: ಹೆಂಡತಿಗೆ ಮನೆ ಕೆಲಸ ಮಾಡು ಎನ್ನುವುದು ದೌರ್ಜನ್ಯವಲ್ಲ! ಬಾಂಬೆ ಹೈಕೋರ್ಟ್‌ ಮಹತ್ವದ ತೀರ್ಪು

ಮನೆಗೆಲಸ ದೌರ್ಜನ್ಯವಲ್ಲ ಎಂದ ಬಾಂಬೆ ಹೈಕೋರ್ಟ್

ಮನೆಗೆಲಸ ದೌರ್ಜನ್ಯವಲ್ಲ ಎಂದ ಬಾಂಬೆ ಹೈಕೋರ್ಟ್

ತನ್ನ ಕುಟುಂಬಕ್ಕಾಗಿ ಮನೆಗೆಲಸ ಮಾಡುವಂತೆ ವಿವಾಹಿತೆಯನ್ನು ಒತ್ತಾಯಿಸುವುದು ಕ್ರೌರ್ಯವಲ್ಲ. ಜೊತೆಗೆ ಮನೆಗೆಲಸ ಮಾಡು ಎನ್ನುವುದು ವಿವಾಹಿತೆಯನ್ನು ಮನೆಗೆಲಸದವರಿಗೆ ಹೋಲಿಸಿದಂತೆ ಅಲ್ಲ ಎಂದು ಬಾಂಬೆ ಹೈಕೋರ್ಟ್‌ ಪೀಠ ಹೇಳಿದೆ.

  • Share this:

ಮುಂಬೈ: ಗಂಡ, ಹೆಂಡತಿ (Husband and wife) ಅಂದ ಮೇಲೆ ಸಂಸಾರವನ್ನು (Family) ನಡೆಸಿಕೊಂಡು ಹೋಗಬೇಕು. ಗಂಡ ಹೊರಗೆ ಹೋಗಿದ್ದರೆ ಮನೆಯಲ್ಲಿರುವ ಹೆಂಡತಿ ಕೆಲಸ ಮಾಡಬೇಕು, ಮನೆಯಲ್ಲಿರುವ ಹೆಂಡತಿ ಮನೆಗೆಲಸ (Household Work) ಮಾಡುತ್ತಿದ್ದರೆ, ಗಂಡ ಹೊರಗೆ ದುಡಿದು (Work) ಆಕೆಗೆ ಬೇಕಾದ್ದನ್ನು ಕೊಡಿಸಬೇಕು. ಆದರೆ ಈಗಿನ ಆಧುನಿಕ ಕಾಲದ ದಂಪತಿಯ (Couple) ಮನಸ್ಥಿತಿಯೇ ಬೇರೆ ಇರುತ್ತದೆ. ಹೆಂಡತಿಯೂ (Wife) ನಾನು ಮನೆ ಕೆಲಸ ಮಾಡುವುದಿಲ್ಲ, ಅದೊಂದು ದೌರ್ಜನ್ಯ (abuse) ಅಂತ ಆರೋಪಿಸ್ತಾರೆ. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ (Bombay High Court) ಮಹತ್ವದ ತೀರ್ಪು (Judgment) ನೀಡಿದೆ. ಮಹಿಳೆಗೆ ಮನೆ ಕೆಲಸ ಮಾಡು ಅಂತ ಗಂಡ ಅಥವಾ ಆತನ ಕುಟುಂಬಸ್ಥರು ಹೇಳುವುದು ಕೌಂಟುಬಿಕ ದೌರ್ಜನ್ಯವಲ್ಲ ಅಂತ ಬಾಂಬೆ ಹೈಕೋರ್ಟ್‌ ನ್ಯಾಯಪೀಠ ಹೇಳಿದೆ. ಈ ಕೇಸ್ ಸಂಬಂಧ ದಾಖಲಿಸಲಾಗಿದ್ದ ಎಫ್ಐಆರ್‌ (FIR) ಅನ್ನು ನ್ಯಾಯಪೀಠ ರದ್ದುಗೊಳಿಸಿದೆ.


“ಮನೆ ಕೆಲಸ ಮಾಡು ಎನ್ನುವುದು ದೌರ್ಜನ್ಯವಲ್ಲ”


ತನ್ನ ಕುಟುಂಬಕ್ಕಾಗಿ ಮನೆಗೆಲಸ ಮಾಡುವಂತೆ ವಿವಾಹಿತೆಯನ್ನು ಒತ್ತಾಯಿಸುವುದು ಕ್ರೌರ್ಯವಲ್ಲ. ಜೊತೆಗೆ ಮನೆಗೆಲಸ ಮಾಡು ಎನ್ನುವುದು ವಿವಾಹಿತೆಯನ್ನು ಮನೆಗೆಲಸದವರಿಗೆ ಹೋಲಿಸಿದಂತೆ ಅಲ್ಲ ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್‌ ಪೀಠ ಹೇಳಿದೆ. ಮದುವೆಯ ನಂತರ ಮನೆಕೆಲಸ ಮಾಡಲು ಮಹಿಳೆಗೆ ಇಷ್ಟವಿಲ್ಲದಿದ್ದರೆ, ಮದುವೆಯ ಮೊದಲು ತನ್ನ ಆಸೆಯನ್ನು ತಿಳಿಸಬೇಕು, ಆದ್ದರಿಂದ ದಂಪತಿಗಳು ಮದುವೆಯ ಬಗ್ಗೆ ಮರು ಯೋಚಿಸಬಹುದು ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.


ಏನಿದು ಪ್ರಕರಣ?


ಪ್ರಕರಣ ಒಂದರಲ್ಲಿ ಮಹಿಳೆಯು ತನ್ನ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಸಿ, ಕೇಸ್ ದಾಖಲಿಸಿದ್ದಳು. ತನ್ನ ಪತಿ, ಅವರ ತಾಯಿ ಮತ್ತು ಅವರ ಅಕ್ಕನ ವಿರುದ್ಧ ಐಪಿಸಿಯ ಸೆಕ್ಷನ್ 34 ರೊಂದಿಗೆ 323, 504 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.


ಇದನ್ನೂ ಓದಿ: Madhya Pradesh High Court: ಅತ್ಯಾಚಾರ ಮಾಡಿದ್ದಾನೆ, ಆದರೆ ಕೊಂದಿಲ್ಲ! ಆರೋಪಿಯ ಶಿಕ್ಷೆ ಕಡಿತಗೊಳಿಸಿದ ನ್ಯಾಯಪೀಠ!


ತವರಿನಿಂದ ಹಣ ತರುವಂತೆ ಕಿರುಕುಳ ಆರೋಪ


ಕಾರು ಖರೀದಿಸಲು ಗಂಡ ತನ್ನಿಂದ 4 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಎಂದು ಪತ್ನಿ ಆರೋಪಿಸಿದ್ದಾಳೆ. ನನ್ನ ತಂದೆಯ ಬಳಿ ಹಣವಿಲ್ಲ ಎಂದು ಪ್ರತಿಕ್ರಿಯಿಸಿದ ಆಕೆ, ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ಮಗುವನ್ನು ಹೆರುವಂತೆ ಕಿರುಕುಳ ನೀಡುತ್ತಿದ್ದು, ಅತ್ತೆ ಮತ್ತು ಗಂಡನ ಅಕ್ಕ ಕಪಾಳಮೋಕ್ಷ ಮಾಡಿ ಒದ್ದಿದ್ದಾರೆ ಎಂದು ಆರೋಪಿಸಲಾಗಿದೆ.


ಆಕೆ ಆರೋಪಿಸಿದ್ದೇನು?


ಮದುವೆಯಾದ ಒಂದು ತಿಂಗಳ ನಂತರ ತನ್ನನ್ನು ಸೇವಕಿಯಂತೆ ನಡೆಸಿಕೊಳ್ಳಲಾಗಿದೆ ಎಂದು ಆತನ ಪತ್ನಿ ಆರೋಪಿಸಿದ್ದಳು. ಮನೆ ಕೆಲಸ ಮಾಡು ಅಂತ ಒತ್ತಾಯಿಸುತ್ತಿದ್ದಾರೆ ಅಂತ ಆರೋಪಿಸಿದ್ದಳು. ಈ ಹಿನ್ನೆಲೆಯಲ್ಲಿ ಪತಿ, ಆತನ ತಾಯಿ ಮತ್ತು ಆತನ ಅಕ್ಕನ ವಿರುದ್ಧದ ಎಫ್‌ಐಆರ್ ದಾಖಲಾಗಿತ್ತು. ಇದನ್ನು ರದ್ದು ಪಡಿಸಿ ಅಂತ ಗಂಡ ಕೋರ್ಟ್ ಮೆಟ್ಟಿಲೇರಿದ್ದ. ಈ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯವು ಈ ತೀರ್ಪು ನೀಡಿದೆ.


ಇದನ್ನೂ ಓದಿ: President: ನನ್ನನ್ನೂ ಭಾರತದ ರಾಷ್ಟ್ರಪತಿ ಮಾಡಿ! ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ವ್ಯಕ್ತಿ


ನ್ಯಾಯಪೀಠ ಹೇಳಿದ್ದೇನು?


“ವಿವಾಹಿತ ಹೆಂಗಸನ್ನು ಕುಟುಂಬದ ಉದ್ದೇಶಕ್ಕಾಗಿ ಖಂಡಿತವಾಗಿ ಮನೆಕೆಲಸ ಮಾಡಲು ಕೇಳಿದರೆ, ಅದು ಸೇವಕಿಯಂತೆ ಎಂದು ಹೇಳಲಾಗುವುದಿಲ್ಲ. ಆಕೆಗೆ ತನ್ನ ಮನೆಯ ಚಟುವಟಿಕೆಗಳನ್ನು ಮಾಡಲು ಇಷ್ಟವಿಲ್ಲದಿದ್ದರೆ, ಮದುವೆಗೆ ಮುಂಚೆಯೇ ಹೇಳಬೇಕಾಗಿತ್ತು, ಇದರಿಂದ ವಧು ಮತ್ತು ವರರು ಮದುವೆಯ ಬಗ್ಗೆ ಮರು ಯೋಚಿಸಬಹುದು ಅಥವಾ ಮದುವೆಯ ನಂತರ ಅಂತಹ ಸಮಸ್ಯೆಯನ್ನು ಪರಿಹರಿಸಬೇಕು ಅಂತ ಕೋರ್ಟ್ ಹೇಳಿದೆ.

Published by:Annappa Achari
First published: