Building Demolition: 9 ಸೆಕೆಂಡ್​ಗಳಲ್ಲಿ ಕೊನೆಯಾಗಲಿದೆ 9 ವರ್ಷಗಳ ಹೋರಾಟ, ಇದು ಅವಳಿ ಕಟ್ಟಡದ ಕತೆ!

ನೋಯ್ಡಾದ ಅವಳಿ ಗೋಪುರಗಳನ್ನು ಕೆಡವಲು ಗುತ್ತಿಗೆ ಪಡೆದ ಕಂಪನಿಯಾದ ಎಡಿಫೈಸ್ ಇಂಜಿನಿಯರಿಂಗ್ ಅಧಿಕಾರಿಗಳು ಆಗಸ್ಟ್ 28 ರ ಭಾನುವಾರ ಮಧ್ಯಾಹ್ನ 2:30 ಕ್ಕೆ ಕೆಡವಲು ನಿರ್ಧರಿಸಿದ್ದಾರೆ. ಎರಡು ಅವಳಿ ಗೋಪುರಗಳಾದ ಅಪೆಕ್ಸ್ ಮತ್ತು ಸಿಯಾನಿ ಬರೀ ಒಂಬತ್ತು ಸೆಕೆಂಡುಗಳಲ್ಲಿ ಧೂಳಿನಂತಾಗುತ್ತದೆ, ಒಂಭತ್ತು ವರ್ಷಗಳ ಕಾಲ ನ್ಯಾಯಕ್ಕಾಗಿ ಹೋರಾಡಿದ ಸ್ಥಳೀಯ ನಿವಾಸಿಗಳು ಕೊನೆಗೂ ಗೆದ್ದಿದ್ದಾರೆ.

ಸೂಪರ್‌ಟೆಕ್ ಅವಳಿ ಗೋಪುರ ನೋಯ್ಡಾ

ಸೂಪರ್‌ಟೆಕ್ ಅವಳಿ ಗೋಪುರ ನೋಯ್ಡಾ

  • Share this:
ಕಾನೂನು ಬಾಹಿರವಾಗಿ ಸೂಪರ್‌ಟೆಕ್‌ನಿಂದ (Supertech) ನಿರ್ಮಾಣಗೊಂಡಿರುವ ನೋಯ್ಡಾದ 100 ಮೀಟರ್ ಎತ್ತರದ ಅವಳಿ ಗೋಪುರಗಳನ್ನು (Twin Tower) ಕೆಲವೇ ಗಂಟೆಗಳಲ್ಲಿ ನೆಲಸಮ ಮಾಡಲಾಗುತ್ತಿದೆ. ನೋಯ್ಡಾದ (Noida) ಅವಳಿ ಗೋಪುರಗಳನ್ನು ಕೆಡವಲು ಗುತ್ತಿಗೆ ಪಡೆದ ಕಂಪನಿಯಾದ ಎಡಿಫೈಸ್ ಇಂಜಿನಿಯರಿಂಗ್ (Edifices Engineering) ಅಧಿಕಾರಿಗಳು ಆಗಸ್ಟ್ 28 ರ ಭಾನುವಾರ ಮಧ್ಯಾಹ್ನ 2:30 ಕ್ಕೆ ಕೆಡವಲು ನಿರ್ಧರಿಸಿದ್ದಾರೆ. ಎರಡು ಅವಳಿ ಗೋಪುರಗಳಾದ ಅಪೆಕ್ಸ್ ಮತ್ತು ಸಿಯಾನಿ (Apex and Ceyane)ಬರೀ ಒಂಬತ್ತು ಸೆಕೆಂಡುಗಳಲ್ಲಿ ಧೂಳಿನಂತಾಗುತ್ತದೆ, ಒಂಭತ್ತು ವರ್ಷಗಳ ಕಾಲ ನ್ಯಾಯಕ್ಕಾಗಿ ಹೋರಾಡಿದ ಸ್ಥಳೀಯ ನಿವಾಸಿಗಳು ಕೊನೆಗೂ ಗೆದ್ದಿದ್ದಾರೆ.

ಸೂಪರ್‌ಟೆಕ್ ಅವಳಿ ಕಟ್ಟಡ ಕೆಡವುವಿಕೆಯ ಪ್ರಕರಣದ ಹಂತ ಹಂತದ ವಿವರ ಇಲ್ಲಿದೆ:
ನವೆಂಬರ್ 2004
ಎಮರಾಲ್ಡ್ ಕೋರ್ಟ್ ಎಂದು ಕರೆಯಲ್ಪಡುವ ನ್ಯೂ ಓಖ್ಲಾ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಅಥಾರಿಟಿ (NOIDA) ರಿಯಾಲ್ಟಿ ಸಂಸ್ಥೆ ಸೂಪರ್‌ಟೆಕ್ ಲಿಮಿಟೆಡ್‌ಗೆ ಸೆಕ್ಟರ್ 93A ನಲ್ಲಿ ಹೌಸಿಂಗ್ ಸೊಸೈಟಿಯ ನಿರ್ಮಾಣಕ್ಕಾಗಿ ಭೂಮಿಯನ್ನು ಮಂಜೂರು ಮಾಡಿತು.

2005
ನ್ಯೂ ಓಖ್ಲಾ ಕೈಗಾರಿಕಾ ಅಭಿವೃದ್ಧಿ ಪ್ರದೇಶದ ಕಟ್ಟಡ ನಿಯಮಗಳು ಮತ್ತು ನಿರ್ದೇಶನಗಳು, 1986 ರ ಅಡಿಯಲ್ಲಿ ಕಟ್ಟಡದ ಯೋಜನೆಯು ಈ ವರ್ಷ ಮಂಜೂರಾಗಿದೆ. ಇದರೊಂದಿಗೆ, ಬಿಲ್ಡರ್ ತಲಾ ಹತ್ತು ಮಹಡಿಗಳನ್ನು ಹೊಂದಿರುವ ಒಟ್ಟು 14 ಟವರ್‌ಗಳನ್ನು ನಿರ್ಮಿಸಲು ಅನುಮತಿಯನ್ನು ಪಡೆಯುತ್ತಾನೆ, ಅದು 37 ಮೀಟರ್ ಎತ್ತರದಲ್ಲಿರಬೇಕು.

ಇದನ್ನೂ ಓದಿ: Noida Twin Towers: ಸೂಪರ್‌ಟೆಕ್ ಅವಳಿ ಗೋಪುರ ಉರುಳಿಸಲು ಬೇಕು ಕೋಟಿ ಕೋಟಿ ಹಣ!

ಜೂನ್ 2006
ಸೂಪರ್‌ಟೆಕ್‌ಗೆ ಇದೇ ಷರತ್ತುಗಳ ಅನ್ವಯ ನಿರ್ಮಾಣಕ್ಕಾಗಿ ಹೆಚ್ಚುವರಿ ಭೂಮಿಯನ್ನು ಮಂಜೂರು ಮಾಡಲಾಯಿತು.

ನವೆಂಬರ್ 2009
ಹೌಸಿಂಗ್ ಸೊಸೈಟಿಯಲ್ಲಿ ಇನ್ನೂ ಎರಡು ಟವರ್‌ಗಳನ್ನು ಸೇರಿಸಲು ಯೋಜನೆಯನ್ನು ಮತ್ತೆ ಪರಿಷ್ಕರಿಸಲಾಯಿತು ಅಂತೆಯೇ ಅಪೆಕ್ಸ್ ಹಾಗೂ ಸಿಯಾನಿ ನಿರ್ಮಾಣವು ಪ್ರಾರಂಭವಾಗುತ್ತದೆ ಅಂತೆಯೇ ಅವಳಿ ಗೋಪುರಗಳಲ್ಲಿ 24 ಮಹಡಿಗಳಿರುವಂತೆ ಯೋಜನೆ ರೂಪಿಸಲಾಯಿತು.

ಮಾರ್ಚ್ 2012
ಅಪೆಕ್ಸ್ ಹಾಗೂ ಸಿಯಾನಿಯಲ್ಲಿರುವ ಮಹಡಿಗಳ ಸಂಖ್ಯೆಯನ್ನು ತಲಾ 40 ರಂತೆ ಏರಿಸಲಾಯಿತು. ಇದು ಮೂಲ ಯೋಜನೆಗೆ ವಿರುದ್ಧವಿತ್ತು. 2010 ರ ನೋಯ್ಡಾ ಬಿಲ್ಡಿಂಗ್ ನಿಯವಾವಳಿಗಳ ಅಡಿಯಲ್ಲಿ ಈ ಯೋಜನೆಯನ್ನು ಮೊದಲೇ ಪ್ರಸ್ತಾವಿಸಲಾಗಿದೆ ಎಂದು ಸೂಪರ್‌ಟೆಕ್ ವಾದಿಸುತ್ತದೆ.

ಡಿಸೆಂಬರ್ 2012
ಎಮರಾಲ್ಡ್ ಕೋರ್ಟ್ ಮಾಲೀಕರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ಅಲಹಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಟವರ್‌ಗಳು ಯುಪಿ ಅಪಾರ್ಟ್‌ಮೆಂಟ್‌ನ ಮಾಲೀಕರ ಕಾಯ್ದೆ2010 ಅನ್ನು ಉಲ್ಲಂಘಿಸಿವೆ ಎಂಬುದಾಗಿ ಸಂಘದ ಸದಸ್ಯರು ಹೇಳಿಕೊಂಡಿದ್ದು, ಯೋಜನೆಯಲ್ಲಿನ ಯಾವುದೇ ಬದಲಾವಣೆಗಳಿಗೆ ಮನೆ ಖರೀದಿದಾರರ ಮಂಜೂರಾತಿಯನ್ನು ಕಡ್ಡಾಯಗೊಳಿಸುತ್ತದೆ.

ಮೂಲ ಕರಪತ್ರದಲ್ಲಿ ಉದ್ಯಾನ ಎಂದು ಉಲ್ಲೇಖಿಸಿರುವಲ್ಲಿ ಅವಳಿ ಕಟ್ಟಡಗಳನ್ನು ನಿರ್ಮಿಸುವ ಯೋಜನೆ ನುಸುಳಿದೆ ಎಂದು ಸದಸ್ಯರು ತಿಳಿಸಿದ್ದಾರೆ. ಟವರ್‌ಗಳ ಅಂತರವು 16 ಮೀಟರ್‌ಗಿಂತಲೂ ಕಡಿಮೆ ಇದೆ ಎಂಬುದಾಗಿ ಮನೆ ಖರೀದಿದಾರರು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದು ಇದು ಆದೇಶಗಳನ್ನು ಮತ್ತಷ್ಟು ಉಲ್ಲಂಘಿಸಿದ ದೋಷವನ್ನು ಸೂಚಿಸಿತು.

ಏಪ್ರಿಲ್ 2014
ಅಲಹಾಬಾದ್ ಹೈಕೋರ್ಟ್ ನೋಯ್ಡಾ ಅವಳಿ ಕಟ್ಟಡಗಳ ಕೆಡವುವಿಕೆಗೆ ಆದೇಶ ನೀಡುತ್ತದೆ. 14% ಬಡ್ಡಿಯೊಂದಿಗೆ ಮನೆ ಖರೀದಿದಾರರ ಹಣವನ್ನು ವಾಪಾಸು ಮಾಡುವಂತೆ ಹೈಕೋರ್ಟ್ ಸೂಪರ್‌ಟೆಕ್‌ಗೆ ಆದೇಶಿಸಿತು. ನೋಯ್ಡಾ ಪ್ರಾಧಿಕಾರದ ಅಧಿಕಾರಿಗಳು ಟವರ್ ನಿರ್ಮಿಸಲು ಸೂಪರ್‌ಟೆಕ್‌ನೊಂದಿಗೆ ಕೈಜೋಡಿಸಿರುವುದನ್ನು ಹೈಕೋರ್ಟ್ ಗಮನಿಸಿತು. ಅವಳಿ ಕಟ್ಟಗಳನ್ನು ಸೀಲ್ ಮಾಡಲಾಯಿತು.

ಆಗಸ್ಟ್ 31, 2021
ಉಚ್ಛ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವ ಸೂಪರ್‌ಟೆಕ್‌ನ ಮನವಿಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸುತ್ತದೆ ಮತ್ತು 2014 ರ ಆದೇಶವನ್ನು ಎತ್ತಿಹಿಡಿಯುತ್ತದೆ. ಮೂರು ತಿಂಗಳೊಳಗೆ ಅವಳಿ ಕಟ್ಟಡಗಳನ್ನು ಕೆಡವಬೇಕೆಂದು ನಿರ್ಧರಿಸಲಾಗುತ್ತದೆ ಅದಾಗ್ಯೂ ಕೆಡವಲು ಒಂದು ವರ್ಷ ವಿಳಂಬವಾಗುತ್ತದೆ.

ಫೆಬ್ರವರಿ 2022
ಕೆಡವುವ ಕೆಲಸ ಪ್ರಾರಂಭವಾಗಿದೆ ಮತ್ತು ಮೇ 22 ರೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ನೋಯ್ಡಾ ಅಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಇದನ್ನೂ ಓದಿ:  Ayodhya: ಅಯೋಧ್ಯೆ ರಾಮಮಂದಿರದ ಗರ್ಭಗುಡಿ ನಿರ್ಮಾಣದ ಲೇಟೆಸ್ಟ್​ ಫೊಟೋಸ್​ ವೈರಲ್!

ಮೇ 17 2022
ಅವಳಿ ಕಟ್ಟಗಳನ್ನು ಕೆಡವುವ ಗಡುವನ್ನು ಸುಪ್ರೀಂ ಕೋರ್ಟ್ ವಿಸ್ತರಿಸಿ ಅದನ್ನು ಆಗಸ್ಟ್ 28 ಕ್ಕೆ ಮಾಡಲು ಆದೇಶಿಸುತ್ತದೆ.

ಆಗಸ್ಟ್ 12
ಸುಪ್ರೀಂ ಕೋರ್ಟ್ ಕೆಡವುವ ಗಡುವನ್ನು ಮತ್ತಷ್ಟು ವಿಸ್ತರಿಸಿತು ಹಾಗೂ ಸಪ್ಟೆಂಬರ್ 4 ರ ದಿನಾಂಕವನ್ನು ನಿರ್ಧರಿಸಿತು. ಆದಾಗ್ಯೂ, ನೊಯ್ಡಾ ಅವಳಿ ಕಟ್ಟಡಗಳನ್ನು ಆಗಸ್ಟ್ 28 ರಂದು ಕೆಡವಲಾಗುವುದು ಎಂದು ಡೆಮಿಲಿಷನ್ ಕಂಪನಿ ಎಡಿಫೈಸ್ ಎಂಜಿನಿಯರಿಂಗ್ ತಿಳಿಸಿತು.
Published by:Ashwini Prabhu
First published: