Trump India Tour: ಅಮೆರಿಕ ಅಧ್ಯಕ್ಷರು ಬರುವ ಮುನ್ನ ಅಹಮದಾಬಾದ್​ಗೆ ಬರಲಿದೆ ದಿ ಬೀಸ್ಟ್ ಕಾರು; ಇದರ ವಿಶೇಷತೆಗಳೇನು ಗೊತ್ತಾ?

ಈ ಕಾರನ್ನು ಚಲಾಯಿಸುವ ಚಾಲಕನಿಗೆ ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿಯೂ ಎದೆಗುಂದದೆ ಕಾರನ್ನು ಹೇಗೆ ಚಾಲನೆ ಮಾಡಬೇಕು ಎಂಬ ತರಬೇತಿಯನ್ನು ಅಮೆರಿಕ ಸೇನೆ ನೀಡಿದೆ. ತುರ್ತು ಪರಿಸ್ಥಿತಿಗಳಲ್ಲಿ ತಪ್ಪಿಸಿಕೊಳ್ಳುವ, ಎದುರಾಳಿಗಳ ದಿಕ್ಕು ತಪ್ಪಿಸುವ ಮತ್ತು 180 ಡಿಗ್ರಿಯಲ್ಲಿ ಕಾರು ತಿರುಗಿಸುವ ತರಬೇತಿಯನ್ನೂ ನೀಡಲಾಗಿರುತ್ತದೆ.

news18-kannada
Updated:February 18, 2020, 8:36 AM IST
Trump India Tour: ಅಮೆರಿಕ ಅಧ್ಯಕ್ಷರು ಬರುವ ಮುನ್ನ ಅಹಮದಾಬಾದ್​ಗೆ ಬರಲಿದೆ ದಿ ಬೀಸ್ಟ್ ಕಾರು; ಇದರ ವಿಶೇಷತೆಗಳೇನು ಗೊತ್ತಾ?
ದಿ ಬೀಸ್ಟ್ ಕಾರು.
  • Share this:
ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರು ಇದೇ ತಿಂಗಳ 24 ಮತ್ತು 25ರಂದು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಟ್ರಂಪ್ ಅಮೆರಿಕ ಅಧ್ಯಕ್ಷರಾದ ಬಳಿಕ ಇದೇ ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.  ಅವರ ಎರಡು ದಿನಗಳ ಪ್ರವಾಸಕ್ಕೆ ಗುಜರಾತ್​ನ ಅಹಮದಾಬಾದ್​ನಲ್ಲಿ ಭಾರೀ ಸಿದ್ಧತೆಗಳು ನಡೆಯುತ್ತಿವೆ. ಟ್ರಂಪ್ ಅವರು ಜಗತ್ತಿನ ಯಾವುದೇ ದೇಶಕ್ಕೆ ಹೋದರೂ ಅವರೊಂದಿಗೆ ಅಮೆರಿಕದ ದೊಡ್ಡ ಪ್ರಮಾಣದ ಭದ್ರತಾ ಪಡೆಯೇ ಬೆನ್ನಿಗಿರುತ್ತದೆ. ಜೊತೆಗೆ ಅವರ ದೀ ಬೀಸ್ಟ್​ ಕಾರು ಕೂಡ ಜೊತೆಗಿರುತ್ತದೆ.

ಫೆ.24ರಂದು ಟ್ರಂಪ್​ ಅವರು ಭಾರತಕ್ಕೆ ಬರುವ ಮುನ್ನ ಅವರ ಓಡಾಟಕ್ಕೆ ಅಮೆರಿಕದಿಂದ ಅಹಮದಾಬಾದ್​ಗೆ ದಿ ಬೀಸ್ಟ್ ಕಾರು ತಲುಪಲಿದೆ. ಈ ಕಾರಿನ ವೈಶಿಷ್ಟ್ಯ ಮತ್ತು ವಿಶೇಷತೆಗಳನ್ನು ಕೇಳಿದರೆ ಒಮ್ಮೆ ಎಂತಹವರಿಗಾದರೂ ಅಚ್ಚರಿಯಾಗದೆ ಇರದು.

ದಿ ಬೀಸ್ಟ್​ ಕಾರಿನಲ್ಲಿ ಐದು ಪದರಗಳ ಗಾಜು ಮತ್ತು ಪಾಲಿಕಾರ್ಬೊನೇಟ್​ಗಳನ್ನು ಹೊಂದಿರುತ್ತವೆ. ಯಾವ ಕಾರಣಕ್ಕೂ ಕಿಟಕಿ ತೆರೆಯಲು ಸಾಧ್ಯವಾಗುವುದಿಲ್ಲ. ತುರ್ತು ಸಂದರ್ಭಗಳಲ್ಲಿ ಚಾಲಕನ ಬಾಗಿಲಿನ ಕಿಟಕಿ ಗಾಜುಗಳನ್ನು ಮೂರು ಇಂಚಿನಷ್ಟು ಕೆಳಗೆ ಇಳಿಸಬಹುದು. ಐದು ಇಂಚು ದಪ್ಪದ ಮಿಲಿಟರಿ ಗ್ರೇಡ್​ನ ಲೋಹವನ್ನು ಕಾರಿನ ಹೊರಕವಚವಾಗಿ ಬಳಸಲಾಗಿದೆ. ಸ್ಟೀಲ್, ಟೈಟಾನಿಯಂ, ಅಲ್ಯುಮಿನಿಯಂ ಮತ್ತು ಸೆರಾಮಿಕ್ಸ್ ಅನ್ನು ಮಿಶ್ರ ಮಾಡಿ ವಿಶಿಷ್ಟ ಲೋಹ ಸಿದ್ಧಪಡಿಸಲಾಗಿದೆ. ಇಡೀ ಕಾರು ಗುಂಡು ನಿರೋಧಕ ವ್ಯವಸ್ಥೆ ಹೊಂದಿರುತ್ತದೆ.

ಮಂಗಳೂರು ಪೊಲೀಸರ ವಿರುದ್ಧ ಯಾಕೆ ಎಫ್​​ಐಆರ್​​ ದಾಖಲಿಸಿಲ್ಲ ಎಂದು ಮಾಹಿತಿ ಕೊಡಿ‘: ಹೈಕೋರ್ಟ್​​

ಬೋಯಿಂಗ್ 757 ವಿಮಾನದಲ್ಲಿ ಬಳಸುವಂತಹ 8 ಇಂಚು ದಪ್ಪದ ಬಾಗಿಲುಗಳನ್ನು ಈ ಕಾರು ಹೊಂದಿದೆ. ಬಾಗಿಲು ಹಾಕಿಕೊಂಡಾಗ ಕಾರು ಶೇ.100ರಷ್ಟು ರಾಸಾಯನಿಕ ಆಯುಧ ನಿರೋಧಕ ವ್ಯವಸ್ಥೆ ಹೊಂದಿರುತ್ತದೆ. ಪಂಕ್ಚರ್ ನಿರೋಧಕ ಬಲಿಷ್ಠ ಚಕ್ರಗಳನ್ನು ಕಾರಿಗೆ ಅಳವಡಿಸಲಾಗಿದೆ. ಟಯರ್ ಸ್ಫೋಟಗೊಂಡಾಗಲು ಕಾರು ಚಲಿಸುವಂತಹ ಮಾದರಿಯಲ್ಲಿ ಸ್ಟೀಲ್​ ರಿಮ್​ಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಹಾಗೆಯೇ ಕಾರಿನ ಮುಂಭಾಗದಲ್ಲಿ ಅಶ್ರುವಾಯು ಗ್ರನೇಡ್ ಲಾಂಚರ್, ರಾತ್ರಿ ವೇಳೆಯೂ ಸ್ಪಷ್ಟವಾಗಿ ಕಾರ್ಯನಿರ್ವಹಿಸುವ ಕ್ಯಾಮೆರಾಗಳ ವ್ಯವಸ್ಥೆ ಇದೆ.

ಅಮೆರಿಕ ಅಧ್ಯಕ್ಷರು ಅಲ್ಲದೇ, ಇನ್ನೂ ನಾಲ್ವರು ಹಿಂಬದಿಯಲ್ಲಿ ಕುಳಿತುಕೊಳ್ಳಬಹುದು. ಅಧ್ಯಕ್ಷರಿಗೆ ಗಾಜಿನ ಕ್ಯಾಬಿನ್ ಇರುತ್ತದೆ. ಪ್ಯಾನಿಕ್ ಬಟನ್, ತುರ್ತು ಸಂದರ್ಭಗಳಲ್ಲಿ ಬಳಸಲು ಪ್ರತಿಯೊಬ್ಬರಿಗೂ ಪ್ರತ್ಯೇಕ ಆಮ್ಲಜನಕ ಪೂರೈಕೆ ವ್ಯವಸ್ಥೆ ಇರುತ್ತದೆ. ದೇಶದ ಉಪಾಧ್ಯಕ್ಷರು ಮತ್ತು ಪೆಂಟಗನ್ ಜತೆಗೆ ಅಧ್ಯಕ್ಷರಿಗೆ ನೇರವಾಗಿ ಸಂಪರ್ಕ ಕಲ್ಪಿಸುವಂತಹ ಸಂವಹನ ವ್ಯವಸ್ಥೆ ಇರುತ್ತದೆ.

ಇದನ್ನು ಓದಿ: ಅಮೆರಿಕದ ಸಮಾಧಾನಕ್ಕೆ ಭಾರತ ಯತ್ನ; ಕೋಳಿ, ಹಾಲು ಉತ್ಪನ್ನ ಆಮದಿಗೆ ನಿರ್ಬಂಧ ಸಡಿಲಿಸಲು ಚಿಂತನೆಕಾರಿನಲ್ಲಿ ಪಂಪ್ ಆ್ಯಕ್ಷನ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ಅತ್ಯಾಧುನಿಕ ಗನ್​ಗಳು, ಅಶ್ರುವಾಯು ಫಿರಂಗಿಗಳು ಇರುತ್ತವೆ. ಮುನ್ನೆಚ್ಚರಿಕೆಯಾಗಿ ಅಧ್ಯಕ್ಷರ ರಕ್ತದ ಮಾದರಿ ಸಹ ಇರುತ್ತದೆ. ಈ ಕಾರನ್ನು ಚಲಾಯಿಸುವ ಚಾಲಕನಿಗೆ ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿಯೂ ಎದೆಗುಂದದೆ ಕಾರನ್ನು ಹೇಗೆ ಚಾಲನೆ ಮಾಡಬೇಕು ಎಂಬ ತರಬೇತಿಯನ್ನು ಅಮೆರಿಕ ಸೇನೆ ನೀಡಿದೆ. ತುರ್ತು ಪರಿಸ್ಥಿತಿಗಳಲ್ಲಿ ತಪ್ಪಿಸಿಕೊಳ್ಳುವ, ಎದುರಾಳಿಗಳ ದಿಕ್ಕು ತಪ್ಪಿಸುವ ಮತ್ತು 180 ಡಿಗ್ರಿಯಲ್ಲಿ ಕಾರು ತಿರುಗಿಸುವ ತರಬೇತಿಯನ್ನೂ ನೀಡಲಾಗಿರುತ್ತದೆ.
First published: February 18, 2020, 7:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading