• Home
  • »
  • News
  • »
  • national-international
  • »
  • Thailand Monks: ಡ್ರಗ್ಸ್ ನಶೆಯಲ್ಲಿ ಬೌದ್ಧ ಭಿಕ್ಷುಗಳ ತೇಲಾಟ! ಟೆಸ್ಟ್‌ನಲ್ಲಿ ಎಲ್ಲರೂ ಫೇಲ್!

Thailand Monks: ಡ್ರಗ್ಸ್ ನಶೆಯಲ್ಲಿ ಬೌದ್ಧ ಭಿಕ್ಷುಗಳ ತೇಲಾಟ! ಟೆಸ್ಟ್‌ನಲ್ಲಿ ಎಲ್ಲರೂ ಫೇಲ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಧ್ಯ ಥೈಲ್ಯಾಂಡ್‌ನ ಬೌದ್ಧ ದೇವಾಲಯವೊಂದರ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ ಥೈಲ್ಯಾಂಡ್‌ನ ಫೆಟ್ಚಾಬುನ್ ಪ್ರಾಂತ್ಯದ ಬೌದ್ಧ ದೇವಾಲಯದ ಎಲ್ಲಾ ಪುರೋಹಿತರು ಡ್ರಗ್ಸ್ ಸೇವಿಸಿ ನಶೆಯಲ್ಲಿ ಬಿದ್ದಿರುವುದು ಕಂಡು ಬಂದಿದೆ!

  • Share this:

    ಮಧ್ಯ ಥಾಯ್ಲೆಂಡ್‌ನ (Thailand) ಬೌದ್ಧ ದೇವಸ್ಥಾನ (Temple) ಒಂದರ ಮೇಲೆ ದಾಳಿ ನಡೆಸಿದಾಗ ಶಾಕಿಂಗ್ ದೃಶ್ಯ ಕಂಡು ಬಂದಿದೆ. ದಾಳಿ ವೇಳೆ ಬೌದ್ಧ ಸನ್ಯಾಸಿಗಳು (Monks) ನಶೆಯಲ್ಲಿ ದುತ್ತರಾಗಿ ಬಿದ್ದಿರುವುದು ಕಂಡು ಬಂದಿದೆ. ಈ ಸುದ್ದಿ ಕೇಳಿದ್ರೆ ಎಂಥವರೂ ಶಾಕ್ ಆಗ್ತಾರೆ. ಯಾಕಂದ್ರೆ ದೇವಾಲಯ ಯಾವುದೇ, ಜಾತಿ, ಧರ್ಮದ್ದಾಗಿರಲಿ (Religion) ಅದಕ್ಕೆ ಪವಿತ್ರ ಸ್ಥಾನ ಮಾನ ಇದೆ. ಕೋಟಿ ಕೋಟಿ ಭಕ್ತರ ನಂಬಿಕೆ, ಆರಾಧನೆಯಿರುತ್ತದೆ. ಅಲ್ಲಿ ಸನ್ಯಾಸಿ, ಅರ್ಚಕರು, ಗುರುಗಳು ಅನ್ನಿಸಿಕೊಂಡವರನ್ನು ಪೂಜ್ಯನೀಯ ಸ್ಥಾನದಲ್ಲಿ ನೋಡಲಾಗುತ್ತದೆ. ಆದ್ರೆ ಇಲ್ಲಿ ಬೌದ್ಧ ಸನ್ಯಾಸಿಗಳು ಮನಬಂದಂತೆ ಡ್ರಗ್ಸ್ (Drugs) ಸೇವಿಸಿದ್ದಾರೆ.


    ಡ್ರಗ್ಸ್ ಸೇವಿಸಿ ನಶೆಯಲ್ಲಿದ್ದ ಮಧ್ಯ ಥಾಯ್ಲೆಂಡ್‌ ನ ಬೌದ್ಧ ಸನ್ಯಾಸಿಗಳು


    ಮಧ್ಯ ಥಾಯ್ಲೆಂಡ್‌ ನ ಬೌದ್ಧ ದೇವಾಲಯದ ಸನ್ಯಾಸಿಗಳು ಡ್ರಗ್ಸ್ ಸೇವಿಸಿ, ನಶೆಯಲ್ಲಿ ತೇಲಾಡುತ್ತಾ ಬಿದ್ದಿರುವ ಸುದ್ದಿ ವೈರಲ್ ಆಗಿದೆ. ಈ ಶಾಕಿಂಗ್ ಸುದ್ದಿ ಈಗ ಅಲ್ಲಿನ ಸ್ಥಳೀಯ ಜನರ ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸಿದೆ. ಜೊತೆಗೆ ಈ ದೃಶ್ಯ ಜನರನ್ನು ಆತಂಕಕ್ಕೆ ದೂಡಿದೆ.


    ಬೌದ್ಧ ದೇವಾಲಯದ ಮೇಲೆ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ


    ಸೋಮವಾರ ಮಧ್ಯ ಥೈಲ್ಯಾಂಡ್ ನ ಬೌದ್ಧ ದೇವಾಲಯವೊಂದರ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ ಥೈಲ್ಯಾಂಡ್‌ನ ಫೆಟ್ಚಾಬುನ್ ಪ್ರಾಂತ್ಯದ ಬೌದ್ಧ ದೇವಾಲಯದ ಎಲ್ಲಾ ಪುರೋಹಿತರು ಡ್ರಗ್ಸ್ ಸೇವಿಸಿ, ನಶೆಯಲ್ಲಿ ಬಿದ್ದಿರುವುದು ಕಂಡು ಬಂದಿತ್ತು.


    ಕೂಡಲೇ ಅವರೆಲ್ಲರನ್ನೂ ಮೆಥಾಂಫೆಟಮೈನ್ ಡ್ರಗ್ಸ್‌ ಸಂಬಂಧಪಟ್ಟಂತೆ ಒಬ್ಬೊಬ್ಬರನ್ನೇ ಪರೀಕ್ಷಿಸಲಾಯಿತು. ಈ ವೇಳೆ ಎಲ್ಲರ ಫಲಿತಾಂಶ ಧನಾತ್ಮಕವಾಗಿದ್ದು, ಎಲ್ಲರೂ ಡ್ರಗ್ಸ್ ಸೇವಿಸಿದ್ದು ದೃಢಪಟ್ಟಿದೆ.


    ಈ ಬಗ್ಗೆ ಸ್ಥಳೀಯ ಅಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಇನ್ನು ಡ್ರಗ್ಸ್ ನ್ನು ಎಲ್ಲರ ಜೊತೆಗೆ ಮುಖ್ಯ ಅರ್ಚಕರೂ ಸೇವಿಸಿರುವುದು ಬೆಳಕಿಗೆ ಬಂದಿದೆ. ದಾಳಿಯ ವೇಳೆ ಪುರೋಹಿತರಲ್ಲಿ ಮೆಥಾಂಫೆಟಮೈನ್ ಎಂಬ ಡ್ರಗ್ ಇರುವುದು ಕಂಡು ಬಂದಿದೆ. ಅವರೆಲ್ಲರೂ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ.


    ಏನಿದು ಮೆಥಾಂಫೆಟಮೈನ್ ಡ್ರಗ್?


    ಇನ್ನು ಮೆಥಾಂಫೆಟಮೈನ್ ಎಂಬ ಡ್ರಗ್ ನ್ನು ಥೈಲ್ಯಾಂಡ್‌ನಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ. ಯುನೈಟೆಡ್ ನೇಷನ್ಸ್ ಆಫ್ ಡ್ರಗ್ಸ್ ಮತ್ತು ಕ್ರೈಮ್ ಆಫೀಸ್ ಪ್ರಕಾರ,


    ಥೈಲ್ಯಾಂಡ್ ಈ ಡ್ರಗ್ ಸೇವಿಸುವ ಪ್ರಮುಖ ದೇಶ ಆಗಿದೆ. ಈ ಔಷಧಿಯನ್ನು ಮ್ಯಾನ್ಮಾರ್‌ ನಿಂದ ಲಾವೋಸ್ ಮೂಲಕ ಥೈಲ್ಯಾಂಡ್‌ ಗೆ ತರಲಾಗುತ್ತದೆ. ಈ ಡ್ರಗ್ ಒಂದು ಮಾತ್ರೆ ಬೆಲೆ ಥಾಯ್ಲೆಂಡ್ ಕರೆನ್ಸಿಯಲ್ಲಿ 20 ಬಹ್ತ್ ಅಂದ್ರೆ 40 ರೂಪಾಯಿಗಳು.


    ಎಲ್ಲಾ ಸನ್ಯಾಸಿಗಳು ಮಾದಕ ವ್ಯಸನ ನಿವಾರಣಾ ಕೇಂದ್ರಕ್ಕೆ ರವಾನೆ


    ಪೆಟ್ಚಾಬುನ್ ಪ್ರಾಂತ್ಯದ ಬಂಗ್ ಸ್ಯಾಮ್ ಫಾನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಬೂನ್‌ಲರ್ಟ್ ಥಿಂಟಪ್ಥೈ ಅವರು ಮಾತನಾಡಿ, ಮಧ್ಯ ಥೈಲ್ಯಾಂಡ್‌ನಲ್ಲಿರುವ ಬೌದ್ಧ ದೇವಾಲಯದ ಎಲ್ಲಾ ಸನ್ಯಾಸಿಗಳು ಡ್ರಗ್ ಟೆಸ್ಟ್ ನಲ್ಲಿ ಧನಾತ್ಮಕ ಫಲಿತಾಂಶ ಬಂದ ಹಿನ್ನೆಲೆ ಎಲ್ಲರನ್ನೂ ಮಾದಕ ವ್ಯಸನ ನಿವಾರಣಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.


    ಗ್ರಾಮಸ್ಥರಲ್ಲಿ ಆತಂಕ


    ಈ ಘಟನೆಯಿಂದ ಇಡೀ ದೇವಸ್ಥಾನ ಖಾಲಿಯಾಗಿದೆ. ಸನ್ಯಾಸಿಗಳು ಮಾದಕ ವ್ಯಸನ ನಿವಾರಣಾ ಕೇಂದ್ರಕ್ಕೆ ಹೋಗಿದ್ದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಯಾವುದೇ ರೀತಿಯ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿ ಬನ್ಲರ್ಟ್ ಪ್ರತಿಕ್ರಿಯಿಸಿ, ಶೀಘ್ರದಲ್ಲೇ ದೇವಸ್ಥಾನದಲ್ಲಿ ಅರ್ಚಕರನ್ನು ನೇಮಕ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.


    ಇದನ್ನೂ ಓದಿ: ಮದುವೆ ಮನೆಯಲ್ಲಿ 'ಕೋಳಿ' ಜಗಳ! ಸ್ನೇಹಿತರಿಗೆ ಚಿಕನ್ ಬಡಿಸಿಲ್ಲ ಅಂತ ತಾಳಿ ಕಟ್ಟಲ್ಲ ಎಂದ ವರ!


    ಮೆಥಾಂಫೆಟಮೈನ್ ಡ್ರಗ್ಸ್ ಎಂದರೇನು?


    ಮೆಥಾಂಫೆಟಮೈನ್ ಡ್ರಗ್ ಇದು, ಶಕ್ತಿಯುತ ಮತ್ತು ಉತ್ತೇಜಿಸುವ ಮಾದಕವಸ್ತು. ಇದು ಜನರ ಕೇಂದ್ರ ನರಮಂಡಲದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕ್ರಿಸ್ಟಲ್ ಮೆಥಾಂಫೆಟಮೈನ್ ಇದು ಗಾಜಿನ ತುಂಡು ಅಥವಾ ಹೊಳೆಯುವ, ನೀಲಿ ಬಿಳಿ ಬಂಡೆಯಂತೆ ಕಾಣುವ ಔಷಧ ಆಗಿದೆ. ಸಾಮಾನ್ಯವಾಗಿ ಇದನ್ನು ಗಮನ ಕೊರತೆ ಹೈಪರ್ಆಕ್ಟಿವಿಟಿ ಡಿಸಾರ್ಡರ್ ಮತ್ತು ನಾರ್ಕೊಲೆಪ್ಸಿ ಸಮಸ್ಯೆಗೆ ಚಿಕಿತ್ಸೆ ನೀಡಲು ಬಳಸುತ್ತಾರೆ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು