ಥಾಯ್​ ಗುಹೆಯಿಂದ ಹೊರಬಂದು ಚೇತರಿಸಿಕೊಳ್ಳುತ್ತಿರುವ ಬಾಲಕರು: ಯಾವುದೇ ಸೋಂಕು ತಗುಲಿಲ್ಲ

news18
Updated:July 11, 2018, 9:56 PM IST
ಥಾಯ್​ ಗುಹೆಯಿಂದ ಹೊರಬಂದು ಚೇತರಿಸಿಕೊಳ್ಳುತ್ತಿರುವ ಬಾಲಕರು: ಯಾವುದೇ ಸೋಂಕು ತಗುಲಿಲ್ಲ
A screen grab shows boys rescued from the Thai cave wearing mask and resting in a hospital in Chiang Rai, Thailand from a July 11, 2018 handout video. Government Public Relations Department (PRD) and Government Spokesman Bureau/Handout via REUTERS TV
news18
Updated: July 11, 2018, 9:56 PM IST
ನ್ಯೂಸ್​ 18 ಕನ್ನಡ
ಥೈಲ್ಯಾಂಡ್​ (ಜುಲೈ 11): 17 ದಿನಗಳ ಕರಾಳ ಗುಹೆವಾಸ ಮುಗಿಸಿ ಥಾಯ್​ ಗುಹೆಯಿಂದ ನಿನ್ನೆಯಷ್ಟೇ 13 ಜನರನ್ನು ಹೊರಗೆ ಕರೆತರಲಾಗಿದೆ. ಸೋಂಕು ತಗುಲಿರುವ ಸಾಧ್ಯತೆಯಿಂದ ಆಸ್ಪತ್ರೆಯಲ್ಲಿ ಬಾಲಕರ ತಪಾಸಣೆ ನಡೆಸುತ್ತಿದ್ದ ವೈದ್ಯರು ಯಾವುದೇ ಸೋಂಕು ತಗುಲಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಇದೀಗ, ಆರೋಗ್ಯವಾಗಿರುವ ಆ 12 ಬಾಲಕರ ಫೋಟೋ ಮತ್ತು ವಿಡಿಯೋ ಹೊರಬಿದ್ದಿದೆ. ವೈಲ್ಡ್​ ಬೋರ್ಸ್​ನ ಫುಟ್​ಬಾಲ್​ ತಂಡದ ಸದಸ್ಯರಾದ 12 ಬಾಲಕರು ಆಸ್ಪತ್ರೆಯ ಬೆಡ್​ ಮೇಲೆ ಕುಳಿತು ಸಂತಸದಿಂದ ಪೋಸ್​ ಕೊಡುತ್ತಿರುವ ಫೋಟೋ ಈಗ ವೈರಲ್​ ಆಗಿದೆ.

ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ನರೋಂಗ್ಸಾಕ್​ ಒಸೊಟ್ಟನಂಕೊರ್ನ್​ ಇಂದು ಸುದ್ದಿಗೋಷ್ಠಿ ನಡೆಸಿದ್ದಾರೆ. ನಾವು ಆ ಬಾಲಕರನ್ನು ಹೀರೋಗಳಂತೆ ನೋಡಲಿಲ್ಲ. ಇನ್ನೂ ಎಳೆಯ ವಯಸ್ಸಿನ ಆ ಹುಡುಗರು ನಮಗೆ ಚಿಕ್ಕ ಮಕ್ಕಳಷ್ಟೇ ಆಗಿದ್ದರು. ಅದು ಆಕಸ್ಮಿಕವಾಗಿ ನಡೆದ ಒಂದು ಘಟನೆಯಷ್ಟೆ ಎಂದು ಹೇಳಿದ್ದಾರೆ.

17 ದಿನಗಳಲ್ಲಿ ಆಹಾರ, ನೀರು ಸಿಗದೆ, ನಿದ್ರೆಯೂ ಇಲ್ಲದೆ ಎಲ್ಲರೂ ಸುಮಾರು 2 ಕೆ.ಜಿ. ತೂಕ ಕಡಿಮೆಯಾಗಿದ್ದಾರೆ. ಆದರೆ, ಆರೋಗ್ಯದಲ್ಲಿ ಯಾವುದೇ ತೊಂದರೆಯಾಗಿಲ್ಲ ಎಂಬುದು ಸಮಾಧಾನಕರ ಸಂಗತಿ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.

ಭಾನುವಾರದಿಂದ ಒಬ್ಬರಾದ ನಂತರ ಒಬ್ಬರನ್ನು ರಕ್ಷಿಸತೊಡಗಿದ ಡೈವರ್​ಗಳ ತಂಡ ಗುಹೆಯಿಂದ ಹೊರಬಂದ ಬಾಲಕರನ್ನು ಹೆಲಿಕಾಪ್ಟರ್​ ಮೂಲಕ ಆಸ್ಪತ್ರೆಗೆ ಸಾಗಿಸಿತು. ಇನ್ನೂ 10 ದಿನಗಳ ಕಾಲ ಬಾಲಕರನ್ನು ಆಸ್ಪತ್ರೆಯಲ್ಲೇ ಇರಿಸಿಕೊಳ್ಳಲಾಗುತ್ತದೆ. ಮೊದಲು ಸಂರಕ್ಷಿಸಲ್ಪಟ್ಟ 8 ಬಾಲಕರ ಪೋಷಕರಿಗೆ ಮಕ್ಕಳನ್ನು ನೋಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, 2 ಮೀಟರ್​ ಅಂತರದಲ್ಲಿ ನಿಂತು ಮಾತನಾಡುವಂತೆ ಸೂಚಿಸಲಾಗಿದೆ.
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...