ಜೆಎನ್​ಯು ಹಿಂಸಾಚಾರ ಪ್ರಕರಣ; ವಿಡಿಯೋದಲ್ಲಿದ್ದ ಮುಸುಕುಧಾರಿ ಯುವತಿ ನಾನಲ್ಲ ಎಂದ ಕೋಮಲ್ ಶರ್ಮ

ದೆಹಲಿ ಯುನಿವರ್ಸಿಟಿಯ ದೌಲತ್ ರಾಮ್ ಕಾಲೇಜಿನ ವಿದ್ಯಾರ್ಥಿನಿ ಕೋಮಲ್ ಶರ್ಮ ಕೆಲವು ದಿನಗಳಿಂದ ನಾಪತ್ತೆಯಾಗಿದ್ದಳು. ಜೆಎನ್​ಯು ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಅನುಮಾನಗೊಂಡು ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು.

Sushma Chakre | news18-kannada
Updated:January 15, 2020, 11:33 AM IST
ಜೆಎನ್​ಯು ಹಿಂಸಾಚಾರ ಪ್ರಕರಣ; ವಿಡಿಯೋದಲ್ಲಿದ್ದ ಮುಸುಕುಧಾರಿ ಯುವತಿ ನಾನಲ್ಲ ಎಂದ ಕೋಮಲ್ ಶರ್ಮ
ಜೆಎನ್​ಯು ಕ್ಯಾಂಪಸ್​ನಲ್ಲಿ ದಾಳಿ ನಡೆಸಲು ಬಂದಿದ್ದ ಮುಸುಕುಧಾರಿಗಳು
  • Share this:
ನವದೆಹಲಿ (ಜ. 15): ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕಳೆದ ವಾರ ನಡೆದ ಹಿಂಸಾಚಾರದ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಆ ವಿಡಿಯೋದಲ್ಲಿದ್ದ ಮುಸುಕುಧಾರಿ ಯುವತಿಯನ್ನು ಪತ್ತೆಹಚ್ಚಿರುವ  ದೆಹಲಿ ಪೊಲೀಸ್ ತಂಡ ಆಕೆ ದೆಹಲಿ ಯುನಿವರ್ಸಿಟಿಯ ವಿದ್ಯಾರ್ಥಿನಿ ಕೋಮಲ್ ಶರ್ಮ ಎಂದು ಘೋಷಿಸಿದ್ದಾರೆ. ಅಲ್ಲದೆ, ಆಕೆ ಎಬಿವಿಪಿಯ ಸಕ್ರಿಯ ಕಾರ್ಯಕರ್ತಳು ಎಂಬ ವಿಷಯವೂ ಹೊರಬಿದ್ದಿತ್ತು. ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ಕೂಮರ್ ಶರ್ಮ, ವಿಡಿಯೋದಲ್ಲಿರುವ ಯುವತಿ ತಾನಲ್ಲ ಎಂದು ಹೇಳಿದ್ದಾಳೆ.

ವಿನಾಕಾರಣ ತನ್ನ ಹೆಸರನ್ನು ಬಳಸಿಕೊಂಡು ತೇಜೋವಧೆ ಮಾಡಲಾಗುತ್ತಿದೆ. ಜೆಎನ್​ಯು ಹಿಂಸಾಚಾರಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಕೋಮಲ್ ಶರ್ಮ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ. 'ವಿಡಿಯೋದಲ್ಲಿರುವ ಯುವತಿ ಯಾರೆಂದು ನನಗೆ ಗೊತ್ತಿಲ್ಲ. ನನ್ನನ್ನು ಈ ಕೇಸಿನಲ್ಲಿ ವಿನಾಕಾರಣ ಸಿಕ್ಕಿಸಲಾಗುತ್ತಿದೆ. ಕೆಟ್ಟ ಉದ್ದೇಶದಿಂದಲೇ ನ್ನ ಹೆಸರನ್ನು ಈ ಪ್ರಕರಣದಲ್ಲಿ ಎಳೆದು ತರಲಾಗುತ್ತಿದೆ. ನನ್ನ ಸಂಬಂಧಿಕರು, ಸ್ನೇಹಿತರು ಫೋನ್ ಮಾಡಿ ಈ ಬಗ್ಗೆ ವಿಚಾರಿಸುತ್ತಿದ್ದಾರೆ. ಇದರಿಂದ ನನಗೆ ಬಹಳ ಕಷ್ಟವಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾಳೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆಗೆ ನನ್ನಂತಹ ಉತ್ತಮ ಸಲಹೆಗಾರರ ಅಗತ್ಯವಿದೆ; ಯೋಗ ಗುರು ಬಾಬಾ ರಾಮದೇವ್

ಜನವರಿ 5 ರಂದು ಜೆಎನ್​ಯುನಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 7ಕ್ಕೂ ಹೆಚ್ಚು ಮಂದಿಯನ್ನು ಎಎಸ್​ಐಟಿ ಗುರುತಿಸಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದರು. ದೆಹಲಿಯ ಜೆಎನ್​ಯು ಆವರಣದೊಳಗೆ ನುಗ್ಗಿದ್ದ ಗುಂಪೊಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಇದಕ್ಕೆ ದೇಶದ ಹಲವೆಡೆ ವಿರೋಧ ವ್ಯಕ್ತವಾಗಿತ್ತು.ಜೆಎನ್​ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ಐಶೆ ಘೋಷ್ ಸೇರಿದಂತೆ ಸುಮಾರು 30 ಜನರ ಮೇಲೆ ಹಲ್ಲೆ ನಡೆಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ದೆಹಲಿ ಯುನಿವರ್ಸಿಟಿಯ ದೌಲತ್ ರಾಮ್ ಕಾಲೇಜಿನ ವಿದ್ಯಾರ್ಥಿನಿ ಕೋಮಲ್ ಶರ್ಮ ಕೆಲವು ದಿನಗಳಿಂದ ನಾಪತ್ತೆಯಾಗಿದ್ದಳು. ಜೆಎನ್​ಯು ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಅನುಮಾನಗೊಂಡು ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ವಿಚಾರಣೆ ನಡೆಸಿದಾಗ ಆಕೆಯೇ ತನ್ನ ಸ್ನೇಹಿತರೊಂದಿಗೆ ಜೆಎನ್​ಯು ಕ್ಯಾಂಪಸ್​ನೊಳಗೆ ನುಗ್ಗಿ ಹಲ್ಲೆ ನಡೆಸಿದ್ದೆಂಬ ಮಾಹಿತಿ ಲಭ್ಯವಾಗಿತ್ತು.

ಇದನ್ನೂ ಓದಿ: ವಿಮಾನದಲ್ಲಿದ್ದ ಯುವತಿಯಿಂದ ಬಾಂಬ್ ಸ್ಫೋಟದ ಬೆದರಿಕೆ; ಏರ್​ಪೋರ್ಟ್​ಗೆ ಹಿಂತಿರುಗಿದ ಪೈಲಟ್​ಗೆ ಕಾದಿತ್ತು ಶಾಕ್!

ಚೌಕಳಿ ಇರುವ ಶರ್ಟ್​ ಧರಿಸಿದ್ದ ಕೋಮಲ್ ಶರ್ಮ ಮುಖಕ್ಕೆ ಸ್ಕಾರ್ಫ್​ ಸುತ್ತಿಕೊಂಡು, ಕೈಯಲ್ಲಿ ಕೋಲು ಹಿಡಿದುಕೊಂಡು ಹಲ್ಲೆ ನಡೆಸಲು ಬಂದಿದ್ದಳು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಘಟನೆಯಲ್ಲಿ ಎಬಿವಿಪಿ ಕೈವಾಡ ಇರುವ ಬಗ್ಗೆ ಆರೋಪ ಕೇಳಿಬಂದಿತ್ತು. ದೇಶದೆಲ್ಲೆಡೆ ಈ ಹಿಂಸಾಚಾರಕ್ಕೆ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು.
Published by: Sushma Chakre
First published: January 15, 2020, 11:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading