ಬೌದ್ಧ ಭಿಕ್ಕುಗೆ 114 ವರ್ಷ ಜೈಲುಶಿಕ್ಷೆ!: ದಾನವಾಗಿ ಬಂದ ಹಣದಲ್ಲಿ ಮಾಡಿದ್ದೇನು ಗೊತ್ತಾ?


Updated:August 9, 2018, 7:45 PM IST
ಬೌದ್ಧ ಭಿಕ್ಕುಗೆ 114 ವರ್ಷ ಜೈಲುಶಿಕ್ಷೆ!: ದಾನವಾಗಿ ಬಂದ ಹಣದಲ್ಲಿ ಮಾಡಿದ್ದೇನು ಗೊತ್ತಾ?

Updated: August 9, 2018, 7:45 PM IST
ನ್ಯೂಸ್​ 18 ಕನ್ನಡ

ಬ್ಯಾಂಕಾಕ್​(ಆ.09): ಥಾಯ್ಲೆಂಡ್​ನ ನ್ಯಾಯಾಲಯವೊಂದು ಒಂದು ವರ್ಷದ ಹಿಂದೆ ಅಮೆರಿಕಾ ಹಸ್ತಾಂತರಿಸಿದ್ದ ಬೌದ್ಧ ಬಿಕ್ಷುವಿಗೆ 114 ವರ್ಷಗಳ ಜೈಲು ಶಿಕಜ್ಷೆ ಘೋಷಿಸಿದೆ. ವಿರಾಫೋನ್​ ಸುಕ್​ಫೋನ್ ಎಂಬ ಬೌದ್ಧ ಬಿಕ್ಷುವೊಬ್ಬರು ಖಾಸಗಿ ಜೆಟ್​ವೊಂದರಲ್ಲಿ ಡಿಸೈನರ್​ ಸನ್​ಗ್ಲಾಸಸ್​ ಧರಿಸುವುದರಿಂಗೆ ಲುಯೀ ವಿಟಾನ್​ ಬ್ಯಾಗ್​ ಹಿಡಿದ ದೃಶ್ಯಗಳು​ 2013ರಲ್ಲಿ ಭಾರೀ ವೈರಲ್​ ಆಗಿದ್ದವು. ಈ ಮೂಲಕ ಅವರು ವಿವಾದಕ್ಕೀಡಾಗಿದ್ದಲ್ಲದೇ, ಈ ವಿಚಾರವು ಜಗತ್ತಿನಾದ್ಯ.ತ ಸದ್ದು ಮಾಡಿತ್ತು.

39 ವರ್ಷದ ಸುಕ್​ಫೋನ್​ ಅಮೆರಿಕಾಗೆ ಪರಾರಿಯಾಗಿದ್ದರು. ಆದರೆ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಹಾಗೂ ದಾನ ಮಾಡಿದವರಿಗೆ ಮೋಸ ಮಾಡಿದ್ದ ಆರೋಪದಡಿಯಲ್ಲಿ ಅವರನ್ನು ಥಾಯ್ಲೆಂಡ್​ಗೆ ಕಳುಹಿಸಲಾಗಿತ್ತು. ವಿಶ್ವದ ಅತಿದೊಡ್ಡ ಬುದ್ಧನ ಪ್ರತಿಮೆ ನಿರ್ಮಿಸುವ ಸಲುವಾಗಿ ಹಲವಾರು ದಾನಿಗಳು ಬಹುದೊಡ್ಡ ಮೊತ್ತದ ಹಣ ನೀಡಿದ್ದರು. ಆದರೆ ತನಿಖೆಯಲ್ಲಿ ದಾನದಿಂದ ಬಂದ ಹಣದಲ್ಲಿ ಬೌದ್ಧ ಬಿಕ್ಷು ಐಷಾರಾಮಿ ಕಾರುಗಳನ್ನು ಖರೀದಿಸಿದ್ದರು ಹಾಗೂ ಅವರ ಹಲವಾರು ಖಾತೆಗಳಲ್ಲಿ 7 ಲಕ್ಷ ಡಾಲರ್​ಗಳಷ್ಟು ಹಣವಿದೆ ಎಂಬ ವಿಚಾರ ಬಯಲಾಗಿತ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಬ್ಯಾಂಕಾಕ್​ನ ಅಧಿಕಾರಿಯೊಬ್ಬರು​ ಸುಕ್​ಫೋನ್​ರನ್ನು ಭ್ರಷ್ಟಾಚಾರ, ವಂಚನೆ, ಆನ್​ಲೈನ್​ ವಂಚನೆ ಮಾಡಲು ಕ್ರೈಂ ಆ್ಯಕ್ಟ್​ ಉಲ್ಲಂಘಿಸಿರುವ ಪ್ರಕರಣಗಳಲ್ಲಿ ಅಪರಾಧಿ ಎಂದು ಪರಿಗಣಿಸಲಾಗಿದೆ ಎಂದಿದ್ದಾರೆ.

ಅಲ್ಲದೇ "ನ್ಯಾಯಾಧೀಶರು ಸುಕ್​ಫೋನ್​ರನ್ನು ಅಪರಾಧಿ ಎಂದು ಘೋಷಿಸಿದ್ದು, 114 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ" ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಥಾಯ್ಲೆಂಡ್​ ಕಾನೂನಿನ ಅನ್ವಯ ಸುಕ್​ಫೋನ್​ಗೆ 20ಕ್ಕೂ ಹೆಚ್ಚು ವರ್ಷಗಳ ಜೈಲು ಶಿಕ್ಷೆ ಸಿಗುವುದಿಲ್ಲ. ಆದರೆ ಅವರು 29 ದಾನಿಗಳು ನೀಡಿದ 8,61,700 ಡಾಲರ್ ಹಣವನ್ನು ಹಿಂತಿರುಗಿಸಬೇಕಾಗುತ್ತದೆ. ಇನ್ನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್​ನಲ್ಲಿ ವಿಚಾರಣೆ ನಡೆಯಲಿದೆ ಎಂದು ತಿಳಿದು ಬಂದಿದೆ.​
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ