• Home
  • »
  • News
  • »
  • national-international
  • »
  • ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ; ತುರ್ತು ಭೂಸ್ಪರ್ಶ ಮಾಡಿದ ಪೈಲಟ್​​ಗೆ ಮೆಚ್ಚುಗೆಯ ಮಹಾಪೂರ

ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ; ತುರ್ತು ಭೂಸ್ಪರ್ಶ ಮಾಡಿದ ಪೈಲಟ್​​ಗೆ ಮೆಚ್ಚುಗೆಯ ಮಹಾಪೂರ

ಮಗುವಿನ ಜೊತೆಯಲ್ಲಿ ತಾಯಿ

ಮಗುವಿನ ಜೊತೆಯಲ್ಲಿ ತಾಯಿ

ಕತಾರ್​ ವಿಮಾನ ದೋಹದಿಂದ ಬ್ಯಾಂಕಾಕ್​ಗೆ ತೆರಳುತ್ತಿತ್ತು. ಮುಂಜಾನೆ ಸುಮಾರು 3 ಗಂಟೆಯಲ್ಲಿ ತಾಯಿ ಮಗುವಿಗೆ ಜನ್ಮ ನೀಡಿದ್ದು, 3:15ಕ್ಕೆ ವಿಮಾನ ಕೊಲ್ಕತ್ತಾ ಬಳಿ ತುರ್ತು ಭೂ ಸ್ಪರ್ಶ ಮಾಡಿದೆ. ಬಳಿಕ ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಮುಂದೆ ಓದಿ ...
  • Share this:

    ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ತುಂಬು ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ, ಆಕೆ ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಕೊಲ್ಕತ್ತಾ ಬಳಿ ನಡೆದಿದೆ. ವಿಷಯ ತಿಳಿದ ಪೈಲಟ್​ ಕೂಡಲೇ ವಿಮಾನವನ್ನು ತುರ್ತು ಸ್ಪರ್ಶ ಮಾಡಿದ್ದಾರೆ. ಪೈಲಟ್ ಸಮಯ ಪ್ರಜ್ಞೆ ಮತ್ತು​ ಕಾರ್ಯವೈಖರಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.


    23 ವರ್ಷದ ಥೈಲ್ಯಾಂಡ್​ ಮೂಲದ ಗರ್ಭಿಣಿ  ಕತಾರ್​ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ವಿಮಾನ ಸಿಬ್ಬಂದಿಯ ಸಹಾಯದಿಂದ ವಿಮಾನಲ್ಲಿಯೇ  ಹೆರಿಗೆ ಮಾಡಲಾಗಿತ್ತು. ಈಗ ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.


    ಕತಾರ್​ ವಿಮಾನ ದೋಹದಿಂದ ಬ್ಯಾಂಕಾಕ್​ಗೆ ತೆರಳುತ್ತಿತ್ತು. ಮುಂಜಾನೆ ಸುಮಾರು 3 ಗಂಟೆಯಲ್ಲಿ ತಾಯಿ ಮಗುವಿಗೆ ಜನ್ಮ ನೀಡಿದ್ದು, 3:15ಕ್ಕೆ ವಿಮಾನ ಕೊಲ್ಕತ್ತಾ ಬಳಿ ತುರ್ತು ಭೂ ಸ್ಪರ್ಶ ಮಾಡಿದೆ. ಬಳಿಕ ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.


    ಕೊರೊನಾ ಭೀತಿ: ಚೀನಾದಿಂದ ಭಾರತಕ್ಕೆ ಬರುವ ವಿದೇಶೀ ಪ್ರಜೆಗಳಿಗೆ ನಿರ್ಬಂಧ; ಎಲ್ಲಾ ಏರ್​ಲೈನ್ಸ್​ಗೂ ಸೂಚನೆ


    ಇಲ್ಲಿ ಕತಾರ್​ ವಿಮಾನದ ಪೈಲಟ್​​ನ ಸಮಯಪ್ರಜ್ಞೆ ಮತ್ತು ಕಾರ್ಯವೈಖರಿಯನ್ನು ಮೆಚ್ಚಲೇಬೇಕು. ಮಹಿಳೆ ಮಗುವಿನ ಜನ್ಮ ನೀಡಿದ ಕೂಡಲೇ, ಪೈಲಟ್​ ಕೊಲ್ಕತ್ತಾ ಟ್ರಾಫಿಕ್​ ಕಂಟ್ರೋಲ್​ ರೂಂಗೆ ಕರೆ ಮಾಡಿ, ತುರ್ತು ಪರಿಸ್ಥಿತಿಯನ್ನು ವಿವರಿಸಿದ್ದಾರೆ. ವೈದ್ಯಕೀಯ ಆದ್ಯತೆಯ ಮೇರೆಗೆ ವಿಮಾನವನ್ನು ಸುರಕ್ಷಿತವಾಗಿ ತುರ್ತು ಭೂ ಸ್ಪರ್ಶ ಮಾಡಿದ್ದಾರೆ.


    ವಿಮಾನ ಕೊಲ್ಕತ್ತಾ ಏರ್​ಪೋರ್ಟ್​​ಗೆ ಬಂದಿಳಿದ ಕೂಡಲೇ ಅಲ್ಲಿನ ವಿಮಾನಯಾನ ಸಿಬ್ಬಂದಿ ಮತ್ತು ವೈದ್ಯರ ತಂಡ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.


    ನಳಿನ್ ಕುಮಾರ್ ಸಂಧಾನ ವಿಫಲ; ಗಾಂಧೀಜಿ ಕುರಿತ ಹೇಳಿಕೆಗೆ ಕ್ಷಮೆ ಯಾಚಿಸಲು ಅನಂತಕುಮಾರ್ ಹೆಗಡೆ ನಕಾರ

    Published by:Latha CG
    First published: