Thank You Coronavirus Helpers: ಕೊರೋನಾ ವಾರಿಯರ್ಸ್​​​​​ಗೆ ಧನ್ಯವಾದ ಹೇಳಿದ ಗೂಗಲ್ ಡೂಡಲ್

Google Doodle: ಕೊರೋನಾ ವಿರುದ್ಧ ಹೋರಾಡುತ್ತಿರುವ ಅನೇಕರನ್ನು ಗುರುತಿಸಲು ಮತ್ತು ಗೌರವಿಸಲು ನಾವು ಗೂಗಲ್ ಡೂಡಲ್ ಸರಣಿಯನ್ನು ಪ್ರಾರಂಭಿಸಿದ್ದೇವೆ ಎಂದು ಗೂಗಲ್ ಡೂಡಲ್ ವೆಬ್​ಸೈಟ್​​ನಲ್ಲಿ ಹೇಳಿದೆ.

ಗೂಗಲ್​ ಡೂಡಲ್

ಗೂಗಲ್​ ಡೂಡಲ್

 • Share this:
  ನವದೆಹಲಿ(ಸೆ.14): ವಿಶ್ವದೆಲ್ಲೆಡೆ ಮಹಾಮಾರಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಅದರ ವಿರುದ್ಧದ ಹೋರಾಟವೂ ಸಾಗಿದೆ. ಕೊರೋನಾ ವೈರಸ್ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ಕೊರೋನಾ ವಾರಿಯರ್ಸ್​​ಗೆ ಗೂಗಲ್ ಡೂಡಲ್ ಮೂಲಕ ಧನ್ಯವಾದ ಅರ್ಪಿಸಿದೆ. ಹೌದು, ಕೊರೋನಾ ವಾರಿಯರ್ಸ್​​​​​​​​ಗಳಾದ ವೈದ್ಯರು, ನರ್ಸ್​ಗಳು, ಡೆಲಿವರಿ ಸಿಬ್ಬಂದಿ, ರೈತರು, ಶಿಕ್ಷಕರು, ಸಂಶೋಧಕರು, ಪೌರ ಕಾರ್ಮಿಕರು, ತುರ್ತು ಸೇವೆ ಸಿಬ್ಬಂದಿ ಹಾಗೂ ಈ ಇತರೆ ಕೊರೋನಾ ವಾರಿಯರ್ಸ್​​​ಗೆ ಗೂಗಲ್ ಕೃತಜ್ಞತೆ ಸಲ್ಲಿಸುವ ಕೆಲಸ ಮಾಡಿದೆ. ತನ್ನ ಡೂಡಲ್​ನ್ನು ಟ್ವಿಟರ್​​ನಲ್ಲಿ ಹಂಚಿಕೊಂಡ ಗೂಗಲ್ ಇಂಡಿಯಾ, ಕೋವಿಡ್-19 ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡುತ್ತಿರುವ ಎಲ್ಲಾ ಕಾರ್ಮಿಕರ ಗೌರವಾರ್ಥವಾಗಿ ಎಲ್ಲರೂ ಸಹ ಮನೆಯಲ್ಲಿಯೇ ಇರಬೇಕೆಂದು ಮನವಿ ಮಾಡಿದೆ.  ಗೂಗಲ್ ಈವರೆಗೆ ತನ್ನ ಡೂಡಲ್ ಮೂಲಕ ಹಲವಾರು ಪ್ರಖ್ಯಾತ ವ್ಯಕ್ತಿಗಳ ಆನಿವರ್ಸರಿಗಳು, ಹಬ್ಬಗಳು ಹಾಗೂ ದೇಶದ ಇತಿಹಾಸದಲ್ಲಿನ ಮಹತ್ವದ ದಿನಗಳನ್ನು ಸ್ಮರಿಸಿದೆ. ಮಹತ್ವದ ಸಂದರ್ಭಗಳನ್ನು ಗುರುತಿಸಲು ಗೂಗಲ್ ತನ್ನ ಲೋಗೋದಲ್ಲಿ ಬದಲಾವಣೆಗಳನ್ನು ಮಾಡುತ್ತದೆ.

  ಈಗ ಈ ಮಾರಕ ಕೊರೋನಾ ವೈರಸ್​ ವಿಶ್ವಕ್ಕೆ ಕಾಲಿಟ್ಟ ಬಳಿಕ, ಅದರ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್​​​ಗೆ ನಿರಂತರವಾಗಿ ಗೌರವ ಹಾಗೂ ಧನ್ಯವಾದವನ್ನು ಅರ್ಪಿಸುತ್ತಾ ಬಂದಿದೆ. ಕೋವಿಡ್-19 ವಿಶ್ವದಾದ್ಯಂತ ಸಮುದಾಯಗಳ ಮೇಲೆ ಪರಿಣಾಮ ಬೀರುತ್ತಿರುವುದರಿಂದ, ಜನರು ಎಂದಿಗಿಂತಲೂ ಹೆಚ್ಚು ಪರಸ್ಪರ ಸಹಾಯ ಮಾಡಲು ಒಗ್ಗೂಡುತ್ತಿದ್ದಾರೆ. ಕೊರೋನಾ ವಿರುದ್ಧ ಹೋರಾಡುತ್ತಿರುವ ಅನೇಕರನ್ನು ಗುರುತಿಸಲು ಮತ್ತು ಗೌರವಿಸಲು ನಾವು ಗೂಗಲ್ ಡೂಡಲ್ ಸರಣಿಯನ್ನು ಪ್ರಾರಂಭಿಸಿದ್ದೇವೆ ಎಂದು ಗೂಗಲ್ ಡೂಡಲ್ ವೆಬ್​ಸೈಟ್​​ನಲ್ಲಿ ಹೇಳಿದೆ.

  ಡೂಡಲ್​ಗಳ ಮೂಲ ವಿಶೇಷವೆಂದರೆ, ಜಿ ಅಕ್ಷರದ ನಂತರದ 2 ಓ ಗಳು ಕೊರೋನಾ ವಾರಿಯರ್ಸ್​​​​ಗಳ ಸೇವೆಯನ್ನು ಸೂಚಿಸಿದೆ. ಇದೇ ವೇಳೆ ಮಾಸ್ಕ್​ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಹೇಳಿದೆ.

  Coronavirus India Updates: ಶನಿವಾರ ಭಾರತದಲ್ಲಿ 94,372 ಕೊರೋನಾ ಪ್ರಕರಣಗಳು ಪತ್ತೆ

  ಭಾರತದಲ್ಲಿ ಕೊರೋನಾ ಸೋಂಕು ಹರಡುವಿಕೆ ಸುನಾಮಿ ಸ್ವರೂಪ ಪಡೆದುಕೊಂಡಿದ್ದು, ಅತಿ ಹೆಚ್ಚು ಕೊರೊನಾ ಸೋಂಕು ಪೀಡಿತರರಿರುವ ದೇಶಗಳ ಪಟ್ಟಿಯಲ್ಲಿ ಭಾರತವು ಮೊದಲನೆ ಸ್ಥಾನದತ್ತ ಬಿರಬಿರನೆ ಸಾಗುತ್ತಿದೆ. ಈಗಾಗಲೇ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 47 ಲಕ್ಷದ ಗಡಿಯನ್ನೂ ದಾಟಿದೆ. ಜೊತೆಗೆ ಪ್ರತಿದಿನ ಸುಮಾರು 1 ಲಕ್ಷ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ದೇಶದಲ್ಲಿ ಆಗಸ್ಟ್ 6 ನಂತರ ಪ್ರತಿ ದಿನ 60 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ದಾಖಲಾಗುವ ಟ್ರೆಂಡ್ ಶುರುವಾಗಿತ್ತು.

  ಆಗಸ್ಟ್‌ 19ರ ನಂತರ ಪ್ರತಿದಿನ ಸುಮಾರು70 ಸಾವಿರ ಪ್ರಕರಣಗಳು ಕಾಣಿಸಿಕೊಳ್ಳಲು ಆರಂಭಿಸಿದವು. ಸೆಪ್ಟೆಂಬರ್ 2ರಿಂದ 80 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದವು. ಸೆಪ್ಟೆಂಬರ್ 5ರಿಂದ ಪ್ರತಿದಿನ 90 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಲು ಆರಂಭಿಸಿದವು. ಸೆಪ್ಟೆಂಬರ್ 9ರಿಂದ 95 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಗೋಚರಿಸಲಾರಂಭಿಸಿವೆ. ಸೆಪ್ಟೆಂಬರ್ 9ರಂದು 95,735 ಪ್ರಕರಣಗಳು ಹಾಗೂ ಸೆಪ್ಟೆಂಬರ್ 10ರಂದು 96,551 ಪ್ರಕರಣಗಳು ಹಾಗೂ ಸೆಪ್ಟೆಂಬರ್ 11ರಂದು 97,570 ಪ್ರಕರಣಗಳು ಪತ್ತೆಯಾಗಿದ್ದವು. ಸೆಪ್ಟೆಂಬರ್ 12ರಂದು 94,372 ಪ್ರಕರಣಗಳು ವರದಿಯಾಗಿದ್ದು ಇದರಿಂದ ದೇಶದ ಕೊರೊನಾ ಪೀಡಿತರ ಸಂಖ್ಯೆ 47,54,357ಕ್ಕೆ ಏರಿಕೆಯಾಗಿದೆ.
  Published by:Latha CG
  First published: