Allahabad High Court: ಪ್ರಧಾನಿಯನ್ನು ಟೀಕಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ! ಆರೋಪಿಯ ಕಿವಿ ಹಿಂಡಿದ ಅಲಹಾಬಾದ್ ಹೈಕೋರ್ಟ್‌

"ಯಾವುದೇ ನಾಗರಿಕರ ವಿರುದ್ಧ ಅದರಲ್ಲಿಯೂ ಪ್ರಧಾನಿಯವರ ವಿರುದ್ಧ ನಿಂದನೆ ಮಾಡಿದರೆ ವಾಕ್‌ ಸ್ವಾತಂತ್ರ್ಯದಡಿ ರಕ್ಷಣೆ ದೊರೆಯದು. ಪ್ರಧಾನಿ ಅವಹೇಳನ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ" ಅಂತ ನ್ಯಾಯಪೀಠ ಹೇಳಿದೆ.

ಪ್ರಧಾನಿ ಅವಹೇಳನ ಸರಿಯಲ್ಲ ಎಂದ ಅಲಹಾಬಾದ್ ಹೈಕೋರ್ಟ್

ಪ್ರಧಾನಿ ಅವಹೇಳನ ಸರಿಯಲ್ಲ ಎಂದ ಅಲಹಾಬಾದ್ ಹೈಕೋರ್ಟ್

  • Share this:
ಅಲಹಾಬಾದ್, ಉತ್ತರ ಪ್ರದೇಶ: ಭಾರತದ ಸಂವಿಧಾನ (Indian Constitution) ಪ್ರತಿಯೊಬ್ಬ ಭಾರತೀಯನಿಗೆ (Indians) ಮಾತನಾಡುವ ಹಕ್ಕನ್ನು (Freedom of Speech) ನೀಡಿದೆ. ಪ್ರತಿಯೊಬ್ಬರು ತಮ್ಮ ಅಭಿಪ್ರಾಯ (opinion) ವ್ಯಕ್ತಪಡಿಸಲು ಸ್ವತಂತ್ರರು ಅಂತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು (Freedom of expression) ನೀಡಿದೆ. ಹಾಗಂತ ಇದನ್ನೇ ದುರುಪಯೋಗ (Misuse) ಮಾಡಿಕೊಂಡು, ಮತ್ತೊಬ್ಬರ ಬಗ್ಗೆ ಅವಹೇಳನ (Contempt) ಮಾಡುವ, ಆಧಾರರಹಿಕವಾಗಿ ಆರೋಪ ಮಾಡುವ ಮತ್ತು ಇನ್ನೊಬ್ಬರ ತೇಜೋವಧೆ ಮಾಡುವ ಹಕ್ಕು ಯಾರಿಗೂ ಇಲ್ಲ. ಇದೀಗ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ಕೇಂದ್ರ ಗೃಹ (Central Home Minister) ಸಚಿವ ಅಮಿತ್ ಶಾ (Amit Shah) ಅವರನ್ನು ಅಪಮಾನಿಸಿದ್ದ ವ್ಯಕ್ತಿಗೆ ಅಲಹಾಬಾದ್ ಹೈಕೋರ್ಟ್ (Allahabad High court) ಕಿವಿ ಹಿಂಡಿದೆ. ಪ್ರಧಾನಿಯನ್ನು ಅಪಮಾನ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ ಅಂತ ಹೇಳಿದೆ.

 ಏನಿದು ಪ್ರಕರಣ?

 ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಕೇಂದ್ರ ಸಚಿವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸಲು ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ. ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ರದ್ದುಗೊಳಿಸುವಂತೆ ಮುಮ್ತಾಜ್ ಮನ್ಸೂರಿ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, "ಬೇರೊಬ್ಬರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಎನಿಸಿಕೊಳ್ಳುವುದಿಲ್ಲ' ಎಂದು ಸ್ಪಷ್ಟ ಪಡಿಸಿದೆ.

 ಮುಮ್ತಾಜ್ ವಿರುದ್ಧದ ಆರೋಪಗಳೇನು?

 ಆರೋಪಿ ಮುಮ್ತಾಜ್ ಮನ್ಸೂರಿ ಎಂಬಾತ ಪ್ರಧಾನಿ ಮತ್ತು ಗೃಹ ಸಚಿವರು ಮತ್ತು ಇತರ ಮಂತ್ರಿಗಳನ್ನು ಅವಹೇಳನ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಆಕ್ಷೇಪಾರ್ಹ ಪೋಸ್ಟ್‌ ಹಾಕಿದ್ದ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸರು ಮುಮ್ತಾಜ್ ಮನ್ಸೂರಿಯನ್ನು ಬಂಧಿಸಿ, ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 (ಶಾಂತಿ ಭಂಗ ಉಂಟು ಮಾಡುವ ಉದ್ದೇಶದ ಅವಮಾನ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಇದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಇದನ್ನೂ ಓದಿ: President of India: ರಾಷ್ಟ್ರಪತಿ ಹುದ್ದೆ ಎಷ್ಟು ಮಹತ್ವದ್ದು? ಅವರ ಸಂಬಳ, ಸವಲತ್ತುಗಳೇನು?

"ಸಂವಿಧಾನ ನೀಡಿದ ಹಕ್ಕಿನ ದುರುಪಯೋಗ ಸರಿಯಲ್ಲ"

ಈ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್, "ಈ ದೇಶದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೆ ವಾಕ್ ಸ್ವಾತಂತ್ರ್ಯ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಅಂತಹ ಹಕ್ಕು ಯಾವುದೇ ನಾಗರಿಕರ ವಿರುದ್ಧ ದುರುಪಯೋಗ ಅಥವಾ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ವಿಚಾರದಲ್ಲಿ ಒಳಗೊಂಡಿರುವುದಿಲ್ಲ ಅಂತ ಕೋರ್ಟ್ ಹೇಳಿದೆ.

"ಪ್ರಧಾನಿ ಅವಹೇಳನ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ"

ಯಾವುದೇ ನಾಗರಿಕರ ವಿರುದ್ಧ ಅದರಲ್ಲಿಯೂ ಪ್ರಧಾನಿಯವರ ವಿರುದ್ಧ ನಿಂದನೆ ಮಾಡಿದರೆ ವಾಕ್‌ ಸ್ವಾತಂತ್ರ್ಯದಡಿ ರಕ್ಷಣೆ ದೊರೆಯದು. ಪ್ರಧಾನಿ ಅವಹೇಳನ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ ಅಂತ ನ್ಯಾಯಮೂರ್ತಿ ಅಶ್ವನಿ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ರಾಜೇಂದ್ರ ಕುಮಾರ್-IV ಅವರಿದ್ದ ವಿಭಾಗೀಯ ಪೀಠ ಹೇಳಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಜಾಮೀನು ನೀಡಲು ನಿರಾಕರಿಸಿದೆ.

ಇದನ್ನೂ ಓದಿ: Presidential Election: ರಾಷ್ಟ್ರಪತಿ ಚುನಾವಣೆಗೆ ಮತದಾನ; ಮೋದಿ, ಬಸವರಾಜ ಬೊಮ್ಮಾಯಿ ಸೇರಿ ಪ್ರಮುಖರಿಂದ ವೋಟಿಂಗ್

ಎಫ್‌ಐಆರ್ ರದ್ಧುಗೊಳಿಸಲು ಹೈಕೋರ್ಟ್ ನಕಾರ

ಇನ್ನು ಮುಮ್ತಾಜ್ ಮನ್ಸೂರಿ ಮೇಲಿನ ಎಫ್ಐಆರ್ ರದ್ಧುಗೊಳಿಸಲು ಹೈಕೋರ್ಟ್ ನ್ಯಾಯಪೀಠ ನಿರಾಕರಿಸಿದೆ. ಎಫ್ಐಆರ್ ಸೂಕ್ತ ಅಪರಾಧದ ಕಾನೂನನ್ನು ಸ್ಪಷ್ಟವಾಗಿ ಬಹಿರಂಗಪಡಿಸುತ್ತದೆ. ಇಂಥ ಎಫ್‌ಐಆರ್‌ಅನ್ನು ಎದ್ದು ಮಾಡುವ ಯಾವುದೇ ಉತ್ತಮ ಸೂಕ್ತ ನಮ್ಮ ಎದುರಿಗೆ ಇಲ್ಲ..ಕಾನೂನಿಗೆ ಅನುಸಾರವಾಗಿ ಈ ವಿಷಯದಲ್ಲಿ ಮುಂದುವರಿಯಲು ಮತ್ತು ತನಿಖೆಯನ್ನು ಶೀಘ್ರವಾಗಿ ಮುಕ್ತಾಯಗೊಳಿಸಲು ಅಧಿಕಾರಿಗಳಿಗೆ ಸ್ವಾತಂತ್ರ್ಯವಿರುತ್ತದೆ' ಎಂದು ಕೋರ್ಟ್‌ ಹೇಳಿದೆ.
Published by:Annappa Achari
First published: