• Home
 • »
 • News
 • »
 • national-international
 • »
 • ಥೈಲ್ಯಾಂಡ್ ಪ್ರವಾಸೋದ್ಯಮಕ್ಕೆ ಮುಕ್ತ ಅವಕಾಶ.. ಆದರೆ ಭಾರತೀಯರಿಗೆ ಒಂದು ಕಂಡೀಷನ್!

ಥೈಲ್ಯಾಂಡ್ ಪ್ರವಾಸೋದ್ಯಮಕ್ಕೆ ಮುಕ್ತ ಅವಕಾಶ.. ಆದರೆ ಭಾರತೀಯರಿಗೆ ಒಂದು ಕಂಡೀಷನ್!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಬ್ಯಾಂಕ್ ಆಫ್ ಥೈಲಾಂಡ್ ಪ್ರಕಾರ, ದೇಶದ 11 ಶೇಕಡಾ ಜಿಡಿಪಿ , ಪ್ರವಾಸಿಗರು ಮಾಡುವ ಖರ್ಚಿನಿಂದ ಬರುತ್ತದೆ. ಅಷ್ಟು ಮಾತ್ರವಲ್ಲ, ಥೈಲಾಂಡ್‍ನ 20% ಉದ್ಯೋಗವು ಪ್ರವಾಸೋದ್ಯಮವನ್ನು ಅವಲಂಭಿಸಿದೆ.

 • Share this:

  ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಥೈಲ್ಯಾಂಡ್ ದೇಶದ ಆರ್ಥಿಕತೆಯ ಪ್ರಮುಖ ಅಂಗವಾಗಿರುವ ಕಾರಣ, ಅದನ್ನು ಮರು ಸ್ಥಾಪಿಸಲು ವ್ಯವಸ್ಥೆಗಳು ನಡೆಯುತ್ತಿವೆ. ಸುಮಾರು 66 ಮಧ್ಯಮ ಅಪಾಯದ ದೇಶಗಳಲ್ಲಿ, ಕನಿಷ್ಟ 21 ದಿನಗಳನ್ನು ಕಳೆದ ಜನರಿಗೆ ಮಾತ್ರ ಫುಕೆಟ್ ಬೀಚ್‍ಗೆ ಕ್ವಾರಂಟೈನ್ ಮುಕ್ತ ಪ್ರವೇಶ ನೀಡಲಾಗುವುದು. ಪ್ರಸ್ತುತ ಇರುವ ಸಾಂಕ್ರಾಮಿಕ ರೋಗದ ಮಧ್ಯೆಯೂ, ಥೈಲ್ಯಾಂಡ್‍ನ ಆರ್ಥಿಕತೆಗೆ ಮರುಚೇತನ ನೀಡಲು, ಅಲ್ಲಿನ ಮುಖ್ಯಮಂತ್ರಿ ಪ್ರಯುತ್ ಚನೋಚ , ದೇಶದ ಬಾಗಿಲನ್ನು ಪ್ರವಾಸಿಗರಿಗಾಗಿ ತೆರೆಯಲು ಉದ್ದೇಶಿಸಿದ್ದಾರೆ. 2020ರ ವರ್ಷದ ಕೊನೆಯಲ್ಲಿ, ಥೈಲ್ಯಾಂಡ್ ದೇಶದ ಪ್ರವಾಸೋದ್ಯಮವನ್ನು ಪುನರಾರಂಭಿಸಲು ನಿರ್ಧರಿಸಲಾಗಿತ್ತು.


  ಅದು ಗಾಲ್ಫ್ ಕ್ವಾರೈಂಟನ್ ಮತ್ತು ತುಂಬಾ ದಿನಗಳ ಕಾಲ ಉಳಿಯುವವರಿಗಾಗಿ ದೀರ್ಘಾವಧಿ ವೀಸಾಗಳನ್ನು ಒಳಗೊಂಡಿತ್ತು. ಆದರೆ , ಥೈಲ್ಯಾಂಡ್ ದೇಶ ಕೋರೋನಾ ಎರಡನೇ ಅಲೆಯಿಂದ ತತ್ತರಿಸಿದ್ದರಿಂದ, ಆ ಪ್ರಯತ್ನ ಕೈಗೂಡಲಿಲ್ಲ. ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಥೈಲ್ಯಾಂಡ್ ದೇಶದ ಆರ್ಥಿಕತೆಯ ಪ್ರಮುಖ ಅಂಗವಾಗಿರುವ ಕಾರಣ ಅದನ್ನು ಮರು ಸ್ಥಾಪಿಸಲು ವ್ಯವಸ್ಥೆಗಳು ನಡೆಯುತ್ತಿವೆ.


  ವರದಿಗಳ ಪ್ರಕಾರ, ಜುಲೈ 1 ರಿಂದ ಲಸಿಕಾ ಪ್ರವಾಸಿಗರಿಗೆ ಕ್ವಾರಂಟೈನ್ ಇಲ್ಲದೇಯೇ ಫುಕೆಟ್ ಥಾಯ್ ಬೀಚ್‍ಗೆ ಭೇಟಿ ಕೊಡಲು ಅನುಮತಿ ನೀಡಲಾಗಿದೆ. ಥೈಲಾಂಡ್ ದೇಶ ಇದೀಗ ಕೊರೋನಾದ ಮೂರನೇ ಅಲೆಯಿಂದ ತತ್ತರಿಸುತ್ತಿದ್ದು, ಈ ನಿರ್ಧಾರದ ಅಪಾಯಕಾರಿ ಆಗಬಹುದು ಎಂದು ಹೇಳಲಾಗುತ್ತಿದ್ದರೂ, ಪ್ರಧಾನ ಮಂತ್ರಿಗಳ ಪ್ರಕಾರ ಇದು ದೇಶದ ಪಾಲಿಗೆ ಸರಿಯಾದ ನಿರ್ಧಾರವಾಗಿದೆ. ಬ್ಯಾಂಕ್ ಆಫ್ ಥೈಲಾಂಡ್ ಪ್ರಕಾರ, ದೇಶದ 11 ಶೇಕಡಾ ಜಿಡಿಪಿ , ಪ್ರವಾಸಿಗರು ಮಾಡುವ ಖರ್ಚಿನಿಂದ ಬರುತ್ತದೆ. ಅಷ್ಟು ಮಾತ್ರವಲ್ಲ, ಥೈಲಾಂಡ್‍ನ 20% ಉದ್ಯೋಗವು ಪ್ರವಾಸೋದ್ಯಮವನ್ನು ಅವಲಂಭಿಸಿದೆ.


  ವಿಶ್ವವು ಕೋವಿಡ್ ಸಾಂಕ್ರಮಿಕದಿಂದ ತತ್ತರಿಸಿದ ಕಾರಣದಿಂದ ಅಂತಾರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಥೈಲಾಂಡ್ ಕೂಡ ಅದಕ್ಕೆ ಹೊರತಲ್ಲ. 2019ರಲ್ಲಿ ಥೈಲಾಂಡಿಗೆ ಬರುವ ಪ್ರವಾಸಿಗರ ಸಂಖೈಯೂ ಗಣನೀಯ ಕುಸಿತ ಕಂಡಿದೆ. ಇದೀಗ ಥೈಲಾಂಡ್ ಸರಕಾರ ಕೈಗೊಂಡಿರುವ ಈ ಕ್ವಾರಂಟೈನ್ ಮುಕ್ತ ಪ್ರಯೋಗವನ್ನು “ಫುಕೆಟ್ ಸ್ಯಾಂಡ್‍ಬಾಕ್ಸ್” ಎಂದು ಕರೆಯಲಾಗುತ್ತಿದೆ. ಒಂದು ವೇಳೆ ಈ ಪ್ರಯೋಗ ಯಶಸ್ಸನ್ನು ಕಂಡರೆ, ಬೇರೆಲ್ಲವನ್ನೂ ಮತ್ತೆ ತೆರೆಯಬಹುದು ಎಂಬ ನಿರೀಕ್ಷೆಯನ್ನು ಥೈಲಾಂಡ್ ಸರಕಾರ ಹೊಂದಿದೆ. ಈ “ಫುಕೆಟ್ ಸ್ಯಾಂಡ್‍ಬಾಕ್ಸ್” ಪ್ರಯೋಗವು ಕೆಲವು ನಿರ್ಬಂಧಗಳನ್ನು ಕೂಡ ಹೊಂದಿದೆ.


  ಇದನ್ನೂ ಓದಿ: ಈ ರೈಲು ನಿಲ್ದಾಣಗಳ ಹೆಸರು ಕೇಳಿದರೆ ನೀವು ಶಾಕ್ ಆಗೋದು ಖಂಡಿತ!


  ಸುಮಾರು 66 ಮಧ್ಯಮ ಅಪಾಯದ ದೇಶಗಳಲ್ಲಿ, ಕನಿಷ್ಟ 21 ದಿನಗಳನ್ನು ಕಳೆದ ಜನರಿಗೆ ಮಾತ್ರ ಫುಕೆಟ್ ಬೀಚ್‍ಗೆ ಕ್ವಾರಂಟೈನ್ ಮುಕ್ತ ಪ್ರವೇಶ ನೀಡಲಾಗುವುದು. ಪ್ರವಾಸಿಗರು ಥೈಲಾಂಡ್ ದೇಶಕ್ಕೆ ಹೋಗಲು ವೀಸಾ ಪಡೆಯಲು, ಒಂದು ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ (ಆದರೆ ಕೆಲವು ದೇಶಗಳು ಅಲ್ಫಾವಧಿ ವೀಸಾ-ವಿನಾಯಿತಿ ಪಡೆದಿವೆ).


  ಥಾಯ್ ರಾಯಲ್ ಗಜೆಟ್‍ನಲ್ಲಿ, ಜೂನ್ 29ಂದು, “ಫುಕೆಟ್ ಸ್ಯಾಂಡ್ ಬಾಕ್ಸ್” ಪ್ರಯೋಗದಲ್ಲಿ ಅನುಸರಿಸಬೇಕಾದ ಅಧಿಕೃತ ನಿಯಮಗಳ ಕುರಿತು ಮಾಹಿತಿ ನೀಡಲಾಗಿತ್ತು. ಆದರೆ ಈ “ಫುಕೆಟ್ ಸ್ಯಾಂಡ್‍ಬಾಕ್ಸ್” ಪ್ರಯೋಗವನ್ನು ಅಮಾನತುಗೊಳಿಸಬಹುದಾದ ಕೆಲವು ಷರತ್ತುಗಳಿವೆ. ಉದಾಹರಣೆಗೆ , ವಾರಕ್ಕೆ ಕಂಡು ಬರುವ ಹೊಸ ಪ್ರಕಟಣೆಗಳ ಸಂಖ್ಯೆ 90ಕ್ಕೆ ತಲುಪಿದರೆ ಅಥವಾ ಸ್ಥಳೀಯ ಆರೋಗ್ಯ ವ್ಯವಸ್ಥೆಯ ಸಾಮಥ್ರ್ಯದ 80 ಶೇಕಡಾದಷ್ಟು ಆಸ್ಪತ್ರೆಗೆ ದಾಖಲಾಗಿದ್ದರೆ ಪ್ರಯೋಗವನ್ನು ಅಮಾನತುಗೊಳಿಸಲಾಗುತ್ತದೆ.

  Published by:Kavya V
  First published: