• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Sengol Handover: ಪ್ರಧಾನಿಗೆ ಸೆಂಗೋಲ್‌ ಹಸ್ತಾಂತರಿಸಿದ ಅಧೀನಂ ಪೀಠಾಧಿಪತಿ, ಗುಲಾಮಗಿರಿ ಅಂತ್ಯದ ಸಂಕೇತ ಎಂದ ಮೋದಿ

Sengol Handover: ಪ್ರಧಾನಿಗೆ ಸೆಂಗೋಲ್‌ ಹಸ್ತಾಂತರಿಸಿದ ಅಧೀನಂ ಪೀಠಾಧಿಪತಿ, ಗುಲಾಮಗಿರಿ ಅಂತ್ಯದ ಸಂಕೇತ ಎಂದ ಮೋದಿ

ಪ್ರಧಾನಿಗೆ ಸೆಂಗೋಲ್‌ ಹಸ್ತಾಂತರಿಸಿದ ಅಧೀನಂ ಪೀಠಾಧಿಪತಿ

ಪ್ರಧಾನಿಗೆ ಸೆಂಗೋಲ್‌ ಹಸ್ತಾಂತರಿಸಿದ ಅಧೀನಂ ಪೀಠಾಧಿಪತಿ

ಧರ್ಮಪುರಂ ಮತ್ತು ತಿರುವವಾಡುತುರೈನ ಅಧೀನರು ದೆಹಲಿಗೆ ಆಗಮಿಸಿ ಪ್ರಧಾನಿ ಮೋದಿ ಅವರ ನಿವಾಸದಲ್ಲಿ ಭೇಟಿ ಮಾಡಿದರು. ಈ ವೇಳೆ ನರೇಂದ್ರ ಮೋದಿ ಅಧೀನರ ಆಶೀರ್ವಾದ ಪಡೆದರು. ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು 21 ಅಧೀನರು ಈ ಹಿಂದೆ ಚೆನ್ನೈನಿಂದ ದೆಹಲಿಗೆ ತೆರಳಿದ್ದರು.

  • News18 Kannada
  • 2-MIN READ
  • Last Updated :
  • New Delhi, India
  • Share this:

ನವದೆಹಲಿ: ನೂತನ ಸಂಸತ್ ಭವನ ಸೆಂಟ್ರಲ್ ವಿಸ್ತಾದ (Central Vista) ಉದ್ಘಾಟನೆಗೆ ಕೌಂಟ್‌ಡೌನ್ ಶುರುವಾಗಿದೆ. ಇಂದು ಬೆಳಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆಯ ತನಕ ಸುದೀರ್ಘವಾಗಿ ಸಂಸತ್ ಭವನದ (New Parliament) ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಇತ್ತ ಸಂಸತ್ ಭವನದ ಉದ್ಘಾಟನೆಯ ಮುನ್ನಾ ದಿನ ರಾಜದಂಡ ‘ಸೆಂಗೋಲ್‌’ ಅನ್ನು (Sengol) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಹಸ್ತಾಂತರ ಮಾಡಲಾಯಿತು.


ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಆಗಿರುವ ಹಿನ್ನೆಲೆ, ನೂತನ ಸಂಸತ್ ಭವನ ಉದ್ಘಾಟನೆಯ ಸವಿನೆನಪಿಗಾಗಿ ಐತಿಹಾಸಿಕ ಹಿನ್ನೆಲೆಯುಳ್ಳ ಈ ಸೆಂಗೋಲ್ ಅನ್ನು ಸಂಸತ್ ಭವನದಲ್ಲಿ ನರೇಂದ್ರ ಮೋದಿ ಪ್ರತಿಷ್ಟಾಪನೆ ಮಾಡಲಿದ್ದು, ಹೀಗಾಗಿ ನಿನ್ನೆ ಅಧೀನಂ ಪೀಠಾಧಿಪತಿಗಳು ಸೆಂಗೋಲ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಿದರು.


ಇದನ್ನೂ ಓದಿ: Narendra Modi: ಹೊಸ ಸಂಸತ್​ ಭವನದ ಉದ್ಘಾಟನೆಯ ಮೊದಲೇ ವಿಶೇಷ ವಿನಂತಿಯೊಂದಿಗೆ ವಿಡಿಯೋ ಶೇರ್ ಮಾಡಿದ ಪ್ರಧಾನಿ ಮೋದಿ!


ಧರ್ಮಪುರಂ ಮತ್ತು ತಿರುವವಾಡುತುರೈನ ಅಧೀನರು ದೆಹಲಿಗೆ ಆಗಮಿಸಿ ಪ್ರಧಾನಿ ಮೋದಿ ಅವರ ನಿವಾಸದಲ್ಲಿ ಭೇಟಿ ಮಾಡಿದರು. ಈ ವೇಳೆ ನರೇಂದ್ರ ಮೋದಿ ಅಧೀನರ ಆಶೀರ್ವಾದ ಪಡೆದರು. ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು 21 ಅಧೀನರು ಈ ಹಿಂದೆ ಚೆನ್ನೈನಿಂದ ದೆಹಲಿಗೆ ತೆರಳಿದ್ದರು. ಈ ಅಧೀನಂಗಳಲ್ಲಿ ಧರ್ಮಪುರಂ ಅಧೀನಂ, ಪಳನಿ ಅಧೀನಂ, ವಿರುಧಾಚಲಂ ಅಧೀನಂ ಮತ್ತು ತಿರುಕೋಯಿಲೂರ್ ಅಧೀನಂ ಸೇರಿದ್ದಾರೆ.


ಗುಲಾಮಗಿರಿ ಅಂತ್ಯಗೊಳಿಸಿದ ಸಂಕೇತ: ಮೋದಿ


ಅಧೀನಂರಿಂದ ಸೆಂಗೋಲ್ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶಕ್ಕೆ ಸ್ವಾತಂತ್ರ್ಯ ಸಿಗುವ ಸಂದರ್ಭ ಬಂದಾಗ, ಅಧಿಕಾರದ ಹಸ್ತಾಂತರದ ಪ್ರತೀಕವಾಗಿ ಸೆಂಗೋಲ್‌ಅನ್ನು ಬಳಸಲಾಯಿತು. ತಮಿಳು ಪರಂಪರೆಯಲ್ಲಿ ಅಧಿಕಾರ ಹಸ್ತಾಂತರದ ಸಂಕೇತವಾಗಿ ಸೆಂಗೋಲ್‌ ಅನ್ನು ನೀಡಲಾಗುತ್ತದೆ. ಹಾಗೆಯೇ, ರಾಜಧರ್ಮ ಪಾಲನೆಯ ಜವಾಬ್ದಾರಿಯನ್ನೂ ಸೆಂಗೋಲ್‌ ತಿಳಿಸುತ್ತದೆ. 1947ರಲ್ಲಿ ಅಧಿಕಾರದ ಹಸ್ತಾಂತರದ ವೇಳೆ ಸೆಂಗೋಲ್‌ ಅನ್ನು ನೀಡಿದ್ದು ಗುಲಾಮಗಿರಿಯ ಅಂತ್ಯದ ಸಂಕೇತವಾಗಿತ್ತು ಎಂದು ಹೇಳಿದರು.


ಇದನ್ನೂ ಓದಿ: Central Vista: ಒಂದಲ್ಲ ಎರಡಲ್ಲ, ಬರೋಬ್ಬರಿ 20 ವಿಪಕ್ಷಗಳಿಂದ ನೂತನ ಸಂಸತ್ ಭವನ ಉದ್ಘಾಟನೆಗೆ ಬಹಿಷ್ಕಾರ!


ಅಲ್ಲದೇ, ಇಂತಹ ರಾಜದಂಡವನ್ನು ನಾವು ಸಂಸತ್ತಿನಲ್ಲಿ ಪ್ರತಿಷ್ಠಾಪಿಸುತ್ತಿದ್ದೇವೆ ಎಂದ ನರೇಂದ್ರ ಮೋದಿ. ದೇಶದ ಜನರ ಏಳಿಗೆ, ರಾಜಧರ್ಮವನ್ನು ಪಾಲಿಸುವುದರ ದ್ಯೋತಕವಾಗಿ ಸಂಸತ್ತಿನಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ರಾಜದಂಡವನ್ನು ಅಲಹಾಬಾದ್‌ನ ಮ್ಯೂಸಿಯಂನಲ್ಲಿ ಇರಿಸಲಾಗಿತ್ತು. ಆನಂದ ಭವನದಲ್ಲಿ ಇದನ್ನು ಊರುಗೋಲು ಎಂದು ಪ್ರದರ್ಶನಕ್ಕಾಗಿ ಇರಿಸಲಾಗಿತ್ತು. ಆದರೆ, ನಿಮ್ಮ ಈ ಸೇವಕ ಹಾಗೂ ನಮ್ಮ ಸರ್ಕಾರವು ಆನಂದ ಭವನದಿಂದ ಸೆಂಗೋಲ್‌ಅನ್ನು ತಂದಿದ್ದೇವೆ. ಸ್ವಾತಂತ್ರ್ಯದ ಮೊದಲ ಫಲದ ರೂಪದಲ್ಲಿರುವ ರಾಜದಂಡವನ್ನು ಸಂಸತ್ತಿನಲ್ಲಿ ಇರಿಸುತ್ತೇವೆ. ಪ್ರಜಾಪ್ರಭುತ್ವದ ಮಂದಿರದಲ್ಲಿ ಸೆಂಗೋಲ್‌ ಪ್ರತಿಷ್ಠಾಪನೆಯಾಗುತ್ತಿರುವುದು ಸಂತಸ ತಂದಿದೆ. ನಮಗೆ ಇದು ಕರ್ತವ್ಯಪಥ ತೋರಿಸುತ್ತದೆ, ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸುತ್ತದೆ ಎಂದ ಹೇಳಿದರು.



ಪ್ರಧಾನಿ ಭಾಷಣಕ್ಕೂ ಮುನ್ನಾ ಮೋದಿ ಅವರ ಹಣೆಗೆ ತಿಲಕ ಇಟ್ಟು, ಹಾರ ಹಾಕಿ, ಶಾಲು ಹೊದೆಸಿದ ಅಧೀನಂಗಳು ಪ್ರಧಾಮನಿಗೆ ಆಶೀರ್ವದಿಸಿದರು. ಈ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

First published: